ETV Bharat / sports

ಆರ್ಚರಿ - ಕ್ವಾರ್ಟರ್​ ಫೈನಲ್​ನಲ್ಲಿ ಸೋಲನುಭವಿಸಿದ ಭಾರತ; ಒಲಿಂಪಿಕ್​​ನಿಂದ ಪುರುಷರ ತಂಡ ಔಟ್​ - Paris 2024 Olympics

ಆರ್ಚರಿ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಭಾರತದ ಪುರುಷರ ತಂಡ ಟರ್ಕಿ ವಿರುದ್ಧ ಸೋಲು ಕಾಣುವ ಮೂಲಕ ಒಲಿಂಪಿಕ್ಸ್​ ಕ್ರೀಡಾಕೂಟದಿಂದ ಹೊರನಡೆದಿದೆ.

ತರುಣದೀಪ್ ರಾಯ್, ಧೀರಜ್ ಬೊಮ್ಮದೇವರ ಮತ್ತು ಪ್ರವೀಣ್ ಜಾಧವ್
ತರುಣದೀಪ್ ರಾಯ್, ಧೀರಜ್ ಬೊಮ್ಮದೇವರ ಮತ್ತು ಪ್ರವೀಣ್ ಜಾಧವ್ (AP)
author img

By ETV Bharat Karnataka Team

Published : Jul 29, 2024, 7:19 PM IST

Updated : Jul 29, 2024, 7:57 PM IST

ಪ್ಯಾರಿಸ್​ (ಫ್ರಾನ್ಸ್​): ಭಾರತದ ಪುರುಷರ ಹಾಕಿ ತಂಡವು ಬಿಲ್ಲುಗಾರಿಕೆ ಕ್ವಾರ್ಟರ್​ ಪೈನಲ್​ ಪಂದ್ಯದಲ್ಲಿ ಸೋಲನುಭವಿಸಿದೆ. ಸೋಮವಾರ ನಡೆದ ಪಂದ್ಯದಲ್ಲಿ ತರುಣದೀಪ್ ರೈ, ಧೀರಜ್ ಬೊಮ್ಮದೇವರ ಮತ್ತು ಪ್ರವೀಣ್ ಜಾಧವ್ ಅವರಿದ್ದ ಟೀಂ ಇಂಡಿಯಾ ಟರ್ಕಿ ವಿರುದ್ಧ 6-2 ಅಂತರದ ಗೋಲುಗಳಿಂದ ಪರಾಭವಗೊಂಡಿತು. ಇದರೊಂದಿಗೆ ಒಲಿಂಪಿಕ್​ ಅಭಿಯಾನವನ್ನು ಕೊನೆಗೊಳಿಸಿತು.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಪುರುಷರ ಆರ್ಚರಿ ತಂಡವು ನಿರಾಶಾದಾಯಕ ಪ್ರದರ್ಶನ ತೋರಿತು. ತರುಣ್‌ದೀಪ್ ರೈ, ಪ್ರವೀಣ್ ಜಾಧವ್ ಮತ್ತು ಬೊಮ್ಮದೇವರ ಧೀರಜ್ ಮೊದಲ ಎರಡು ಸೆಟ್‌ಗಳಲ್ಲಿ 57-53 ಮತ್ತು 55-52 ರಿಂದ ಹಿನ್ನಡೆ ಅನುಭವಿಸಿದರು. ಆದರೆ, ಮೊದಲ ಎರಡು ಸೆಟ್‌ಗಳನ್ನು ಕಳೆದುಕೊಂಡಿದ್ದ ಭಾರತ ತಂಡ ಟರ್ಕಿ ವಿರುದ್ಧ ಮೂರನೇ ಸೆಟ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಚೇತರಿಕೆ ಕಂಡಿತ್ತು.

ನಾಲ್ಕನೇ ಸೆಟ್‌ನಲ್ಲಿ ಮತ್ತೆ ವೈಫಲ್ಯವನ್ನು ಎದುರಿಸಿತು. ಇದರ ಪರಿಣಾಮವಾಗಿ, ಸೆಮಿ-ಫೈನಲ್​ಗೇರಲು ಭಾರತ ವಿಫಲವಾಯಿತು. ಪಂದ್ಯದ ಆರಂಭದಿಂದಲೇ ಟರ್ಕಿ ತಂಡ ಅದ್ಭುತ ಪ್ರದರ್ಶನ ನೀಡಿತು. ಮೊದಲೆರಡು ಸೆಟ್‌ಗಳನ್ನು ಗೆದ್ದ ನಂತರ ಮೂರನೇ ಸೆಟ್ ಕೂಡ ಟರ್ಕಿಯ ಪರವಾಗಿಯೇ ಇತ್ತು. ಆದರೆ, ಬಾರ್ಕಿಮ್ ತುಮರ್ ಅವರ ಕೊನೆಯ ಹೊಡೆತದಲ್ಲಿ ಸ್ಕೋರ್​ 7 ಗಳಿಸಿದರು, ಇದರಿಂದಾಗಿ ಭಾರತ ಸೆಟ್ ಗೆದ್ದುಕೊಂಡಿತು.

ಅಂತಿಮ ಸೆಟ್‌ನಲ್ಲಿ ಜಾಧವ್ ಎರಡು 10 ಸ್ಕೋರ್​ ಗಳಿಸಿದರು, ಆದರೆ ಎರಡು ಬಾರಿ ವಿಶ್ವಕಪ್ ಕಂಚಿನ ಪದಕ ವಿಜೇತ ಬೊಮ್ಮದೇವರ ತಂಡದ ಅಂತಿಮ ಪ್ರಯತ್ನದಲ್ಲಿ ಕೇವಲ 7 ಅಂಕಗಳನ್ನು ಗಳಿಸಿದರು. ಅದೇ ಸಮಯದಲ್ಲಿ, ಪ್ರಸ್ತುತ ಒಲಂಪಿಕ್ ವೈಯಕ್ತಿಕ ಚಾಂಪಿಯನ್ ಟರ್ಕಿಯ ಮೆಟೆ ಗಜೋಜ್ ಅವರು 10 ಅಂಕಗಳಿಸುವ ಮೂಲಕ ನಾಲ್ಕನೇ ಸೆಟ್‌ನಲ್ಲಿ ತಮ್ಮ ತಂಡವನ್ನು 58-54 ಅಂತರದಿಂದ ಗೆಲ್ಲಲು ಸಹಾಯ ಮಾಡಿದರು.

ಇದಕ್ಕೂ ಮೊದಲು, ನಡೆದ ಮಹಿಳಾ ತಂಡದ ಆರ್ಚರಿ ಕ್ವಾರ್ಟರ್ ಫೈನಲ್‌ನಲ್ಲೂ ಭಾರತ ಸೋಲು ಕಂಡಿತು.

ಇದನ್ನೂ ಓದಿ: ಪ್ಯಾರಿಸ್​ ಒಲಿಂಪಿಕ್ಸ್: ಅರ್ಜೆಂಟೀನಾ - ಭಾರತ ನಡುವಣ ಹಾಕಿ ಪಂದ್ಯ ಡ್ರಾನಲ್ಲಿ ಅಂತ್ಯ ​ - paris olympics 2024

Last Updated : Jul 29, 2024, 7:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.