ETV Bharat / sports

ಪ್ಯಾರಿಸ್​ ಒಲಿಂಪಿಕ್​​ಗೆ ಅರ್ಹತೆ ಪಡೆದ ಅರ್ಚರಿ ತಂಡಗಳು: ನಾಲ್ಕನೇ ಕೂಟಕ್ಕೆ ಸಜ್ಜಾದ ದೀಪಿಕಾ, ತರುಣ್​ - Indian archery teams - INDIAN ARCHERY TEAMS

ಪ್ಯಾರಿಸ್​ನಲ್ಲಿ ಈ ವರ್ಷ ನಡೆಯುವ ಒಲಿಂಪಿಕ್​​ ಕ್ರೀಡಾಕೂಟಕ್ಕೆ ಭಾರತದ ಪುರುಷ ಮತ್ತು ಮಹಿಳಾ ಅರ್ಚರಿ ತಂಡಗಳು ಅರ್ಹತೆ ಗಿಟ್ಟಿಸಿವೆ. ಈ ಮೂಲಕ ಎಲ್ಲ ವಿಭಾಗದಲ್ಲಿ ಸ್ಪರ್ಧೆ ಮಾಡಲಿವೆ.

ಪ್ಯಾರಿಸ್​ ಒಲಿಂಪಿಕ್​ಗೆ ಅರ್ಹತೆ ಪಡೆದ ಭಾರತ ಅರ್ಚರಿ ತಂಡಗಳು
ಪ್ಯಾರಿಸ್​ ಒಲಿಂಪಿಕ್​ಗೆ ಅರ್ಹತೆ ಪಡೆದ ಭಾರತ ಅರ್ಚರಿ ತಂಡಗಳು (ETV Bharat)
author img

By PTI

Published : Jun 24, 2024, 5:31 PM IST

ನವದೆಹಲಿ: ಈ ವರ್ಷ ಪ್ಯಾರಿಸ್​​ನಲ್ಲಿ ನಡೆಯುವ ಒಲಿಂಪಿಕ್​ ಕ್ರೀಡಾಕೂಟದಲ್ಲಿ ಭಾಗವಹಿಸಲು ಭಾರತ ಮಹಿಳಾ ಮತ್ತು ಪುರುಷ ಅರ್ಚರಿ ತಂಡಗಳು ಅರ್ಹತೆ ಗಿಟ್ಟಿಸಿಕೊಂಡಿವೆ. ಅರ್ಚರಿ ವಿಶ್ವಕಪ್​​ನಲ್ಲಿ ಪದಕಗಳ ಕೊಳ್ಳೆ ಹೊಡೆದು ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ತನ್ನ ಸ್ಥಾನವನ್ನು ಭದ್ರಮಾಡಿಕೊಂಡವು.

ಸೋಮವಾರ ಬಿಡುಗಡೆಯಾದ ವಿಶ್ವ ಆರ್ಚರಿ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಪಡೆದಿದೆ. ಇದು ತಂಡಕ್ಕೆ ವರದಾನವಾಗಿದ್ದು, ಪ್ಯಾರಿಸ್ ಒಲಿಂಪಿಕ್​ಗೆ ಟಿಕೆಟ್​ ಪಡೆದುಕೊಂಡಿತು. ಜೊತೆಗೆ ಭಾರತೀಯ ತಂಡಗಳು ಕ್ರೀಡಾಕೂಟದಲ್ಲಿ ಪುರುಷ, ಮಹಿಳೆಯರ ವೈಯಕ್ತಿಕ ಮತ್ತು ಮಿಶ್ರ ವಿಭಾಗಗಳ ಎಲ್ಲಾ ಐದು ಸ್ಪರ್ಧೆಗಳಲ್ಲಿ ಭಾಗವಹಿಸಲಿವೆ. ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಭಾರತ ಮತ್ತು ಚೀನಾ ಅರ್ಹತೆ ಪಡೆದರೆ, ಮಹಿಳಾ ವಿಭಾಗದಲ್ಲಿ ಇಂಡೋನೇಷ್ಯಾ ತಂಡ ಒಲಿಂಪಿಕ್​​​ ಕೋಟಾದಲ್ಲಿ ಸ್ಥಾನ ಪಡೆದುಕೊಂಡ ಎರಡನೇ ದೇಶವಾಗಿದೆ.

ಮೂರು ಹಂತದಲ್ಲಿ ಅರ್ಹತಾ ಪಂದ್ಯ: ಒಲಿಂಪಿಕ್​​ ಕ್ರೀಡಾಕೂಟದಲ್ಲಿ ಪ್ರತಿ ಗುಂಪಿನಲ್ಲಿ 12 ತಂಡಗಳು ಹೊಂದಿರುತ್ತವೆ. ಐದು ತಂಡಗಳು ಮಿಶ್ರ ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತವೆ. ಇದೇ ಮೊದಲ ಬಾರಿಗೆ ಅರ್ಹತಾ ಪಂದ್ಯಗಳಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಒಲಿಂಪಿಕ್​​ ಕೋಟಾದಲ್ಲಿ ಸ್ಥಾನ ಪಡೆದಿವೆ. ಇದಕ್ಕಾಗಿ ಮೂರು ಹಂತದಲ್ಲಿ ಅರ್ಹತಾ ಪಂದ್ಯಗಳನ್ನು ನಡೆಸಲಾಗಿದೆ.

ಕಳೆದ ವರ್ಷ ಬರ್ಲಿನ್‌ನಲ್ಲಿ ನಡೆದ ವಿಶ್ವ ಅರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಒಲಂಪಿಕ್ ಕ್ವಾಲಿಫೈಯರ್ ಅನ್ನು ನಡೆಸಲಾಗಿದ್ದು, ಅದರಲ್ಲಿ ದಕ್ಷಿಣ ಕೊರಿಯಾ, ಟರ್ಕಿ ಮತ್ತು ಜಪಾನ್ ಪುರುಷರ ತಂಡಗಳು ಅರ್ಹತೆ ಗಳಿಸಿದ್ದವು. ಮಹಿಳಾ ವಿಭಾಗದಲ್ಲಿ ಜರ್ಮನಿ ಮತ್ತು ಮೆಕ್ಸಿಕೋ ಸ್ಥಾನ ಗಿಟ್ಟಿಸಿಕೊಂಡಿದ್ದವು.

ಎರಡನೇ ಅರ್ಹತಾ ಹಂತದಲ್ಲಿ ಕಝಕಿಸ್ತಾನ್ ಮತ್ತು ದಕ್ಷಿಣ ಕೊರಿಯಾದ ಮಹಿಳಾ, ಪುರುಷ ತಂಡಗಳು ಏಷ್ಯನ್ ತಂಡಗಳಾಗಿ ಕೋಟಾ ಪಡೆದರೆ, ಕೊಲಂಬಿಯಾ ಮತ್ತು ಅಮೆರಿಕ ತಂಡಗಳು ಅಮೆರಿಕ ಖಂಡದಿಂದ ಅವಕಾಶ ಪಡೆದವು.

ಮೂರನೇ ಹಂತದ ಅರ್ಹತಾ ಪಂದ್ಯಗಳಲ್ಲಿ ಯುರೋಪ್​ನಿಂದ ಇಟಲಿ (ಪುರುಷರು) ಮತ್ತು ನೆದರ್‌ಲ್ಯಾಂಡ್ಸ್ (ಮಹಿಳೆಯರು) ತಂಡಗಳು ಸ್ಥಾನ ಪಡೆದಿವೆ. ಇನ್ನು ಕೊನೆಯ ಹಂತದಲ್ಲಿ ಪುರುಷರ ವಿಭಾಗದಲ್ಲಿ ಮೆಕ್ಸಿಕೋ, ಚೈನೀಸ್ ತೈಪೆ, ಬ್ರಿಟನ್, ಮಹಿಳಾ ವಿಭಾಗದಲ್ಲಿ ಚೀನಾ, ಮಲೇಷ್ಯಾ, ಬ್ರಿಟನ್ ಮತ್ತು ಚೈನೀಸ್ ತೈಪೆ ಕೋಟಾ ಭದ್ರಮಾಡಿಕೊಂಡಿವೆ.

ತರುಣ್, ದೀಪಿಕಾಗೆ ನಾಲ್ಕನೇ ಒಪಿಂಪಿಕ್​: ಭಾರತದ ಟಾಪ್​ ಬಿಲ್ಲುಗಾರರಾದ ತರುಣ್​ದೀಪ್​ ರೈ ಮತ್ತು ಮಾಜಿ ವಿಶ್ವ ನಂಬರ್​ 1 ಆಟಗಾರ್ತಿ ದೀಪಿಕಾ ಕುಮಾರಿ ನಾಲ್ಕನೇ ಬಾರಿಗೆ ಒಲಿಂಪಿಕ್​​ನಲ್ಲಿ ಭಾಗವಹಿಸುತ್ತಿದ್ದಾರೆ. ತರುಣ್​ದೀಪ್​ 2004ರ ಅಥೆನ್ಸ್​ ಒಲಿಂಪಿಕ್​​ ಮೂಲಕ ಪಾದಾರ್ಪಣೆ ಮಾಡಿದ್ದರು. 2012 ರ ಲಂಡನ್‌ ಒಲಿಂಪಿಕ್​​ ಮೂಲಕ ದೀಪಿಕಾ ಕುಮಾರಿ ಚೊಚ್ಚಲ ಗೇಮ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಧೀರಜ್ ಬೊಮ್ಮದೇವರ, ಅಂಕಿತಾ ಭಕತ್ ಮತ್ತು ಭಜನ್ ಕೌರ್​ಗೆ ಮೊದಲ ಒಲಿಂಪಿಕ್​​ ಆಗಿದ್ದರೆ, ಪ್ರವೀಣ್ ಜಾಧವ್​​ಗೆ ಎರಡನೇ ಕ್ರೀಡಾಕೂಟವಾಗಿದೆ.

ಇದನ್ನೂ ಓದಿ: ಇಂಡೋ-ಆಸೀಸ್ ಕದನಕ್ಕೆ ಮಳೆ ಭೀತಿ: ಪಂದ್ಯ ರದ್ದಾದರೆ ಔಟ್​ ಆಗಲಿದೆಯಾ ಆಸ್ಟ್ರೇಲಿಯಾ? - India vs Australia Match

ETV Bharat Logo

Copyright © 2024 Ushodaya Enterprises Pvt. Ltd., All Rights Reserved.