ಚೆನ್ನೈ: ಭಾರತ-ಬಾಂಗ್ಲಾದೇಶ ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಇಂದಿನಿಂದ ಆರಂಭಗೊಂಡಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿಂದು ಟಾಸ್ ಗೆದ್ದ ಬಾಂಗ್ಲಾ ಬೌಲಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ಗಿಳಿದ ಭಾರತ, ಬಾಂಗ್ಲಾದ ಯುವ ಬೌಲರ್ ಹಸನ್ ಮೊಹಮ್ಮದ್ ಅವರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ಅಗ್ರ 3 ವಿಕೆಟ್ ಕಳೆದುಕೊಂಡಿತು.
ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ (6), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ (6) ಅತ್ಯಲ್ಪ ಮೊತ್ತಕ್ಕೆ ನಿರ್ಗಮಿಸಿದರು. ಹೀಗಾಗಿ, ವಿಕೆಟ್ ಕೀಪರ್ ಕಮ್ ಬ್ಯಾಟರ್ ರಿಷಬ್ ಪಂತ್ ಬಹುಬೇಗ ಬ್ಯಾಟಿಂಗ್ ಆಗಮಿಸಬೇಕಾಯಿತು. ಕ್ರೀಸ್ಗೆ ಬಂದ ಪಂತ್ ಉತ್ತಮ ಆರಂಭ ಪಡೆದರು. ಅವಕಾಶ ಸಿಕ್ಕಾಗಲೆಲ್ಲ ಬೌಂಡರಿ ಬಾರಿಸಿ ಬ್ಯಾಟಿಂಗ್ ವೇಗ ಹೆಚ್ಚಿಸುತ್ತಿದ್ದರು. ಈ ನಡುವೆ ಪಂತ್ ಮತ್ತು ಬಾಂಗ್ಲಾ ವಿಕೆಟ್ ಕೀಪರ್ ಲಿಟನ್ ದಾಸ್ ನಡುವೆ ಮಾತಿನ ಚಕಮಕಿ ನಡೆಯಿತು.
Pant-Ball is 🔙 in Test Cricket! 💪#IDFCFirstBankTestSeries #JioCinemaSports #INDvBAN pic.twitter.com/dh81IOml6M
— JioCinema (@JioCinema) September 19, 2024
15.3ನೇ ಓವರ್‌ನಲ್ಲಿ ಪಂತ್ ರನ್ ಕಲೆ ಹಾಕುತ್ತಿದ್ದಾಗ ರನ್ಔಟ್ ಮಾಡುವ ಭರದಲ್ಲಿ ಲಿಟನ್ ದಾಸ್ ಚೆಂಡನ್ನು ಪಂತ್ಗೆ ಎಸೆದಿದ್ದರು. ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ವೈರಲ್ ಆಗಿರುವ ವಿಡಿಯೋದಲ್ಲಿ ಪಂತ್, "ಚೆಂಡನ್ನು ವಿಕೆಟ್ಗೆ ಹೊಡಿ, ನನಗೇಕೆ ಹೊಡೆಯುತ್ತಿರುವೆ" ಎಂದು ಲಿಟನ್ ದಾಸ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಲಿಟನ್ ದಾಸ್, "ವಿಕೆಟ್ ಎದುರಿಗಿದ್ರೆ ಅದಕ್ಕೆ ಹೊಡೆಯಲೇ ಬೇಕಾಗುತ್ತದೆ, ನಾನೇನು ಮಾಡಲಿ" ಎಂದು ಉತ್ತರಿಸಿದರು. ಬಳಿಕ ಇಬ್ಬರು ಸಮಾಧಾನಗೊಂಡು ಆಟ ಮುಂದುವರೆಸಿದರು.
Argument between liton das & rishabh pant.
— PantMP4. (@indianspirit070) September 19, 2024
Rishabh : " usko feko na bhai mujhe kyu mar rhe ho" pic.twitter.com/cozpFJmnX3
ಉಳಿದಂತೆ, 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಪಂತ್ ಅನವಶ್ಯಕ ಹೊಡೆತಕ್ಕೆ ಕೈ ಹಾಕಿ ಪೆವಿಲಿಯನ್ ಸೇರಿದರು. 52 ಎಸೆತೆಗಳನ್ನು ಎದುರಿಸಿದ ಅವರು 6 ಬೌಂಡರಿಗಳ ನೆರವಿನೊಂದಿಗೆ 39 ರನ್ಗಳಿಸಿದರು. ಜೈಸ್ವಾಲ್ ಅರ್ಧಶತಕ ಸಿಡಿಸಿದರು. 118 ಎಸೆತಗಳನ್ನು ಎದುರಿಸಿ 9 ಬೌಂಡರಿ ಸಮೇತ 56 ರನ್ ಕಲೆಹಾಕಿ ನಹೀದ್ ರಾಣಾ ಎಸೆತದಲ್ಲಿ ಪೆವಿಲಿಯನ್ ಸೇರಿದರು. ಸದ್ಯ ಭಾರತ 176 ರನ್ಗಳಿಗೆ 6 ವಿಕೆಟ್ಗಳನ್ನು ಕಳೆದುಕೊಂಡು ಆಟವಾಡುತ್ತಿದೆ.