ETV Bharat / sports

ಕೊಹ್ಲಿ ಹೆಸರಿಗೆ ಸೇರಿತು ಮತ್ತೊಂದು ಕಳಪೆ ದಾಖಲೆ: 8 ವರ್ಷಗಳಲ್ಲಿ ಒಂದೇ ಒಂದು ಅರ್ಧಶತಕವಿಲ್ಲ! - VIRAT KOHLI RECORDS

ನ್ಯೂಜಿಲೆಂಡ್​ ವಿರುದ್ಧದ ಮೊದಲ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಡಕ್​ ಔಟ್​ ಆಗುವ ಮೂಲಕ ಅವರ ಖಾತೆಗೆ ಕಳಪೆ ದಾಖಲೆಯೊಂದು ಸೇರ್ಪಡೆಯಾಗಿದೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ (AP)
author img

By ETV Bharat Sports Team

Published : Oct 17, 2024, 12:53 PM IST

ಹೈದರಾಬಾದ್​: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಅವರ ಖಾತೆಗೆ ಕೆಟ್ಟ ದಾಖಲೆಯೊಂದು ಸೇರ್ಪಡೆಗೊಂಡಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಕೊಹ್ಲಿ ಡಕ್ ಔಟ್ ಆಗಿ ಪೆವಿಲಿಯನ್ ಸೇರಿದ್ದಾರೆ​. ಒಂಬತ್ತು ಎಸೆತಗಳನ್ನು ಎದುರಿಸಿದ ಅವರು ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ವಿಲಿಯಂ ರೌರ್ಕಿ ಬೌಲಿಂಗ್​ನಲ್ಲಿ ಕೊಹ್ಲಿ ಕ್ಯಾಚೌಟ್​ ಆಗಿ ಪೆವಿಲಿಯನ್ ಹಾದಿ ಹಿಡಿದರು.

ಸಾಮಾನ್ಯವಾಗಿ ಸೆಕೆಂಡ್ ಡೌನ್​ನಲ್ಲಿ ಬ್ಯಾಟಿಂಗ್​ಗೆ ಬರುವ ಕೊಹ್ಲಿ ಈ ಬಾರಿ ಯುವ ಬ್ಯಾಟ್ಸ್​ಮನ್ ಶುಭ್​ಮನ್ ಗಿಲ್ ಅನುಪಸ್ಥಿತಿಯಿಂದಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದರು. ಆದರೆ ಈ ಒನ್ ಡೌನ್ ಅವರಿಗೆ ಮತ್ತೊಮ್ಮೆ ಕೂಡಿ ಬರಲಿಲ್ಲ. ವಿರಾಟ್ ಕೊನೆಯ ಬಾರಿಗೆ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಒನ್ ಡೌನ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದರು. ಆ ಪಂದ್ಯದಲ್ಲೂ ಅವರು ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ 3 ಮತ್ತು 4 ರನ್ ಗಳಿಸಿದ್ದರು. ಕಳೆದ 8 ವರ್ಷಗಳಲ್ಲಿ ಟೆಸ್ಟ್ ನಲ್ಲಿ ನಾಲ್ಕು ಪಂದ್ಯಗಳಲ್ಲಿ ಒನ್ ಡೌನ್​ನಲ್ಲಿ ಬ್ಯಾಟಿಂಗ್ ಮಾಡಿರುವ ಕೊಹ್ಲಿ ಈ ಕ್ರಮಾಂಕದಲ್ಲಿ ಕನಿಷ್ಠ ಒಂದು ಅರ್ಧಶತಕವನ್ನೂ ಸಿಡಿಸಿಲ್ಲ. ಅವರು ಆಡಿರುವ ಆರು ಇನ್ನಿಂಗ್ಸ್‌ಗಳಲ್ಲಿ ಒಟ್ಟು 97 ರನ್ ಮಾತ್ರ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ 41 ರನ್ ಆಗಿದೆ.

38ನೇ ಡಕ್​: ಇದು ಕೊಹ್ಲಿಯ 38ನೇ ಅಂತಾರಾಷ್ಟ್ರೀಯ ಡಕ್ ಆಗಿದೆ. ಇದು ಸದ್ಯ ಭಾರತ ವಿರುದ್ಧ ಆಡುತ್ತಿರುವ ಟಿಮ್ ಸೌಥಿ (38) ಅವರೊಂದಿಗೆ ಸಮಾನಾಗಿದೆ. ಇವರಿಬ್ಬರ ನಂತರ ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ (33) ಕೂಡ ಸೇರಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಮುತ್ತಯ್ಯ ಮುರಳಿಧರನ್ ಮುಂದಿದ್ದಾರೆ. ಅವರೂ ಆಡಿರುವ ಎಲ್ಲಾ ಸ್ವರೂಪದ ಕ್ರಿಕೆಟ್​ಗಳಲ್ಲಿ ಒಟ್ಟು 59 ಬಾರಿ ಡಕ್​ಔಟ್ ಆಗಿದ್ದಾರೆ.​

ಅತೀ ಹೆಚ್ಚು ಟೆಸ್ಟ್​ ಆಡಿದ ದಾಖಲೆ: ಟೀಂ ಇಂಡಿಯಾ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಎರಡನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 664 ಪಂದ್ಯಗಳನ್ನಾಡಿ ಅಗ್ರಸ್ಥಾನದಲ್ಲಿದ್ದರೆ, 536 ಪಂದ್ಯಗಳೊಂದಿಗೆ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ. 535 ಪಂದ್ಯಗಳನ್ನು ಆಡಿದ ಧೋನಿ 3ನೇ ಸ್ಥಾನದಲ್ಲಿದ್ದರೆ, ರಾಹುಲ್ ದ್ರಾವಿಡ್ 504 ಪಂದ್ಯಗಳೊಂದಿಗೆ ನಾಲ್ಕನೇ ಸ್ಥಾನ, ಹಾಲಿ ನಾಯಕ ರೋಹಿತ್ ಶರ್ಮಾ 486 ಪಂದ್ಯಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ನ್ಯೂಜಿಲೆಂಡ್​ ವಿರುದ್ಧ 3ನೇ ಬಾರಿಗೆ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಕೇವಲ 10 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. 1990ರ ನಂತರ ಭಾರತವು ತವರಿನಲ್ಲಿ ನಡೆದ ಪಂದ್ಯಗಳಲ್ಲಿ 10 ಅಥವಾ ಅದಕ್ಕಿಂತ ಕಡಿಮೆ ರನ್‌ಗಳಿಗೆ ಮೂರು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಳೆದುಕೊಂಡಿರುವುದು ಇದು ಮೂರನೇ ಬಾರಿಯಾಗಿದೆ. 1999ರಲ್ಲಿ ಮೊಹಾಲಿ ಮತ್ತು 2010 ರಲ್ಲಿ ಅಹಮದಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕ್ರಮವಾಗಿ 7 ರನ್ ಮತ್ತು 2 ರನ್‌ಗಳಿಗೆ 3 ವಿಕೆಟ್​ ಕಳೆದುಕೊಂಡಿತ್ತು.

ಇದನ್ನೂ ಓದಿ: ಒಂದೇ ಓವರ್​ನಲ್ಲಿ 36 ಅಲ್ಲ 77ರನ್​ ಬಿಟ್ಟುಕೊಟ್ಟ ಬೌಲರ್​: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ದಾಖಲು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.