ETV Bharat / sports

ಗುರುವಾರದಿಂದ ಭಾರತ ಇಂಗ್ಲೆಂಡ್​ ಮಧ್ಯೆ ಮೂರನೇ ಟೆಸ್ಟ್​.. ರಾಜ್​ಕೋಟ್​ನಲ್ಲಿ ಟೀಂ ಇಂಡಿಯಾ ಇತಿಹಾಸ ಹೇಗಿದೆ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್‌ಗಳ ಸರಣಿಯ ಮೂರನೇ ಪಂದ್ಯ ನಾಳೆಯಿಂದ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ರಾಜ್‌ಕೋಟ್‌ನ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಸೋತಿಲ್ಲ. ಈ ಬಾರಿ ಇಂಗ್ಲೆಂಡ್​ ತಂಡವನ್ನು ಯಾವರೀತಿ ಕಟ್ಟಹಾಕಲಿದೆ ಎಂಬುದನ್ನುಕಾದು ನೋಡಬೇಕಾಗಿದೆ.

author img

By ETV Bharat Karnataka Team

Published : Feb 14, 2024, 11:19 AM IST

IND vs ENG  ind vs eng 3rd test  Saurashtra Cricket Stadium  ಭಾರತ ಇಂಗ್ಲೆಂಡ್​ ಮಧ್ಯೆ ಮೂರನೇ ಟೆಸ್ಟ್​ ಕ್ರಿಕೆಟ್ ಸ್ಟೇಡಿಯಂ
ರಾಜ್​ಕೋಟ

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯ ಗುರುವಾರದಿಂದ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಎರಡೂ ತಂಡಗಳು ವ್ಯಾಪಕ ಅಭ್ಯಾಸ ನಡೆಸಿದ್ದವು. ಸರಣಿ 1-1ರಿಂದ ಸಮಬಲಗೊಂಡ ಬಳಿಕ ಮುನ್ನಡೆ ಸಾಧಿಸುವ ಉದ್ದೇಶದಿಂದ ಉಭಯ ತಂಡಗಳಿಗೆ ಈ ಪಂದ್ಯ ಬಹು ಮುಖ್ಯವಾಗಿದೆ. ಸೌರಾಷ್ಟ್ರ ಸ್ಟೇಡಿಯಂನಲ್ಲಿ ಭಾರತ ತಂಡದ ದಾಖಲೆಯೂ ಉತ್ತಮವಾಗಿದ್ದು, ಒಂದೇ ಒಂದು ಟೆಸ್ಟ್ ಪಂದ್ಯವನ್ನು ಸೋತಿಲ್ಲ.

ಭಾರತ ತಂಡ ಸೌರಾಷ್ಟ್ರದಲ್ಲಿ ಇದುವರೆಗೆ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಭಾರತ ಒಂದು ಪಂದ್ಯವನ್ನು ಗೆದ್ದಿದ್ದರೆ ಇನ್ನೊಂದು ಪಂದ್ಯ ಡ್ರಾವಾಗಿದೆ. 2016ರ ನವೆಂಬರ್‌ನಲ್ಲಿ ಈ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆದಿತ್ತು. ಇಂಗ್ಲೆಂಡ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳಿಗೂ ಜಯ ಸಿಗಲಿಲ್ಲ. ಐದು ದಿನಗಳ ಕಾಲ ನಡೆದ ಈ ಪಂದ್ಯ ಡ್ರಾ ಆಗಿತ್ತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಜೋ ರೂಟ್, ಮೊಯಿನ್ ಅಲಿ ಮತ್ತು ಬೆನ್ ಡಕೆಟ್ ಅವರ ಶತಕಗಳ ನೆರವಿನಿಂದ 537 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಮುರಳಿ ವಿಜಯ್ ಮತ್ತು ಚೇತೇಶ್ವರ ಪೂಜಾರ ಅವರ ಶತಕಗಳ ನೆರವಿನಿಂದ ಭಾರತ ಮೊದಲ ಇನಿಂಗ್ಸ್‌ನಲ್ಲಿ 488 ರನ್ ಗಳಿಸಲು ಸಾಧ್ಯವಾಯಿತು. 49 ರನ್‌ಗಳ ಮುನ್ನಡೆ ಪಡೆದ ನಂತರ ಇಂಗ್ಲೆಂಡ್ 260 ರನ್ ಸೇರಿಸಿ ಭಾರತಕ್ಕೆ 309 ರನ್‌ಗಳ ಗೆಲುವಿನ ಗುರಿ ನೀಡಿತು. ಇದಕ್ಕೆ ಉತ್ತರವಾಗಿ ಭಾರತ 6 ವಿಕೆಟ್ ಕಳೆದುಕೊಂಡು 172 ರನ್ ಗಳಿಸಲಷ್ಟೇ ಶಕ್ತವಾಯಿತು.

ವೆಸ್ಟ್ ಇಂಡೀಸ್ ವಿರುದ್ಧದ ಪ್ರವಾಸದ ಟೆಸ್ಟ್ ಪಂದ್ಯವನ್ನು ಭಾರತವು ಇನ್ನಿಂಗ್ಸ್ ಮತ್ತು 272 ರನ್‌ಗಳಿಂದ ವೆಸ್ಟ್ ಇಂಡೀಸ್ ಅನ್ನು ಸೋಲಿಸಿತು. ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ 649 ರನ್‌ಗಳ ಬೃಹತ್​ ಸ್ಕೋರ್ ಮಾಡಿತು. ಈ ಪಂದ್ಯದಲ್ಲಿ ಪೃಥ್ವಿ ಶಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಶತಕ ಸಿಡಿಸಿದ್ದರು. ಭಾರತದ ಈ ಸ್ಕೋರ್‌ಗೆ ಪ್ರತಿಕ್ರಿಯೆಯಾಗಿ ವೆಸ್ಟ್ ಇಂಡೀಸ್ 181 ಕ್ಕೆ ಸೀಮಿತವಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಆಡದೇ ವೆಸ್ಟ್ ಇಂಡೀಸ್‌ಗೆ ಗುರಿಯನ್ನು ಬೆನ್ನಟ್ಟಲು ಭಾರತ ಮತ್ತೊಮ್ಮೆ ಆಹ್ವಾನಿಸಿತು ಮತ್ತು ಎರಡನೇ ಇನ್ನಿಂಗ್ಸ್​ನ ಬ್ಯಾಟಿಂಗ್‌ನಲ್ಲಿ ವೆಸ್ಟ್ ಇಂಡೀಸ್ 196 ರನ್‌ಗಳಿಗೆ ಆಲೌಟ್ ಆಯಿತು.

ಮೂರನೇ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಏಕೆಂದರೆ, ಹೈದರಾಬಾದ್ ಟೆಸ್ಟ್ ನಲ್ಲಿ ಇಂಗ್ಲೆಂಡ್ ಭಾರತದ ಸ್ಪಿನ್ ದಾಳಿಯನ್ನು ಚೆನ್ನಾಗಿ ಆಡಿದ್ದಾರೆ. ಬೆನ್ ಡಕೆಟ್ ಹಾಗೂ ಜೋ ರೂಟ್ ರಾಜ್​ಕೋಟ್​ ಮೈದಾನದಲ್ಲಿ ಆಡಿದ ಅನುಭವ ಹೊಂದಿದ್ದಾರೆ.

ಓದಿ: ಇಂಗ್ಲೆಂಡ್ ​- ಭಾರತ ಮೂರನೇ ಟೆಸ್ಟ್​: ಸ್ಪಿನ್ನರ್ ರೆಹಾನ್ ಅಹ್ಮದ್ ವೀಸಾ ಸಮಸ್ಯೆ, ವಿಮಾನ ನಿಲ್ದಾಣದಲ್ಲೇ ತಡೆದ ಅಧಿಕಾರಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.