ಹೈದರಾಬಾದ್ (ತೆಲಂಗಾಣ): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್ ಅಂತ್ಯಗೊಂಡಿದೆ. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 436 ರನ್‌ಗಳಿಗೆ ಆಲೌಟ್ ಆಗಿದೆ. ಸದ್ಯ ಭಾರತ 190 ರನ್‌ಗಳ ಮುನ್ನಡೆಯಲ್ಲಿದೆ. ಏಳು ವಿಕೆಟ್ಗಳನ್ನು ಕಳೆದುಕೊಂಡು ಮೂರನೇ ದಿನ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಕೇವಲ 15 ರನ್‌ಗಳನ್ನು ಮಾತ್ರ ಗಳಿಸಿತು. ಜಡೇಜಾ (87 ರನ್) ಮತ್ತು ಅಕ್ಷರ್ ಪಟೇಲ್ (44 ರನ್) ಇಂಗ್ಲೆಂಡ್ ಬೌಲರ್‌ಗಳಾದ ಜೋ ರೂಟ್ 4, ಟಾಮ್ ಹಾರ್ಟ್ಲಿ 2, ರೆಹಾನ್ ಅಹ್ಮದ್ 2, ಜಾಕ್ ಲೀಚ್ 1 ವಿಕೆಟ್ ಪಡೆದರು.
ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಯುವ ಆರಂಭಿಕ ಆಟಗಾರ ಯಶಸ್ವಿ ಜೈಶ್ವಾಲ್ (80), ರವೀಂದ್ರ ಜಡೇಜಾ (87 ರನ್), ಕೆಎಲ್ ರಾಹುಲ್ (86 ರನ್) ಅರ್ಧ ಶತಕ, ಭರತ್ (41 ರನ್), ಅಕ್ಷರ್ ಪಟೇಲ್ (44 ರನ್) ಮತ್ತು ಶ್ರೇಯಸ್ ಅಯ್ಯರ್ (35 ರನ್) ಮಿಂಚಿದರು. ಮೊದಲ ದಿನ ಜೈಶ್ವಾಲ್ ಅಬ್ಬರಿಸಿದರೆ, ಎರಡನೇ ದಿನ ರಾಹುಲ್ ಮತ್ತು ಜಡೇಜಾ ಅಮೋಘ ಆಟವಾಡಿದರು. ನಾಯಕ ರೋಹಿತ್ ಶರ್ಮಾ (24 ರನ್), ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ (23 ರನ್) ಮತ್ತು ರವಿಚಂದ್ರನ್ ಅಶ್ವಿನ್ (1) ವಿಫಲರಾದರು. ಕೊನೆಯಲ್ಲಿ ಬುಮ್ರಾ (0) ಡಕ್ ಆಗಿ ಪೆವಿಲಿಯನ್ ಸೇರಿದರು.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮೊದಲ ದಿನ 246 ರನ್‌ಗಳಿಗೆ ಆಲೌಟ್ ಆಗಿತ್ತು. ಭಾರತದ ಸ್ಪಿನ್ನರ್‌ಗಳಾದ ಅಶ್ವಿನ್, ಜಡೇಜಾ ಮತ್ತು ಅಕ್ಷರ್ ಅವರ ದಾಳಿಗೆ ಇಂಗ್ಲೆಂಡ್ ತತ್ತರಿಸಿತು. ನಾಯಕ ಬೆನ್ ಸ್ಟೋಕ್ಸ್ (70 ರನ್) ಮಾತ್ರ ಅರ್ಧಶತಕ ಗಳಿಸಿದರು. ಬೆನ್ ಡಕೆಟ್ (35 ರನ್) ಮತ್ತು ಬೈರ್‌ಸ್ಟೋವ್ (37 ರನ್) ಉತ್ತಮವಾಗಿ ಬ್ಯಾಟ್ ಬೀಸಲಿಲ್ಲ. ಜ್ಯಾಕ್ ಕ್ರಾಲಿ (20 ರನ್), ಓಲಿ ಪೋಪ್ (1), ಜೋ ರೂಟ್ (29 ರನ್) ಮತ್ತು ಫೋಕ್ಸ್ (4 ರನ್) ವಿಫಲರಾದರು. ಟೀಂ ಇಂಡಿಯಾ ಬೌಲರ್‌ಗಳ ಪೈಕಿ ಜಡೇಜಾ, ಅಶ್ವಿನ್ ತಲಾ ಮೂರು, ಅಕ್ಷರ್ ಪಟೇಲ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಎರಡು ವಿಕೆಟ್ ಪಡೆದರು. ಹತ್ತರಲ್ಲಿ ಎಂಟು ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾಗಿದ್ದವು.
ಓದಿ: ಅತ್ಯಂತ ವೇಗದ ತ್ರಿಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ ತನ್ಮಯ್ ಅಗರ್ವಾಲ್