ETV Bharat / sports

ಇಂಪ್ಯಾಕ್ಟ್​ ಪ್ಲೇಯರ್​ ನಿಯಮ ಆಟದ ಸಮತೋಲನ ಹಾಳು ಮಾಡುತ್ತೆ: ವಿರಾಟ್​ ಕೊಹ್ಲಿ - Virat Kohli - VIRAT KOHLI

ಇಂಪ್ಯಾಕ್ಟ್​ ಪ್ಲೇಯರ್​ ನಿಯಮದ ಬಗ್ಗೆ ರೋಹಿತ್​ ಶರ್ಮಾ ಬಳಿಕ, ವಿರಾಟ್​ ಕೊಹ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Etv Bharat
Etv Bharat (Etv Bharat)
author img

By ETV Bharat Karnataka Team

Published : May 18, 2024, 3:30 PM IST

ಬೆಂಗಳೂರು: ಹೊಡಿಬಡಿ ಕ್ರಿಕೆಟ್​ನ ಸೊಬಗನ್ನ ಹೆಚ್ಚಿಸಲು ಜಾರಿಗೆ ತಂದಿದ್ದ 'ಇಂಪ್ಯಾಕ್ಟ್​ ಪ್ಲೇಯರ್​ ನಿಯಮ'ಕ್ಕೆ ಹಿರಿಯ ಕ್ರಿಕೆಟಿಗರು ತೀವ್ರ ಆಕ್ಷೇಪ ಎತ್ತುತ್ತಿದ್ದಾರೆ. ಇದು ಕ್ರಿಕೆಟ್​ನ ರೋಚಕತೆಯನ್ನೇ ಹಾಳು ಮಾಡುತ್ತಿದೆ. ಪಂದ್ಯವನ್ನು ಒನ್​ಸೈಡ್​ ಮಾಡುತ್ತಿದೆ ಎಂಬುದು ಅವರ ಅಭಿಪ್ರಾಯ.

ಭಾರತ ತಂಡದ ನಾಯಕ ರೋಹಿತ್​ ಶರ್ಮಾ ಇಂಪ್ಯಾಕ್ಟ್​ ಪ್ಲೇಯರ್​ ನಿಯಮದ ಬಗ್ಗೆ ಚಕಾರ ಎತ್ತಿದ್ದರು. ಇದು ಆಟಗಾರರ ಭವಿಷ್ಯಕ್ಕೆ ಮಾರಕವಾಗಿದೆ ಎಂದಿದ್ದರು. ಇದರ ಬೆನ್ನಲ್ಲೇ ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ ಅವರು ಕೂಡ ಬದಲಿ ಆಟಗಾರನ ನಿಯಮವನ್ನು ಟೀಕಿಸಿದ್ದಾರೆ.

ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಅವರು, "ಇಂಪ್ಯಾಕ್ಟ್​ ಪ್ಲೇಯರ್​ ನಿಯಮ ಕ್ರಿಕೆಟ್​ನ ಸಮತೋಲಕ್ಕೆ ಅಡ್ಡಿಯಾಗಿದೆ. ಮನರಂಜನೆಯ ಕ್ರಿಕೆಟ್​ನ ಒಂದು ಭಾಗವಾಗಿರಬೇಕು. ಅದು ಬಿಟ್ಟು ಆಟವೇ ಮನರಂಜನೆಯಾಗಬಾರದು. ಹಾಗಾದಲ್ಲಿ ಕ್ರಿಕೆಟ್​ನ ಅಂತಃ ಸತ್ವ ಉಳಿಯುವುದಿಲ್ಲ" ಎಂದಿದ್ದಾರೆ.

"ರೋಹಿತ್ ಶರ್ಮಾ ಅವರ ಮಾತನ್ನು ನಾನು ಒಪ್ಪುತ್ತೇನೆ. ಇಂಪ್ಯಾಕ್ಟ್​ ಪ್ಲೇಯರ್​ ನಿಯಮದಿಂದ ಆಟದಲ್ಲಿ ಸಮತೋಲನ ಉಳಿಯುತ್ತಿಲ್ಲ. ಇದು ಕ್ರಿಕೆಟಿಗರ ಭವಿಷ್ಯಕ್ಕೂ ಮಾರಕವಾಗಲಿದೆ. ಒಂದು ಇನಿಂಗ್ಸ್​ ಆಡಿದ ಬಳಿಕ ಆತ, ಮೈದಾನ ತೊರೆಯಬೇಕು. ಆಲ್​ರೌಂಡರ್​ಗಳಿಗೆ ಇದು ಹೆಚ್ಚು ನಷ್ಟ ಉಂಟು ಮಾಡುತ್ತದೆ. ಇದು ನನ್ನಂತೆ ಹಲವು ಕ್ರಿಕೆಟಿಗರ ಅಭಿಪ್ರಾಯ" ಎಂದರು.

ಬೌಲರ್​ಗಳ ಮೇಲೆ ಗದಾಪ್ರಹಾರ: 8ನೇ ಕ್ರಮಾಂಕದವರೆಗೂ ಬ್ಯಾಟರ್​ ಹೊಂದುವುದರಿಂದ ಬೌಲರ್​ಗಳ ಭಾರಿ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ಪ್ರತಿ ತಂಡದಲ್ಲಿ ಜಸ್ಪ್ರೀತ್​ ಬುಮ್ರಾ, ರಶೀದ್​ ಖಾನ್​ರಂತಹ ಪ್ರಭಾವಿ ಬೌಲರ್​ಗಳನ್ನು ಹೊಂದಲು ಸಾಧ್ಯವಿಲ್ಲ. ಇದರಿಂದ ಪ್ರತಿ ಎಸೆತದಲ್ಲೂ ಅವರ ದಂಡನೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.

ಮೈದಾನದಲ್ಲಿ ಅಬ್ಬರಿಸುವ ಬ್ಯಾಟರ್​ಗಳನ್ನು ಹೇಗೆ ಕಟ್ಟಿ ಹಾಕಬೇಕು ಎಂಬುದೇ ಬೌಲರ್‌ಗಳ ಮುಂದಿನ ಪ್ರಶ್ನೆಯಾಗಿದೆ. ಆರಂಭಿಕ ಬ್ಯಾಟ್ಸ್​​ಮನ್ ಯರ್ರಾಬಿರ್ರಿ ಬ್ಯಾಟ್​ ಬೀಸುತ್ತಾನೆ. 8 ಕ್ರಮಾಂಕದಲ್ಲೂ ಒಬ್ಬ ಬ್ಯಾಟರ್​ ಇದ್ದಾನೆ ಎಂಬ ಭಾವನೆಯಲ್ಲಿ ಆತ ಬ್ಯಾಟ್​ ಮಾಡುತ್ತಾನೆ. ಇದು ಕ್ರಿಕೆಟ್​ನ ರೋಚಕತೆಯನ್ನೇ ನುಂಗಿ ಹಾಕುತ್ತದೆ ಎಂದು ವಿರಾಟ್​ ಕೊಹ್ಲಿ ಹೇಳಿದರು.

ನಿಯಮ ಪರಿಶೀಲಿಸಿ: "ನಾವು ಗುಣಮಟ್ಟದ ಕ್ರಿಕೆಟ್ ಆಡುತ್ತಿದ್ದೇವೆ. ನನ್ನ ಅಭಿಪ್ರಾಯದಲ್ಲಿ ಇತ್ತಂಡಗಳೂ ಪ್ರಬಲವಾಗಿರಬೇಕು. ಬ್ಯಾಟ್ ಮತ್ತು ಬಾಲ್ ನಡುವೆ ಸಮಾನ ಸಮತೋಲನ ಹೊಂದಿದ್ದಾಗ ಮಾತ್ರ ಕ್ರಿಕೆಟ್​ನ ಅಸಲಿ ಸೌಂದರ್ಯ ಕಾಣಲು ಸಾಧ್ಯ" ಎಂದು ಕೊಹ್ಲಿ ಅಭಿಪ್ರಾಯಪಟ್ಟರು.

ಈ ನಿಯಮವನ್ನು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಪರಿಶೀಲಿಸುತ್ತೇನೆ ಎಂದು ತಿಳಿಸಿದ್ದಾರೆ. ಆಟದ ಸಮತೋಲನ ಕಾಪಾಡುವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. ಕ್ರಿಕೆಟ್‌ನಲ್ಲಿ ಕೇವಲ ಬೌಂಡರಿ ಮತ್ತು ಸಿಕ್ಸರ್‌ಗಳು ಮಾತ್ರವಲ್ಲ, 160 ರನ್‌ಗಳ ಸಾಧಾರಣ ಮೊತ್ತವನ್ನೂ ತಂಡ ರಕ್ಷಿಸಿಕೊಳ್ಳುವಂತಿರಬೇಕು ಎಂದರು.

ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದ ಹೆಚ್ಚುವರಿ ಇಬ್ಬರು ಭಾರತೀಯ ಆಟಗಾರರಿಗೆ ಅವಕಾಶ ನೀಡಲು ಜಾರಿಗೆ ತರಲಾಗಿದೆ ಎಂಬುದು ಬಿಸಿಸಿಐ ವಾದ. ಆದರೆ, ಇದು ಆಕ್ಷೇಪಕ್ಕೆ ಕಾರಣವಾಗಿದ್ದರಿಂದ ಮುಂದಿನ ಐಪಿಎಲ್‌ ಆವೃತ್ತಿಗಳಲ್ಲಿ ಈ ನಿಯಮವನ್ನು ಪರಿಶೀಲಿಸುವುದಾಗಿ ಬಿಸಿಸಿಐ ಹೇಳಿದೆ.

ಇದನ್ನೂ ಓದಿ: ಟೀಂ ಇಂಡಿಯಾದ ಮುಖ್ಯ ತರಬೇತುದಾರನ ಸ್ಥಾನಕ್ಕೆ ಗಂಭೀರ್ ಸಂಪರ್ಕಿಸಿದ ಬಿಸಿಸಿಐ - New Head Coach

ETV Bharat Logo

Copyright © 2025 Ushodaya Enterprises Pvt. Ltd., All Rights Reserved.