ETV Bharat / sports

ಫ್ರೆಂಚ್‌ ಓಪನ್‌ ಹ್ಯಾಟ್ರಿಕ್ ಸಾಧಕಿ ಇಗಾ ಸ್ವಿಯಾಟೆಕ್! - Iga Swiatek

ಚೊಚ್ಚಲ ಬಾರಿಗೆ ಗ್ರ್ಯಾನ್​​ಸ್ಲಾಮ್​ ಗೆಲ್ಲುವ ನಿರೀಕ್ಷೆಯಲ್ಲಿದ್ದ ಇಟಲಿಯ ಜಾಸ್ಮಿನ್​ ಪಾವ್ಲೀನಿಗೆ ಪೋಲ್ಯಾಂಡ್​ನ ಇಗಾ ಸ್ವಿಯಾಟೆಕ್​ ಶಾಕ್​ ನೀಡಿದರು. ಇಗಾ, ಸತತ ಮೂರನೇ ಬಾರಿಗೆ ಫ್ರೆಂಚ್​ ಓಪನ್ ಗೆದ್ದು ಬೀಗಿದರು.

ಇಗಾ ಸ್ವಿಯಾಟೆಕ್
ಇಗಾ ಸ್ವಿಯಾಟೆಕ್ (AP)
author img

By ETV Bharat Karnataka Team

Published : Jun 9, 2024, 12:56 PM IST

ಪ್ಯಾರಿಸ್(ಫ್ರಾನ್ಸ್​): ಕೆಂಪು ಮಣ್ಣಿನ ಅಂಕಣದಲ್ಲಿ ಸೋಲಿಲ್ಲದ ರಾಣಿಯಂತೆ ಮೆರೆಯುತ್ತಿರುವ ಪೋಲ್ಯಾಂಡ್​ನ ಇಗಾ ಸ್ವಿಯಾಟೆಕ್​ ಸತತ ಮೂರನೇ ಸಲ ಫ್ರೆಂಚ್​ ಓಪನ್​ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಶನಿವಾರ ಇಲ್ಲಿ ನಡೆದ ಫೈನಲ್​ನಲ್ಲಿ ಇಟಲಿಯ ಜಾಸ್ಮಿನ್​ ಪಾವ್ಲೀನಿ ಅವರನ್ನು 6-2, 6-1 ನೇರ ಸೆಟ್‌ಗಳಿಂದ ಸುಲಭವಾಗಿ ಸೋಲಿಸಿದರು. ಕೇವಲ 1 ಗಂಟೆ 8 ನಿಮಿಷಗಳಲ್ಲಿ ಆಟ ಮುಗಿಯಿತು.

23 ವರ್ಷ ವಯಸ್ಸಿನ ಅಗ್ರ ಶ್ರೇಯಾಂಕಿತೆ ಆಟಗಾರ್ತಿ ಕಳೆದ ಐದು ವರ್ಷಗಳಲ್ಲಿ ಗೆದ್ದ ನಾಲ್ಕನೇ ಗ್ರ್ಯಾನ್​ಸ್ಲಾಮ್​ ಪ್ರಶಸ್ತಿ ಇದಾಗಿದೆ. ರೋಲೆಂಡ್​ ಗ್ಯಾರೋಸ್​ನಲ್ಲಿ ಸೋಲೇ ಕಾಣದಂತೆ ಮುನ್ನುಗ್ಗುತ್ತಿರುವ ಇಗಾ, ಅವೆ ಮಣ್ಣಿನ ಅಂಕಣದಲ್ಲಿ ಗೆಲುವಿನ ಅಂತರವನ್ನು 21-0 ಇಗ್ಗಿಸಿದರು. ಜೊತೆಗೆ, ವೃತ್ತಿ ಜೀವನದಲ್ಲಿ 35-2 ರ ಸ್ಟ್ರೈಕ್​ರೇಟ್​ ಕಾಪಾಡಿಕೊಂಡರು.

ಆರಂಭದಲ್ಲಿ 1-2 ರಿಂದ ಹಿನ್ನಡೆಯಲ್ಲಿದ್ದ ಸ್ವಿಯಾಟೆಕ್​, ಬಳಿಕ ಹಿಂತಿರುಗಿ ನೋಡದಂತೆ ಬಲವಾದ ಹೊಡೆತಗಳಿಂದ ಸತತ 10 ಗೇಮ್​ ಪಾಯಿಂಟ್​​ ಗಳಿಸಿ ಮೊದಲ ಸೆಟ್​ ಅನ್ನು 6-2 ರಲ್ಲಿ ಗೆದ್ದುಕೊಂಡರು. ಬಳಿಕದ ಎರಡನೇ ಸೆಟ್​​ನಲ್ಲೂ 12ನೇ ಶ್ರೇಯಾಂಕದ ಆಟಗಾರ್ತಿ ಜಾಸ್ಮಿನ್​ ಪಾವ್ಲೀನಿ ಸೆಟೆದು ನಿಲ್ಲಲು ಸಾಧ್ಯವಾಗದೇ 6-1 ರಲ್ಲಿ ಸೆಟ್​ ಬಿಟ್ಟುಕೊಡುವುದರ ಜೊತೆಗೆ ಮೊದಲ ಗ್ರ್ಯಾನ್​ಸ್ಲಾಮ್​ ಗೆಲ್ಲುವ ಅವಕಾಶವನ್ನು ತಪ್ಪಿಸಿಕೊಂಡರು.

ಹ್ಯಾಟ್ರಿಕ್​ ಸಾಧನೆಗೈದ ಎರಡನೇ ಆಟಗಾರ್ತಿ: ಇಗಾ ಸ್ವಿಯಾಟೆಕ್​ಗೆ ಇದು ಸತತ ಮೂರನೇ ಫ್ರೆಂಚ್​ ಓಪನ್​ ಗೆಲುವಾಗಿದೆ. ಬೆಲ್ಜಿಯಮ್​​ನ ಜಸ್ಟಿನ್ ಹೆನಿಸ್​ ಅವರ ಬಳಿಕ ಹ್ಯಾಟ್ರಿಕ್​ ಸಾಧನೆ ಮಾಡಿದ ಎರಡನೇ ಆಟಗಾರ್ತಿ ಎಂಬ ದಾಖಲೆ ಸರಿಗಟ್ಟಿದರು. ಜಸ್ಟಿನ್​ ಅವರು 2005 ರಿಂದ 2007 ರ ನಡುವೆ ಮೂರು ಬಾರಿ ಫ್ರೆಂಚ್​ ಓಪನ್​ ಜಯಿಸಿದ್ದರು. ಇಗಾ ವೃತ್ತಿಜೀವನದ ನಾಲ್ಕನೇ ಗ್ರ್ಯಾನ್​ಸ್ಲಾಮ್​ ಆಗಿದೆ. 2022 ರಲ್ಲಿ ಅಮೆರಿಕನ್​ ಓಪನ್​ ಚಾಂಪಿಯನ್​ ಆಗಿದ್ದರು.

ರನ್ನರ್​ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟ ಜಾಸ್ಮಿನ್​ ಪಾವ್ಲೀನಿ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿದ್ದರು. ಈ ವರ್ಷದ ಆಸ್ಟ್ರೇಲಿಯನ್​ ಓಪನ್​ನಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ್ದೇ ಶ್ರೇಷ್ಠ ಸಾಧನೆಯಾಗಿತ್ತು. ಇದಕ್ಕೂ ಮೊದಲು ಯಾವುದೇ ಟೂರ್ನಿಗಳಲ್ಲಿ ಎರಡನೇ ಸುತ್ತನ್ನೂ ಪ್ರವೇಶಿಸಿರಲಿಲ್ಲ.

ಇಂದು ಡಬಲ್ಸ್​ ಫೈನಲ್: ಸಿಂಗಲ್ಸ್​ ಫೈನಲ್​ ಸೋತಿದ್ದರೂ, ಜಾಸ್ಮಿನ್​ ಪಾವ್ಲೀನಗೆ ಮತ್ತೊಂದು ಅವಕಾಶವಿದೆ. ಇಂದು (ಭಾನುವಾರ) ನಡೆಯುವ ಡಬಲ್ಸ್​ ಫೈನಲ್​ನಲ್ಲಿ ಸಾರಾ ಇರ್ರಾನಿ ಜೊತೆಗೂಡಿ ಆಡಲಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್: ಆಸ್ಟ್ರೇಲಿಯಾ ದಿಟ್ಟ ಪ್ರದರ್ಶನಕ್ಕೆ ಶರಣಾದ ಇಂಗ್ಲೆಂಡ್ - Australia Nails England

ETV Bharat Logo

Copyright © 2024 Ushodaya Enterprises Pvt. Ltd., All Rights Reserved.