ETV Bharat / sports

ಮಹಿಳಾ ಟಿ20 ವಿಶ್ವಕಪ್ ​ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ: ಭಾರತದ ಪಂದ್ಯಗಳು ಯಾವಾಗ, ಎಲ್ಲಿ? - Womens T20 World Cup Schedule - WOMENS T20 WORLD CUP SCHEDULE

ಮಹಿಳಾ ಟಿ20 ವಿಶ್ವಕಪ್​​ 2024ರ ಪರಿಷ್ಕೃತ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ಯಾವ ಪಂದ್ಯಗಳು ಎಲ್ಲಿ ನಡೆಯಲಿವೆ ಎಂಬುದರ ಕುರಿತಾದ ವಿವರ ಈ ಕೆಳಗಿನಂತಿದೆ.

ಮಹಿಳಾ ಟಿ20 ವಿಶ್ವಕಪ್
ಮಹಿಳಾ ಟಿ20 ವಿಶ್ವಕಪ್ (IANS Photos)
author img

By ETV Bharat Sports Team

Published : Aug 27, 2024, 12:37 PM IST

ನವದೆಹಲಿ: ಮಹಿಳಾ ಟಿ20 ವಿಶ್ವಕಪ್​ 2024ರ ಪರಿಷ್ಕೃತ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೋಮವಾರ ಪ್ರಕಟಿಸಿದೆ. ಈ ಹೊಸ ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್​ 3 ರಿಂದ ದುಬೈನಲ್ಲಿ ವಿಶ್ವಕಪ್​ ಆರಂಭಗೊಳ್ಳಲಿದ್ದು, ಅ.20ಕ್ಕೆ ಫೈನಲ್​ ಪಂದ್ಯದೊಂದಿಗೆ ಮುಕ್ತಾಯಗೊಳ್ಳಲಿದೆ. ಅ.6 ರಂದು ಭಾರತ ಸಾಂಪ್ರಾದಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಲಿದೆ.

ಈ ಬಾರಿಯ ಚುಟುಕು ಮಾದರಿ ಟೂರ್ನಿಯ ಆತಿಥ್ಯವನ್ನು ಬಾಂಗ್ಲಾದೇಶ ವಹಿಸಿಕೊಂಡಿತ್ತು. ಆದರೆ ಮೀಸಲಾತಿ ವಿಚಾರವಾಗಿ ಉಂಟಾದ ಗಲಭೆ ಹಿಂಸಾಚಾರಕ್ಕೆ ತಿರುಗಿತ್ತು. ಭದ್ರತ ದೃಷ್ಟಿಯಿಂದ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಲಾಗಿದೆ. ಈ ಹಿನ್ನೆಲೆ ವಿಶ್ವಕಪ್ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.

ಸೆ.28ರಿಂದ ಅಭ್ಯಾಸ ಪಂದ್ಯಗಳು: ಐಸಿಸಿ ಮಹಿಳಾ ವಿಶ್ವಕಪ್ 9ನೇ ಆವೃತ್ತಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ. ಈ ಟೂರ್ನಿಗೂ ಮುನ್ನ 10 ಅಭ್ಯಾಸ ಪಂದ್ಯಗಳೂ ನಡೆಯಲಿವೆ. ಪ್ರತಿ ತಂಡವು ಒಂದು ಅಭ್ಯಾಸ ಪಂದ್ಯವನ್ನು ಆಡಲಿದೆ. ಈ ಪಂದ್ಯಗಳು ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 1 ರವರೆಗೆ ನಡೆಯಲಿವೆ.

ಸೆಮಿಸ್​ ಮತ್ತು ಫೈನಲ್​ ಪಂದ್ಯ: ಟೂರ್ನಿಯಲ್ಲಿ ಒಟ್ಟು 23 ಪಂದ್ಯಗಳು ನಡೆಯಲಿದ್ದು, ಪ್ರತಿ ತಂಡ ನಾಲ್ಕು ಗುಂಪು ಪಂದ್ಯಗಳನ್ನು ಆಡಲಿದೆ. ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಮಾತ್ರ ಸೆಮಿಫೈನಲ್​ಗೆ ಅರ್ಹತೆ ಪಡೆಯಲಿವೆ. ಅಕ್ಟೋಬರ್ 17 ರಂದು ಮೊದಲ ಸೆಮಿಫೈನಲ್ ನಡೆಯಲಿದ್ದು, ಅಕ್ಟೋಬರ್ 18 ರಂದು 2ನೇ ಸೆಮೀಸ್​ ನಡೆಯಲಿದೆ. ಅಕ್ಟೋಬರ್ 20 ರಂದು ಫೈನಲ್ ಪಂದ್ಯ ನಡೆಯಲಿದೆ. ಸೆಮಿಫೈನಲ್ ಮತ್ತು ಫೈನಲ್​​ಗಳಿಗೆ ಮೀಸಲು ದಿನ ನಿಗದಿ ಪಡಿಸಲಾಗಿದೆ.

ಟಿ20 ವಿಶ್ವಕಪ್​ ಗುಂಪುಗಳು

ಗುಂಪು ಎ: ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ

ಗುಂಪು ಬಿ: ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಸ್ಕಾಟ್ಲೆಂಡ್

ಪಂದ್ಯಾವಳಿಗಳ ವೇಳಾಪಟ್ಟಿ

  • ಅಕ್ಟೋಬರ್ 3, ಗುರುವಾರ, ಬಾಂಗ್ಲಾದೇಶ ವಿರುದ್ಧ ಸ್ಕಾಟ್ಲೆಂಡ್, ಶಾರ್ಜಾ, ಮಧ್ಯಾಹ್ನ 2 ಗಂಟೆಗೆ
  • ಅಕ್ಟೋಬರ್ 3, ಗುರುವಾರ, ಪಾಕಿಸ್ತಾನ ವಿರುದ್ಧ ಶ್ರೀಲಂಕಾ, ಶಾರ್ಜಾ, ಸಂಜೆ 6 ಗಂಟೆಗೆ
  • ಅಕ್ಟೋಬರ್ 4, ಶುಕ್ರವಾರ, ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್, ದುಬೈ, ಮಧ್ಯಾಹ್ನ 2 ಗಂಟೆಗೆ
  • ಅಕ್ಟೋಬರ್ 4, ಶುಕ್ರವಾರ, ಭಾರತ ವಿರುದ್ಧ ನ್ಯೂಜಿಲೆಂಡ್, ದುಬೈ, ಸಂಜೆ 6 ಗಂಟೆಗೆ
  • ಅಕ್ಟೋಬರ್ 5, ಶನಿವಾರ, ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್, ಶಾರ್ಜಾ, ಮಧ್ಯಾಹ್ನ 2 ಗಂಟೆಗೆ
  • ಅಕ್ಟೋಬರ್ 5, ಶನಿವಾರ, ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ, ಶಾರ್ಜಾ, ಸಂಜೆ 6 ಗಂಟೆಗೆ
  • ಅಕ್ಟೋಬರ್ 6, ಭಾನುವಾರ, ಭಾರತ ವಿರುದ್ಧ ಪಾಕಿಸ್ತಾನ, ದುಬೈ, ಮಧ್ಯಾಹ್ನ 2 ಗಂಟೆಗೆ
  • ಅಕ್ಟೋಬರ್ 6, ಭಾನುವಾರ, ವೆಸ್ಟ್ ಇಂಡೀಸ್ ವಿರುದ್ಧ ಸ್ಕಾಟ್ಲೆಂಡ್, ದುಬೈ, ಸಂಜೆ 6 ಗಂಟೆಗೆ
  • ಅಕ್ಟೋಬರ್ 7, ಸೋಮವಾರ, ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ, ಶಾರ್ಜಾ, ಸಂಜೆ 6 ಗಂಟೆಗೆ
  • ಅಕ್ಟೋಬರ್ 8, ಮಂಗಳವಾರ, ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್, ಶಾರ್ಜಾ, ಸಂಜೆ 6 ಗಂಟೆಗೆ
  • ಅಕ್ಟೋಬರ್ 9, ಬುಧವಾರ, ದಕ್ಷಿಣ ಆಫ್ರಿಕಾ ವಿರುದ್ಧ ಸ್ಕಾಟ್ಲೆಂಡ್, ದುಬೈ, ಮಧ್ಯಾಹ್ನ 2 ಗಂಟೆಗೆ
  • ಅಕ್ಟೋಬರ್ 9, ಬುಧವಾರ, ಭಾರತ ವಿರುದ್ಧ ಶ್ರೀಲಂಕಾ, ದುಬೈ, ಸಂಜೆ 6 ಗಂಟೆಗೆ
  • ಅಕ್ಟೋಬರ್ 10, ಗುರುವಾರ, ಬಾಂಗ್ಲಾದೇಶ vs ವೆಸ್ಟ್ ಇಂಡೀಸ್, ಶಾರ್ಜಾ, ಸಂಜೆ 6 ಗಂಟೆಗೆ
  • ಅಕ್ಟೋಬರ್ 11, ಶುಕ್ರವಾರ, ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ, ದುಬೈ, ಸಂಜೆ 6 ಗಂಟೆಗೆ
  • ಅಕ್ಟೋಬರ್ 12, ಶನಿವಾರ, ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ, ಶಾರ್ಜಾ, ಮಧ್ಯಾಹ್ನ 2 ಗಂಟೆಗೆ
  • ಅಕ್ಟೋಬರ್ 12, ಶನಿವಾರ, ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ, ದುಬೈ, ಸಂಜೆ 6 ಗಂಟೆಗೆ
  • ಅಕ್ಟೋಬರ್ 13, ಭಾನುವಾರ, ಇಂಗ್ಲೆಂಡ್ ವಿರುದ್ಧ ಸ್ಕಾಟ್ಲೆಂಡ್, ಶಾರ್ಜಾ, ಮಧ್ಯಾಹ್ನ 2 ಗಂಟೆಗೆ
  • ಅಕ್ಟೋಬರ್ 13, ಭಾನುವಾರ, ಭಾರತ ವಿರುದ್ಧ ಆಸ್ಟ್ರೇಲಿಯಾ, ಶಾರ್ಜಾ, ಸಂಜೆ 6 ಗಂಟೆಗೆ
  • ಅಕ್ಟೋಬರ್ 14, ಸೋಮವಾರ, ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್, ದುಬೈ, ಸಂಜೆ 6 ಗಂಟೆಗೆ
  • ಅಕ್ಟೋಬರ್ 15, ಮಂಗಳವಾರ, ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್, ದುಬೈ, ಸಂಜೆ 6 ಗಂಟೆಗೆ
  • ಅಕ್ಟೋಬರ್ 17, ಗುರುವಾರ, ಸೆಮಿಫೈನಲ್ 1, ದುಬೈ, 6 PM
  • ಅಕ್ಟೋಬರ್ 18, ಶುಕ್ರವಾರ, ಸೆಮಿಫೈನಲ್ 2, ಶಾರ್ಜಾ, ಸಂಜೆ 6 ಗಂಟೆಗೆ
  • 20 ಅಕ್ಟೋಬರ್, ಭಾನುವಾರ, ಫೈನಲ್, ದುಬೈ, ಸಂಜೆ 6 ಗಂಟೆಗೆ

ಇದನ್ನೂ ಓದಿ: ಜಯ್​ ಶಾ ಬಳಿಕ ಬಿಸಿಸಿಐ ಮುಂದಿನ ಕಾರ್ಯದರ್ಶಿ ಯಾರು?: ಮುಂಚೂಣಿಯಲ್ಲಿ ದಿವಂಗತ ಬಿಜೆಪಿ ನಾಯಕ ಮಗನ ಹೆಸರು! - BCCI next secretary

ETV Bharat Logo

Copyright © 2025 Ushodaya Enterprises Pvt. Ltd., All Rights Reserved.