ETV Bharat / sports

ಹರಾಜಿನಲ್ಲಿ ಆರ್​ಸಿಬಿ ಫ್ರಾಂಚೈಸಿ ಖರೀದಿಸುವ ಮುನ್ನ ನಿವೃತ್ತಿ ಕುರಿತು ಯೋಚಿಸುತ್ತಿದ್ದೆ: ಸ್ವಪ್ನಿಲ್ ಸಿಂಗ್ - RCB impact player Swapnil Singh - RCB IMPACT PLAYER SWAPNIL SINGH

ಪ್ರಸ್ತುತ ಐಪಿಎಲ್‌ನಲ್ಲಿ ಆರ್​ಸಿಬಿ ತಂಡದ ಇಂಪ್ಯಾಕ್ಟ್ ಆಟಗಾರನಾಗಿ ಮಿಂಚುತ್ತಿರುವ ಸ್ಪಿನ್, ಆಲ್​ರೌಂಡರ್ ಸ್ವಪ್ನಿಲ್ ಸಿಂಗ್ ತಮ್ಮ ಅಭಿಪ್ರಾಯಗಳನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.

ETV Bharat
ಸ್ವಪ್ನಿಲ್ ಸಿಂಗ್ (ANI)
author img

By ETV Bharat Karnataka Team

Published : May 20, 2024, 7:20 PM IST

Updated : May 21, 2024, 11:38 AM IST

ಬೆಂಗಳೂರು: ಐಪಿಎಲ್‌ನ ಆಟಗಾರರ ಹರಾಜಿನಲ್ಲಿ ಆರ್​ಸಿಬಿ ತಂಡ ನನ್ನನ್ನು ಖರೀದಿಸುವ ಮುನ್ನ ನಾನು ನಿವೃತ್ತಿ ಹೊಂದುವುದರ ಕುರಿತು ಯೋಚಿಸುತ್ತಿದ್ದೆ ಎಂದು ಸ್ವಪ್ನಿಲ್ ಸಿಂಗ್ ತಿಳಿಸಿದ್ದಾರೆ. ಆರ್​ಸಿಬಿ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿದ್ದು, ನನಗೆ ಮತ್ತು ನನ್ನ ಕುಟುಂಬಕ್ಕೆ ಭಾವನಾತ್ಮಕ ಕ್ಷಣವಾಗಿತ್ತು ಎಂದು ಈ ಬಾರಿಯ ಐಪಿಎಲ್‌ನಲ್ಲಿ ಆರ್​ಸಿಬಿ ತಂಡದ ಇಂಪ್ಯಾಕ್ಟ್ ಆಟಗಾರನಾಗಿ ಮಿಂಚುತ್ತಿರುವ ಸ್ಪಿನ್ ಆಲ್​ರೌಂಡರ್ ಸ್ವಪ್ನಿಲ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

2006ರಲ್ಲೇ ದೇಶಿ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿ, ವಿರಾಟ್ ಕೊಹ್ಲಿಯೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರೂ ನಂತರ ತಾನು ಸವೆಸಿದ ಹಾದಿ ಕುರಿತು ಆರ್​ಸಿಬಿ ಫ್ರಾಂಚೈಸಿಯ ಬೋಲ್ಡ್ ಡೈರೀಸ್ ಸರಣಿಯಲ್ಲಿ ಅವರು ಮನಬಿಚ್ಚಿ ಮಾತನಾಡಿದ್ದಾರೆ.

ಹರಾಜು ಪ್ರಕ್ರಿಯೆ: ಆರ್​ಸಿಬಿ ತಂಡ ಪ್ಲೇ ಆಫ್ ಹಂತಕ್ಕೇರಿದ ಬಳಿಕ ಬೋಲ್ಡ್ ಡೈರೀಸ್ ಸರಣಿಯಲ್ಲಿ ಮಾತನಾಡಿದ ಸ್ವಪ್ನಿಲ್‌ ಸಿಂಗ್, ಐಪಿಎಲ್ ಆಟಗಾರರ ಹರಾಜಿನ ದಿನ ನಾನು ಧರ್ಮಶಾಲಾಗೆ ಪ್ರಯಾಣಿಸುತ್ತಿದ್ದೆನು. ಸಂಜೆ 7-8 ಗಂಟೆಗೆ ಧರ್ಮಶಾಲಾ ತಲುಪುತ್ತಿದ್ದೆ. ಅಲ್ಲಿಯವರೆಗೂ ನಡೆದ ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ಫ್ರಾಂಚೈಸಿ ನನ್ನತ್ತ ಒಲವು ತೋರಿರಲಿಲ್ಲ, ಕೊನೆಯ ಸುತ್ತಿನ ಹರಾಜು ನಡೆಯುತ್ತಿತ್ತು. ನಿರಾಶೆಯಲ್ಲಿದ್ದ ನಾನು ಅಷ್ಟೇ ಇಲ್ಲಿಗೆ ಮುಗಿಯಿತು, ಈಗ ನಡೆಯುತ್ತಿರುವ ದೇಶಿಯ ಕ್ರಿಕೆಟ್ ಆಡುವುದು ನಂತರ ತಂಡ ಬಯಸಿದರೆ ಇನ್ನೊಂದು ವರ್ಷ ಆಡುವುದು. ಬಳಿಕ ನಿವೃತ್ತಿ ಪಡೆಯೋಣ ಎಂದುಕೊಂಡಿದ್ದೆ. ಅಂತಿಮ ಕ್ಷಣದಲ್ಲಿ ಆರ್​ಸಿಬಿ ತಂಡ ಖರೀದಿಸಿದೆ ಎಂದು ನನಗೆ ನನ್ನ ಕುಟುಂಬದವರಿಂದ ಕರೆ ಬಂತು ಎಂಬುದನ್ನ ಹೇಳುವಾಗ ಸ್ವಪ್ನಿಲ್ ಭಾವುಕರಾದರು.

ಆರ್​ಸಿಬಿಯೊಳಗೆ ಸ್ಥಾನ ಪಡೆಯಲು ಆ್ಯಂಡಿ ಫ್ಲವರ್ ಕಾರಣ‌: ಆರ್​ಸಿಬಿ ತಂಡದಲ್ಲಿ ತಾನು ಸ್ಥಾನ ಪಡೆಯಲು ತಂಡದ ಹೆಡ್ ಕೋಚ್ ಆ್ಯಂಡಿ ಫ್ಲವರ್ ಕಾರಣ ಎಂದು ಇದೇ ಸಂದರ್ಭದಲ್ಲಿ ಸ್ವಪ್ನಿಲ್ ತಿಳಿಸಿದ್ದಾರೆ. ಆ್ಯಂಡಿ ಫ್ಲವರ್ ಲಕ್ನೋ ತಂಡದ ಕೋಚ್ ಆಗಿದ್ದ ಅವಧಿಯಲ್ಲಿ ನೆಟ್ ಬೌಲರ್ ಆಗಿದ್ದ ತನಗೆ ಅವರು ಆರ್​ಸಿಬಿ ಕೋಚ್ ಆದ ಬಳಿಕ ತರಬೇತಿ ಶಿಬಿರಗಳಲ್ಲಿ ಭಾಗಿಯಾಗಲು ತಿಳಿಸಿದ್ದರು. ಆಟಗಾರರ ಟ್ರಯಲ್ಸ್ ಕ್ಯಾಂಪ್ ನಡೆದಾಗ ನಾನು ನನ್ನ ದೇಶಿ ಕ್ರಿಕೆಟ್ ಋತು ಹೇಗೆ ಮುಗಿಯಿತು ಎಂದು ಆ್ಯಂಡಿ ಫ್ಲವರ್ ಅವರಿಗೆ ತಿಳಿಸಿದ್ದೆನು. 'ನನಗೆ ಒಂದು‌ ಅವಕಾಶ ನೀಡಿ, ಅದೇ ನನ್ನ ಕೊನೆಯ ಅವಕಾಶವೂ ಆಗಬಹುದು ನನ್ನ ಮೇಲೆ ನಂಬಿಕೆಯಿಡಿ' ಎಂದಿದ್ದೆ. ಆಗ ಅವರು 'ನಿನ್ನ ಮೇಲೆ ನಂಬಿಕೆಯಿದೆ' ಎಂದಿದ್ದರು'' ಎಂದು ಸ್ವಪ್ನಿಲ್ ಹೇಳಿದರು.

ಆರ್​ಸಿಬಿ ತಂಡಕ್ಕೆ ಆಯ್ಕೆಯಾದಾಗ, 'ನನಗೆ ಆಡುವ ಅವಕಾಶ ಸಿಗಲಿದೆ, ಅದಕ್ಕಾಗಿ ನಾನು ಕಾಯಬೇಕು ಎಂದು ಮೊದಲೇ ನಿರ್ಧರಿಸಿದ್ದೆ. ಮೈದಾನಕ್ಕೆ ಬರುವಾಗಲೂ ಸಹ ಎಂದೂ ನಾನು ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ ಎಂಬ ಭಾವನೆಯಲ್ಲಿ ಬರುತ್ತಿರಲಿಲ್ಲ. ಆರಂಭದಿಂದಲೂ ನನ್ನ ಮೊದಲ ಪ್ರಾಕ್ಟಿಸ್ ಸೆಷನ್ನೇ ನನಗೆ ಮೊದಲ ಪಂದ್ಯವೆಂದುಕೊಳ್ಳುತ್ತಿದ್ದೆ. ನೆಟ್ಸ್ ಸೆಷನ್ನೇ ನನಗೆ ಪಂದ್ಯದಂತಿದ್ದವು'' ಎಂದು ತಿಳಿಸಿದರು.

''ಆಡುವ ಅವಕಾಶ ದೊರೆತಾಗ ನಾನು ಒಂದೋ ಸಿಕ್ಸರ್ ಬಾರಿಸಬೇಕು, ಇಲ್ಲ ಬೌಂಡರಿ ಬಾರಿಸಬೇಕು. ಯಾಕೆಂದರೆ ಐಪಿಎಲ್‌ನಲ್ಲಿ ನಾನೂ ಈಗಾಗಲೇ ಒಂದು ವಿಕೆಟ್ ಪಡೆದಿದ್ದೇನೆ' ಎಂದು ನನ್ನ ಸಹೋದರನ ಬಳಿ ಹೇಳಿಕೊಂಡಿದ್ದೆ. ಆದರೆ ಅಂತಿಮವಾಗಿ ಆಡುವ ಅವಕಾಶ ದೊರೆತಾಗ ನಾನು ಸಿಕ್ಸರ್, ಬೌಂಡರಿ ಎರಡನ್ನೂ ಬಾರಿಸಿದ್ದೆ. ಮತ್ತು ಆ ಪಂದ್ಯದಲ್ಲಿ ಬೌಲಿಂಗ್ ಮಾಡಿದ ನಾನು ನನ್ನ ಮೊದಲ ಓವರ್‌ನಲ್ಲಿ ಒಂದು ನೋಬಾಲ್ ಸಹಿತ ಏಳು ಎಸೆತಗಳನ್ನ ಎಸೆಯಬೇಕಾಯಿತು, ಮತ್ತು ಏಳನೇ ಎಸೆತದಲ್ಲಿ ನಾನು ವಿಕೆಟ್ ಪಡೆದೆ'' ಎಂದು ಸ್ವಪ್ನಿಲ್ ತಿಳಿಸಿದರು.

ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಸತತ ವೈಫಲ್ಯ ಎದುರಿಸಿದ್ದ ಆರ್​ಸಿಬಿ ತಂಡ ನಂತರ ಸತತ ಆರು ಪಂದ್ಯಗಳಲ್ಲಿ ಗೆದ್ದು ಪ್ಲೇ ಆಫ್ ಪ್ರವೇಶಿಸಿದೆ. ಆರ್​ಸಿಬಿ ತಂಡಕ್ಕೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಗೆಲುವಿಗೆ ಉಪಯುಕ್ತ ಕೊಡುಗೆ ನೀಡುತ್ತಿರುವ ಸ್ವಪ್ನಿಲ್ ಸಿಂಗ್ ಮಿಂಚುತ್ತಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ತಂಡದ ಪರ ಮೊದಲು ಪಾದಾರ್ಪಣೆ ಮಾಡಿರುವ ಸ್ವಪ್ನಿಲ್, ನಂತರದ ಪಂದ್ಯಗಳಲ್ಲಿಯೂ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ.

ಇದನ್ನೂಓದಿ:"ಅಂದು ಟೀಕಿಸಿದವರಿಂದಲೇ ಇಂದು ಹೊಗಳಿಕೆ": ಒಂದೇ ರಾತ್ರಿಯಲ್ಲಿ ಹೀರೋ ಆದ ಯಶ್​ ದಯಾಳ್​ - Yash Dayal

Last Updated : May 21, 2024, 11:38 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.