ETV Bharat / sports

ಟಿ20 ವಿಶ್ವಕಪ್​: ತವರೂರಿನಲ್ಲಿ ರೋಡ್​ ಶೋ, ಹಾರ್ದಿಕ್​ ಹಾರ್ದಿಕ್ ಎಂದು ಘೋಷಣೆ ಕೂಗಿದ ಜನಸ್ತೋಮ - Hardik Pandya Roadshow

Hardik Pandya Parade in Vadodara: ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 2024 ರ ಟಿ20 ವಿಶ್ವಕಪ್ ವಿಜಯೋತ್ಸವವನ್ನು ವಡೋದರಾದಲ್ಲಿ ಆಚರಿಸಿದರು. ನಗರದ ಬೀದಿಗಳಲ್ಲಿ ರೋಡ್​ ಶೋ ನಡೆದಿದ್ದು, ಅಪಾರ ಜನಸ್ತೋಮ ನೆರೆದಿತ್ತು.

HARDIK PANDYA  T20 WORLD CUP 2024  INDIAN CRICKET TEAM
ಟಿ20 ವಿಶ್ವಕಪ್​: ತವರೂರಿನಲ್ಲಿ ರೋಡ್​ ಶೋ (IANS Photo)
author img

By ETV Bharat Karnataka Team

Published : Jul 16, 2024, 12:16 PM IST

ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ ಅವರ ಅದ್ಭುತ ಪ್ರದರ್ಶನ ಈ ಭಾರಿ ಭಾರತ 17 ವರ್ಷಗಳ ನಂತರ ಜೂನ್ 29 ರಂದು ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲಲು ಸಹಾಯ ಮಾಡಿತು. ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ 2024 ರ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಸೋಲಿಸಿತು. ಈ ಪಂದ್ಯ ರೋಚಕವಾಗಿದ್ದು, ಈ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಅವರ ಕೊಡುಗೆ ದೊಡ್ಡದಿದೆ. ಅವರು 3 ಓವರ್‌ಗಳಲ್ಲಿ 20 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದಿದ್ದರು.

ವಡೋದರಾದಲ್ಲಿ ಹಾರ್ದಿಕ್ ಪಾಂಡ್ಯ ಉತ್ಸವ: ಟಿ20 ವಿಶ್ವಕಪ್ ಗೆದ್ದ 16 ದಿನಗಳ ನಂತರ ಹಾರ್ದಿಕ್ ಪಾಂಡ್ಯ ಅವರು ಬರೋಡಾ ತಲುಪಿದರು. ಅಲ್ಲಿ ಅವರಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ಹಾರ್ದಿಕ್ ಪಾಂಡ್ಯ ಸ್ಥಳೀಯ ಆಟಗಾರನಾಗಿ ನಗರದ ಬೀದಿಗಳಲ್ಲಿ ಗೆಲುವಿನ ಉತ್ಸವ ನಡೆಸಿದರು. ಈ ವೇಳೆ ಹಾರ್ದಿಕ್‌ರನ್ನು ನೋಡಲು ರಸ್ತೆಯಲ್ಲಿ ಜನಸಾಗರವೇ ನೆರೆದಿತ್ತು. ಹಾರ್ದಿಕ್ ಅವರ ಮೆರವಣಿಗೆಯ ಸಮಯದಲ್ಲಿ ನಗರದ ಬೀದಿಗಳಲ್ಲಿ 3.5 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಈ ಮೆರವಣಿಗೆಯನ್ನು 5.5 ಕಿಲೋಮೀಟರ್ ಉದ್ದಕ್ಕೂ ನಡೆಸಲಾಯಿತು.

ಹಾರ್ದಿಕ್ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ‘ಹಾರ್ದಿಕ್ ಪಾಂಡ್ಯ ಪರೇಡ್ ಆಫ್ ಬರೋಡಾ’ ಎಂದು ಬರೆಯಲಾಗಿತ್ತು. ಪಾಂಡ್ಯ ಅವರ ಬಸ್ ಹಳೆಯ ನಗರದಿಂದ (ಮಾಂಡ್ವಿ) ಪ್ರಾರಂಭವಾಗಿ ಸುಮಾರು 3.5 ರಿಂದ 4 ಕಿಲೋಮೀಟರ್ ಪ್ರಯಾಣಿಸಿ ಅಕೋಟಾದಲ್ಲಿ ಕೊನೆಗೊಂಡಿತು. ಈ ವೇಳೆ ಎಲ್ಲೆಡೆ ಅಭಿಮಾನಿಗಳ ದಂಡೇ ನೆರೆದಿದ್ದು, ಹಾರ್ದಿಕ್, ಹಾರ್ದಿಕ್ ಘೋಷಣೆಗಳು ಕೇಳಿಬಂದವು.

ಈ ಸಂದರ್ಭದಲ್ಲಿ ಮಾತನಾಡಿದ ಪಾಂಡ್ಯ, ಯಾವಾಗಲೂ ನಮ್ಮನ್ನು ಬೆಂಬಲಿಸುತ್ತಿರುವುದಕ್ಕಾಗಿ ಮತ್ತು ನಮ್ಮ ಮೇಲೆ ಅಚಲವಾದ ನಂಬಿಕೆಯನ್ನು ಹೊಂದಿದ್ದಕ್ಕಾಗಿ ಬರೋಡದ ಜನರಿಗೆ ಧನ್ಯವಾದಗಳು ಎಂದರು. ಈ ಸಂದರ್ಭದಲ್ಲಿ, ಅವರು ಬರೋಡಾ ಪೊಲೀಸರು ಮತ್ತು ಈ ಪರೇಡ್‌ನಲ್ಲಿ ಕೆಲಸ ಮಾಡಿದ ಎಲ್ಲಾ ಸ್ವಯಂಸೇವಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಇದಕ್ಕೂ ಮುನ್ನ ಮುಂಬೈನಲ್ಲಿ ನಡೆದ ರೋಡ್ ಶೋನಲ್ಲಿ ಇಡೀ ವಿಶ್ವ ವಿಜೇತ ತಂಡ ಕಪ್‌ನೊಂದಿಗೆ ಮರಳಿತ್ತು. ಅದಾದ ಬಳಿಕ ಈಗ ವಡೋದರಾದಲ್ಲಿ ಪಾಂಡ್ಯ ರೋಡ್​ ಶೋ ದೇಶದ ಗಮನ ಸೆಳೆದಿದೆ.

ಓದಿ: ಪಾಕ್​ ಪ್ರವಾಸಕ್ಕೆ ಭಾರತ ಸರ್ಕಾರ ನಿರ್ಬಂಧಿಸಿದ್ದರೆ, ಲಿಖಿತವಾಗಿ ಬರೆದುಕೊಡಿ: ಬಿಸಿಸಿಐಗೆ ಪಿಸಿಬಿ ಒತ್ತಾಯ - ICC champion trophy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.