ಅಹಮದಾಬಾದ್: ಐಪಿಎಲ್ನ 45ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 9 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ ಸಾಯಿ ಸುದರ್ಶನ್ (84*) ಅವರ ಅಜೇಯ ಅರ್ಧಶತಕ ಮತ್ತು ಶಾರುಖ್ ಖಾನ್ (58) ಅವರ ವೇಗದ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಕಲೆ ಹಾಕಿತ್ತು. ಬೆಂಗಳೂರು ಪರ ಸಿರಾಜ್, ಸ್ವೊನೀಲ್ ಸಿಂಗ್, ಮ್ಯಾಕ್ಸ್ವೆಲ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೆ ಪ್ರತ್ಯುತ್ತರವಾಗಿ ಆರ್ಸಿಬಿ ವಿಲ್ ಜಾಕ್ಸ್ (100*) ಬಿರುಸಿನ ಶತಕ ಮತ್ತು ವಿರಾಟ್ ಕೊಹ್ಲಿ (70*) ಅಜೇಯ ಅರ್ಧಶತಕದ ನೆರವಿನಿಂದ ಒಂದು ವಿಕೆಟ್ ಕಳೆದುಕೊಂಡು 24 ಎಸೆತಗಳು ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು. ಇದು ಆರ್ಸಿಬಿಯ ಮೂರನೇ ಗೆಲುವಾಗಿದೆ. ಆದರೆ ಅಂಕಪಟ್ಟಿಯಲ್ಲಿ ಮಾತ್ರ ಯಾವುದೇ ಬದಲಾವಣೆ ಕಂಡು ಬಂದಿಲ್ಲ.
ಜಾಕ್ಸ್ ವೇಗದ ಶತಕ: ವಿಲ್ ಜಾಕ್ಸ್ 41 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 5 ಬೌಂಡರಿ ನೆರವಿನಿಂದ ಶತಕ ಪೂರೈಸಿದ್ದಾರೆ. ಜಾಕ್ಸ್ 16ನೇ ಓವರ್‌ನಲ್ಲಿ ರಶೀದ್ ಖಾನ್ ಎಸೆತದಲ್ಲಿ 4 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಐಪಿಎಲ್ನಲ್ಲಿ ತಮ್ಮ ಮೊದಲ ಶತಕವನ್ನು ಸಿಡಿಸಿದರು.
ಆರ್ಸಿಬಿಯ ಎರಡನೇ ಅತೀ ದೊಡ್ಡ ಚೇಸ್: ಗುಜರಾತ್ ವಿರುದ್ಧ ಆರ್ಸಿಬಿ 201ರನ್ಗಳನ್ನು ಚೇಸ್ ಮಾಡುವ ಮೂಲಕ ಎರಡನೇ ಅತೀ ದೊಡ್ಡ ಚೇಸಿಂಗ್ ಗೆಲುವು ಸಾಧಿಸಿದೆ. ಇದಕ್ಕೂ ಮೊದಲು ಪಂಜಾಬ್ ಕಿಂಗ್ಸ್ ವಿರುದ್ಧ 2010ರಲ್ಲಿ 204ರನ್ ಚೇಸ್ ಮಾಡಿ ಗೆಲುವು ಸಾಧಿಸಿತ್ತು. ನಂತರ 2016ರ ರಲ್ಲಿ ಪಂಜಾವ್ ವಿರುದ್ಧ 192 ರನ್, 2023ರಲ್ಲಿ 187 ರನ್ ಚೇಸ್ ಮಾಡಿದೆ.
ಇದನ್ನೂ ಓದಿ: ಐಪಿಎಲ್ ಸೂಪರ್ ಸಂಡೆ: ಆರ್ಸಿಬಿ vs ಗುಜರಾತ್ ಟೈಟಾನ್ಸ್, ಸಿಎಸ್ಕೆ vs ಎಸ್ಆರ್ಹೆಚ್ ಸೆಣಸು - IPL Super Sunday