ETV Bharat / sports

IPL : ಡೆಲ್ಲಿ ಕ್ಯಾಪಿಟಲ್ಸ್​ ಎದುರು ಗುಜರಾತ್​ಗೆ ಹೀನಾಯ ಸೋಲು​ - GT VS DC

ಐಪಿಎಲ್​ ಟೂರ್ನಿಯ ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಎದರು ಗುಜರಾತ್​ ತಂಡ ಹೀನಾಯ ಸೋಲನುಭವಿಸಿದೆ.

IPL : ಗುಜರಾತ್​ ಟೈಟಾನ್ಸ್​ ವಿರುದ್ಧ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ಬೌಲಿಂಗ್​ ಆಯ್ಕೆ

author img

By ETV Bharat Karnataka Team

Published : Apr 17, 2024, 7:23 PM IST

Updated : Apr 17, 2024, 11:03 PM IST

ಅಹಮದಾಬಾದ್: ಐಪಿಎಲ್​ನ 32ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಇನ್ನಿಂಗ್ಸ್​ವೊಂದರಲ್ಲಿ 67 ಬಾಲ್​ಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿದ್ದು, ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಅತಿ ದೊಡ್ಡ ಗೆಲುವಾಗಿದೆ.

ಇಲ್ಲಿನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್​ ನೀಡಿದ್ದ 89 ರನ್​ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ 8.5 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಗುರಿಯನ್ನು ತಲುಪುವ ಮೂಲಕ ಗೆಲುವಿನ ನಗೆ ಬೀರಿತು. ಡೆಲ್ಲಿ ಪರ ಫ್ರೇಸರ್-ಮೆಕ್‌ಗುರ್ಕ್ (20), ಶಾಯ್ ಹೋಪ್ (19) ಮತ್ತು ರಿಷಬ್ ಪಂತ್ (16) ರನ್​ ಕೊಡುಗೆ ನೀಡಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು.

ಇದಕ್ಕೂ ಮನ್ನ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಗುಜರಾತ್​ ಜೈಂಟ್ಸ್ ಅಲ್ಪಮೊತ್ತಕ್ಕೆ ಕುಸಿಯಿತು. 17.3 ಓವರ್​ಗಳಲ್ಲಿ ಕೇವಲ 89 ರನ್​ಗಳಿಗೆ ಸರ್ವಪತನ ಕಂಡಿತು. ​ಗುಜರಾತ್ ಪರ ರಶೀದ್ ಖಾನ್ ಗರಿಷ್ಠ ಸ್ಕೋರರ್ ಆಗಿದ್ದಾರೆ. ಎಂಟನೇ ಕ್ರಮಾಂಕದಲ್ಲಿ ಬಂದ ರಶೀದ್ 24 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಸಮೇತ 31 ರನ್ ಗಳಿಸಿದರು.

ಆರಂಭದಿಂದಲೇ ನಾಯಕ ಶುಭ್‌ಮನ್ ಗಿಲ್ ತಂಡವು ನಿರೀಕ್ಷಿತ ರನ್​ ಗಳಿಸುವಲ್ಲಿ ವಿಫಲವಾಯಿತು. 48 ರನ್‌ಗಳಿಸುವಷ್ಟರಲ್ಲೆ ಪ್ರಮುಖ 6 ವಿಕೆಟ್‌ಗಳು ಕಳೆದುಕೊಂಡಿತು. ನಾಯಕ ಶುಭ್‌ಮನ್ ಗಿಲ್ (8), ಅಭಿನವ್ ಮನೋಹರ್ (8), ವೃದ್ಧಿಮಾನ್ ಸಹಾ (2), ಮೋಹಿತ್ ಶರ್ಮಾ (2), ಡೇವಿಡ್ ಮಿಲ್ಲರ್ (2) ಮತ್ತು ನೂರ್ ಅಹ್ಮದ್ (1) ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ.

ಸಾಯಿ ಸುದರ್ಶನ್ 12 ರನ್ ಮತ್ತು ರಾಹುಲ್ ತೆವಾಟಿಯಾ 10 ರನ್ ಕೊಡುಗೆ ನೀಡಿದರು. ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಬಂದ ಶಾರುಖ್ ಖಾನ್ ಶೂನ್ಯಕ್ಕೆ ನಿರ್ಗಮಿಸಿದರು. ಅಂತಿಮವಾಗಿ ಕೇವಲ 89 ರನ್​ಗಳನ್ನು ಕಲೆ ಹಾಕಲು ಗುಜರಾತ್​ ತಂಡಕ್ಕೆ ಸಾಧ್ಯವಾಯಿತು. ಡೆಲ್ಲಿ ಪರ ಮುಖೇಶ್ ಕುಮಾರ್ 3, ಇಶಾಂತ್ ಶರ್ಮಾ ಮತ್ತು ಟ್ರಿಸ್ಟಾನ್ ಸ್ಟಬ್ಸ್ ತಲಾ ಎರಡು ವಿಕೆಟ್ ಕಬಳಿಸಿದರು. ಖಲೀಲ್ ಅಹ್ಮದ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಈ ಋತುವಿನಲ್ಲಿ ಮೂರನೇ ಜಯ ದಾಖಲಿಸಿತು. ಪಾಯಿಂಟ್ಸ್ ಪಟ್ಟಿಯಲ್ಲೂ ಡೆಲ್ಲಿ 9ನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಜಿಗಿದಿದೆ. ಗುಜರಾತ್ ಆರನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿದಿದೆ.

ತಂಡಗಳು, ಗುಜರಾತ್​ ಜೈಂಟ್ಸ್​: ಶುಭಮನ್ ಗಿಲ್(ನಾ), ವೃದ್ಧಿಮಾನ್ ಸಹಾ(ವಿ.ಕೀ), ಸಾಯಿ ಸುದರ್ಶನ್, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಸ್ಪೆನ್ಸರ್ ಜಾನ್ಸನ್, ಸಂದೀಪ್ ವಾರಿಯರ್

ಇಂಪ್ಯಾಕ್ಟ್​ ಪ್ಲೇಯರ್ಸ್​: ರತ್ ಬಿಆರ್, ಮಾನವ್ ಸುತಾರ್, ಶಾರುಖ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ದರ್ಶನ್ ನಲ್ಕಂಡೆ

ಡೆಲ್ಲಿ ಕ್ಯಾಪಿಟಲ್ಸ್​: ಪೃಥ್ವಿ ಶಾ, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಟ್ರಿಸ್ಟಾನ್ ಸ್ಟಬ್ಸ್, ಶಾಯ್ ಹೋಪ್, ರಿಷಭ್ ಪಂತ್(ನಾ/ವಿ.ಕೀ), ಅಕ್ಸರ್ ಪಟೇಲ್, ಸುಮಿತ್ ಕುಮಾರ್, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮುಖೇಶ್ ಕುಮಾರ್, ಖಲೀಲ್ ಅಹ್ಮದ್

ಇಂಪ್ಯಾಕ್ಟ್​ ಪ್ಲೇಯರ್ಸ್​: ಅಭಿಷೇಕ್ ಪೊರೆಲ್, ಲಿಜಾದ್ ವಿಲಿಯಮ್ಸ್, ಕುಮಾರ್ ಕುಶಾಗ್ರಾ, ಪ್ರವೀಣ್ ದುಬೆ, ಲಲಿತ್ ಯಾದವ್

ಇದನ್ನೂ ಓದಿ: "ಈ ಸಲವೂ ಕಪ್​ ನಮ್ದಲ್ಲ": ಆರ್​ಸಿಬಿಯ ಹೊಸ ಅಧ್ಯಾಯದಲ್ಲಿ ಹಳೆ ಚಾಳಿ, ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಬೇಸರ - RCB Fans disappointed

Last Updated : Apr 17, 2024, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.