ನವದೆಹಲಿ: 52ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಭಾರತ ಕ್ರಿಕೆಟ್ ತಂಡ ಯಶಸ್ವಿ ನಾಯಕ ಸೌರವ್ ಗಂಗೂಲಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿವೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ವಿಶೇಷ ರೀತಿಯಲ್ಲಿ ವಿಶ್ ಮಾಡಿದೆ.
ಗಂಗೂಲಿ ಭಾರತೀಯ ಕ್ರಿಕೆಟ್ ತಂಡವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರು. 8 ಜುಲೈ 1972 ರಂದು ಕೋಲ್ಕತ್ತಾದಲ್ಲಿ ಜನಿಸಿದ ಇವರನ್ನು 'ಬಂಗಾಳದ ಮಹಾರಾಜ', ಅಭಿಮಾನಿಗಳ ನೆಚ್ಚಿನ 'ದಾದಾ' ಮತ್ತು 'ಪ್ರಿನ್ಸ್ ಆಫ್ ಕೋಲ್ಕತ್ತಾ' ಎಂದೂ ಕರೆಯುತ್ತಾರೆ.
ಭಾರತೀಯ ಕ್ರಿಕೆಟ್‌ನಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಗಂಗೂಲಿ ತಮ್ಮ ಆಕ್ರಮಣಕಾರಿ ಆಟದಿಂದ ಹೆಸರುವಾಸಿಯಾದವರು. ದಂಡೆತ್ತಿ ಬರುವ ಬೌಲರ್ಗಳನ್ನು ಬೆಂಡೆತ್ತುವುದರಲ್ಲಿ ನಿಸ್ಸೀಮರು. ಕ್ರೀಡಾ ಜಗತ್ತಿಗೆ ಅನೇಕ ಕೊಡುಗೆಗಳನ್ನು ನೀಡಿದವರು. ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಕ್ಕ ನಾಯಕತ್ವದ ಸ್ಥಾನವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಷ್ಟೇ ಅಲ್ಲದೇ ಹೊಸ ಯುವ ಪಡೆಯನ್ನು ಕಟ್ಟಿ ಬೆಳೆಸಿದವರು. ನಾಯಕನಾಗಿ ಗುರುತಿಸಿಕೊಂಡ ಬಳಿಕ ತಂಡವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.
ಇವರ ನಾಯಕತ್ವದ ಟೀಂ ಇಂಡಿಯಾ 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ನಲ್ಲೂ ಅದ್ಭುತ ಪ್ರದರ್ಶನ ತೋರಿತ್ತು. ಈ ಮೆಗಾ ಟೂರ್ನಿಯಲ್ಲಿ ಗಂಗೂಲಿ 3 ಸೆಂಚುರಿ ಬಾರಿಸಿದ್ದರು. ಸಚಿನ್ ತೆಂಡೂಲ್ಕರ್ ಸರಣಿ ಶ್ರೇಷ್ಠ ಪ್ರಶಸ್ತಿ ದಕ್ಕಿಸಿಕೊಂಡಿದ್ದರು. ಆದರೂ, ಫೈನಲ್ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲನುಭವಿಸಿತ್ತು. ಆದರೆ, ಈ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧದ ಟೀಂ ಇಂಡಿಯಾ ವಿರೋಚಿತ ಗೆಲುವು ಕಂಡಿತ್ತು. ಇದು ವಿಶ್ವಕಪ್ ಗೆಲುವಿನಷ್ಟೇ ಖುಷಿ ನೀಡಿತ್ತು.
4️⃣2️⃣4️⃣ intl. matches
— BCCI (@BCCI) July 8, 2024
1️⃣8️⃣5️⃣7️⃣5️⃣ intl. runs 👌🏻
3️⃣8️⃣ intl. centuries 💯
Here's wishing former #TeamIndia Captain and former BCCI President @SGanguly99 a very Happy Birthday. 👏 🎂 pic.twitter.com/uxMdtS2fFA
2002ರಲ್ಲಿ ನಾಟ್ವೆಸ್ಟ್ ಟ್ರೋಫಿ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತವು ಗೆಲುವು ಸಾಧಿಸಿದ್ದ ಖುಷಿಯಲ್ಲಿ ಲಾರ್ಡ್ಸ್ ಬಾಲ್ಕನಿಯಲ್ಲಿಯೇ ತಮ್ಮ ಜರ್ಸಿ ಬಿಚ್ಚಿ ಕುಣಿದಿದ್ದ ಅವರ ಉತ್ಸಾಹ ಕ್ರಿಕೆಟ್ ಇತಿಹಾಸದ ಸ್ಮರಣೀಯ ವಿಷಯ. 2008ರಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಜೊತೆ ಸೇರಿ ನಿವೃತ್ತಿ ಘೋಷಿಸಿದ ಗಂಗೂಲಿ, ಕ್ರಿಕೆಟ್ ಸೇವೆಯಿಂದ ಬಳಿಕ ದೂರವಾದರು. ನಿವೃತ್ತಿ ಬಳಿಕ ಕೊಲ್ಕೊತಾ ಕ್ರಿಕೆಟ್ ಸಂಸ್ಥೆ ಹಾಗೂ ಬಿಸಿಸಿಐ ಅಧ್ಯಕ್ಷರಾಗಿಯೂ ಅದ್ಭುತ ಕೆಲಸಗಳನ್ನು ಮಾಡಿದರು. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗೆ ಸುಮಾರು ಎರಡು ದಶಕಗಳ ವೃತ್ತಿಜೀವನದಲ್ಲಿ ಅಪಾರ ಸಾಧನೆ ಮಾಡಿದ್ದಾರೆ.
ಸೌರವ್ ಗಂಗೂಲಿ 424 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 35 ಶತಕಗಳನ್ನು ಒಳಗೊಂಡಂತೆ 18575 ರನ್ ಗಳಿಸಿದ್ದಾರೆ. ಟಿ20 ಕ್ರಿಕೆಟ್ ಅಸ್ತಿತ್ವಕ್ಕೆ ಬರುವ ಮೊದಲು ನಿವೃತ್ತಿ ಹೊಂದಿದ್ದರಿಂದ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ಆಡಿದ್ದಾರೆ. 311 ಏಕದಿನ ಪಂದ್ಯಗಳ 300 ಇನ್ನಿಂಗ್ಸ್‌ಗಳಲ್ಲಿ 22 ಶತಕಗಳನ್ನು ಗಳಿಸಿರುವ ಗಂಗೂಲಿ, 16 ಶತಕಗಳನ್ನು ಒಳಗೊಂಡ 188 ಇನ್ನಿಂಗ್ಸ್‌ಗಳಲ್ಲಿ 7212 ರನ್ ಗಳಿಸಿದ್ದಾರೆ.
ಇದನ್ನೂ ಓದಿ: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 100 ರನ್ ಜಯ; ಟಿ20 ಸರಣಿ 1-1 ಸಮಬಲ - India Beats Zimbabwe