ನವದೆಹಲಿ: ಪೋರ್ಚುಗೀಸ್ ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ಹೆಸರಿನಲ್ಲಿ ಮೊತ್ತೊಂದು ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಒಟ್ಟು 100 ಕೋಟಿ ಪಾಲೋವರ್ಸ್ಗಳನ್ನು ಪಡೆಯುವ ಮೂಲಕ ಯಾವ ಆಟಗಾರರೂ ಮಾಡದ ಸಾಧನೆ ಮಾಡಿದ್ದಾರೆ.
Cristiano Ronaldo went from Sweeping the streets to owning them🐐 pic.twitter.com/jNrVFQXZfH
— Trey (@UTDTrey) September 12, 2024
ಈ ಬಗ್ಗೆ ರೊನಾಲ್ಡೊ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಅದರಲ್ಲಿ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. "100 ಕೋಟಿ ಅನುಯಾಯಿಗಳನ್ನು ಪಡೆದ ನಾವು ಇಂದು ಹೊಸ ಇತಿಹಾಸ ನಿರ್ಮಿಸಿದ್ದೇವೆ. ಇದು ಕೇವಲ ಸಂಖ್ಯೆ ಅಷ್ಟೇ ಅಲ್ಲ, ಇದು ನಿಮ್ಮ ಪ್ರೀತಿಯ ಸಂಕೇತ. ಮಡೈರಾ ಬೀದಿಗಳಿಂದ ಹಿಡಿದು ವಿಶ್ವದ ದೊಡ್ಡ ಮೈದಾನಗಳ ವರೆಗೆ ನಿಮಗಾಗಿ ಆಡಿದ್ದೇನೆ. ಇದೀಗ ನೂರು ಕೋಟಿ ಜನರು ನನ್ನ ಪರವಾಗಿ ನಿಂತಿದ್ದಾರೆ. ನನ್ನ ಜೀವನದ ಭಾಗವಾಗಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ರೊನಾಲ್ಡೊ ತಮ್ಮ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
ನಿರೀಕ್ಷೆಗೆ ಮೀರಿದ ಪ್ರತಿಕ್ರಿಯೆ: ಇತ್ತೀಚೆಗೆ ತನ್ನ ಯೂಟ್ಯೂಬ್ ಚಾನೆಲ್ ಆರಂಭಿಸಿರುವ ರೊನಾಲ್ಡೊ ಚಾನೆಲ್ ಆರಂಭಗೊಂಡ ಆರು ದಿನಗಳಲ್ಲಿ 50 ಮಿಲಿಯನ್ ಚಂದಾದಾರರನ್ನು ಪಡೆದುಕೊಂಡಿತ್ತು. ಈ ಅನುಕ್ರಮದಲ್ಲಿ, ಕಡಿಮೆ ಸಮಯದಲ್ಲಿ 50 ಮಿಲಿಯನ್ ಚಂದಾದಾರರ ಮೈಲಿಗಲ್ಲನ್ನು ಪಡೆದ ಯೂಟ್ಯೂಬರ್ ಎಂಬ ದಾಖಲೆಯನ್ನು ರೊನಾಲ್ಡೊ ನಿರ್ಮಿಸಿದ್ದಾರೆ. ಆಗಸ್ಟ್ 21 ರಂದು ರೊನಾಲ್ಡೊ ಯುವರ್ ಕ್ರಿಸ್ಟಿಯಾನೋ ಎಂಬ ಹೆಸರಿನೊಂದಿಗೆ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು. ಅದಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದೆ.
We’ve made history — 1 BILLION followers! This is more than just a number - it’s a testament to our shared passion, drive, and love for the game and beyond.
— Cristiano Ronaldo (@Cristiano) September 12, 2024
From the streets of Madeira to the biggest stages in the world, I’ve always played for my family and for you, and now 1… pic.twitter.com/kZKo803rJo
ಚಾನಲ್ ಆರಂಭಗೊಂಡ 90 ನಿಮಿಷಗಳಲ್ಲಿ 1 ಮಿಲಿಯನ್ ಚಂದಾದಾರರನ್ನು ಮತ್ತು 12 ಗಂಟೆಗಳ ಒಳಗೆ 13 ಮಿಲಿಯನ್ ಚಂದಾದಾರರನ್ನು ಪಡೆದುಕೊಂಡಿತು. ಇದರೊಂದಿಗೆ ಮೊದಲ ದಿನವೇ 'ಗೋಲ್ಡನ್ ಪ್ಲೇ ಬಟನ್' ಅನ್ನು ಸ್ವೀಕರಿಸಿದ್ದರು. ಮೈದಾನದಲ್ಲಿ ಸದಾ ದಾಖಲೆಗಳಿಂದ ಫೇಮಸ್ ಆಗಿರುವ ರೊನಾಲ್ಡೊ ಯೂಟ್ಯೂಬ್ ನಲ್ಲೂ ದಾಖಲೆ ಸೃಷ್ಟಿಸುತ್ತಿದ್ದಾರೆ. ಪ್ರಸ್ತುತ ಅವರ ಚಾನಲ್ ಒಟ್ಟು 50.3 ಮಿಲಿಯನ್ ಚಂದಾದಾರರನ್ನು ಪಡೆದುಕೊಂಡಿದೆ. ರೊನಾಲ್ಡೊ ಟ್ವಿಟರ್‌ನಲ್ಲಿ 112.6 ಮಿಲಿಯನ್, ಫೇಸ್‌ಬುಕ್‌ನಲ್ಲಿ 170 ಮಿಲಿಯನ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 636 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.
900 ಗೋಲು ಗಳಿಸಿದ ಮೊದಲ ಫುಟ್ಬಾಲ್ ಆಟಗಾರ: ಫುಟ್ಬಾಲ್ನಲ್ಲು ಹಲವು ದಾಖಲೆಗಳನ್ನು ನಿರ್ಮಿಸಿರುವ ರೊನಾಲ್ಡೊ ಇತ್ತೀಚೆಗೆ ನಡೆದ ಪೋರ್ಚುಗಲ್ನ ನೇಷನ್ಸ್ ಲೀಗ್ ಪಂದ್ಯದಲ್ಲಿ ಕ್ರೊಯೇಷಿಯಾ ವಿರುದ್ಧ ಗೋಲು ಗಳಿಸುವ ಮೂಲಕ 900 ಗೋಲುಗಳನ್ನು ಪೂರೈಸಿದ್ದರು. ಇದರೊಂದಿಗೆ ಫುಟ್ಬಾಲ್ ಕ್ರೀಡೆಯಲ್ಲಿ ಅತೀ ಹೆಚ್ಚು ಗೋಲು ಗಳಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದರು.
ಇದನ್ನೂ ಓದಿ: ವಿರಾಟ್ ಕೊಹ್ಲಿ 58 ರನ್ ಪೂರೈಸಿದರೇ 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲೇ ದೊಡ್ಡ ದಾಖಲೆ ಬರೆಯಲಿದ್ದಾರೆ! - Virat Kohli