ETV Bharat / sports

ಹರ್ಮನ್​ಪ್ರೀತ್​ ಹ್ಯಾಟ್ರಿಕ್​ ಗೋಲು; ಅರ್ಜೆಂಟೀನಾ ವಿರುದ್ಧ ಭಾರತಕ್ಕೆ ಗೆಲುವು - FIH Hockey League - FIH HOCKEY LEAGUE

ಭಾರತದ ಪುರುಷರ ಹಾಕಿ ತಂಡ ಅರ್ಜೆಂಟೀನಾ ವಿರುದ್ಧ ಎಫ್​ಐಹೆಚ್​ ಪ್ರೋ ಹಾಕಿ ಲೀಗ್​ನಲ್ಲಿ ಗೆಲುವು ಸಾಧಿಸಿದೆ.

ಅರ್ಜೆಂಟೀನಾ ವಿರುದ್ದ ಭಾರತಕ್ಕೆ ಜಯ
ಅರ್ಜೆಂಟೀನಾ ವಿರುದ್ದ ಭಾರತಕ್ಕೆ ಜಯ (ETV Bharat)
author img

By PTI

Published : May 27, 2024, 1:19 PM IST

ಆಂಟ್ವರ್ಪ್ (ಬೆಲ್ಜಿಯಂ): ಇಲ್ಲಿ ನಡೆಯುತ್ತಿರುವ ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡ ಅರ್ಜೆಂಟೀನಾ ವಿರುದ್ಧ 5-4 ಅಂತರದಿಂದ ರೋಚಕ ಗೆಲುವು ಸಾಧಿಸಿದೆ.

ಹಾಕಿ ಟೀಮ್​ ಇಂಡಿಯಾದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅದ್ಭುತ ಪ್ರದರ್ಶನ ನೀಡಿ ಅರ್ಜೆಂಟೀನಾ ವಿರುದ್ಧ ಹ್ಯಾಟ್ರಿಕ್ ಗೋಲು ಗಳಿಸಿದರು. 29ನೇ ನಿಮಿಷದಲ್ಲಿ ಮೊದಲು ಗೋಲು ಗಳಿಸಿದ ಹರ್ಮನ್​ಪ್ರೀತ್​ 50 ಮತ್ತು 52ನೇ ನಿಮಿಯದಲ್ಲಿ ಎರಡು ಗೋಲುಗಳನ್ನು ದಾಖಲಿಸಿದರು.

ಉಳಿದಂತೆ ಹುಂಡಲ್ ಅರೈಜಿತ್ ಸಿಂಗ್ (7ನೇ ನಿ) ಮತ್ತು ಗುರ್ಜಂತ್ ಸಿಂಗ್ (18ನೇ ನಿ) ತಲಾ ಒಂದು ಗೋಲು ಗಳಿಸಿ ಅರ್ಜೆಂಟೀನಾ ವಿರುದ್ಧ ಭಾರತದ ಗೆಲುವಿಗೆ ನೆರವಾದರು. ಈ ಗೆಲುವಿನೊಂದಿಗೆ ಭಾರತ ಅಂಕಪಟ್ಟಿಯಲ್ಲಿ 21 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ತಲುಪಿದೆ.

ಹೈಲೈಟ್ಸ್​: ಮೊದಲಿಗೆ ಭಾರತವು ಉತ್ತಮ ಆರಂಭವನ್ನು ಮಾಡಿತು. ಮೊದಲ ಕ್ವಾರ್ಟರ್‌ನ ಬಹುಪಾಲು ಚೆಂಡನ್ನು ಕೀಪ್ ಮಾಡಿ ಉತ್ತಮ ಪ್ರದರ್ಶನ ತೋರಿತು. ಆದರೆ 3ನೇ ನಿಮಿಷದಲ್ಲಿ ಅರ್ಜೆಂಟೀನಾದ ಫೆಡೆರಿಕೊ ಅವರು ತಂಡದ ಪರ ಮೊದಲ ಗೋಲು ಗಳಿಸಿದರು. ಈ ಮೂಲಕ ತಂಡ 1-0 ಅಂತರದಿಂದ ಮುನ್ನಡೆ ಸಾಧಿಸಿತು. ಈ ವೇಳೆ ಏಳನೇ ನಿಮಿಷದಲ್ಲಿ ಭಾರತದ ಅರೈಜಿತ್​ ಪ್ರತಿದಾಳಿ ನಡೆಸಿ ಫೀಲ್ಡ್ ಗೋಲು ಗಳಿಸಿದರು. ಮೊದಲ ಕ್ವಾರ್ಟರ್ ಅಂತ್ಯದವರೆಗೂ ಉಭಯ ತಂಡಗಳು 1-1 ಸಮಬಲ ಸಾಧಿಸಿದವು.

ಎರಡನೇ ಕ್ವಾರ್ಟರ್​ನಲ್ಲಿ ಭಾರತದ ಗುರ್ಜಂತ್ ಸಿಂಗ್ 18ನೇ ನಿಮಿಷದಲ್ಲಿ ಫೀಲ್ಡ್ ಗೋಲು ಬಾರಿಸಿ ಭಾರತಕ್ಕೆ 2-1 ಮುನ್ನಡೆ ತಂದುಕೊಟ್ಟರು. ಆದರೆ ಅಷ್ಟರಲ್ಲಾಗಲೇ ಪಂದ್ಯದ 23ನೇ ನಿಮಿಷದಲ್ಲಿ ಅರ್ಜೆಂಟೀನಾ ತಂಡ ಹಲವು ಪೆನಾಲ್ಟಿ ಕಾರ್ನರ್ ಗಳನ್ನು ಗೆದ್ದುಕೊಂಡರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ನಂತರ 24ನೇ ನಿಮಿಷದಲ್ಲಿ ಅರ್ಜೆಂಟೀನಾ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗ ಪಡೆಸಿಕೊಂಡು ಗೋಲು ಗಳಿಸುವ ಮೂಲಕ 2-2ರಿಂದ ಸಮಬಲ ಸಾಧಿಸಿತು.

ಏತನ್ಮಧ್ಯೆ ಭಾರತದ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಭಾರತ ತಂಡದ ಸ್ಕೋರ್ ಅನ್ನು 3-2 ಗೆ ತೆಗೆದುಕೊಂಡು ಪಂದ್ಯದ ರೋಚಕತೆಯನ್ನು ಹೆಚ್ಚಿಸಿದರು. ನಂತರ ಮೂರನೇ ಕ್ವಾರ್ಟರ್​ನಲ್ಲಿ ಎರಡೂ ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ಪಂದ್ಯದ 50 ಮತ್ತು 52ನೇ ನಿಮಿಷದಲ್ಲಿ ನಾಯಕ ಹರ್ಮನ್​ಪ್ರೀತ್​ ಸಿಂಗ್​ ಎರಡು ಪೆನಾಲ್ಟಿ ಸ್ಟ್ರೋಕ್​ನಲ್ಲಿ ಗೋಲುಗಳಿಸಿ ತಂಡದ ಸ್ಕೋರ್​ 5-2ಕ್ಕೆ ಕೊಂಡೊಯ್ದರು. ಅರ್ಜೆಂಟೀನಾ ಕೂಡ ಪ್ರತಿದಾಳಿ ನಡೆಸಿ ಪಂದ್ಯದ ಕೊನೆಯ ನಿಮಿಷದಲ್ಲಿ ಎರಡು ಗೋಲುಗಳನ್ನು ಗಳಿಸುವ ಮೂಲಕ ಸ್ಕೋರ್​ ಅನ್ನು ಸಮಬಲಗೊಳಿಸಲು ಪ್ರಯತ್ನಿಸಿತಾದರೂ ಸಾಧ್ಯವಾಗದೆ ಭಾರತದ ಎದುರು ಸೋಲನುಭವಿಸಿತು.

ಮುಂದಿನ ಪಂದ್ಯ: ಭಾರತ ತನ್ನ ಮುಂದಿನ ಪಂದ್ಯವನ್ನು ಜೂ.1ರಂದು ಜರ್ಮನಿ ವಿರುದ್ಧ ಆಡಲಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್​: ನ್ಯೂಯಾರ್ಕ್​ ತಲುಪಿದ ಭಾರತ ಕ್ರಿಕೆಟ್​ ತಂಡ - T20 World Cup 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.