ETV Bharat / sports

ಐಪಿಎಲ್​ 2024: ಬಲಿಷ್ಠ ಹೈದರಾಬಾದ್​ ವಿರುದ್ಧ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ಬೌಲಿಂಗ್​ ಆಯ್ಕೆ - DC vs SH Match

ದೆಹಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ಮಧ್ಯೆ ಪಂದ್ಯ ನಡೆಯುತ್ತಿದೆ.

IPL 2024
IPL 2024
author img

By ETV Bharat Karnataka Team

Published : Apr 20, 2024, 7:21 PM IST

ನವದೆಹಲಿ: ಐಪಿಎಲ್​ ಇತಿಹಾಸದಲ್ಲೇ ಎರಡು ಬಾರಿ ಅತಿಹೆಚ್ಚು ರನ್​ ದಾಖಲಿಸಿ ಅಬ್ಬರಿಸುತ್ತಿರುವ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿದೆ. ದೆಹಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಭರ್ಜರಿ ಗೆಲುವಿನ ಲಯದಲ್ಲಿರುವ ಹೈದರಾಬಾದ್​, ಡೆಲ್ಲಿ ತಂಡವನ್ನು ಕಟ್ಟಿಹಾಕುತ್ತಾ ಎಂಬುದು ಪ್ರಶ್ನೆಯಾಗಿದೆ.

ರಿಷಬ್​ ಪಂತ್​ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್​ ಸತತ ಎರಡು ಗೆಲುವು ದಾಖಲಿಸಿದ್ದು, ಇದೇ ಲಯವನ್ನು ಮುಂದುವರಿಸಿಕೊಂಡು ಹೋಗುವ ಇರಾದೆಯಲ್ಲಿದೆ. ಆಡಿರುವ 7 ಪಂದ್ಯಗಳಲ್ಲಿ 3 ಗೆಲುವು 4 ಸೋಲು ಕಂಡಿದೆ. ಪ್ಯಾಟ್​ ಕಮಿನ್ಸ್​ ನೇತೃತ್ವದ ಹೈದರಾಬಾದ್​ 6 ರಲ್ಲಿ 4 ಪಂದ್ಯ ಗೆದ್ದು, 2 ರಲ್ಲಿ ಸೋತಿದೆ.

ಡೆಲ್ಲಿಯಲ್ಲಿ ಎರಡು ಬದಲು: ಇನ್ನು ಕಳೆದ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ವಿರುದ್ಧ ಭರ್ಜರಿ ಆಟವಾಡಿದ್ದ ಡೆಲ್ಲಿ ಇಂದಿನ ಪಂದ್ಯದಲ್ಲಿ ಎರಡು ಬದಲಾವಣೆ ಮಾಡಿದೆ. ಸುಮಿತ್​ ಕುಮಾರ್​ ಬದಲಿಗೆ ಲಲಿತ್​ ಯಾದವ್​, ಪಂದ್ಯ ಆರಂಭಕ್ಕೂ ಮುನ್ನ ಕೆಲವೇ ನಿಮಿಷಗಳ ಮುನ್ನ ಬೆನ್ನು ನೋವಿಗೆ ತುತ್ತಾದ ಇಶಾಂತ್​ ಶರ್ಮಾ ಅವರ ಬದಲಿಗೆ ಆ್ಯನ್ರಿಚ್​ ನೋಕಿಯಾರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಹೈದರಾಬಾದ್​ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ತಂಡಗಳು ಇಂತಿವೆ- ಡೆಲ್ಲಿ ಕ್ಯಾಪಿಟಲ್ಸ್- ಡೇವಿಡ್ ವಾರ್ನರ್, ಜೇಕ್ ಫ್ರೇಸರ್ ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ರಿಷಬ್ ಪಂತ್(ನಾಯಕ), ಟ್ರಿಸ್ಟನ್ ಸ್ಟಬ್ಸ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಕುಲದೀಪ್ ಯಾದವ್, ಅನ್ರಿಚ್ ನೋಕಿಯಾ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್.

ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಟ್ರೇವಿಸ್ ಹೆಡ್, ಐಡೆನ್ ಮಾರ್ಕ್ರಮ್, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಟಿ ನಟರಾಜನ್.

ಇದನ್ನೂ ಓದಿ: ನಿಧಾನಗತಿ ಬೌಲಿಂಗ್​: ರಾಹುಲ್​, ಋತುರಾಜ್​​ಗೆ ₹12 ಲಕ್ಷ ರೂ. ದಂಡ: ನಾಯಕರಿಬ್ಬರಿಗೆ ಪೆನಾಲ್ಟಿ ಇದೇ ಮೊದಲು - slow over rate fined

ETV Bharat Logo

Copyright © 2024 Ushodaya Enterprises Pvt. Ltd., All Rights Reserved.