ETV Bharat / sports

ವಿಂಬಲ್ಡನ್​: ಎಸ್ಟೋನಿಯನ್​ನ ಮಾರ್ಕ್ ಲಾಜಲ್ ವಿರುದ್ಧ ಹಾಲಿ ಚಾಂಪಿಯನ್​ ಕಾರ್ಲೋಸ್​ ಅಲ್ಕರಾಜ್​ಗೆ ಗೆಲುವು​ - Carlos Alcaraz

author img

By ANI

Published : Jul 2, 2024, 2:06 PM IST

ವಿಂಬಲ್ಡನ್​ನ ಮೊದಲ ಸುತ್ತಿನಲ್ಲಿ ಹಾಲಿ ಚಾಂಪಿಯನ್​ ಕಾರ್ಲೋಸ್​ ಅಲ್ಕರಾಜ್​ ಎಸ್ಟೋನಿಯನ್​ನ ಮಾರ್ಕ್ ಲಾಜಲ್ ವಿರುದ್ಧ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ.

ಕಾರ್ಲೋಸ್​ ಅಲ್ಕರಾಜ್
ಕಾರ್ಲೋಸ್​ ಅಲ್ಕರಾಜ್ (ANI)

ಲಂಡನ್: ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ (ಸ್ಪೇನ್​) ಸೋಮವಾರ ನಡೆದ ವಿಂಬಲ್ಡನ್​ನ ಮೊದಲ ಸುತ್ತಿನ ಪಂದ್ಯದಲ್ಲಿ ಎಸ್ಟೋನಿಯನ್​ ಮಾರ್ಕ್ ಲಾಜಲ್ ವಿರುದ್ಧ 7-6(3),7-5,6-2 ಸೆಟ್‌ಗಳಿಂದ ಗೆಲುವು ಸಾಧಿಸಿದ್ದಾರೆ. ವಿಶ್ವ ರ್ಯಾಂಕಿಂಗ್​ನಲ್ಲಿ 269ನೇ ಸ್ಥಾನದಲ್ಲಿರುವ ಲಾಜಲ್, ಮೊದಲೆರಡು ಸೆಟ್​ಗಳಲ್ಲಿ ಕಾರ್ಲೋಸನ್​ಗೆ ಕಠಿಣ ಪೈಪೋಟಿ ಒಡ್ಡಿದ್ದರು. ಬಳಿಕ ಟ್ರೈ ಬ್ರೇಕರ್​ನಲ್ಲಿ ಫಲಿತಾಂಶ ನಿರ್ಧಾರವಾಯಿತು. ಇದೀಗ ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಕಳೆದ ವರ್ಷ ವಿಂಬಲ್ಡನ್ ಫೈನಲ್‌ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿದ್ದ ಅಲ್ಕರಾಜ್​ ನಾಲ್ಕನೇ ಗ್ರಾನ್​ಸ್ಲಾಮ್​ ಪ್ರಶಸ್ತಿ ಗೆಲುವಿನ ನಿರೀಕ್ಷಯನ್ನು ಹೊಂದಿದ್ದಾರೆ.

ಏತನ್ಮಧ್ಯೆ, ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಕೊವಾಸಿಕ್ ವಿರುದ್ಧ ಡೇನಿಯಲ್ ಮೆಡ್ವೆಡೆವ್ ಅಲೆಕ್ಸಾಂಡರ್ ಗೆಲುವು ಸಾಧಿಸಿದ್ದಾರೆ. ಐದನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್, ಅಲೆಕ್ಸಾಂಡರ್ ಕೊವಾಸಿಕ್ ಅವರನ್ನು 6-3, 6-4, 6-2 ಸೆಟ್‌ಗಳಿಂದ ಸೋಲಿಸುವ ಮೂಲಕ ಶುಭಾರಂಭ ಮಾಡಿದರು. ಉಳಿದಂತೆ ವಿಶ್ವದ 8ನೇ ಶ್ರೇಯಾಂಕದ ಕ್ಯಾಸ್ಪರ್ ರೂಡ್ 7-6 (2), 6-4, 6-4 ರಲ್ಲಿ ಅಲೆಕ್ಸ್ ಬೋಲ್ಟ್ ಅವರನ್ನು ಸೋಲಿಸಿದ್ದಾರೆ. ಕೆನಡಾದ ಡೆನಿಸ್ ಶಪೊವಾಲೊವ್ 6-1, 7-5, 6-4ರಲ್ಲಿ 19ನೇ ಶ್ರೇಯಾಂಕದ ನಿಕೋಲಸ್ ಜಾರಿ ಅವರನ್ನು ಸೋಲಿಸಿದರು.

ಒಸಾಕಾ ಮುನ್ನಡೆ: ಮಹಿಳೆಯರ ಸಿಂಗಲ್ಸ್‌ನಲ್ಲಿ ಒಸಾಕಾ (ಜಪಾನ್) ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಮೊದಲ ಸುತ್ತಿನಲ್ಲಿ ಅವರು 6-1, 1-6, 6-4 ರಲ್ಲಿ ಪ್ಯಾರಿ (ಫ್ರಾನ್ಸ್) ವಿರುದ್ಧ ಗೆಲುವು ಸಾಧಿಸಿದ್ದಾರೆ. 9ನೇ ಶ್ರೇಯಾಂಕದ ಸಕಾರಿ (ಗ್ರೀಸ್) ಕೂಡ ಶುಭಾರಂಭ ಮಾಡಿದರು. ಆರಂಭಿಕ ಸುತ್ತಿನಲ್ಲಿ ಅವರು 6-3, 6-1 ರಲ್ಲಿ ಕೆಸ್ಲರ್ (ಯುಎಸ್ಎ) ಅವರನ್ನು ಸೋಲಿಸಿದರು. ಉಳಿದಂತೆ ಕಸತ್ಕಿನಾ (ರಷ್ಯಾ) 6-3, 6-4ರಲ್ಲಿ ಶುಯಿ ಜಾಂಗ್ (ಚೀನಾ) ವಿರುದ್ಧ, ಕೊಸ್ಟ್ಯುಕ್ (ಉಕ್ರೇನ್) 6-3, 6 ರಿಂದ ಸ್ರಂಕೊವಾ (ಸರ್ಬಿಯಾ) ವಿರುದ್ಧ, ಗ್ರಾಚೆವಾ (ಫ್ರಾನ್ಸ್) 6-3 ರಲ್ಲಿ ಸುರೆಂಕೊ (ಫ್ರಾನ್ಸ್) ವಿರುದ್ಧ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: ಬಾರ್ಬಡೋಸ್‌ನಲ್ಲೇ ಟೀಂ ಇಂಡಿಯಾ ಬಾಕಿ; ಇಂದು ಸಂಜೆ ಸ್ವದೇಶಕ್ಕೆ ಪ್ರಯಾಣ ಸಾಧ್ಯತೆ - Indian Cricket Team

ETV Bharat Logo

Copyright © 2024 Ushodaya Enterprises Pvt. Ltd., All Rights Reserved.