ETV Bharat / sports

ಪಂದ್ಯ ಪುರುಷ ಗೌರವ ಯಶ್ ದಯಾಳ್​ಗೆ​ ಅರ್ಪಿಸುತ್ತೇನೆ: ಆರ್‌ಸಿಬಿ ನಾಯಕನಿಂದ ಶ್ಲಾಘನೆ - Du Plessis praises Yash Dayal - DU PLESSIS PRAISES YASH DAYAL

ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿ ಪ್ಲೇಆಫ್ ಹಂತ ತಲುಪಿದ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಫಾಫ್​ ಡು ಪ್ಲೆಸಿಸ್ ಮಾತನಾಡಿದ್ದಾರೆ.

yash dayal
ಫಾಫ್​ ಡು ಪ್ಲೆಸಿಸ್, ಕ್ಯಾಮರೂನ್​ ಗ್ರೀನ್​, ಯಶ್ ದಯಾಲ್ (ETV Bharat)
author img

By ANI

Published : May 19, 2024, 10:42 AM IST

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಶನಿವಾರ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 27 ರನ್​ಗಳಿಂದ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ಹಂತಕ್ಕೇರಿದೆ. ಪಂದ್ಯದ ಕೊನೆಯ ಓವರ್​ನಲ್ಲಿ ಅದ್ಭುತ ಬೌಲಿಂಗ್​ ತೋರಿದ ಯಶ್​ ದಯಾಳ್​​ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್ ಕೂಡ ಯುವ ವೇಗಿಯನ್ನು ಶ್ಲಾಘಿಸಿದ್ದಾರೆ.

219 ರನ್​ ಗುರಿ ಬೆನ್ನಟ್ಟಿದ ಸಿಎಸ್​ಕೆಗೆ ಕೊನೆಯ ಓವರ್​​ನಲ್ಲಿ ಪ್ಲೇಆಫ್​ಗೆ ತಲುಪಲು 17 ರನ್​ ಅಗತ್ಯವಿತ್ತು. ಆಗ ನಾಯಕ ಪ್ಲೆಸಿಸ್ ನೀಡಿದ ಜವಾಬ್ದಾರಿ ಹೊತ್ತ ಯಶ್​​ ದಯಾಳ್​ಗೆ ಮೊದಲ ಎಸೆತದಲ್ಲೇ ಎಂ.ಎಸ್​. ಧೋನಿ ಸಿಕ್ಸರ್​ ಚಚ್ಚುವ ಮೂಲಕ ಶಾಕ್​ ನೀಡಿದ್ದರು. ಆದರೆ, ಮುಂದಿನ ಎಸೆತದಲ್ಲೇ ಧೋನಿಯನ್ನು ಪೆವಿಲಿಯನ್​ಗೆ ಅಟ್ಟಿದ ಯಶ್​, ಪಂದ್ಯವನ್ನು ಆರ್​ಸಿಬಿ ಕಡೆ ವಾಲುವಂತೆ ಮಾಡಿದರು. ನಂತರದ ಎಸೆತಗಳಲ್ಲಿ ಜಡೇಜಾರನ್ನು ಕಟ್ಟಿಹಾಕಿದ ದಯಾಳ್​​ ಬೆಂಗಳೂರು ತಂಡಕ್ಕೆ ಗೆಲುವಿನ ಸಂಭ್ರಮ ತಂದರು.

ಪಂದ್ಯದ ನಂತರ ಮಾತನಾಡಿದ ನಾಯಕ ಫಾಫ್​ ಡು ಪ್ಲೆಸಿಸ್, "ಎಂತಹ ರಾತ್ರಿ ಅದು, ಅದ್ಭುತ ವಾತಾವರಣ. ತವರಿನ ಅಭಿಮಾನಿಗಳ ಎದುರು ಈ ಋತುವನ್ನು ಮುಗಿಸುತ್ತಿರುವುದು ಬಹಳ ಖುಷಿ ತಂದಿದೆ. ಮೊದಲು ಬ್ಯಾಟಿಂಗ್​ ಮಾಡುವುದು ಸುಲಭವಿರಲಿಲ್ಲ. ನಾನು ಟಿ20 ಪಂದ್ಯವನ್ನಾಡಿದ ಅತ್ಯಂತ ಕಠಿಣ ಪಿಚ್​ ಇದಾಗಿದೆ. ಮಳೆ ಬ್ರೇಕ್​ ಬಳಿಕ ಮತ್ತೆ ಬ್ಯಾಟಿಂಗ್​ ಆರಂಭಿಸಿದಾಗ ನಾನು ಹಾಗೂ ವಿರಾಟ್​ 140-150 ರನ್​ ಗಳಿಕೆ ಬಗ್ಗೆ ಮಾತನಾಡಿದೆವು. ಪಿಚ್​ನಲ್ಲಿ ತಿರುವು ಕಂಡು​ ಇದು ರಾಂಚಿಯ 5ನೇ ದಿನದ ಟೆಸ್ಟ್​ ಪಂದ್ಯದಂತಿದೆ ಎಂದು ಮಿಚೆಲ್​ ಸ್ಯಾಂಟ್ನರ್​ ಬಳಿ ನಾನು ಹೇಳಿದೆ'' ಎಂದರು.

''ಅಂತಹ ಪಿಚ್​​ನಲ್ಲಿ 200 ರನ್​ ಬಾರಿಸಿದ್ದು ನಂಬಲಸಾಧ್ಯವಾದುದು. ಕೊನೆಯ 6 ಪಂದ್ಯಗಳಲ್ಲಿಯೂ ಬ್ಯಾಟರ್​ಗಳು ಉತ್ತಮ ಸ್ಟ್ರೈಕ್​ ರೇಟ್​ನೊಂದಿಗೆ ಆಡಿದರು. ಅದಕ್ಕೂ ಮುನ್ನ ನಾವು ಬಹಳ ನಿಧಾನವಾಗಿದ್ದೆವು. ನಾವು ಸುಮಾರು 175 ರನ್​ ಡಿಫೆಂಡ್​ ಮಾಡುತ್ತಿದ್ದು, ಕೆಲ ಹಂತದಲ್ಲಿ ಪಂದ್ಯವು ತೀರ ಪೈಪೋಟಿಯಿಂದ ಕೂಡಿತ್ತು. ಎಂ.ಎಸ್​. ಧೋನಿ ಆಡುವುದನ್ನು ನೋಡಿ ಗೆಲುವು ಕಷ್ಟ ಎನ್ನಿಸಿತು. ಯಾಕೆಂದರೆ ಧೋನಿ ಹಲವು ಬಾರಿ ಪಂದ್ಯ ಗೆಲ್ಲಿಸಿದವರು. ಅಂತಹ ಸಂದರ್ಭದಲ್ಲಿ ಯಶ್​ ದಯಾಳ್​​ ಬೌಲಿಂಗ್​ ಮಾಡಿರುವುದು ಅದ್ಭುತವಾಗಿತ್ತು. ನಾನು ಈ ಪಂದ್ಯ ಪುರುಷ ಗೌರವವನ್ನು ಯಶ್​ಗೆ ಅರ್ಪಿಸುತ್ತೇನೆ'' ಎಂದು ತಿಳಿಸಿದರು.

''ಈ ಪಿಚ್​ನಲ್ಲಿ ನಿಧಾನಗತಿಯ ಬೌಲಿಂಗ್​ ಉತ್ತಮ ಆಯ್ಕೆ ಹಾಗೂ ನಿನ್ನ ಕೌಶಲ್ಯಗಳ ಮೇಲೆ ಭರವಸೆ ಇಡುವಂತೆ ನಾನು ಯಶ್​ಗೆ ಸಲಹೆ ನೀಡಿದ್ದೆ. ಯಾಕೆಂದರೆ, ಮೊದಲ ಎಸೆತ ಯಾರ್ಕರ್​ ಹಾಕುವಲ್ಲಿ ವಿಫಲರಾಗಿದ್ದರು. ಅದರಂತೆ ನಿಧಾನಗತಿಯ ಎಸೆತವು ಫಲಿಸಿತು'' ಎಂದು ಶ್ಲಾಘಿಸಿದರು.

ಅಭಿಮಾನಿಗಳ ಬಗ್ಗೆ ಮಾತನಾಡುತ್ತ, ''ರಾತ್ರಿ ಅಭಿಮಾನಿಗಳು ಬಹಳ ಕ್ರೇಜಿಯಾಗಿದ್ದರು. ನಾವು ಗೆಲ್ಲದಿದ್ದ ಸಂದರ್ಭದಲ್ಲೂ ಅವರು ನಮ್ಮ ಬೆಂಬಲಕ್ಕೆ ಬಂದಿದ್ದರು. ಇಂದು ನಾವು ಏನಾದರೂ ಮಾಡಲೇಬೇಕೆಂದು ಅಂದುಕೊಂಡಿದ್ದೆವು. ಅದರಂತೆ, ಸಿಎಸ್​ಕೆ ಹಾಗೂ ಆರ್​ಸಿಬಿ ನಡುವಿನ ಪಂದ್ಯ ರೋಚಕವಾಗಿದ್ದಲ್ಲದೆ, ನಂಬಲಸಾಧ್ಯವಾದ ವಾತಾವರಣ ಮೂಡಿದೆ. ಬೆಂಬಲ ನೀಡಿದ್ದಕ್ಕಾಗಿ ತಂಡವು ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸುತ್ತದೆ. ನಾವು ಸತತವಾಗಿ 6 ಪಂದ್ಯಗಳನ್ನು ಜಯಿಸಿರುವುದು ಪ್ರಾಮುಖ್ಯವಾಗಿದೆ. ನಾಕೌಟ್‌ಗೆ ಪ್ರವೇಶಿಸುವ ಮೊದಲ ಗುರಿಯನ್ನು ಸಾಧಿಸಿದ್ದೇವೆ. ಅದನ್ನು ಆನಂದಿಸುತ್ತ ನಾಳೆ ಮತ್ತೆ ಮುಂದಿನ ತಯಾರಿ ಆರಂಭಿಸಬೇಕಿದೆ'' ಎಂದು ಹೇಳಿದರು.

ಇದನ್ನೂ ಓದಿ: ಭರ್ಜರಿ ಗೆಲುವು; ಸಿಎಸ್​ಕೆ ಮನೆಗೆ, ಆರ್​​ಸಿಬಿ ಪ್ಲೇಆಫ್‌ಗೆ - RCB BEAT CSK

ETV Bharat Logo

Copyright © 2024 Ushodaya Enterprises Pvt. Ltd., All Rights Reserved.