ಹೈದರಾಬಾದ್: ಪೋರ್ಚುಗಲ್ನ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯನೋ ರೊನಾಲ್ಡೊ ಬುಧವಾರ ತಮ್ಮದೇ ಆದ ಹೊಸ ಯುಟ್ಯೂಬ್ ಚಾನಲ್ವೊಂದನ್ನು ಆರಂಭಿಸಿದ್ದಾರೆ. ಆಗಸ್ಟ್ 21ರಂದು ಆರಂಭವಾದ ಈ ಯೂಟ್ಯೂಬ್ ಚಾನಲ್ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಚಾನಲ್ ಆರಂಭವಾದ 90 ನಿಮಿಷದಲ್ಲೇ ರೋನಾಲ್ಡೊ 1 ಮಿಲಿಯನ್ ಸಬ್ಸ್ಕ್ರೈಬರ್ಗಳಾಗಿದ್ದಾರೆ. ಈ ಚಾನಲ್ ಮೂಲಕ ರೊನಾಲ್ಡೊ ಪುಟ್ಬಾಲ್ ಆತದ ತೆರೆ ಹಿಂದಿನ ಕಥೆಗಳು ಸೇರಿದಂತೆ ಅವರ ಜೀವನದ ಸ್ವಾರಸ್ಯಕರ ವಿಚಾರಗಳನ್ನು ಅಭಿಮಾನಿಗಳ ಎದುರು ಅನಾವರಣಗೊಳಿಸಲಿದ್ದಾರೆ.
The wait is over 👀🎬 My @YouTube channel is finally here! SIUUUbscribe and join me on this new journey: https://t.co/d6RaDnAgEW pic.twitter.com/Yl8TqTQ7C9
— Cristiano Ronaldo (@Cristiano) August 21, 2024
ಇತಿಹಾಸ ಸೃಷ್ಟಿಸಿದ ಫುಟ್ಬಾಲ್ ದಿಗ್ಗಜ: ಇನ್ನು, ಚಾನಲ್ ಆರಂಭವಾಗಿ ದಿನ ಕಳೆಯುವುದರೊಳಗೆ 11.5 ಮಿಲಿಯನ್ ಸಬ್ಸ್ಕ್ರೈಬರ್ಗಳಾಗಿದ್ದಾರೆ. ಈ ಮೊದಲು ಫುಟ್ಬಾಲ್ ಸ್ಟಾರ್ ತಮ್ಮದೇ ಹೊಸ ಯುಟ್ಯೂಬ್ ಚಾನಲ್ವೊಂದನ್ನು ಶೀಘ್ರದಲ್ಲಿ ಪ್ರಾರಂಭಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದ್ದರು. ಈ ಚಾನಲ್ ಬಗ್ಗೆ ಅಭಿಮಾನಿಗಳಲ್ಲೂ ಸಾಕಷ್ಟು ಕಾತುರ ವ್ಯಕ್ತವಾಗಿತ್ತು. ಇನ್ನು, ರೊನಾಲ್ಡೊಗೆ ಎಕ್ಸ್ನಲ್ಲಿ 112.6 ಮಿಲಿಯನ್ ಬೆಂಬಲಿಗರಿದ್ದರೆ, ಫೇಸ್ಬುಕ್ನಲ್ಲಿ 170 ಮಿಲಿಯನ್ ಮತ್ತು ಇನ್ಸ್ಟಾಗ್ರಾಂನಲ್ಲಿ 636 ಮಿಲಿಯನ್ ಬೆಂಬಲಿಗರಿದ್ದಾರೆ.
A present for my family ❤️ Thank you to all the SIUUUbscribers! ➡️ https://t.co/d6RaDnAgEW pic.twitter.com/keWtHU64d7
— Cristiano Ronaldo (@Cristiano) August 21, 2024
ದಾಖಲೆ ವೀಕ್ಷಣೆ: ಚಾನಲ್ ಬಿಡುಗಡೆಗೆ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಕ್ರಿಸ್ಟಿಯನೋ ರೊನಾಲ್ಡೊ, ಕಾಯುವಿಕೆ ಅಂತ್ಯಗೊಂಡಿದೆ. ನನ್ನ ಯುಟ್ಯೂಬ್ ಚಾನಲ್ ಅಂತಿಮವಾಗಿ ಹೊರಬಂದಿದೆ. ನನ್ನ ಹೊಸ ಪ್ರಯಾಣಕ್ಕೆ ಸೇರಲು ಚಂದಾದಾರರಾಗಿ ಎಂದು ತಿಳಿಸಿದ್ದರು. ಈ ಯುಟ್ಯೂಬ್ ಚಾನಲ್ಗೆ 'ಯುಆರ್ ಕ್ರಿಸ್ಟಿಯನೋ' ಎಂದು ಹೆಸರಿಡಲಾಗಿದೆ. 39 ವರ್ಷದ ಪೋರ್ಚುಗಲ್ ಮೂಲದ ಪುಟ್ಬಾಲ್ ತಾರೆಯ ಮೊದಲ ವಿಡಿಯೋವನ್ನು 13 ಗಂಟೆಗಳಲ್ಲಿ 7.95 ಮಿಲಿಯನ್ ಜನರು ವೀಕ್ಷಿಸಿದ್ದಾರೆ.
ಫುಟ್ಬಾಲ್ ಜಗತ್ತಿನ ದಿಗ್ಗಜನಾಗಿರುವ ರೊನಾಲ್ಡೊ ಸದ್ಯ ಸೌದಿ ಪ್ರೊ ಲೀಗ್ನಲ್ಲಿ ಅಲ್ ನಸ್ಸರ್ಗೆ ಆಟವಾಡುತ್ತಿದ್ದಾರೆ. ಇತ್ತೀಚೆಗೆ ಅವರು ಯುರೋ 2024ರಲ್ಲಿ ಭಾಗಿಯಾಗಿದ್ದರು. ಆದರೂ ಅವರ ತಂಡದ ಶೀರ್ಷಿಕೆಯೊಂದಿಗೆ ಆಟವನ್ನು ಮುನ್ನಡೆಸಲಿಲ್ಲ. ಅಲ್ಲದೇ ತಮ್ಮ ಕಡೆಯ ಯುರೋ ಚಾಂಪಿಯನ್ ಇದಾಗಿರಲಿದೆ ಎಂದು ಕೂಡ ಅವರು ಘೋಷಿಸಿದ್ದರು. ಅವರ ನಿವೃತ್ತಿ ನಿರೀಕ್ಷಿತವಾಗಿತ್ತು. ರೊನಾಲ್ಡೊ ಕಂಟೆಟ್ ಕ್ರಿಯೇಷನ್ ಮತ್ತು ಇತರೆ ಉದ್ಯಮಗಳ ಮೂಲಕ ಮುಂದಿನ ದಿನಗಳಲ್ಲಿ ತೊಡಗಿಸಿಕೊಳ್ಳಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ದುಬಾರಿ ಕಾರುಗಳ ಒಡೆಯ.. ಕಾಲ್ಚೆಂಡಿನ ದಾಖಲೆ ಸರದಾರ ರೊನಾಲ್ಡೊ: ಇಲ್ಲಿದೆ ಅವರ ಕಾರುಗಳ ಕಲೆಕ್ಷನ್ ಮಾಹಿತಿ