ಪ್ಯಾರಿಸ್: ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ಕಿಕ್ಕಿರಿದು ತುಂಬಿದ ಪ್ರೇಕ್ಷಕರ ಸಮ್ಮುಖದಲ್ಲಿ ಅಮೆರಿಕದ ಕೋಲ್ ಹಾಕರ್ ಪುರುಷರ 1500 ಮೀಟರ್ ಓಟದಲ್ಲಿ ಒಲಿಂಪಿಕ್ ದಾಖಲೆ ಮುರಿದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಗ್ರೇಟ್ ಬ್ರಿಟನ್‌ನ ಜೋಶ್ ಕೆರ್ ಮತ್ತು ನಾರ್ವೆಯ ಜಾಕೋಬ್ ಇಂಗೆಬ್ರಿಗ್ಟ್‌ಸೆನ್ ಅವರನ್ನು ಹಿಂದಿಕ್ಕಿದ ಹಾಕರ್ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡರು. 23ರ ಹರೆಯದ ಈ ಯುವಕ ಚಿನ್ನದ ಪದಕವನ್ನು ತಮ್ಮ ಕೊರಳಿಗೆ ಹಾಕಿಸಿಕೊಳ್ಳುವ ಮೂಲಕ ಸಂಭ್ರಮಪಟ್ಟರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಥಾಪಿಸಲಾದ ಇಂಗೆಬ್ರಿಗ್ಟ್‌ಸೆನ್‌ನ 3:28.32 ಸೆ.ಗಳ ರೇಕಾರ್ಡ್ ಅನ್ನು ಕೋಲ್ ಕೇವಲ 3:27.65 ಸೆಕೆಂಡ್‌ಗಳ ಸಂಪೂರ್ಣಗೊಳಿಸುವ ಮೂಲಕ ಹೊಸ ಒಲಿಂಪಿಕ್ ದಾಖಲೆಯನ್ನು ಸ್ಥಾಪಿಸಿದರು.
ಗ್ರೇಟ್ ಬ್ರಿಟನ್‌ನ ಜೋಶ್ ಕೆರ್ 3:27.79 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ರಾಷ್ಟ್ರೀಯ ದಾಖಲೆಯನ್ನು ಪುಡಿಗಟ್ಟಿದರು. ಆದಾಗ್ಯೂ, ಅವರ ಪ್ರಯತ್ನಗಳು ಚಿನ್ನದ ಪದಕವನ್ನು ಪಡೆಯುವಲ್ಲಿ ವಿಫಲವಾಯ್ತು. ಇನ್ನು ಯಾರೆಡ್ ನುಗುಸೆ 3:27.80 ಸೆಕೆಂಡ್‌ಗಳ ವೈಯಕ್ತಿಕ ಅತ್ಯುತ್ತಮ ಪ್ರಯತ್ನದೊಂದಿಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಇದು ಬೇಸಿಗೆ ಕ್ರೀಡಾಕೂಟದಲ್ಲಿ
ಹಾಲಿ ಒಲಿಂಪಿಕ್ ಚಾಂಪಿಯನ್ ಆಗಿದ್ದ ಇಂಗೆಬ್ರಿಗ್ಟ್‌ಸೆನ್ ಓಟದ ಅಂತಿಮ ಹಂತದಲ್ಲಿ ಮಂಕಾಗುವಂತೆ ಮಾಡಿತು. 3:28.24 ಸೆಕೆಂಡ್‌ಗಳಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದ ಅವರು ಪದಕವಿಲ್ಲದೇ ನಿರಾಸೆ ಅನುಭವಿಸಿದರು. ಇದು ರೋಮಾಂಚಕ ಓಟವಾಗಿತ್ತು ಎಂದು ಕೋಲ್ ಹಾಕರ್ ಸಂತಸ ವ್ಯಕ್ತಪಡಿಸಿದರು, "ಇದು ನಂಬಲಾಗದ ಭಾವನೆ. ನನಗೆ ಸ್ಟೇಡಿಯಂ ಮತ್ತು ದೇವರಿಂದ ಒಯ್ಯಲ್ಪಟ್ಟಂತೆ ಅನಿಸಿತು. ನನ್ನ ದೇಹವು ನನಗಾಗಿ ಈ ಕೆಲಸವನ್ನು ಮಾಡಿದೆ. ನನ್ನ ಮನಸ್ಸು ಕೂಡಾ ಅಲ್ಲಿಯೇ ಇತ್ತು ಮತ್ತು ನಾನು ಆ ಅಂತಿಮ ಗೆರೆಯನ್ನು ದಾಟಿದೆ" ಎಂದು ಓಟದ ನಂತರ ಹಾಕರ್ ಖುಷಿ ವ್ಯಕ್ತಪಡಿಸಿದ್ದಾರೆ. "ಈ ವರ್ಷ ಪೂರ್ತಿ ಚಿನ್ನ ಗೆಲ್ಲುವುದು ನನ್ನ ಗುರಿಯಾಗಿತ್ತು. ನಾನು ಅದನ್ನು ಸಾಧಿಸಿದ್ದೇನೆ ಎಂದೂ ಅವರು ಹೇಳಿಕೊಂಡಿದ್ದಾರೆ.