ETV Bharat / sports

ರಣಜಿಯಲ್ಲಿ ಶತಕ ಸಿಡಿಸಿದ ಪೂಜಾರ: ಕ್ರಿಕೆಟ್​ ದಿಗ್ಗಜ ಬ್ರಿಯನ್​ ಲಾರಾ ರೆಕಾರ್ಡ್ ಬ್ರೇಕ್​!

ಛತ್ತೀಸ್​ಗಢ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಚೇತೇಶ್ವರ ಪೂಜಾರ ಶತಕ ಸಿಡಿಸಿ ಬ್ರಿಯನ್​ ಲಾರಾ ದಾಖಲೆ ಮುರಿದಿದ್ದಾರೆ.

ಚೇತೇಶ್ವರ ಪೂಜಾರ
ಚೇತೇಶ್ವರ ಪೂಜಾರ (AFP)
author img

By ETV Bharat Sports Team

Published : Oct 21, 2024, 3:19 PM IST

Cheteshwara pujara Creat new record: ರಣಜಿ ಟ್ರೋಫಿ ಪಂದ್ಯದಲ್ಲಿ ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ ಪೂಜಾರ ಭರ್ಜರಿ ಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಛತ್ತೀಸ್​ಗಢ ಮತ್ತು ಸೌರಾಷ್ಟ್ರ ತಂಡಗಳ ಮಧ್ಯೆ ನಡೆದ ಈ ಪಂದ್ಯದಲ್ಲಿ ಪೂಜಾರ 197 ಎಸೆತಗಳನ್ನು ಎದುರಿಸಿ ಶತಕ ಪೂರೈಸಿದರು.

ಉಭಯ ತಂಡಗಳ ನಡುವಿನ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಿದ್ದ ಛತ್ತೀಸ್​ಗಢ 578 ರನ್‌ಗಳ ಬೃಹತ್ ಸ್ಕೋರ್ ದಾಖಲಿಸಿತು. ನಂತರ ಬ್ಯಾಟಿಂಗ್​ಗೆ ಬಂದ ಸೌರಾಷ್ಟ್ರ 81 ರನ್​ಗಳಿಗೆ ಆರಂಭಿಕ 2 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಪೂಜಾರ ತಮ್ಮ ತಂಡದ ಪರವಾಗಿ ಶತಕ ಗಳಿಸಿದರು. ಇದು ರಣಜಿ ಟ್ರೋಫಿಯಲ್ಲಿ ಅವರ 25ನೇ ಶತಕವಾಗಿದ್ದು, ಅಲ್ಲದೇ ಪ್ರಥಮ ದರ್ಜೆ ವೃತ್ತಿಜೀವನದ 66ನೇ ಶತಕವಾಗಿದೆ. ಪೂಜಾರ ಈ ಶತಕದ ಮೂಲಕ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿದ್ದಾರೆ ದಾಖಲೆ ಬರೆದಿದ್ದಾರೆ. ಲಾರಾ ಪ್ರಥಮ ದರ್ಜೆಯ ಕ್ರಿಕೆಟ್​ನಲ್ಲಿ ಒಟ್ಟು 65 ಶತಕಗಳನ್ನು ಗಳಿಸಿದ್ದರು.

21 ಸಾವಿರ ರನ್: ಛತ್ತೀಸ್‌ಗಢ ವಿರುದ್ಧದ ಶತಕದೊಂದಿಗೆ ಪ್ರಥಮ ದರ್ಜೆಯಲ್ಲಿ ಪೂಜಾರ 21 ಸಾವಿರ ರನ್​ಗಳನ್ನು ಪೂರೈಸಿದರು. ಪೂಜಾರ ಇದೀಗ ಪ್ರಥಮ ದರ್ಜೆಯಲ್ಲಿ ಅತಿ ಹೆಚ್ಚು ರನ್ ಗಳಿಸಿದ 4ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್ ಮೊದಲ ಸ್ಥಾನದಲ್ಲಿದ್ದು, ಪ್ರಥಮ ದರ್ಜೆಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಆಗಿದ್ದಾರೆ. ಅವರು ಒಟ್ಟು 25834 ರನ್ ಗಳಿಸಿದ್ದಾರೆ. ನಂತರ ಸ್ಥಾನಗಳಲ್ಲಿ ಕ್ರಮವಾಗಿ ಸಚಿನ್ ತೆಂಡೂಲ್ಕರ್ (25396 ರನ್​) ಮತ್ತು ರಾಹುಲ್ ದ್ರಾವಿಡ್ (23784 ರನ್​) ಇದ್ದಾರೆ.

ಅತಿ ಹೆಚ್ಚು ಪ್ರಥಮ ದರ್ಜೆ ಶತಕ ಸಿಡಿಸಿದ ಭಾರತದ ಆಟಗಾರರ ಪಟ್ಟಿಯಲ್ಲಿ ಪೂಜಾರ ಮೂರನೇ ಸ್ಥಾನದಲ್ಲಿದ್ದಾರೆ. ಗವಾಸ್ಕರ್ ಮತ್ತು ಸಚಿನ್ ತಲಾ 81 ಶತಕಗಳೊಂದಿಗೆ ಜಂಟಿಯಾಗಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ದ್ರಾವಿಡ್ 68 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಪೂಜಾರ 66 ಶತಕಗಳೊಂದಿಗೆ ಮೂರನೇ ಸ್ಥಾನಕ್ಕೆ ಕಾಲಿಟ್ಟಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ಪೂಜಾರ ಕ್ರಿಕೆಟ್​ನಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಅವರು ಕೊನೆಯದಾಗಿ ಓವೆಲ್​ನಲ್ಲಿ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತದ ಪರ ಆಡಿದ್ದರು. ಇದಾದ ಬಳಿಕ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಅಂದಿನಿಂದ ಪ್ರಥಮ ದರ್ಜೆ ಕ್ರಿಕೆಟ್​ಗಳನ್ನು ಆಡುತ್ತಿದ್ದಾರೆ. ಈ ವರ್ಷ ಒಟ್ಟು 16 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 6 ಶತಕ ಸಿಡಿಸಿದ್ದಾರೆ. 8 ಪಂದ್ಯಗಳಲ್ಲಿ 69ರ ಸರಾಸರಿಯಲ್ಲಿ 829 ರನ್​ಗಳಿಸಿದ್ದಾರೆ.

ಇದನ್ನೂ ಓದಿ: ಪತ್ನಿ ಅನುಷ್ಕಾ ಜೊತೆ ಭಕ್ತಿ ಕೀರ್ತನೆಯಲ್ಲಿ ಮಗ್ನರಾದ ವಿರಾಟ್​ ಕೊಹ್ಲಿ: ವಿಡಿಯೋ ವೈರಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.