ETV Bharat / sports

Champions Trophy 2025: ಕೊನೆಗೂ ಹೈಬ್ರಿಡ್​ ಮಾದರಿಗೆ ಒಪ್ಪಿದ ಪಾಕ್​: ಆದರೆ 3 ಷರತ್ತು ವಿಧಿಸಿದ PCB! - CHAMPIONS TROPHY PCB CONDITIONS

ಐಸಿಸಿ ಚಾಂಪಿಯನ್ಸ್​ ಟ್ರೋಫಿ ಹೈಬ್ರಿಡ್​ ಮಾದರಿಗೆ ಪಾಕಿಸ್ತಾನ ಒಪ್ಪಿಗೆ ಸೂಚಿಸಿದ್ದು, 3 ಷರತ್ತುಗಳನ್ನು ವಿಧಿಸಿದೆ.

CHAMPIONS TROPHY 2025  HYBRID MODEL  CHAMPIONS TROPHY PCB CONDITIONS  ಐಸಿಸಿ ಚಾಂಪಿಯನ್ಸ್​ ಟ್ರೋಫಿ
Champions Trophy 2025 (IANS)
author img

By ETV Bharat Sports Team

Published : Dec 1, 2024, 1:33 PM IST

ICC Champions Trophy 2025: ಕೊನೆಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಪ್ಪಿಗೆ ಸೂಚಿಸಿದೆ. ಈ ವಿಷಯ ಕುರಿತು ಶನಿವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಭಾರತ ಆಡುವ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಯೋಜಿಸಲು ಒಪ್ಪಿರುವುದಾಗಿ ಪಿಸಿಬಿಯು ಐಸಿಸಿಗೆ ತಿಳಿಸಿದೆ. ಆದ್ರೆ 3 ಷರತ್ತುಗಳನ್ನು ವಿಧಿಸಿದೆ.

ಮುಂದಿನ ವರ್ಷ ಫ್ರೆಬ್ರವರಿಯಂದು ಚಾಂಪಿಯನ್ಸ್​ ಟ್ರೋಫಿ ನಡೆಯಲಿದೆ. ಇದಕ್ಕಾಗಿ ಆತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನಕ್ಕೆ ಯಾವುದೇ ಕಾರಣಕ್ಕೂ ಟೀಂ ಇಂಡಿಯಾ ಹೋಗಲ್ಲ ಎಂದು ಬಿಸಿಸಿಐ ತಿಳಿಸಿತ್ತು. ಇಲ್ಲದಿದ್ದರೇ ಟೂರ್ನಿಯಿಂದಲೇ ಹಿಂದೆ ಸರಿಯುವುದಾಗಿಯೂ ಹೇಳಿತ್ತು. ಇದಕ್ಕೆ ಮಣಿದಿರುವ ಪಾಕ್​ ಷರತ್ತಿನೊಂದಿಗೆ ಹೈಬ್ರಿಡ್​ ಮಾದರಿಗೆ ಒಪ್ಪಿಗೆ ಸೂಚಿಸಿದೆ. ಪಾಕ್​ ವಿಧಿಸಿರುವ ಷರತ್ತುಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.

ಮೊದಲ ಷರತ್ತು: 2031ರ ವರೆಗೆ ಭಾರತದಲ್ಲಿ ನಡೆಯುವ ಐಸಿಸಿ ಆಯೋಜಿತ ಟೂರ್ನಿಗಳನ್ನು ಕೂಡ ಹೈಬ್ರಿಡ್​ ಮಾದರಿಯಲ್ಲಿ ನಡೆಸಬೇಕು. ಯಾವುದೇ ಕಾರಣಕ್ಕೂ ಪಾಕಿಸ್ತಾನ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಪಿಸಿಬಿ ಐಸಿಸಿಗೆ ಹೇಳಿರುವುದಾಗಿ ಮೂಲಗಳು ಬಹಿರಂಗಪಡಿಸಿವೆ. ಭವಿಷ್ಯದಲ್ಲಿ ಭಾರತ ಆತಿಥ್ಯ ವಹಿಸಲಿರುವ ಐಸಿಸಿ ಟೂರ್ನಿಗಳನ್ನೂ ಹೈಬ್ರಿಡ್ ಮಾದರಿಯಲ್ಲೇ ಆಯೋಜಿಸಬೇಕು ಎಂಬ ಷರತ್ತನ್ನು ಪಿಸಿಬಿ ಹಾಕಿದೆ. ಆದ್ರೆ ಮುಂದಿನ 7 ವರ್ಷಗಳಲ್ಲಿ ಭಾರತವು T20 ವಿಶ್ವಕಪ್ (2026), ಚಾಂಪಿಯನ್ಸ್ ಟ್ರೋಫಿ (2029) ಮತ್ತು ODI ವಿಶ್ವಕಪ್ (2031)ಗೆ ಆತಿಥ್ಯ ವಹಿಸಿಕೊಳ್ಳಲಿದೆ.

ಎರಡನೇ ಷರತ್ತು: ಐಸಿಸಿ ಚಾಂಪಿಯನ್ಸ್​ ಟ್ರೋಫಿ ಹೈಬ್ರಿಡ್​ ಮಾದರಿಯಲ್ಲಿ ನಡೆಸಲು ಒಪ್ಪಿಗೆ ಸೂಚಿಸಲು ವಾರ್ಷಿಕ ಆದಾಯದಲ್ಲಿ ಹೆಚ್ಚಿನ ಪಾಲು ನೀಡಬೇಕೆಂದಿದೆ. ಇದಕ್ಕೆ ಒಪ್ಪಿಗೆ ಸೂಚಿಸಿದರೆ ಮಾತ್ರ ಹೈಬ್ರಿಡ್​ ಮಾದರಿ ಒಪ್ಪಿಕೊಳ್ಳುತ್ತೇವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಐಸಿಸಿ ಮುಂದಿನ ವರ್ಷ ಶೇ.5.75 ರಷ್ಟು ಪಿಸಿಬಿ ಆದಾಯವನ್ನು ಹೆಚ್ಚಿಸುವಂತೆ ಕೋರಿದೆ.

ಮೂರನೇ ಷರತ್ತು: ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತ ಒಂದು ವೇಳೆ ಸೆಮಿಫೈನಲ್​ ಮತ್ತು ಫೈನಲ್​​ಗೆ ಪ್ರವೇಶಿಸದಿದ್ದರೆ, ಆ ಪಂದ್ಯಗಳನ್ನು ಪಾಕಿಸ್ತಾನದಲ್ಲೇ ನಡೆಸಬೇಕು. ಈ ಪಂದ್ಯಗಳನ್ನು ಲಾಹೋರ್ ಮೈದಾನದಲ್ಲಿ ಆಯೋಜಿಸಬೇಕು ಎಂಬ ಷರತ್ತು ವಿಧಿಸಿದೆ.

ಏತನ್ಮಧ್ಯೆ, ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ವೇಳಾಪಟ್ಟಿಯನ್ನು ಅಂತಿಮಗೊಳಿಸಿಲ್ಲ. ಇದೀಗ ಶನಿವಾರ ನಡೆದ ಸಭೆಯಲ್ಲಿ ಪಾಕ್​ ಹೈಬ್ರಿಡ್​ ಮಾದರಿಗೆ ಒಪ್ಪಿಗೆ ಸೂಚಿಸಿರುವುದರಿಂದ ಅಧಿಕೃತ ವೇಳಾಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಟೀಂ ಇಂಡಿಯಾ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡುವ ಸಾಧ್ಯತೆ ಇದೆ. ಆದರೆ ಇನ್ನೂ ಸ್ಪಷ್ಟತೆ ಸಿಗಬೇಕಿದೆ. ಹಿಂದಿನ ವೇಳಾಪಟ್ಟಿಯ ಪ್ರಕಾರ, ಈ ಪಂದ್ಯಾವಳಿಯು ಫೆಬ್ರವರಿ 19 ರಿಂದ ಮಾರ್ಚ್ 9ರ ವರೆಗೆ ಇತ್ತು. ಚಾಂಪಿಯನ್ಸ್ ಟ್ರೋಫಿ ಕೊನೆಯ ಬಾರಿಗೆ 2017ರಲ್ಲಿ ನಡೆದಿತ್ತು. ಆಗ ಸರ್ಫರಾಜ್ ಖಾನ್ ನಾಯಕತ್ವದಲ್ಲಿ ಪಾಕಿಸ್ತಾನ ಪ್ರಶಸ್ತಿ ಗೆದ್ದುಕೊಂಡಿತ್ತು.

ಇದನ್ನೂ ಓದಿ: ಚೊಚ್ಚಲ ಟೆಸ್ಟ್​ನಲ್ಲೇ ವಿಧ್ವಂಸಕ ಪ್ರದರ್ಶನ: RCB ಬ್ಯಾಟರ್​ನ ಸ್ಫೋಟಕ ಆಟಕ್ಕೆ ಬೆಚ್ಚಿಬಿದ್ದ ನ್ಯೂಜಿಲೆಂಡ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.