ETV Bharat / sports

ಈ ನಟಿಗೆ ಕ್ರಿಕೆಟರ್ ಹಾರ್ದಿಕ್ ಪಾಂಡ್ಯಾ ಮೇಲೆ ಪ್ಯಾರ್‌ಗೆ ಆಗ್ಬಿಟ್ಟೈತಂತೆ! ವಿಡಿಯೋ ನೋಡಿ - Bollywood Actress Open Statement - BOLLYWOOD ACTRESS OPEN STATEMENT

ನಾನು ಭಾರತ ಕ್ರಿಕೆಟ್ ತಂಡದ ಸ್ಟಾರ್​ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯರನ್ನು ಪ್ರೀತಿಸುತ್ತಿದ್ದೇನೆ ಎಂದು ಸಂದರ್ಶನವೊಂದರಲ್ಲಿ ನಟಿ ಬಹಿರಂಗ ಹೇಳಿಕೆ ನೀಡಿ ಅಚ್ಚರಿ ಹುಟ್ಟಿಸಿದ್ದಾರೆ.

ಹಾರ್ದಿಕ್​ ಪಾಂಡ್ಯ
ಹಾರ್ದಿಕ್​ ಪಾಂಡ್ಯ (IANS)
author img

By ETV Bharat Sports Team

Published : Sep 1, 2024, 11:59 AM IST

ಹೈದರಾಬಾದ್​​: ಟೀಂ ಇಂಡಿಯಾದ ಸ್ಟಾರ್​ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಜುಲೈನಲ್ಲಿ ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್‌ಗೆ ವಿಚ್ಛೇದನ ನೀಡಿದ್ದರು. ಅಂದಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟಿಗ ಕೊಂಚ ಹೆಚ್ಚೇ ಸುದ್ಧಿಯಲ್ಲಿದ್ದಾರೆ. ವಿಚ್ಚೇದನದ ಬಳಿಕ ನಟಿಯೊಂದಿಗೆ ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿಗಳು ಹರಿದಾಡಿವೆ. ಅಷ್ಟೇ ಅಲ್ಲ, ಒಂದಲ್ಲ, ಮೂವರು ನಟಿಯರೊಂದಿಗೆ ಹಾರ್ದಿಕ್​ ಹೆಸರು ತಳುಕು ಹಾಕಿಕೊಂಡಿದೆ.

ಮೊದಲಿಗೆ ಬಾಲಿವುಡ್​ ನಟಿ ಅನನ್ಯಾ ಪಾಂಡೆ ಮತ್ತು ಹಾರ್ದಿಕ್ ಡೇಟಿಂಗ್​ನಲ್ಲಿದ್ದಾರೆ ಎಂದು ಸುದ್ಧಿಯಾಗಿತ್ತು. ಅದಾದ ಬಳಿಕ ಬ್ರಿಟಿಷ್​ ಗಾಯಕಿ ಜಾಸ್ಮಿನ್​ ವಾಲಿಯಾ ಜೊತೆಗಿದ್ದಾರೆ ಎಂಬ ಊಹಾಪೋಹಗಳು ಕೇಳಿ ಬಂದವು. ಆದರೀಗ ಬಾಲಿವುಡ್​ನ ಖ್ಯಾತ ನಟಿ ಪಾಂಡ್ಯರನ್ನು ಪ್ರೀತಿಸುತ್ತಿರುವುದಾಗಿ ಬಹಿರಂಗವಾಗಿಯೇ ಮನದಾಸೆ ಹೊರಹಾಕಿದ್ದಾರೆ.

ಹೌದು, ನಟಿ ಇಶಿತಾ ರಾಜ್​ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ. ಸಂದರ್ಶನವೊಂದರಲ್ಲಿ ಪಾಂಡ್ಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನನಗೆ ಕ್ರಿಕೆಟ್​ ಅಂದ್ರೆ ತುಂಬಾ ಇಷ್ಟ. ಅದರಲ್ಲೂ ಹಾರ್ದಿಕ್ ಪಾಂಡ್ಯ ಅಂದ್ರೆ ಹುಚ್ಚು. ಅವರೊಬ್ಬ ಶ್ರೇಷ್ಠ ಕ್ರಿಕೆಟಿಗ. ಅವರ ಬ್ಯಾಟಿಂಗ್ ನೋಡುವುದು ಮನಸ್ಸಿಗೆ ಮುದ ನೀಡುತ್ತದೆ. ಹಾರ್ದಿಕ್ ನನ್ನ ನೆಚ್ಚಿನ ಆಟಗಾರರಲ್ಲಿ ಒಬ್ಬರು. ಭಾರತ ತಂಡ ಸಂಕಷ್ಟದಲ್ಲಿದ್ದರೆ ಹಾರ್ದಿಕ್ ಕ್ರೀಸ್​ನಲ್ಲಿರುವವರೆಗೆ ತಂಡ ಗೆಲ್ಲುವ ಭರವಸೆ ಇರುತ್ತದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹಾರ್ದಿಕ್​​-ನತಾಶಾ ವಿಚ್ಛೇದನ ಪಡೆದಿರುವುದು ಯಾಕೆ?: ಬಹಿರಂಗವಾಯ್ತು ಪ್ರಮುಖ ಕಾರಣ! - Hardik Natasa Divorce Reason

ಇಶಿತಾ ಸಿನಿಮಾ ಜರ್ನಿ: 34 ವರ್ಷದ ಇಶಿತಾ 2011ರಲ್ಲಿ ‘ಪ್ಯಾರ್ ಕಾ ಪಂಚ್ ನಾಮಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಈ ಚಿತ್ರ ನಟಿಗೆ ಸಾಕಷ್ಟು ಮನ್ನಣೆ ತಂದುಕೊಟ್ಟಿತು. ನಂತರ ಸೋನು ಕೆ ಟಿಟು ಕಿ ಸ್ವೀಟಿಯಂತಹ ಚಿತ್ರಗಳಲ್ಲಿ ಬಣ್ಣ ಹಚ್ಚಿದರು. ಇಶಿತಾ ಈವರೆಗೆ 9 ಸಿನಿಮಾಗಳಲ್ಲಿ ನಟಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.