Mohammad Rizwan DRS: ಆಸ್ಟ್ರೇಲಿಯಾ (Australia) ಮತ್ತು ಪಾಕಿಸ್ತಾನ (Pakistan) ನಡುವಿನ ಎರಡನೇ ಏಕದಿನ (ODI) ಪಂದ್ಯದ ವೇಳೆ ಹಾಸ್ಯಸ್ಪದ ಘಟನೆಯೊಂದು ನಡೆದಿದೆ. ಶುಕ್ರವಾರ ಅಡಿಲೇಡ್ನಲ್ಲಿ ನಡೆದ ಮೂರು ಪಂದ್ಯಗಳ ODI ಸರಣಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನದ ನಾಯಕ ಮೊಹ್ಮದ್ ರಿಜ್ವಾನ್ ಆಸ್ಟ್ರೇಲಿಯಾ ಆಟಾಗಾರನ ಮಾತು ಕೇಳಿ DRS ತೆಗೆದುಕೊಂಡು ಮಂಗನಾಗಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ್ದ ಆಸೀಸ್ ಅಲ್ಪಮೊತ್ತಕ್ಕೆ ಕುಸಿಯಿತು. ತಂಡದ ಪರ ಯಾವೊಬ್ಬ ಬ್ಯಾಟರ್ ಅರ್ಧಶತಕ ಸಿಡಿಸಲು ಸಾಧ್ಯವಾಗಲಿಲ್ಲ. ಆರಂಭಿಕ ಬ್ಯಾಟರ್ ಆಗಿ ಕ್ರೀಸ್ಗಿಳಿದಿದ್ದ ಫ್ರೆಸರ್ ಮೆಕ್ಗುರರ್ಕ್ (13) ಮತ್ತು ಮ್ಯಾಥ್ಯು ಶಾರ್ಟ್ (19) ಪವರ್ ಪ್ಲೇನಲ್ಲೆ ತಮ್ಮ ವಿಕೆಟ್ ಒಪ್ಪಿಸಿ ಹೊರನಡೆದರು. ನಂತರ ಬಂದ ಜೋಶ್ ಇಂಗ್ಲಿಸ್ (18), ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಆ್ಯರೋನ್ ಹಾರ್ಡಿ, ಮ್ಯಾಕ್ಸ್ವೆಲ್, ಮಿಚೆಲ್ ಸ್ಟಾರ್ಕ್, ಕಮಿನ್ಸ್, ಆಡಮ್ ಜಂಪಾ ಅಲ್ಪಮೊತ್ತಕ್ಕೆ ಪೆವಿಲಿಯನ್ ಪರೇಡ್ ಮಾಡಿದರು. ಇದರೊಂದಿಗೆ ಆಸ್ಟ್ರೇಲಿಯಾ 163 ರನ್ಗಳಿಗೆ ಸರ್ವಪತನ ಕಂಡಿತು.
ಆದರೆ 34ನೇ ಓವರ್ನಲ್ಲಿ ನಸೀಮ್ ಶಾ ಬೌಲಿಂಗ್ ವೇಳೆ ಹಾಸ್ಯಸ್ಪದ ಘಟನೆ ನಡೆದಿದೆ. ಈ ಓವರ್ನ 4ನೇ ಎಸೆತದಲ್ಲಿ ನಸೀಮ್ ಶಾರ್ಟ್ ಪಿಚ್ ಬಾಲ್ ಮಾಡಿದ್ದರು. ಈ ವೇಳೆ ಕ್ರೀಸ್ನಲ್ಲಿದ್ದ ಜಾಂಪ ಚೆಂಡನ್ನು ಬ್ಯಾಕ್ವರ್ಡ್ ಸ್ಕ್ವೇರ್ ಲೆಗ್ ಕಡೆಗೆ ಚೆಂಡನ್ನು ಬಾರಿಸಲು ಯತ್ನಿಸಿದರು. ಆದರೆ ಚೆಂಡು ಮಿಸ್ ಆಗಿ ಕೀಪರ್ ರಿಜ್ವಾನ್ ಕೈ ಸೇರಿತ್ತು.
ಈ ವೇಳೆ ಚೆಂಡು ಬ್ಯಾಟ್ಗೆ ತಾಕಿದೆ ಎಂದು ರಿಜ್ವಾನ್ ಜೋರಾಗಿ ಅಪಿಲ್ ಮಾಡಿದ್ದಾರೆ. ಆದ್ರೆ ಅಂಪೈರ್ ರಿಜ್ವಾನ್ ಮನವಿ ತಿರಸ್ಕರಿಸಿದರು. ಆಗ DRS ತೆಗೆದುಕೊಳ್ಳಲು ಮುಂದಾದ ರಿಜ್ವಾನ್ ಆಸ್ಟ್ರೇಲಿಯಾ ಬ್ಯಾಟರ್ ಜಾಂಪಗೆ ಚೆಂಡು ಬ್ಯಾಟ್ಗೆ ತಾಕಿದೆಯಾ DRS ತೆಗೆದುಕೊಳ್ಳಬಹುದೇ ಎಂದು ಕೇಳಿದ್ದಾರೆ. ಇದಕ್ಕೆ ಜಾಂಪ ತೆಗೆದುಕೊಳ್ಳಿ ಎಂದಿದ್ದಾರೆ. ಆಸೀಸ್ ಬ್ಯಾಟರ್ ಮಾತು ಕೇಳಿದ ಜಂಪಾ ಕೂಡಲೇ DRS ತೆಗೆದುಕೊಂಡಿದ್ದಾರೆ. ಆದರೆ ಅಲ್ಟ್ರಾ ಎಡ್ಜ್ನಲ್ಲಿ ಯಾವುದೇ ಸೌಂಡ್ ಬರದ ಕಾರಣ ಅಂಪೈರ್ ಇದನ್ನು ನಾಟೌಟ್ ಎಂದು ಘೋಷಿಸಿದರು. ಜಾಂಪ ಮೈಂಡ್ ಗೇಮ್ನಿಂದ ಪಾಕಿಸ್ತಾನ ನಾಯಕ ಡಿಆರ್ಎಸ್ ಕಳೆದುಕೊಂಡರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
" you should take it!" #AUSvPAK pic.twitter.com/WL2KFDCfrJ
— cricket.com.au (@cricketcomau) November 8, 2024
ಪಂದ್ಯದ ವಿವರ: ಆಸ್ಟ್ರೇಲಿಯಾ ನೀಡಿದ್ದ 163 ರನ್ಗಳ ಸಾಮಾನ್ಯ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ 1 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವಿನ ದಡ ಸೇರಿತು. ಪಾಕ್ ಪರ ಅಯೂಬ್ (82), ಶಫಿಖ್ (64) ಅರ್ಧಶತಕ ಸಿಡಿಸಿ ಮಿಂಚಿದರು. ಇದರೊಂದಿಗೆ ಸರಣಿಯಲ್ಲಿ 1-1 ಅಂತರದಿಂದ ಪಾಕ್ ಸಮಬಲ ಸಾಧಿಸಿದೆ. ನಾಳೆ ಪರ್ತ ಮೈದಾನದಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ 3ನೇ ಮತ್ತು ಅಂತಿಮ ಏಕದಿನ ಪಂದ್ಯವನ್ನು ಆಡಲಿದೆ.
ಇದನ್ನೂ ಓದಿ: Viral Video: ವಿರಾಟ್ ಕೈ ಎಳೆದು ಸೆಲ್ಫಿ ಕೇಳಿದ ಮಹಿಳೆ, ಅಭಿಮಾನಿ ವರ್ತನೆಗೆ ತಬ್ಬಿಬ್ಬಾದ ಕೊಹ್ಲಿ; ಮುಂದೇನಾಯ್ತು ನೋಡಿ!