Virat Kohli Fitness Secret: ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಫಿಟ್ನೆಸ್ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಫಿಟ್ನೆಸ್ ವಿಚಾರದಲ್ಲಿ ಸಾಕಷ್ಟು ಆಟಗಾರರೂ ಸೇರಿದಂತೆ ಯುವ ಜನತೆ ಅವರನ್ನು ಫಾಲೋ ಮಾಡುತ್ತಾರೆ. ಇದಷ್ಟೇ ಅಲ್ಲದೇ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಲು ಅವರ ಫಿಟ್‌ನೆಸ್ ಕೂಡಾ ಪ್ರಮುಖ ಕಾರಣವಾಗಿದೆ. ಈ ಬಗ್ಗೆ ಪತ್ನಿ ಅನುಷ್ಕಾ ಶರ್ಮಾ ಮಾತನಾಡಿದ್ದಾರೆ.
10 ವರ್ಷಗಳಲ್ಲಿ ಕೊಹ್ಲಿ ಒಮ್ಮೆಯೂ ಬಟರ್ ಚಿಕನ್ ಸೇವಿಸಿಲ್ಲ: ಕೊಹ್ಲಿ ತಮ್ಮ ಆರೋಗ್ಯ ಮತ್ತು ಫಿಟ್‌ನೆಸ್ ಬಗ್ಗೆ ತುಂಬಾ ಕಟ್ಟುನಿಟ್ಟಾಗಿದ್ದಾರೆ. ಬೆಳಿಗ್ಗೆ ಬೇಗ ಏಳುತ್ತಾರೆ. ಎದ್ದ ತಕ್ಷಣ ಸಮಯ ವ್ಯರ್ಥ ಮಾಡದೇ ಕಾರ್ಡಿಯೋ ವ್ಯಾಯಾಮ ಮಾಡುತ್ತಾರೆ. ನಂತರ ನನ್ನೊಂದಿಗೆ ಸ್ವಲ್ಪ ಹೊತ್ತು ಕಳೆದು ಬಳಿಕ ಕ್ರಿಕೆಟ್ ಅಭ್ಯಾಸ ನಡೆಸುತ್ತಾರೆ. ಊಟದಲ್ಲಿ ಜಂಕ್ ಮತ್ತು ಸಕ್ಕರೆರಹಿತ ಪಾನಿಯ ಆಹಾರ ಸೇವನೆ ಮಾಡುತ್ತಾರೆ. ಕಳೆದ 10 ವರ್ಷಗಳಿಂದ ಒಮ್ಮೆಯೂ ಬಟರ್ ಚಿಕನ್ ಸೇವಿಸಿಲ್ಲ. ಇದು ನಂಬಲಸಾಧ್ಯವಾದರೂ ನಿಜ. ಕೂಲ್ ಡ್ರಿಂಕ್ಸ್ ಕೂಡ ಕೊಹ್ಲಿ ಸೇವಿಸಲ್ಲ ಎಂದು ಅವರು ತಿಳಿಸಿದ್ದಾರೆ.
Anushka Sharma On Kohli's fitness secret pic.twitter.com/uuikcqRYWB
— Noor (@HeyNoorr) December 4, 2024
ನಿದ್ರೆಯಲ್ಲಿ ರಾಜಿ ಇಲ್ಲ: ಕೊಹ್ಲಿ ನಿದ್ರೆಯಲ್ಲಿ ಎಂದಿಗೂ ರಾಜಿ ಮಾಡಿವುದಿಲ್ಲ. ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಯಾವುದೇ ಕೆಲಸದಲ್ಲಿ ಸಕ್ರಿಯವಾಗಿರಲು ಮತ್ತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ವಿಶ್ರಾಂತಿ ನಿರ್ಣಾಯಕ. ಹಲವಾರು ಬಾರಿ ಸಂದರ್ಶನಗಳಲ್ಲಿ ಕೊಹ್ಲಿ ಕೂಡ ನಿದ್ರೆ ಬಗ್ಗೆ ಮಾತನಾಡಿದ್ದಾರೆ. ಈ ಎಲ್ಲಾ ವಿಚಾರಗಳಲ್ಲಿ ಅವರು ಕಟ್ಟುನಿಟ್ಟಾಗಿರುವುದರಿಂದ ಇಂದು ವಿಶ್ವದ ಅಗ್ರ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ ಎಂದು ಅನುಷ್ಕಾ ವಿವರಿಸಿದರು.
ವಿರಾಟ್ ಕೊಹ್ಲಿ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಐದು ಟೆಸ್ಟ್‌ಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು. ಇದರೊಂದಿಗೆ 16 ತಿಂಗಳಿಂದ ಕೊಹ್ಲಿಯ ಟೆಸ್ಟ್ ಶತಕಕ್ಕಾಗಿ ಅಭಿಮಾನಿಗಳ ಕಾಯುವಿಕೆಗೆ ತೆರೆ ಎಳೆದಿದ್ದರು.
ಇದನ್ನೂ ಓದಿ: ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರರು ಕೈಗೆ ಕಪ್ಪುಪಟ್ಟಿ ಧರಿಸಿದ್ದೇಕೆ?