Anil Kumble Birthday: ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರಿಂದು 54ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 17 ಅಕ್ಟೋಬರ್ 1970ರಂದು ಬೆಂಗಳೂರಿನಲ್ಲಿ ಜನಿಸಿದ ಇವರು ಕ್ರಿಕೆಟ್ ಲೋಕದಲ್ಲಿ ಹಲವು ದಾಖಲೆಗಳನ್ನು ಬರೆದು ಟಾಪ್ ಬೌಲರ್ ಆಗಿ ಗುರುತಿಸಿಕೊಂಡವರು. ಅಲ್ಲದೇ ತಮ್ಮ ಮಾಂತ್ರಿಕ ಬೌಲಿಂಗ್ ಮೂಲಕ ಭಾರತಕ್ಕೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟವರು. ಈ ಸಂದರ್ಭದಲ್ಲಿ ಕುಂಬ್ಳೆ ಕ್ರಿಕೆಟ್ ದಾಖಲೆಯ ಪುಸ್ತಕದ ಪುಟ ತೆರೆದು ನೋಡೋಣ.
ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್!: 7 ಫೆಬ್ರವರಿ 1999ರಂದು ನಡೆದ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದರು. ಈ ಪಂದ್ಯ ನಡೆದು 25 ವರ್ಷ ಕಳೆದರೂ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದೆ. ಪಾಕಿಸ್ತಾನದ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ ಹತ್ತು ವಿಕೆಟ್‌ಗಳನ್ನು ಉರುಳಿಸಿದ ಕುಂಬ್ಳೆ ದಾಖಲೆ ಬರೆದಿದ್ದರು. ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ (ಸಧ್ಯ ಅರುಣ್ ಜೇಟ್ಲಿ ಸ್ಟೇಡಿಯಂ) ನಡೆದಿದ್ದ ಎರಡನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಕುಂಬ್ಳೆ ಎಲ್ಲ 10 ವಿಕೆಟ್‌ಗಳನ್ನೂ ಪಡೆದಿದ್ದರು. ಅವರ ಈ ಮಾರಕ ಬೌಲಿಂಗ್ ಪ್ರದರ್ಶನದಿಂದಾಗಿ ಭಾರತ ಈ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.
4⃣0⃣3⃣ intl. games 👍
— BCCI (@BCCI) October 17, 2021
9⃣5⃣6⃣ intl. wickets 👌
Only the second bowler in Test cricket to scalp 10 wickets in an innings 👏
Wishing former #TeamIndia captain @anilkumble1074 a very happy birthday. 🎂 👏
Let's revisit his brilliant 1⃣0⃣-wicket haul against Pakistan 🎥 🔽 pic.twitter.com/BFrxNqKZsN
ಗಾಯದ ನಡುವೆಯೂ ಬೌಲಿಂಗ್: 2002ರಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ 4ನೇ ಟೆಸ್ಟ್ ಪಂದ್ಯವನ್ನಾಡಿತ್ತು. ಪಂದ್ಯದಲ್ಲಿ ಅನಿಲ್ ಕುಂಬ್ಳೆ 14 ಓವರ್ ಬೌಲ್ ಮಾಡಿ ಮೊದಲ ಇನ್ನಿಂಗ್ಸ್‌ನಲ್ಲಿ 29 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. ಇದೇ ಪಂದ್ಯದಲ್ಲಿ ದವಡೆ ಗಾಯಕ್ಕೂ ತುತ್ತಾಗಿದ್ದರು. ಮುರಿದ ದವಡೆಯೊಂದಿಗೆ ಬೌಲಿಂಗ್ ಮಾಡಿದ ಅವರು, 25 ಎಸೆತಗಳಲ್ಲಿ ಕೇವಲ 4 ರನ್‌ಗಳಿಗೆ ಬ್ರಿಯಾನ್ ಲಾರಾ ಅವರ ವಿಕೆಟ್ ಪಡೆದಿದ್ದರು.
- 619 Test wickets.
— Mufaddal Vohra (@mufaddal_vohra) October 16, 2024
- 337 ODI wickets.
- 35 Five wicket hauls in Tests.
- A Test century at the Oval.
- Only Asian with 10 wickets in an innings.
- Most Test wickets for India.
- Most ODI wickets for India.
HAPPY BIRTHDAY TO ONE OF INDIA'S GREATEST MATCH WINNER - ANIL KUMBLE. pic.twitter.com/QUlCch8HBg
600ಕ್ಕೂ ಹೆಚ್ಚು ವಿಕೆಟ್ ಸಾಧನೆ: ಅನಿಲ್ ಕುಂಬ್ಳೆ ಭಾರತದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರು. 132 ಟೆಸ್ಟ್‌ಗಳಲ್ಲಿ 619 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್‌ನಲ್ಲಿ 600 ವಿಕೆಟ್‌ಗಳನ್ನು ಪೂರೈಸಿದ ಮೊದಲ ಭಾರತೀಯ ಬೌಲರ್ ಎಂಬ ದಾಖಲೆಯೂ ಅವರ ಹೆಸರಲ್ಲಿದೆ. ಇದರಲ್ಲಿ 38 ಬಾರಿ 5 ವಿಕೆಟ್ ಹಾಗೂ 8 ಬಾರಿ 10 ವಿಕೆಟ್ ಪಡೆದಿದ್ದಾರೆ. ಅಲ್ಲದೇ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕದಾಟವನ್ನೂ ಆಡಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: ಒಂದೇ ಓವರ್ನಲ್ಲಿ 36 ಅಲ್ಲ 77ರನ್ ಬಿಟ್ಟುಕೊಟ್ಟ ಬೌಲರ್: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ದಾಖಲು!