ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನ ಸ್ಕೀಟ್ ಮಿಕ್ಸೆಡ್ ಟೀಮ್ ಈವೆಂಟ್ ಸ್ಪರ್ಧೆಯಲ್ಲಿ ಒಂದು ಅಂಕದಿಂದ ಭಾರತಕ್ಕೆ ಕಂಚಿನ ಪದಕ ಕೈ ತಪ್ಪಿದೆ. ಈ ಸ್ಪರ್ಧೆಯಲ್ಲಿ ಅನಂತಜಿತ್ ಸಿಂಗ್ ನರುಕಾ ಮತ್ತು ಮಹೇಶ್ವರಿ ಚೌಹಾಣ್ ಜೋಡಿ ಚೀನಾದ ಜಿಯಾಂಗ್ ಯುಟಿಂಗ್ ಮತ್ತು ಲಿಯು ಜಿಯಾಲಿನ್ ವಿರುದ್ಧ ಸೋಲು ಕಂಡರು. ಇದರೊಂದಿಗೆ ಭಾರತ ಮತ್ತೊಂದು ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿತು.
ಚೀನಾ ಜೋಡಿ ಮೊದಲ ಸುತ್ತಿನಲ್ಲಿ ಎಲ್ಲಾ 8 ಶಾಟ್‌ಗಳನ್ನು ಹೊಡೆದರೆ, ಭಾರತದ ಜೋಡಿ 8 ರಲ್ಲಿ 7 ಹೊಡೆತಗಳನ್ನು ದಾಖಲಿಸಿತು. ಎರಡನೇ ಸುತ್ತಿನಲ್ಲಿ ಚೀನಾ 8 ಹೊಡೆತಗಳಲ್ಲಿ 5 ಹೊಡೆದು 3 ಹೊಡೆತಗಳನ್ನು ಮಿಸ್ ಮಾಡಿಕೊಂಡಿತು. ಭಾರತದ ಶೂಟರ್ಗಳು 8 ಹೊಡೆತಗಳಲ್ಲಿ 6 ಹೊಡೆದು 2ನ್ನು ತಪ್ಪಿಸಿಕೊಂಡರು. ಮೂರನೇ ಸುತ್ತಿನಲ್ಲಿ ಚೀನಾದ ಜೋಡಿ 8ರಲ್ಲಿ 7 ಹೊಡೆತಗಳನ್ನು ಹೊಡೆದರೆ, ಭಾರತದ ಕೂಡ 8ರಲ್ಲಿ 7 ಶಾಟ್‌ಗಳನ್ನು ದಾಖಲಿಸಿತು. ಈ ವೇಳೆ ಸ್ಕೋರ್ 20-20 ಸಮಬಲಗೊಂಡಿತು.
🇮🇳 Result Update: Skeet Mixed Team Bronze🥉Medal Match👇🏻
— SAI Media (@Media_SAI) August 5, 2024
Anantjeet Singh Naruka and Maheshwari Chauhan endure heartbreak against China🇨🇳 at #ParisOlympics2024💔
They missed out on a podium finish by 1 point.
Earlier, the duo became the first Indian🇮🇳 pair to play for a… pic.twitter.com/6a9zIYyWQ6
ಈ ಪಂದ್ಯದ ನಾಲ್ಕನೇ ಸುತ್ತಿನಲ್ಲಿ ಭಾರತದ ಜೋಡಿ 8ರಲ್ಲಿ 7 ಹೊಡೆತಗಳನ್ನು ಹೊಡೆದರೆ, ಚೀನಾ ಜೋಡಿ 8ರಲ್ಲಿ 8 ಹೊಡೆತಗಳನ್ನು ದಾಖಲಿಸಿತು. ಚೀನಾ ಮತ್ತು ಭಾರತದ ಜೋಡಿ ಐದನೇ ಸುತ್ತಿನಲ್ಲಿ ತಲಾ 8 ಹೊಡೆತಗಳು ದಾಖಲಿಸಿದರಿಂದ ಸ್ಕೋರ್ 36-35ಕ್ಕೆ ತಲುಪಿತು. ಇದರ ನಂತರ ಪದಕ ಪಂದ್ಯ ಫೈನಲ್‌ಗೆ ಹಂತ ತಲುಪಿತು. ಕೊನೆಯ ಸುತ್ತಿನಲ್ಲಿ ಭಾರತದ ಜೋಡಿ 8 ಹೊಡೆತಗಳಲ್ಲಿ 8 ಬಾರಿಸಿ ಸ್ಕೋರ್ ಅನ್ನು 43ಕ್ಕೆ ಕೊಂಡೊಯ್ದರು. ಇದಾದ ಬಳಿಕ ಚೀನಾದ ಜೋಡಿ 8 ಶಾಟ್‌ಗಳಲ್ಲಿ 8 ಹೊಡೆದು 44-43 ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು. ಇದರೊಂದಿಗೆ ಕಂಚಿನ ಪದಕ ಗೆಲ್ಲುವ ಭಾರತದ ನಿರೀಕ್ಷೆ ಹುಸಿಯಾಯಿತು.
ಸ್ಕೀಟ್ ಮಿಕ್ಸೆಡ್ ಟೀಮ್ ಈವೆಂಟ್‌ನ ಅರ್ಹತಾ ಪಂದ್ಯದಲ್ಲಿ ಚೀನಾದೊಂದಿಗೆ ಸಮಬಲ ಸಾಧಿಸುವ ಮೂಲಕ ಪದಕ ಪಂದ್ಯದಲ್ಲಿ ಭಾರತದ ಜೋಡಿ 146 ಅಂಕಗಳನ್ನು ಕಲೆಹಾಕಿತ್ತು. ಇದರೊಂದಿಗೆ ಭಾರತ ನಾಲ್ಕನೇ ಸ್ಥಾನಕ್ಕೆ ತಲುಪಿತ್ತು. ಮುಂದಿನ ಸುತ್ತಿಗೆ ಅರ್ಹತೆ ಪಡೆದ ಎರಡೂ ತಂಡಗಳು ಕಂಚಿನ ಪದಕದ ಪಂದ್ಯ ಆಡಬೇಕಾಗಿತ್ತು. ಆದರೆ ಈ ಪಂದ್ಯದಲ್ಲಿ ಭಾರತ ಸೋಲನುಭವಿಸಿದ್ದು ಪದಕ ಗೆಲ್ಲುವ ಲಕ್ಷ್ಯ ಸೇನ್ ಕನಸು ಭಗ್ನಗೊಂಡಿದೆ.
ಇದನ್ನೂ ಓದಿ: ಇಂದಿನಿಂದ ಭಾರತದ ಒಲಿಂಪಿಕ್ಸ್ ಕುಸ್ತಿ ಆರಂಭ: ಇವರಿಂದ ಚಿನ್ನದ ಪದಕ ನಿರೀಕ್ಷೆ - Olympics Wrestling