Ranji Trophy: ಉತ್ತರ ಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ಕೇರಳದ ಆಲ್ರೌಂಡರ್ ಜಲಜ್ ಸಕ್ಸೇನಾ ಹೊಸ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಆಫ್‌ಸ್ಪಿನ್ನರ್ ಸಕ್ಸೇನಾ 5 ವಿಕೆಟ್ ಪಡೆಯವ ಮೂಲಕ 400 ವಿಕೆಟ್ ಪೂರೈಸಿದರು. ಇದರೊಂದಿಗೆ ರಣಜಿ ಟ್ರೋಫಿಯಲ್ಲಿ 29ನೇ ಬಾರಿಗೆ 5 ವಿಕೆಟ್‌ಗಳ ಮೈಲಿಗಲ್ಲು ಸಾಧಿಸಿದ್ದಾರೆ.
ಇದಷ್ಟೇ ಅಲ್ಲದೇ, ರಣಜಿಯಲ್ಲಿ 6,000 ರನ್ ಮತ್ತು 400 ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸಕ್ಸೇನಾ ಕೋಲ್ಕತ್ತಾ ವಿರುದ್ಧದ ಮೂರನೇ ಸುತ್ತಿನ ಪಂದ್ಯದಲ್ಲಿ 6,000 ರನ್‌ಗಳನ್ನು ಪೂರ್ಣಗೊಳಿಸಿದ್ದರು. 18 ವರ್ಷಗಳ ಹಿಂದೆ ಪ್ರಥಮ ದರ್ಜೆ ವೃತ್ತಿಜೀವನ ಪ್ರಾರಂಭಿಸಿದ್ದ ಇವರು, 11 ವರ್ಷಗಳ ಕಾಲ ಮಧ್ಯ ಪ್ರದೇಶ ತಂಡದಲ್ಲಿ ಆಡಿದ್ದರು. ಈ ವೇಳೆ 159 ವಿಕೆಟ್ ಜೊತೆಗೆ 4,041 ರನ್ ಗಳಿಸಿದ್ದರು.
Milestone unlocked 🔓
— BCCI Domestic (@BCCIdomestic) November 6, 2024
A rare double ✌️
Jalaj Saxena becomes the first player to achieve a double of 6000 runs and 400 wickets in #RanjiTrophy 👏👏@IDFCFIRSTBank | @jalajsaxena33 pic.twitter.com/frrQIvkxWS
ರಾಷ್ಟ್ರೀಯ ತಂಡದಲ್ಲಿ ಸಿಗದ ಸ್ಥಾನ!: 2016-17ರ ರಣಜಿ ಟ್ರೋಫಿ ಋತುವಿನಲ್ಲಿ ಕೇರಳ ಪರ ಆಡಲಾರಂಭಿಸಿದರು. ದೇಶೀಯ ಕ್ರಿಕೆಟ್‌ನಲ್ಲಿ ರಣಜಿ ಟ್ರೋಫಿ ಜೊತೆಗೆ, ಉಳಿದ ಎಲ್ಲಾ ಸ್ವರೂಪಗಳಲ್ಲಿ 9,000 ರನ್ ಮತ್ತು 600 ವಿಕೆಟ್‌ಗಳನ್ನು ಪಡೆದಿದ್ದಾರೆ. ಸಕ್ಸೇನಾ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರನಾಗಿದ್ದಾರೆ. ಈವರೆಗೆ 222 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಇವರು 14 ಶತಕ ಮತ್ತು 33 ಅರ್ಧಶತಕಗಳನ್ನು ಬಾರಿಸಿದ್ದಾರೆ. ಸುಮಾರು ಎರಡು ದಶಕಗಳಿಂದ ದೇಶಿ ಕ್ರಿಕೆಟ್ ಆಡುತ್ತಿದ್ದು, ಒಮ್ಮೆಯೂ ರಾಷ್ಟ್ರೀಯ ತಂಡದಲ್ಲಿ ಆಡದಿರುವುದು ಅಚ್ಚರಿ ಮೂಡಿಸಿದೆ.
ಅಯ್ಯರ್ ಶತಕ ವೈಭವ: ರಣಜಿ ಟ್ರೋಫಿಯಲ್ಲಿ ಮುಂಬೈ ತಂಡವನ್ನು ಪ್ರನಿಧಿಸುತ್ತಿರುವ ಶ್ರೇಯಸ್ ಅಯ್ಯರ್ ಸತತ ಎರಡು ಶತಕ ಸಿಡಿಸಿ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಒಡಿಶಾ ವಿರುದ್ಧ ಅಯ್ಯರ್ 101 ಎಸೆತಗಳಲ್ಲಿ 2 ಸಿಕ್ಸ್ ಮತ್ತು 14 ಬೌಂಡರಿಗಳ ಸಹಾಯದಿಂದ ಶತಕ ಸಿಡಿಸಿದರು. ಇದಕ್ಕೂ ಮುನ್ನ ಮಹಾರಾಷ್ಟ್ರ ವಿರುದ್ಧವೂ ಶತಕ ಬಾರಿಸಿದ್ದರು. ಆದರೆ ಗಾಯದ ಕಾರಣದಿಂದಾಗಿ ತ್ರಿಪುರಾ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು.
ಇದನ್ನೂ ಓದಿ: ಆಸ್ಟ್ರೇಲಿಯಾ ಎ ವಿರುದ್ಧವೂ ಕೆ.ಎಲ್.ರಾಹುಲ್ ಫ್ಲಾಪ್ ಶೋ!: ಸಂಕಷ್ಟದಲ್ಲಿ ಕ್ರಿಕೆಟ್ ಭವಿಷ್ಯ