ETV Bharat / sports

ಡೋಪಿಂಗ್​​ ಟೆಸ್ಟ್​ನಲ್ಲಿ ಫೇಲ್​: ಭಾರತದ ಹ್ಯಾಮರ್ ಥ್ರೋವರ್ ರಚನಾಗೆ 12 ವರ್ಷ ನಿಷೇಧ - ಡೋಪಿಂಗ್​​ ಟೆಸ್ಟ್

ನಿಷೇಧಿತ ವಸ್ತುಗಳನ್ನು ಸೇವಿಸಿದ ಭಾರತದ ಹ್ಯಾಮರ್ ಥ್ರೋವರ್ ಕೆ.ಎಂ ರಚನಾ ಕುಮಾರಿ ಅವರನ್ನು 12 ವರ್ಷಗಳ ಕಾಲ ನಿಷೇಧಕ್ಕೆ ಗುರಿಪಡಿಸಲಾಗಿದೆ.

ಡೋಪಿಂಗ್​​ ಟೆಸ್ಟ್
ಡೋಪಿಂಗ್​​ ಟೆಸ್ಟ್
author img

By ETV Bharat Karnataka Team

Published : Feb 14, 2024, 2:05 PM IST

ಲೌಸನ್ನೆ (ಸ್ವಿಟ್ಜರ್​ಲ್ಯಾಂಡ್​): ನಿಷೇಧಿತ ವಸ್ತು ಬಳಕೆ ಮಾಡಿ ಡೋಪಿಂಗ್​ ಟೆಸ್ಟ್​ನಲ್ಲಿ ಭಾರತದ ಮತ್ತೊಂದು ಕ್ರೀಡಾಪಟು ಸಿಕ್ಕಿಬಿದ್ದಿದ್ದಾರೆ. 30 ವರ್ಷದ ಭಾರತೀಯ ಹ್ಯಾಮರ್ ಥ್ರೋವರ್ ಕೆ.ಎಂ ರಚನಾ ಕುಮಾರಿ ಡೋಪಿಂಗ್​ ಟೆಸ್ಟ್​ ಪಾಸಿಟಿವ್​ ಫಲಿತಾಂಶ ಬಂದಿದ್ದು, 12 ವರ್ಷಗಳವರೆಗೆ ಕ್ರೀಡೆಯಿಂದ ನಿಷೇಧ ಹೇರಲಾಗಿದೆ.

ವಿಶ್ವ ಅಥ್ಲೆಟಿಕ್ಸ್ ಇಂಟೆಗ್ರಿಟಿ ಘಟಕ ಮತ್ತು ಭಾರತದ ರಾಷ್ಟ್ರೀಯ ಡೋಪಿಂಗ್ ವಿರೋಧಿ ಪ್ರಾಧಿಕಾರ (ನಾಡಾ) ನಡೆಸಿದ ಪರೀಕ್ಷೆಗಳಲ್ಲಿ ನಿಷೇಧಿತ ವಸ್ತುಗಳಾದ ಸ್ಟನಜೋಲಾಲ್​, ಮೆಥಾಂಡಿಯೆನೋನಿ, ಡಿಎಚ್​ಸಿಎಂಟಿ, ಮತ್ತು ಕ್ಲೆನ್​ಬ್ಯುಟೆರೊಲ್ ಅನ್ನು ರಚನಾ ಸೇವಿಸಿದ್ದು ಕಂಡುಬಂದಿದೆ. ಇದರಿಂದ ಅವರನ್ನು ಯಾವುದೇ ಕ್ರೀಡಾಕೂಟದಲ್ಲಿ ಭಾಗಿಯಾಗದಂತೆ ನಿರ್ಬಂಧಿಸಲಾಗಿದೆ.

ವಿಶ್ವ ಅಥ್ಲೆಟಿಕ್ಸ್‌ನ ಸ್ವತಂತ್ರ ಡೋಪಿಂಗ್ ವಿರೋಧಿ ಸಂಸ್ಥೆಯಾದ ಎಐಯು ಮಂಗಳವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಭಾರತದ ಹ್ಯಾಮರ್​ ಥ್ರೋವರ್​ ರಚನಾ ಅವರು ನಿಷೇಧಿತ ವಸ್ತುಗಳನ್ನು ಸೇವಿಸಿದ್ದು, ಡೋಪಿಂಗ್​ ಪರೀಕ್ಷೆಯಲ್ಲಿ ಕಂಡು ಬಂದಿದೆ. ಹೀಗಾಗಿ ಅವರನ್ನು 2023 ರ ನವೆಂಬರ್ 24 ರಿಂದ ಪೂರ್ವಾನ್ವಯವಾಗುವಂತೆ 2035ರ ನವೆಂಬರ್ 23 ರವರೆಗೆ ಎಲ್ಲ ಕ್ರೀಡೆಗಳಿಂದ ನಿಷೇಧಿಸಲಾಗಿದೆ ಎಂದಿದೆ.

ಎರಡನೇ ಸಲ ಆಟಗಾರ್ತಿ ಮೇಲೆ ನಿಷೇಧ: ಇದು ರಚನಾ ಅವರ ಎರಡನೇ ಡೋಪಿಂಗ್ ನಿಯಮ ಉಲ್ಲಂಘನೆಯಾಗಿದೆ. ಇದಕ್ಕೂ ಮೊದಲು, 2015 ರ ಫೆಬ್ರವರಿ 10 ರಂದು ಸಂಗ್ರಹಿಸಲಾದ ಮಾದರಿಯಲ್ಲಿ ನಿಷೇಧಿತ ಮೆಟೆನೋಲೋನ್ ಕಂಡುಬಂದ ನಂತರ ಅವರನ್ನು ಮಾರ್ಚ್ 18, 2015 ರಿಂದ ಮಾರ್ಚ್ 17, 2019 ರವರೆಗೆ 4 ವರ್ಷಗಳ ಕಾಲ ಅನರ್ಹಗೊಳಿಸಲಾಗಿತ್ತು. ಇದಾದ ಬಳಿಕ ಮತ್ತೆ ಭಾರತದ ಪರವಾಗಿ ಹಲವು ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ.

ಸೆಪ್ಟೆಂಬರ್ 24, 2023 ರಂದು ಪಟಿಯಾಲಾದಲ್ಲಿ ನಡೆದ ಎರಡು ಸ್ಪರ್ಧಾತ್ಮಕವಲ್ಲದ ಪರೀಕ್ಷೆಗಳಲ್ಲಿ ರಚನಾ ಎರಡು ಮಾದರಿಗಳನ್ನು ನೀಡಿದ್ದರು. ಭಾರತದ ನಾಡಾ ನಡೆಸಿದ ಪರೀಕ್ಷೆಗಳಲ್ಲಿ ಗೋವಾದಲ್ಲಿ ನಡೆದ 37 ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೂ ಮೊದಲು ಅವರು ಮಾದರಿಯನ್ನು ನೀಡಿದ್ದರು. ಎರಡರಲ್ಲೂ ಪಾಸಿಟಿವ್​ ಫಲಿತಾಂಶ ಬಂದಿದೆ.

ರಚನಾ ಕುಮಾರಿ ಇತ್ತೀಚೆಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ 68 ಸದಸ್ಯರ ತಂಡದಲ್ಲಿದ್ದರು. ಸೆಪ್ಟೆಂಬರ್ 29 ರಂದು ನಡೆದ ಈ ಸ್ಪರ್ಧೆಯಲ್ಲಿ ಅವರು ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ 58.13 ಮೀಟರ್‌ಗಳಷ್ಟು ಉದ್ದ ಹ್ಯಾಮರ್​ ಎಸೆದು ಒಂಬತ್ತನೇ ಸ್ಥಾನ ಪಡೆದಿದ್ದರು. ಜೂನ್‌ನಲ್ಲಿ ನಡೆದ ಅಂತರರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗಳಿಸಿದ್ದರು. ಆದರೂ, ರಚನಾ ಈವರೆಗೂ ಯಾವುದೇ ಅಂತಾರಾಷ್ಟ್ರೀಯ ಪದಕ ಗೆದ್ದಿಲ್ಲ.

ಇದನ್ನೂ ಓದಿ: ಗುಜರಾತ್ ಜೈಂಟ್ಸ್ ‌ನಾಯಕಿಯಾಗಿ ಬೆತ್ ಮೂನಿ, ಉಪನಾಯಕಿಯಾಗಿ ಸ್ನೇಹ್ ರಾಣಾ ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.