ನವದೆಹಲಿ: ಪ್ಯಾರಿಸ್ ಒಲಿಂಪಿಕ್ 2024ರ ಮುಕ್ತಾಯದ ಬಳಿಕ ನೀರಜ್ ಚೋಪ್ರಾ ಮತ್ತು ಮನು ಭಾಕರ್ ಅವರು ಮದುವೆ ಮಾಡಿಕೊಳ್ಳಲ್ಲಿದ್ದಾರೆ ಎಂಬ ಸುದ್ಧಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಮನು ಹಾಗೂ ನೀರಜ್ ಪರಸ್ಪರ ನಗುತ್ತಾ ಮಾತನಾಡುತ್ತರುವ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಈ ವಿಡಿಯೋಗೆ ಅಭಿಮಾನಿಗಳು 'ಇಬ್ಬರೂ ಮದುವೆಯಾಗಲಿದ್ದಾರೆ', 'ಸಂಬಂಧ ದೃಢಪಟ್ಟಿದೆ' ಎಂಬ ಕಾಮೆಂಟ್ಗಳನ್ನು ಮಾಡಲು ಪ್ರಾರಂಭಿಸಿದ್ದಾರೆ.
ಇದಷ್ಟೇ ಅಲ್ಲದೇ ಮನು ಭಾಕರ್ ಅವರ ತಾಯಿ ಸುಮೇಧಾ ಭಾಕರ್ ಮತ್ತು ನೀರಜ್ ಚೋಪ್ರಾ ಅವರ ಭೇಟಿಯ ಮತ್ತೊಂದು ವಿಡಿಯೋ ಕೂಡ ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಡಿಯೋಗೆ ಜಾವೆಲಿನ್ ತಾರೆ, ತನ್ನ ಮಗಳಿಗೆ ಸೂಕ್ತ ಸಂಗಾತಿ ಎಂದು ಆಕೆಯ ತಾಯಿಯೊಂದಿಗೆ ತಿಳಿಸುತ್ತಿದ್ದಾರೆ ಎಂದು ತಮಾಷೆಯಾಗಿ ಬರೆಯುತ್ತಿದ್ದಾರೆ.
ವೈರಲ್ ಮೀಮ್‌ಗಳು ಮತ್ತು ಪೋಸ್ಟ್‌ಗಳ ವೈರಲ್ ಆಗುತ್ತಿರುದರ ನಡುವೆಯೇ ಮನು ತಂದೆ ರಾಮ್ ಕಿಶನ್ ಭಾಕರ್ ಮೌನ ಮುರಿದಿದ್ದಾರೆ. ಮನು ಅವರ ತಂದೆ ರಾಮ್ ಕಿಶನ್ ತಮ್ಮ ಮಗಳ ಮದುವೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮನು ಇನ್ನೂ ತುಂಬಾ ಚಿಕ್ಕವಳು. ಹಾಗಾಗಿ ಅವರಳ ಮದುವೆಯ ಬಗ್ಗೆ ಯೋಚಿಸುತ್ತಿಲ್ಲ ಎಂದು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, 'ಮನು ಇನ್ನೂ ಚಿಕ್ಕವಳಾಗಿದ್ದು ಅವಳಿಗೆ ಇನ್ನೂ ಮದುವೆ ವಯಸ್ಸು ಕೂಡ ಆಗಿಲ್ಲ ಮತ್ತು ಈ ಬಗ್ಗೆ ಇನ್ನೂ ನಾವು ಯಾವುದೇ ರೀತಿಯಲ್ಲಿ ಯೋಚಿಸಿಲ್ಲ. ತಮ್ಮ ಪತ್ನಿ ಮತ್ತು ನೀರಜ್ ಚೋಪ್ರಾರೊಂದಿಗಿನ ಸಂಭಾಷಣೆಯ ವಿಡಿಯೋ ವೈರಲ್ ಕುರಿತು ಪ್ರತಿಕ್ರಿಯಿಸಿದ ರಾಮ್ ಕಿಶನ್, 'ಮನು ಅವರ ತಾಯಿ ನೀರಜ್ ಅವರನ್ನು ತನ್ನ ಮಗನಂತೆ ಕಾಣುತ್ತಾರೆ' ಎನ್ನುವ ಮೂಲಕ ಎಲ್ಲಾ ಅನುಮಾನಗಳಿಗೆ ತೆರೆ ಎಳೆದರು.
ಈ ಬಾರಿಯ ಪ್ಯಾರಿಸ್ ಒಲಿಂಪಿಕ್ ನ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಈವೆಂಟ್ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಟೀಮ್ ಇವೆಂಟ್ ಎರಡರಲ್ಲೂ ಭಾರತದ ಸ್ಟಾರ್ ಶೂಟರ್ ಮನು ಭಾಕರ್ 2 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಏತನ್ಮದ್ಯೆ ಟೋಕಿಯೊ ಒಲಿಂಪಿಕ್ 2020 ರ ಚಾಂಪಿಯನ್ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಈ ಒಲಿಂಪಿಕ್ನಲ್ಲಿ 89.45 ಮೀಟರ್ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ.