Dehli Premier League: ದೆಹಲಿ ಪ್ರೀಮಿಯರ್ ಲೀಗ್ (ಡಿಪಿಎಲ್)ನಲ್ಲಿ ಯುವ ಬ್ಯಾಟರ್ ಹೊಸ ದಾಖಲೆ ಬರೆದಿದ್ದಾರೆ. ಇಂದು ನಡೆಯುತ್ತಿರುವ ಸೌತ್ ದೆಹಲಿ ಮತ್ತು ನಾರ್ತ್ ದೆಹಲಿ ನಡುವಿನ ಟಿ20 ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.
ಸೌತ್ ದೆಹಲಿಯ ಪ್ರಿಯಾಂಶ್, ಯುವರಾಜ್ ಸಿಂಗ್ರಂತೆ ಬಿರುಸಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಪಂದ್ಯದ 12ನೇ ಓವರ್‌ನಲ್ಲಿ ಮನನ್ ಭಾರದ್ವಾಜ್ ಬೌಲಿಂಗ್ ವೇಳೆ ಪ್ರಿಯಾಂಶ್ ಸ್ಫೋಟಕ ಬ್ಯಾಟಿಂಗ್ ಮೂಲಕ ಒಂದೇ ಓವರ್‌ನಲ್ಲಿ 36 ರನ್ ಕಲೆಹಾಕಿದ್ದಾರೆ. ಓವರ್ನ ಮೊದಲ ಎಸೆತವನ್ನು ಲಾಂಗ್ ಆಫ್ ಬೌಂಡರಿಗೆ ಅಟ್ಟುವ ಮೂಲಕ ಸಿಕ್ಸ್ ಸಿಡಿಸಿದರು. ಎರಡನೇ ಎಸೆತದಲ್ಲಿ ಅವರು ಡೀಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಭಾರಿಸಿದರೇ, ಮೂರನೇ ಎಸೆತದಲ್ಲಿ ಲಾಂಗ್ ಆನ್ ಕಡೆಗೆ ಮತ್ತು ನಂತರ ಉಳಿದ ಮೂರು ಎಸೆತಗಳಲ್ಲೂ ಇದೇ ರೀತಿ ಸಿಕ್ಸರ್ ಸಿಡಿಸಿದರು.
6️⃣ 𝐒𝐈𝐗𝐄𝐒 𝐢𝐧 𝐚𝐧 𝐨𝐯𝐞𝐫 🤩
— Delhi Premier League T20 (@DelhiPLT20) August 31, 2024
There’s nothing Priyansh Arya can’t do 🔥#AdaniDPLT20 #AdaniDelhiPremierLeagueT20 #DilliKiDahaad | @JioCinema @Sports18 pic.twitter.com/lr7YloC58D
ಈ ಮೂಲಕ ಪ್ರಿಯಾಂಶ್ ಆರ್ಯ ಡಿಪಿಎಲ್‌ನಲ್ಲಿ ಇತಿಹಾಸವನ್ನು ಸೃಷ್ಟಿಸಿದರು. ರವಿಶಾಸ್ತ್ರಿ ಮತ್ತು ಯುವರಾಜ್ ಸಿಂಗ್ ನಂತರ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಭಾರಿಸಿದ ಮೂರನೇ ಭಾರತೀಯ, ದೇಶಿಯ ಲೀಗ್ನ ಮೊದಲ ಆಟಗಾರ ಎನಿಸಿಕೊಂಡರು. ಒಟ್ಟಾರೆ ದೇಶಿಯ ಲೀಗ್ನಲ್ಲಿ 4ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು ರಾಸ್ ವೈಟ್ಲಿ (2017), ಹಜರತುಲ್ಲಾ ಝಜೈ (2018) ಮತ್ತು ಲಿಯೊ ಕಾರ್ಟರ್ (2020) ದೇಶಿಯ ಟಿ20 ಪಂದ್ಯಗಳಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದ್ದರು.
ಇದೇ ಬಿರುಸಿನ ಶೈಲಿಯಲ್ಲಿ ಬ್ಯಾಟಿಂಗ್ ಮುಂದುವರೆಸಿದ ಪ್ರಿಯಾಂಶ್ ಶತಕವನ್ನೂ ಪೂರೈಸಿದರು. ಅವರು 39 ಎಸೆತಗಳಲ್ಲಿ 10 ಬೌಂಡರಿ ಮತ್ತು 10 ಸಿಕ್ಸರ್ ಸಹಾಯದಿಂದ 120 ರನ್ಗಳನ್ನು ಸಿಡಿಸಿದರು. ಮತ್ತೊಂದು ತುದಿಯಲ್ಲಿ ನಾಯಕ ಆಯುಷ್ ಬಡೋನಿ ಕೂಡ ಬಿರುಸಿನ ಶತಕವನ್ನು ಪೂರೈಸಿದರು. 55 ಎಸೆತಗಳಲ್ಲಿ 8 ಬೌಂಡರಿ, 10 ಸಿಕ್ಸರ್ ಸಮೇತ 165 ರನ್ ಚಚ್ಚಿದರು.
ಈ ಇಬ್ಬರ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ದೆಹಲಿ ಸೂಪರ್ ಸ್ಟಾರ್ಜ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 308 ರನ್ ಕಲೆಹಾಕಿತು. ಇದೂ ದೇಶಿಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಸ್ಕೋರ್ ಗಳಿಸಿದ ಮೊದಲ ತಂಡ ಎಂಬ ದಾಖಲೆ ಬರೆಯಿತು. ಒಟ್ಟಾರೆ ಟಿ20 ಯಲ್ಲಿ ಎರಡನೇ ತಂಡವಾಗಿದೆ. ಮೊದಲ ಸ್ಥಾನದಲ್ಲಿ ನೇಪಾಳ ಇದ್ದು ಇದು 20 ಓವರ್ಗಳಲ್ಲಿ 314 ರನ್ಗಳಿಸಿದ್ದು ಈವರೆಗಿನ ಹೈಸ್ಕೋರ್ ಆಗಿದೆ.
ಪ್ರಿಯಾಂಶ್-ಬಡೋನಿ ಜೊತೆಯಾಟ: ಈ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಮತ್ತು ಬಡೋನಿ ಜೋಡಿಯೂ 103 ಎಸೆತಗಳಲ್ಲಿ 286 ರನ್ ಚಚ್ಚಿದರು. ಇದೂ ಟಿ20 ಇತಿಹಾಸದಲ್ಲೇ ಅತೀ ಹೆಚ್ಚು ರನ್ಗಳಿಸಿದ ಜೋಡಿ ಎಂಬ ದಾಖಲೆ ಬರೆದರು.