ಹೈದರಾಬಾದ್: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಪ್ರಭುತ್ವ ಸಾಧಿಸಿ ಗೆಲುವಿನ ಉತ್ಸಾಹದಲ್ಲಿದ್ದ ಭಾರತ, 2ನೇ ಇನಿಂಗ್ಸ್ನಲ್ಲಿ ಬ್ಯಾಟರ್ಗಳ ವೈಫಲ್ಯದಿಂದ ದಿಢೀರ್ ಕುಸಿತಕ್ಕೀಡಾಗಿ 28 ರನ್‌ಗಳ ಸೋಲು ಕಂಡಿತು. ಇದರಿಂದ ಐದು ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿತು.
ಹೈದರಾಬಾದ್‌ನ ಉಪ್ಪಳದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 231 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 202 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಇನ್ನೂ ಒಂದು ದಿನದ ಆಟ ಬಾಕಿ ಇರುವಂತೆಯೇ ಜಯದ ಕೇಕೆ ಹಾಕಿತು. ಈ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡ ಮೊದಲ ಬಾರಿಗೆ ಸೋಲು ಅನುಭವಿಸಿತು.
ದಿಕ್ಕುತಪ್ಪಿದ ಭಾರತೀಯ ಬ್ಯಾಟರ್ಗಳು: ಸುಲಭ ಗೆಲುವಿನ ಹುಮ್ಮಸ್ಸಿನಲ್ಲಿದ್ದ ಭಾರತಕ್ಕೆ ಆಂಗ್ಲ ಪಡೆಯ ಟಾಮ್ ಹಾರ್ಟ್ಲಿ ಮರ್ಮಾಘಾತ ನೀಡಿದರು. ರೋಹಿತ್ (39), ಅಶ್ವಿನ್ (28), ಶ್ರೀಕರ್ ಭರತ್ (28) ಮತ್ತು ಕೆಎಲ್ ರಾಹುಲ್ (22) ರನ್ ಗಳಿಸಲು ಬಿಟ್ಟರೆ, ಇತರ ಆಟಗಾರರು ವಿಫಲರಾದರು. ಹಾರ್ಟ್ಲಿ 7, ಜೋ ರೂಟ್ ಮತ್ತು ಜಾಕ್ ಲೀಚ್ ತಲಾ 1 ವಿಕೆಟ್ ಪಡೆದರು.
ಪಂದ್ಯ ಹೀಗಿತ್ತು: 231 ರನ್‌ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಭಾರತ ತಂಡಕ್ಕೆ ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಓಪನಿಂಗ್ ನೀಡಿದರು. ಜೈಸ್ವಾಲ್ 15 ರನ್ ಗಳಿಸಿ ಔಟಾದರೆ, ರೋಹಿತ್ ಶರ್ಮಾ 39 ರನ್ ಗಳಿಸಿ ಟಾಮ್ ಹಾರ್ಟ್ಲಿ ಬೌಲಿಂಗ್‌ನಲ್ಲಿ ಎಲ್ಬಿ ಆಗಿ ವಿಕೆಟ್ ನೀಡಿದರು. ಶುಭಮನ್ ಗಿಲ್ ಸೊನ್ನೆಗೆ ವಾಪಸಾಗಿ ನಿರಾಸೆ ಮೂಡಿಸಿದರು. ಅಕ್ಷರ್ ಪಟೇಲ್ 17, ಕೆಎಲ್ ರಾಹುಲ್ 22 ರನ್ಗೆ ಸುಸ್ತಾದರು. ಇದರಿಂದ ಭಾರತ 32.4 ಓವರ್ಗಳಲ್ಲಿ 107 ರನ್ ಗಳಿಸಿ ಐದನೇ ವಿಕೆಟ್ ಕಳೆದುಕೊಂಡಿತು.
-
It came right down to the wire in Hyderabad but it's England who win the closely-fought contest.#TeamIndia will aim to bounce back in the next game.
— BCCI (@BCCI) January 28, 2024 " class="align-text-top noRightClick twitterSection" data="
Scorecard ▶️ https://t.co/HGTxXf8b1E#INDvENG | @IDFCFIRSTBank pic.twitter.com/OcmEgKCjUT
">It came right down to the wire in Hyderabad but it's England who win the closely-fought contest.#TeamIndia will aim to bounce back in the next game.
— BCCI (@BCCI) January 28, 2024
Scorecard ▶️ https://t.co/HGTxXf8b1E#INDvENG | @IDFCFIRSTBank pic.twitter.com/OcmEgKCjUTIt came right down to the wire in Hyderabad but it's England who win the closely-fought contest.#TeamIndia will aim to bounce back in the next game.
— BCCI (@BCCI) January 28, 2024
Scorecard ▶️ https://t.co/HGTxXf8b1E#INDvENG | @IDFCFIRSTBank pic.twitter.com/OcmEgKCjUT
ಬಳಿಕ ಬ್ಯಾಟಿಂಗ್ಗೆ ಬಂದ ರವೀಂದ್ರ ಜಡೇಜಾ 119 ರನ್ ಗಳಿಸಿ ರನೌಟ್ ಆದರು. ಕೊನೆಯಲ್ಲಿ ಅಶ್ವಿನ್ (28) ಮತ್ತು ಭರತ್ (28) ತಂಡವನ್ನು ಗೆಲುವಿಗೆ ಯತ್ನಿಸಿದರಾದರೂ ವ್ಯರ್ಥವಾಯಿತು. ಇವರಿಬ್ಬರೂ ಎಂಟನೇ ವಿಕೆಟ್‌ಗೆ 57 ರನ್ ಸೇರಿಸಿ ಸೋಲಿನ ಅವಧಿಯನ್ನು ವಿಸ್ತರಿಸಿದರು. ಇವರಿಬ್ಬರು ಬ್ಯಾಕ್ ಟು ಬ್ಯಾಕ್ ಔಟಾಗುವ ಮೂಲಕ ಭಾರತದ ಗೆಲುವಿನ ನಿರೀಕ್ಷೆ ಹುಸಿಯಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಬೆನ್ ಸ್ಟೋಕ್ಸ್ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ 246, 2ನೇ ಇನ್ನಿಂಗ್ಸ್‌ನಲ್ಲಿ 420 ರನ್ ಗಳಿಸಿತ್ತು. ಭಾರತ ಪ್ರಥಮ ಇನಿಂಗ್ಸ್ನಲ್ಲಿ 436, 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯದಿಂದ 202 ರನ್ ಮಾತ್ರ ಗಳಿಸಿತು.
ಇದನ್ನೂ ಓದಿ: ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಗೆದ್ದು ಇತಿಹಾಸ ಸೃಷ್ಟಿಸಿದ ಕನ್ನಡಿಗ ರೋಹನ್ ಬೋಪಣ್ಣ.. ಮೋದಿ - ಸಿದ್ದರಾಮಯ್ಯ ಅಭಿನಂದನೆ