ಮೇಷ: ಈ ವಾರದಲ್ಲಿ ಮೇಷ ರಾಶಿಯಲ್ಲಿ ಹುಟ್ಟಿದವರಿಗೆ ಉತ್ತಮ ಅವಕಾಶಗಳು ಲಭಿಸಲಿವೆ. ವಾರದ ಆರಂಭದಲ್ಲಿ ನೀವು ಎಲ್ಲಿಂದಾದರೂ ದೊಡ್ಡ ಮಟ್ಟದ ಹಣವನ್ನು ಪಡೆಯಬಹುದು. ವೃತ್ತಿ ಮತ್ತು ವ್ಯವಹಾರದ ಕ್ಷೇತ್ರದಲ್ಲಿ ಮಾಡಿದ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿದೆ. ಧಾರ್ಮಿಕ ಕ್ಷೇತ್ರದಲ್ಲಿ ಮಹಿಳೆಯರ ಆಸಕ್ತಿ ಬೆಳೆಯಲಿದೆ. ವ್ಯವಹಾರದಲ್ಲಿ ನಿರೀಕ್ಷಿತ ಯಶಸ್ಸು ದೊರೆಯಲಿದೆ. ಆದರೆ ವ್ಯವಹಾರವನ್ನು ನಡೆಸುವಾಗ ಎಚ್ಚರಿಕೆ ವಹಿಸಿ. ಅಲ್ಲದೆ ಯಾರನ್ನೂ ಅಷ್ಟು ಸುಲಭವಾಗಿ ನಂಬಬೇಡಿ. ವಾರದ ಕೊನೆಗೆ ಯಾವುದಾದರೂ ಮಂಗಳಕರ ಅಥವಾ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ನಿಮಗೆ ಅವಕಾಶ ಲಭಿಸಲಿದೆ. ಪ್ರೇಮ ಸಂಬಂಧದ ವಿಚಾರದಲ್ಲಿ ಈ ವಾರವು ಅದೃಷ್ಟಶಾಲಿ ಎನಿಸಲಿದೆ. ನಿಮ್ಮ ಪ್ರೇಮಿಯ ಜೊತೆಗಿನ ಪ್ರೇಮ ಮತ್ತು ಸಾಮರಸ್ಯವು ಬೆಳೆಯಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ಆರೋಗ್ಯದ ವಿಚಾರದಲ್ಲಿ ಈ ವಾರವು ಸಾಮಾನ್ಯ ವಾರವೆನಿಸಲಿದೆ. ಮಕ್ಕಳಿಗೆ ಸಂಬಂಧಿಸಿದ ಗಂಭೀರ ಚಿಂತೆಯನ್ನು ದೂರ ಮಾಡಿದರೆ ಮನಸ್ಸಿನಲ್ಲಿ ಶಾಂತಿ ನೆಲೆಸಲಿದೆ.
ವೃಷಭ: ವೃಷಭ ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ಯಾವುದೇ ಹೆಜ್ಜೆ ಇಡುವ ಮೊದಲು ಸಾಕಷ್ಟು ಪರ್ಯಾಲೋಚನೆ ನಡೆಸಬೇಕು. ಇಲ್ಲದಿದ್ದರೆ ಅವರು ಅನಿರೀಕ್ಷಿತ ಸಮಸ್ಯೆಗಳಿಗೆ ಎದುರಾಗಬಹುದು. ಅಂತಹ ಸಂದರ್ಭದಲ್ಲಿ ನಿಮ್ಮ ಕೆಲಸವನ್ನು ಸಕಾಲದಲ್ಲಿ ಮುಗಿಸಲು ಹೆಚ್ಚುವರಿ ಶ್ರಮ ಮತ್ತು ಪ್ರಯತ್ನವನ್ನು ಪಡಬೇಕು. ವಾರದ ಆರಂಭದಲ್ಲಿ ಹೆಚ್ಚುವರಿ ಕೆಲಸ ಇರಬಹುದು. ವಿಪರೀತ ಚಟುವಟಿಕೆಯ ನಡುವೆಯೂ ಆಪ್ತ ಮಿತ್ರರಿಂದಲೂ ಸಹಾಯ ದೊರೆಯುವುದು ಕಷ್ಟಕರ. ವಾರದ ಆರಂಭಿಕ ದಿನಗಳು ವ್ಯಾಪಾರೋದ್ಯಮಿಗಳಿಗೆ ಅಷ್ಟೊಂದು ಅನುಕೂಲಕರವಾಗಿಲ್ಲ. ಆದರೆ ವಾರದ ಕೊನೆಯಲ್ಲಿ ದೊರೆಯುವ ಅನಿರೀಕ್ಷಿತ ಲಾಭವು ಸಂಭ್ರಮಾಚರಣೆಗೆ ಕಾರಣವೆನಿಸಬಹುದು. ಆಸ್ತಿ ಮತ್ತು ಕಟ್ಟಡಕ್ಕೆ ಸಂಬಂಧಿಸಿದ ವಿವಾದವು ಸಾಕಷ್ಟು ಚಿಂತೆಗೆ ಕಾರಣವೆನಿಸಬಹುದು. ಪ್ರೇಮ ಜೀವನದಲ್ಲಿ ಎದುರಾಗುವ ತಪ್ಪು ಗ್ರಹಿಕೆಗಳ ವಿಚಾರದಲ್ಲಿ ವಾದ ಮಾಡುವ ಬದಲಿಗೆ ಸೂಕ್ತ ಸಂವಹನದ ಮೂಲಕ ಬಗೆಹರಿಸಲು ಯತ್ನಿಸಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸಬೇಕಾದರೆ ಕಠಿಣ ಶ್ರಮ ಪಡಬೇಕು.
ಮಿಥುನ: ಮಿಥುನ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಮಿಶ್ರಫಲ ದೊರೆಯಲಿದೆ. ಆರಂಭದಲ್ಲಿ ಕೆಲಸದಲ್ಲಿ ಸವಾಲುಗಳು ಎದುರಾಗಬಹುದು. ಆದರೆ, ವಾರದ ದ್ವಿತೀಯಾರ್ಧದಲ್ಲಿ ಎಲ್ಲವೂ ಸುಗಮವಾಗಿ ನಡೆಯಲಿದೆ. ವಾರದ ಆರಂಭದಲ್ಲಿ ವೃತ್ತಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ದೂರದ ಅಥವಾ ಹತ್ತಿರ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಉಂಟಾಗಬಹುದು. ಈ ಅವಧಿಯಲ್ಲಿ ಋತುಮಾನಕ್ಕೆ ಸಂಬಂಧಿಸಿದ ರೋಗಗಳ ಕುರಿತು ಎಚ್ಚರಿಕೆ ವಹಿಸಿ. ನಿಮ್ಮ ದಿನಚರಿ ಮತ್ತು ಆಹಾರ ಕ್ರಮದ ಕುರಿತು ಎಚ್ಚರಿಕೆ ವಹಿಸಿ. ಈ ಹಂತದಲ್ಲಿ ವಿದ್ಯಾರ್ಥಿಗಳ ಗಮನವು ಶಿಕ್ಷಣದಿಂದ ಬೇರೆಡೆಗೆ ವರ್ಗಾವಣೆಯಾಗಬಹುದು. ದೂರದ ಸ್ಥಳದಲ್ಲಿ ಕೆಲಸ ಮಾಡುವವರು, ಹಾಗೂ ಕಮಿಷನ್ ಗಾಗಿ ಕೆಲಸ ಮಾಡುವವರು ಅಥವಾ ನಿರ್ದಿಷ್ಟ ಉದ್ದೇಶವನ್ನಿಟ್ಟುಕೊಂಡು ಕೆಲಸ ಮಾಡುವವರು ಮಾನಸಿಕ ಒತ್ತಡ ಮತ್ತು ತಳಮಳ ಅನುಭವಿಸಬಹುದು. ಪ್ರೇಮ ಸಂಬಂಧದಲ್ಲಿ ಭಾವ ತೀವ್ರತೆ ಕಾಣಿಸಿಕೊಳ್ಳಬಹುದು. ವಾರದ ಕೊನೆಗೆ ನಿಮ್ಮ ಪ್ರೇಮಿಯು ಉಡುಗೊರೆ ನೀಡುವ ಮೂಲಕ ನಿಮ್ಮನ್ನು ಅಚ್ಚರಿಗೊಳಿಸಲಿದ್ದಾರೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ವಾರದ ಪೂರ್ವಾರ್ಧಕ್ಕೆ ಹೋಲಿಸಿದರೆ ಉತ್ತರಾರ್ಧದಲ್ಲಿ ಸಂತಸ ಮತ್ತು ಯಶಸ್ಸು ದೊರೆಯಲಿದೆ. ಈ ಕ್ಷಣದಲ್ಲಿ, ಪ್ರಭಾವಿ ವ್ಯಕ್ತಿಯ ಸಹಾಯದಿಂದ ಪ್ರಮುಖ ಸಮಸ್ಯೆಯೊಂದು ಬಗೆಹರಿಯುವ ಕಾರಣ ಮನಸ್ಸಿಗೆ ಶಾಂತಿ ಲಭಿಸಲಿದೆ.
ಕರ್ಕಾಟಕ: ಈ ವಾರದಲ್ಲಿ ಕರ್ಕಾಟಕ ರಾಶಿಯಲ್ಲಿ ಹುಟ್ಟಿದವರಿಗೆ ಮಿಶ್ರ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ಕೆಲಸದ ಸ್ಥಳದಲ್ಲಿ ಅಡ್ಡಿ ಆತಂಕಗಳು ಎದುರಾಗುವ ಕಾರಣ ನಿಮ್ಮ ಮನಸ್ಸಿಗೆ ಮಂಕು ಕವಿಯಬಹುದು. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಏಕೆಂದರೆ ದೇಹಕ್ಕೆ ನೋವು ಅಥವಾ ಗಾಯ ಉಂಟಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಉದ್ಯೋಗದಲ್ಲಿರುವವರ ಆದಾಯದ ಮೂಲಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ. ವ್ಯವಹಾರದಲ್ಲಿರುವವರು ತಮ್ಮ ಸ್ಪರ್ಧಿಗಳಿಂದ ಕಠಿಣ ಸ್ಪರ್ಧೆ ಎದುರಿಸುವ ಸಾಧ್ಯತೆ ಇದೆ. ವಾರದ ಮಧ್ಯದಲ್ಲಿ, ಸಾಕಷ್ಟು ಕೆಲಸ ಇರಬಹುದು. ಉದ್ಯೋಗದಲ್ಲಿರುವ ಮಹಿಳೆಯರು ತಮ್ಮ ವೃತ್ತಿ ಮತ್ತು ಕೌಟುಂಬಿಕ ಬದುಕನ್ನು ನಿಭಾಯಿಸುವಲ್ಲಿ ಸಮಸ್ಯೆ ಎದುರಿಸಲಿದ್ದಾರೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಬೇಕಾದರೆ ನಿಮ್ಮ ಜೀವನ ಸಂಗಾತಿಗಾಗಿ ಸಮಯವನ್ನು ಮೀಸಲಿಡಿ. ಪ್ರಣಯ ಸಂಬಂಧದ ವಿಚಾರದಲ್ಲಿ ಈ ವಾರವು ಅಷ್ಟೊಂದು ಅನುಕೂಲಕರವಾಗಿಲ್ಲ. ಈ ವಾರದಲ್ಲಿ ನಿಮ್ಮ ಪ್ರೇಮ ಸಂಬಂಧದ ಕುರಿತು ಕೊಚ್ಚಿಕೊಳ್ಳಬೇಡಿ ಅಥವಾ ಬಹಿರಂಗವಾಗಿ ಪ್ರದರ್ಶಿಸಬೇಡಿ. ಯಾವುದೇ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಿ. ಇಲ್ಲದಿದ್ದರೆ ನೀವು ಸಮಸ್ಯೆಯನ್ನು ಎದುರಿಸಬಹುದು.
ಸಿಂಹ: ಸಿಂಹ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಅದೃಷ್ಟದ ಬಲ ದೊರೆಯಲಿದೆ. ವಾರದ ಆರಂಭದಲ್ಲಿ, ಉದ್ಯೋಗದಲ್ಲಿ ತೊಡಗಿಸಿಕೊಂಡಿರುವವರಿಗೆ ಸಾಕಷ್ಟು ಅದೃಷ್ಟವು ದೊರೆಯಲಿದೆ. ನೀವು ದೀರ್ಘ ಕಾಲದಿಂದ ಭೂಮಿ ಅಥವಾ ಆಸ್ತಿಯನ್ನು ಮಾರಲು ಇಚ್ಛಿಸುತ್ತಿದ್ದರೆ, ಈ ವಾರದಲ್ಲಿ ನಿಮ್ಮ ಕನಸು ನನಸಾಗಲಿದೆ. ಈ ಅವಧಿಯಲ್ಲಿ ಭಡ್ತಿ ಅಥವಾ ಆರ್ಥಿಕ ಲಾಭಕ್ಕಾಗಿ ಅವಕಾಶ ದೊರೆಯಬಹುದು. ಉನ್ನತಾಧಿಕಾರಿಗಳ ಜೊತೆಗಿನ ಸಂಪರ್ಕವು ಹೆಚ್ಚಲಿದೆ. ಆದಾಯದ ಹೊಸ ಮೂಲವು ಸೃಷ್ಟಿಯಾಗಲಿದೆ. ಅಲ್ಲದೆ ಸಂಪತ್ತಿನಲ್ಲಿ ವೃದ್ಧಿಯಾಗಲಿದೆ. ರಾಜಕಾರಣಿಗಳಿಗೆ ಉನ್ನತ ಸ್ಥಾನ ಲಭಿಸುವ ಸಾಧ್ಯತೆ ಇದೆ. ವಾರದ ಉತ್ತರಾರ್ಧದಲ್ಲಿ ನೀವು ಪ್ರಭಾವಿ ವ್ಯಕ್ತಿಯೊಬ್ಬರನ್ನು ಭೇಟಿಯಾಗಲಿದ್ದು, ಆರ್ಥಿಕ ಯಶಸ್ಸು ಮತ್ತು ಪ್ರಗತಿ ಗಳಿಸಲು ಅವರಿಂದ ನಿಮಗೆ ನೆರವು ದೊರೆಯಲಿದೆ. ಆರೋಗ್ಯವು ಎಂದಿನಂತೆ ಇರಲಿದೆ. ನಿಮ್ಮ ಮನೆಯಲ್ಲಿ ಹಿರಿಯ ವ್ಯಕ್ತಿಯೊಬ್ಬರ ಆರೋಗ್ಯದ ಕುರಿತ ಚಿಂತೆ ನಿಮ್ಮನ್ನು ಕಾಡಬಹುದು. ಪ್ರೇಮ ಸಂಬಂಧದಲ್ಲಿ ಭಾವ ತೀವ್ರತೆ ಕಾಣಿಸಿಕೊಳ್ಳಬಹುದು. ಪ್ರೇಮ ಸಂಬಂಧದಿಂದ ವೈವಾಹಿಕ ಜೀವನಕ್ಕೆ ಕಾಲಿಡುವ ಸಾಧ್ಯತೆ ಇದೆ.
ಕನ್ಯಾ: ಈ ವಾರದಲ್ಲಿ, ಕನ್ಯಾ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳು ತಮ್ಮ ಸಹೋದ್ಯೋಗಿಗಳ ಕುರಿತು ಸಾಕಷ್ಟು ಎಚ್ಚರಿಕೆ ವಹಿಸಬೇಖು. ವೃತ್ತಿ ಅಥವಾ ವಾಣಿಜ್ಯ ಕಾರ್ಯಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರವನ್ನು ಅವಸರದಿಂದ ತೆಗೆದುಕೊಳ್ಳಬೇಡಿ. ನಿಮ್ಮಲ್ಲಿ ಖಚಿತತೆ ಇಲ್ಲದೆ ಹೋದಲ್ಲಿ ಗೆಳೆಯರು ಅಥವಾ ಕುಟುಂಬದ ಸದಸ್ಯರ ಸಲಹೆಯನ್ನು ಪಡೆಯಿರಿ ಅಥವಾ ಅಂತಹ ನಿರ್ಧಾರವನ್ನು ಮುಂದೂಡಿ. ಆದಾಯದಲ್ಲಿ ಕುಂಠಿತ ಉಂಟಾಗಬಹುದು. ವಾರದ ದ್ವಿತೀಯಾರ್ಧದಲ್ಲಿ ಖರ್ಚುವೆಚ್ಚದಲ್ಲಿ ಹೆಚ್ಚಳ ಉಂಟಾಗಬಹುದು. ಇದರ ಪರಿಣಾಮವಾಗಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಹಿನ್ನಡೆ ಉಂಟಾಗಬಹುದು. ಈ ವಾರದಲ್ಲಿ ಕನ್ಯಾ ರಾಶಿಯವರ ಆರೋಗ್ಯದಲ್ಲಿ ಕುಸಿತ ಉಂಟಾಗಲಿದೆ. ಋತುಮಾನಕ್ಕೆ ಸಂಬಂಧಿಸಿದ ಬದಲಾವಣೆಗಳು ಅಥವಾ ದೀರ್ಘಕಾಲೀನ ಸಮಸ್ಯೆಯು ಉಂಟಾಗುವ ಕಾರಣ ಅನನುಕೂಲತೆ ಉಂಟಾಗಬಹುದು. ಈ ಹಂತದಲ್ಲಿ ವಿದ್ಯಾರ್ಥಿಗಳ ಗಮನವು ಶಿಕ್ಷಣದಿಂದ ಬೇರೆಡೆಗೆ ವರ್ಗಾವಣೆಯಾಗಬಹುದು. ವ್ಯಾಪಾರೋದ್ಯಮಿಗಳು ಯಾವುದೇ ಹೊಸ ಯೋಜನೆಯಲ್ಲಿ ಹೂಡಿಕೆ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಕಷ್ಟಕರ ಸಂದರ್ಭದಲ್ಲಿ ನಿಮ್ಮ ನೆಚ್ಚಿನ ಸಂಗಾತಿಯು ನಿಮ್ಮ ಜೊತೆಗೆ ಇರಲಿದ್ದಾರೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ.
ತುಲಾ: ಈ ವಾರವು ತುಲಾ ರಾಶಿಯವರಿಗೆ ಸಂತಸ ಮತ್ತು ಯಶಸ್ಸನ್ನು ಕರುಣಿಸಲಿದೆ. ವಾರದ ಆರಂಭದಲ್ಲಿ ಐಷಾರಾಮಿ ವಸ್ತುಗಳನ್ನು ಖರೀದಿಸುವುದರಿಂದ ಮನೆಯಲ್ಲಿ ಸಂತಸದ ವಾತಾವರಣ ನೆಲೆಸಲಿದೆ. ದೀರ್ಘ ಕಾಲದಿಂದ ನೀವು ಭಡ್ತಿಗಾಗಿ ಎದುರು ನೋಡುತ್ತಿದ್ದರೆ ನಿಮ್ಮ ಇಚ್ಛೆಯು ಈ ವಾರದಲ್ಲಿ ಈಡೇರಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾದಂತೆ ವೆಚ್ಚದಲ್ಲಿಯೂ ಹೆಚ್ಚಳ ಉಂಟಾದರೂ, ಸಂಸ್ಥೆಯಿಂದ ಉಂಟಾಗುವ ಅನಿರೀಕ್ಷಿತ ಲಾಭವು ನಿಮ್ಮ ಸಂತಸವನ್ನು ವೃದ್ಧಿಸಲಿದೆ. ನಿಮ್ಮ ಹಿತೈಷಿಗಳ ಸಹಾಯದಿಂದ ವಾರದ ಕೊನೆಗೆ ಅನೇಕ ಪ್ರಮುಖ ಕೆಲಸಗಳನ್ನು ಮುಗಿಸುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ನಿಮ್ಮ ಪ್ರೇಮಿಯ ಜೊತೆಗಿನ ಪ್ರೇಮ ಮತ್ತು ಸಾಮರಸ್ಯವು ಬೆಳೆಯಲಿದೆ. ಕುಟುಂಬದ ಸದಸ್ಯರು ನಿಮ್ಮ ಪ್ರೇಮ ವಿವಾಹಕ್ಕೆ ಹಸಿರು ನಿಶಾನೆಯನ್ನು ತೋರಿಸಲಿದ್ದಾರೆ. ವೈವಾಹಿಕ ಬದುಕು ಸಂತಸದಿಂದ ಕೂಡಿರಲಿದ್ದು, ನಿಮ್ಮ ಜೀವನ ಸಂಗಾತಿಯ ಜೊತೆಗೆ ಗುಣಮಟ್ಟದ ಸಮಯವನ್ನು ಕಳೆಯಲು ನಿಮಗೆ ಅವಕಾಶ ದೊರೆಯಲಿದೆ. ಈ ಅವಧಿಯಲ್ಲಿ ನಿಮ್ಮ ಸಂಗಾತಿಯು ಮಾಡುವ ಪ್ರತಿ ಸಾಧನೆಯು ಸಹ ನಿಮ್ಮ ಮತ್ತು ನಿಮ್ಮ ಕುಟುಂಬದ ಸಂತಸಕ್ಕೆ ಕಾರಣವೆನಿಸಲಿದೆ.
ವೃಶ್ಚಿಕ: ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿದಂತೆ ಸಂಬಂಧಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು. ಸಂಭಾಷಣೆ ನಡೆಸುವಾಗ ಕೆಟ್ಟ ಭಾಷೆಯನ್ನು ಬಳಸಬೇಡಿ ಹಾಗೂ ಅನುಚಿತವಾಗಿ ವರ್ತಿಸಬೇಡಿ. ಇಲ್ಲದಿದ್ದರೆ ನೀವು ಮತ್ತೆ ಪರಿತಪಿಸಬೇಕಾದೀತು. ವಾರದ ಪ್ರಥಮಾರ್ಧಕ್ಕೆ ಹೋಲಿಸಿದರೆ, ದ್ವಿತೀಯಾರ್ಧವು ಒಂದಷ್ಟು ನಿರಾಳತೆಯನ್ನು ಒದಗಿಸಬಹುದು. ಗೆಳೆಯರ ಸಹಾಯದಿಂದ ಹೊಸ ಯೋಜನೆಯನ್ನು ಪ್ರಾರಂಭಿಸಬಹುದು. ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ತೊಡಗಿರುವವರ ವೃತ್ತಿಗೆ ಎದುರಾಗುವ ಅಡ್ಡಿ ಆತಂಕಗಳು ನಿವಾರಣೆಯಾಗಲಿವೆ. ಪ್ರೇಮ ಸಂಬಂಧದಲ್ಲಿ ಕೇವಲ ಭಾವನೆಗಳ ಮೇಲೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ವೈವಾಹಿಕ ಜೀವನದಲ್ಲಿ ಸಂತಸ ನೆಲೆಸಬೇಕಾದರೆ ನಿಮ್ಮ ಜೀವನ ಸಂಗಾತಿಯ ಭಾವನೆಗಳನ್ನು ನಿರ್ಲಕ್ಷಿಸಬೇಡಿ. ವಾರದ ಆರಂಭದಲ್ಲಿ ನಿಮ್ಮ ಆರೋಗ್ಯಕ್ಕೆ ಒತ್ತು ನೀಡಿರಿ. ಈ ಅವಧಿಯಲ್ಲಿ ನೀವು ಋತುಮಾನಕ್ಕೆ ಸಂಬಂಧಿಸಿದ ಸೋಂಕಿಗೆ ತುತ್ತಾಗುವ ಅಪಾಯವಿದೆ. ಅನಗತ್ಯ ಓಡಾಟ ಮತ್ತು ವಿಪರೀತ ಖರ್ಚಿನ ಕಾರಣ ನೀವು ಸ್ವಲ್ಪ ಖಿನ್ನತೆಗೆ ಒಳಗಾಗಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಎದುರಾಳಿಗಳು ನಿಮ್ಮ ಪ್ರಗತಿಗೆ ಅಡ್ಡಗಾಲು ಹಾಕಲು ಯತ್ನಿಸಬಹುದು.
ಧನು: ಧನು ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಮಿಶ್ರಫಲ ದೊರೆಯಲಿದೆ. ನಿಮ್ಮ ಗುರಿಯನ್ನು ಈಡೇರಿಸಬೇಕಾದರೆ ನೀವು ಇನ್ನಷ್ಟು ಕಠಿಣ ಶ್ರಮವನ್ನು ಪಡಬೇಕು. ಎಲ್ಲಾ ಅಡ್ಡಿ ಆತಂಕಗಳ ನಡುವೆಯೂ ಹಣ ಗಳಿಸುವ ಹೊಸ ವಿಧಾನಗಳು ಹೊರಹೊಮ್ಮಲಿವೆ. ಅಧಿಕಾರ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಯೋಜನೆಗಳಿಗೆ ವೇಗ ದೊರೆಯಲಿದೆ. ಈ ಅವಧಿಯಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆಯು ಹೆಚ್ಚಲಿದೆ. ಆದರೆ ಈ ಪಾಲ್ಗೊಳ್ಳುವಿಕೆಗಳು ಯಾವುದೇ ರೀತಿಯಲ್ಲಿ ವಿವಾದಕ್ಕೆ ಎಡೆ ಮಾಡಿಕೊಡದಂತೆ ನೋಡಿಕೊಳ್ಳಿ. ವಾರದ ನಡುವೆ ಯಾವುದಾದರೂ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ವಾರದ ಪೂರ್ವಾರ್ಧದಲ್ಲಿ, ಗೆಳೆಯರೊಬ್ಬರ ನೆರವಿನೊಂದಿಗೆ ಯಾವುದಾದರೂ ಲಾಭದಾಯಕ ಯೋಜನೆಯಲ್ಲಿ ಪಾಲ್ಗೊಳ್ಳುವ ಅವಕಾಶ ನಿಮಗೆ ಲಭಿಸಲಿದೆ. ಸಿಹಿಕಹಿಯಾದ ಭಿನ್ನಾಭಿಪ್ರಾಯದ ನಡುವೆಯೂ ನಿಮ್ಮ ಪ್ರೇಮ ಸಂಬಂಧದಲ್ಲಿ ಸುಧಾರಣೆ ಉಂಟಾಗಲಿದೆ. ಅಲ್ಲದೆ ಈ ಸಂಬಂಧವು ಕಷ್ಟದ ಸಂದರ್ಭದಲ್ಲಿ ನಿಮ್ಮ ಬಲವಾಗಿ ಹೊರಹೊಮ್ಮಲಿದೆ.
ಮಕರ: ಮಕರ ರಾಶಿಯವರಿಗೆ ಈ ವಾರದ ಆರಂಭದಲ್ಲಿ ಹಣಕಾಸಿನ ಗಳಿಕೆ ಮತ್ತು ಪ್ರಗತಿಗೆ ಸಾಕಷ್ಟು ಅವಕಾಶಗಳು ಲಭಿಸಲಿವೆ. ಉದ್ಯೋಗದಲ್ಲಿರುವವರಿಗೆ ಕೆಲಸದ ಸ್ಥಳದಲ್ಲಿ ಹಿರಿಯರು ಮತ್ತು ಕಿರಿಯರಿಂದ ಸಾಕಷ್ಟು ನೆರವು ದೊರೆಯುವುದಿಲ್ಲ. ವಾರದ ನಡುವೆ, ಗೆಳತಿಯೊಬ್ಬರ ನೆರವಿನಿಂದ ಯಾವುದಾದರೂ ದೊಡ್ಡ ಚಿಂತೆಗೆ ಮುಕ್ತಿ ದೊರೆಯಲಿದೆ. ನೀವು ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಪಡೆಯಲಿದ್ದೀರಿ. ಅವಿವಾಹಿತರಿಗೆ ಮದುವೆಯ ಭಾಗ್ಯ ಲಭಿಸಬಹುದು. ಅವಿವಾಹಿತರ ಬದುಕಿನಲ್ಲಿ ಯಾರಾದರೂ ಪ್ರವೇಶ ಪಡೆಯಬಹುದು. ಇತ್ತೀಚೆಗೆ ಯಾರೊಂದಿಗಾದರೂ ಬೆಳೆದ ಸ್ನೇಹವು ಪ್ರೇಮಕ್ಕೆ ತಿರುಗಬಹುದು. ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಕುರಿತ ಚಿಂತೆಯು ನಿಮ್ಮನ್ನು ಕಾಡಬಹುದು. ನಿಮ್ಮ ಆರೋಗ್ಯ ಮತ್ತು ಆಹಾರಕ್ರಮದ ಬಗ್ಗೆಯೂ ನೀವು ಗಮನ ನೀಡಬೇಕು. ಈ ಸಂದರ್ಭದಲ್ಲಿ ಸಮಾಜದಲ್ಲಿ ನಿಮ್ಮ ಗೌರವ ಮತ್ತು ಸ್ಥಾನಮಾನದಲ್ಲಿ ವೃದ್ಧಿ ಉಂಟಾಗಲಿದೆ. ಕುಟುಂಬದ ವಾತಾವರಣವು ಚೆನ್ನಾಗಿರಲಿದೆ. ಈ ಅವಧಿಯಲ್ಲಿ ಕೆಲಸವನ್ನು ಹುಡುಕಲು ಮಾಡುವ ಯಾವುದೇ ಪ್ರಯತ್ನಕ್ಕೆ ಯಶಸ್ಸು ದೊರೆಯಲಿದೆ. ಮನೆಯಲ್ಲಿ ಒಂದಷ್ಟು ಮಂಗಳದಾಯಕ ಕೆಲಸವು ನಡೆಯಲಿದೆ.
ಕುಂಭ: ಕುಂಭ ರಾಶಿಯವರಿಗೆ ವಾರದ ಆರಂಭಿಕ ದಿನಗಳು ಸವಾಲಿನಿಂದ ಕೂಡಿರಲಿವೆ. ಆದರೆ ನಿಮ್ಮ ಆಪ್ತ ಮಿತ್ರರು ಮತ್ತು ಸಂಬಂಧಿಕರು ಈ ಸವಾಲನ್ನು ನಿಭಾಯಿಸಲು ನಿಮಗೆ ಸಹಾಯ ಮಾಡಲಿದ್ದಾರೆ. ವಾರದ ಆರಂಭದಲ್ಲಿ ವೃತ್ತಿಗೆ ಸಂಬಂಧಿಸಿದಂತೆ ಹತ್ತಿರದ ಅಥವಾ ದೂರದ ಸ್ಥಳಗಳಿಗೆ ನೀವು ಪ್ರಯಾಣಿಸಬೇಕಾದೀತು. ವಾರದ ದ್ವಿತೀಯಾರ್ಧದಲ್ಲಿ, ಪ್ರಭಾವಿ ವ್ಯಕ್ತಿಯೊಬ್ಬರ ನೆರವಿನಿಂದ, ಆಧಿಕಾರ ಮತ್ತು ಸರ್ಕಾರಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಕಷ್ಟಕರ ಅವಧಿಯು ಹೆಚ್ಚು ದಿನಗಳ ಕಾಲ ಮುಂದುವರಿಯುವುದಿಲ್ಲ. ಉತ್ತರಾರ್ಧದಲ್ಲಿ ನಿಮ್ಮ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ವಾರದ ಕೊನೆಗೆ, ಐಷಾರಾಮಿ ವಸ್ತುಗಳಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ. ಪ್ರೇಮ ಸಂಬಂಧದಲ್ಲಿ ಭಾವ ತೀವ್ರತೆ ಕಾಣಿಸಿಕೊಳ್ಳಬಹುದು. ಪ್ರೇಮಿಗೆ ಸಂಬಂಧಿಸಿದಂತೆ ಮಾಡಲಾಗುವ ಪ್ರಮುಖ ಸಾಧನೆಯ ಕಾರಣ ಮನಸ್ಸಿನಲ್ಲಿ ತೃಪ್ತಿ ಇರಲಿದೆ. ಯಾವುದೇ ಯೋಜನೆಗೆ ಸಂಬಂಧಿಸಿದಂತೆ ಈ ಹಿಂದೆ ಮಾಡಲಾದ ಹೂಡಿಕೆಗಳಿಗೆ ಒಳ್ಳೆಯ ಲಾಭ ದೊರೆಯಲಿದೆ. ಮಾರುಕಟ್ಟೆಯಲ್ಲಿ ಉಂಟಾಗುವ ಏರಿಕೆಯ ಕಾರಣ ವ್ಯಾಪಾರೋದ್ಯಮಿಗಳಿಗೆ ಲಾಭ ಉಂಟಾಗಲಿದೆ. ಮಾರುಕಟ್ಟೆಯಲ್ಲಿ ನಿಮ್ಮ ವಿಶ್ವಾಸಾರ್ಹತೆಯು ಬೆಳೆಯಲಿದೆ.
ಮೀನ: ಈ ವಾರವು ಮೀನ ರಾಶಿಯವರಿಗೆ ಅದೃಷ್ಟ ಮತ್ತು ಲಾಭವನ್ನು ತರಲಿದೆ. ಈ ವಾರದಲ್ಲಿ ನಿಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಅಗತ್ಯ ಪ್ರಗತಿಯನ್ನು ಮಾಡಲಿದ್ದೀರಿ. ಕೆಲಸದ ಸ್ಥಳದಲ್ಲಿ ಹಿರಿಯರು ಮತ್ತು ಕಿರಿಯರಿಂದ ನೀವು ಅಗತ್ಯ ನೆರವನ್ನು ಪಡೆಯಲಿದ್ದು, ಕೆಲಸವನ್ನು ಸಕಾಲದಲ್ಲಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗಲಿದೆ. ಈ ವಾರದ ಕೊನೆಗೆ ನಿಮ್ಮ ಹೆಂಡತಿ ಅಥವಾ ಮಕ್ಕಳಿಂದ ನೀವು ಒಂದಷ್ಟು ಶುಭ ಸುದ್ದಿಯನ್ನು ಪಡೆಯಲಿದ್ದು, ಮನೆಯಲ್ಲಿ ಸಂತಸದ ವಾತಾವರಣ ನೆಲೆಸಲಿದೆ. ವ್ಯವಹಾರಕ್ಕಾಗಿ ಮಾಡುವ ಪ್ರಯಾಣದಿಂದಾಗಿ ನಿಮ್ಮ ಸಂಪತ್ತು ಮತ್ತು ವ್ಯವಹಾರದಲ್ಲಿ ವೃದ್ಧಿ ಉಂಟಾಗಲಿದೆ. ಉದ್ಯೋಗದಲ್ಲಿರುವವರಿಗೆ ಆದಾಯದ ಹೆಚ್ಚುವರಿ ಮೂಲಗಳು ದೊರೆಯಬಹುದು. ನಿಮ್ಮ ಒಟ್ಟು ಸಂಪತ್ತಿನಲ್ಲಿ ವೃದ್ಧಿಯಾಗಲಿದೆ. ಉದ್ಯೋಗದಲ್ಲಿರುವ ಮಹಿಳೆಯರಿಗೆ ಇದು ಶುಭ ಸಮಯವೆನಿಸಲಿದೆ. ಮನೆಯಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಅವರ ಗೌರವ ಮತ್ತು ವರ್ಚಸ್ಸಿನಲ್ಲಿ ವೃದ್ಧಿ ಉಂಟಾಗಲಿದೆ. ಪ್ರೇಮ ಸಂಬಂಧದಲ್ಲಿ ಅನುರಾಗ ನೆಲೆಸಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ಆರೋಗ್ಯವು ಎಂದಿನಂತೆ ಇರಲಿದೆ. ಕುಟುಂಬದಲ್ಲಿ ಏನಾದರೂ ಮಂಗಳಕರ ಕೆಲಸ ಪೂರ್ಣಗೊಳ್ಳಲಿದೆ.