ETV Bharat / spiritual

ರಾಶಿ ಭವಿಷ್ಯ: ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ, ಪ್ರೇಮ ಸಂಬಂಧಕ್ಕೆ ವಿವಾಹ ಮುದ್ರೆ, ಸವಾಲುಗಳ ಮಧ್ಯೆ ಯಶಸ್ಸು! - Weekly Horoscope - WEEKLY HOROSCOPE

ಜುಲೈ 21ರಿಂದ 27ರವರೆಗಿನ ವಾರದ ರಾಶಿ ಭವಿಷ್ಯ ಹೀಗಿದೆ...

Weekly Horoscope
ವಾರದ ರಾಶಿ ಭವಿಷ್ಯ (ETV Bharat)
author img

By ETV Bharat Karnataka Team

Published : Jul 21, 2024, 7:17 AM IST

ಮೇಷ: ಈ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದ ದ್ವಿತೀಯಾರ್ಧ ಹೆಚ್ಚು ಅದೃಷ್ಟಶಾಲಿಯಾಗಿರುತ್ತದೆ. ಈ ವಾರದಲ್ಲಿ ಎಲ್ಲಾ ಸವಾಲುಗಳು ಮತ್ತು ಅಡ್ಡಿ ಆತಂಕಗಳ ನಡುವೆ ನಿರ್ದಿಷ್ಟ ಕೆಲಸದಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ಪ್ರೇಮ ಸಂಬಂಧದಲ್ಲಿ ವೃದ್ಧಿ ಉಂಟಾಗಲಿದೆ. ನಿಮ್ಮ ನಯವಾದ ಮಾತುಗಳಿಂದ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲಿದ್ದೀರಿ. ವೈವಾಹಿಕ ಜೀವನದಲ್ಲಿ ಅನುರಾಗ ನೆಲೆಸಲಿದೆ. ಆರೋಗ್ಯದ ವಿಚಾರದಲ್ಲಿ ಈ ವಾರವು ಸಾಮಾನ್ಯವೆನಿಸಲಿದೆ. ಆದರೆ ಯಾವುದೇ ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಪರಿಸ್ಥಿತಿಯನ್ನು ಅರಿತುಕೊಳ್ಳಿರಿ. ಕೆಲಸದ ಸ್ಥಳದಲ್ಲಿ ಉಂಟಾಗುವ ಭಿನ್ನಾಭಿಪ್ರಾಯದ ಹೊರತಾಗಿಯೂ ವಾರದ ನಡುವಿನ ದಿನಗಳಲ್ಲಿ ಕೆಲಸವು ಪೂರ್ಣಗೊಳ್ಳಲಿದೆ. ವಾರದ ದ್ವಿತೀಯಾರ್ಧದಲ್ಲಿ ಕುಟುಂಬದ ಸದಸ್ಯರಿಂದ ನೀವು ಶುಭ ಸುದ್ದಿಯನ್ನು ಪಡೆಯಲಿದ್ದೀರಿ. ದೇವರ ಆರಾಧನೆ ಮತ್ತು ದೇವರ ಮೇಲಿನ ನಂಬಿಕೆ ಇವೆರಡೂ ವೃದ್ಧಿಸಲಿವೆ. ಭಾವನೆಗಳನ್ನು ಆಧರಿಸಿ ಅಥವಾ ಇತರರ ಒತ್ತಡಕ್ಕೆ ಮಣಿದು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ವೃಷಭ: ಈ ರಾಶಿಯವರು ಈ ವಾರದಲ್ಲಿ ಮನೆಯಲ್ಲಿ ಮತ್ತು ಮನೆಯ ಹೊರಗಡೆ ಸಣ್ಣಪುಟ್ಟ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳಬಾರದು. ಕೋಪ ಅಥವಾ ಆವೇಶದಲ್ಲಿ ಯಾರಿಗೂ ಒಳ್ಳೆಯದು ಅಥವಾ ಕೆಟ್ಟದ್ದನ್ನು ಹೇಳಬೇಡಿ. ಆಸ್ತಿಯನ್ನು ಖರೀದಿಸುವ ಅಥವಾ ಮಾರುವ ಇಚ್ಛೆಯು ಕೈಗೂಡಲಿದೆ. ನೀವು ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಪಡೆಯಲಿದ್ದೀರಿ. ಮಾರುಕಟ್ಟೆಯಲ್ಲಿ ಬಾಕಿ ಉಳಿದಿರುವ ಹಣವು ಅನಿರೀಕ್ಷಿತವಾಗಿ ಕೈಗೆ ಸೇರಲಿದೆ. ನಿಮ್ಮ ಪ್ರೇಮಿಯೊಂದಿಗೆ ಯಾವುದೇ ಭಿನ್ನಾಭಿಪ್ರಾಯವು ಇದ್ದಲ್ಲಿ, ಅದು ಬಗೆಹರಿಯುವ ಕಾರಣ ನಿಮ್ಮ ಪ್ರೇಮ ಜೀವನವು ಮತ್ತೆ ಹಳಿಗೆ ಬರಲಿದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ದೂರದ ಊರಿಗೆ ಪ್ರಯಾಣಿಸುವ ಸಾಧ್ಯತೆ ಇದೆ. ನಿಮ್ಮ ತಾಯಿಯ ಆರೋಗ್ಯದ ಕುರಿತು ನಿಮಗೆ ಸ್ವಲ್ಪ ಚಿಂತೆ ಉಂಟಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರು ಈ ವಾರದ ದ್ವಿತೀಯಾರ್ಧದಲ್ಲಿ ಶುಭ ಸುದ್ದಿಯನ್ನು ಪಡೆಯಲಿದ್ದಾರೆ. ವಾರದ ದ್ವಿತೀಯಾರ್ಧದಲ್ಲಿ ಹಿರಿಯ ಅಥವಾ ಪ್ರಭಾವಿ ವ್ಯಕ್ತಿಯ ಸಹಾಯದಿಂದ ಭೂಮಿ ಅಥವಾ ಕಟ್ಟಡಕ್ಕೆ ಸಂಬಂಧಿಸಿದ ವಿವಾದವು ಬಗೆಹರಿಯಲಿದೆ.

ಮಿಥುನ: ನಿಗದಿಯಾಗಿರುವ ಕೆಲಸವು ಸಕಾಲದಲ್ಲಿ ಮುಗಿಯದಿದ್ದರೆ ಮನಸ್ಸು ಚಂಚಲತೆಗೆ ಈಡಾಗಬಹುದು. ಕೆಲಸದ ಒತ್ತಡವು ಸಹ ಎದುರಾಗಬಹುದು. ಈ ವಾರದಲ್ಲಿ ಇತರರನ್ನು ನೆಚ್ಚಿಕೊಳ್ಳಬೇಡಿ. ಇತರರ ಸಹಾಯ ದೊರೆಯದಿದ್ದರೆ ನಿಮಗೆ ಬೇಸರವೆನಿಸಬಹುದು. ಇಂತಹ ಸಂದರ್ಭದಲ್ಲಿ ಸ್ವಾವಲಂಬನೆಯನ್ನು ಸಾಧಿಸಿ. ನಿಮ್ಮ ಪ್ರೇಮ ಸಂಬಂಧದಲ್ಲಿ ಸಿಹಿಕಹಿ ಅನುಭವ ಆಗುತ್ತಿದ್ದಲ್ಲಿ, ನಿಮ್ಮ ಪ್ರೇಮಿಗೆ ಒಳ್ಳೆಯ ಉಡುಗೊರೆಯೊಂದನ್ನು ನೀಡುವ ಮೂಲಕ ನೀವು ಅವರ ಮನವೊಲಿಸಬಹುದು. ಗಂಡ ಹೆಂಡಿರ ನಡುವೆ ಪ್ರೇಮ ಮತ್ತು ಸಾಮರಸ್ಯ ನೆಲೆಸಲಿದೆ. ನಿಮ್ಮ ಮಗುವಿನ ಸಂತಸಕ್ಕಾಗಿ ನೀವು ಸ್ವಲ್ಪ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾದೀತು. ನಿಮ್ಮ ಆಹಾರ ಕ್ರಮಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಾಳಜಿ ವಹಿಸಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮಗೆ ಹಣಕಾಸಿನ ಸಮಸ್ಯೆ ಇದ್ದಲ್ಲಿ, ವಾರದ ಮೊದಲಾರ್ಧದಲ್ಲಿಯೇ ಅದನ್ನು ಬಗೆಹರಿಸಲು ಯತ್ನಿಸಿ. ಭೂಮಿ, ಕಟ್ಟಡ ಅಥವಾ ವಾಹನವನ್ನು ಖರೀದಿಸುವ ಮತ್ತು ಮಾರುವ ಯೋಜನೆಯನ್ನು ಕೆಲ ಕಾಲ ಮುಂದೂಡಬೇಕಾದೀತು.

ಕರ್ಕಾಟಕ: ಈ ವಾರದಲ್ಲಿ ಕರ್ಕಾಟಕ ರಾಶಿಯಲ್ಲಿ ಹುಟ್ಟಿದ ಜನರು, ತಮ್ಮ ಪ್ರಯತ್ನವನ್ನು ಯಾವಾಗಲೂ ವಿರೋಧಿಸುತ್ತಿರುವ ಜನರಿಂದ ದೂರವಿರಬೇಕು. ಪ್ರೇಮ ಸಂಬಂಧದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ಉತ್ಸಾಹದ ಭರದಲ್ಲಿ ನೀವು ಗುರಿಯನ್ನು ಕಳೆದುಕೊಳ್ಳಬೇಡಿ. ಇಲ್ಲದಿದ್ದರೆ ಸಮಾಜದಲ್ಲಿ ಅಗೌರವ ಉಂಟಾಗಬಹುದು. ವಾರದ ಆರಂಭದಲ್ಲಿ ವೃತ್ತಿಗೆ ಸಂಬಂಧಿಸಿದಂತೆ ಹತ್ತಿರದ ಅಥವಾ ದೂರದ ಸ್ಥಳಗಳಿಗೆ ನೀವು ಪ್ರಯಾಣಿಸಬೇಕಾದೀತು. ಈ ವಾರದಲ್ಲಿ ನಿಮ್ಮ ಸನ್ನಿವೇಶದ ಅವಲೋಕನ ನಡೆಸಿದ ನಂತರವೇ ಯಾವುದೇ ಪ್ರಮುಖ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳಿರಿ. ಇಲ್ಲದಿದ್ದರೆ ನೀವು ನಂತರ ಪರಿತಪಿಸಬೇಕಾದೀತು. ವಾರದ ದ್ವಿತೀಯಾರ್ಧದಲ್ಲಿ ಹಿರಿಯರ ಸಹಾಯದಿಂದ ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯಲಿವೆ. ಆರೋಗ್ಯದ ವಿಚಾರದಲ್ಲಿ ಈ ವಾರದಲ್ಲಿ ಮಿಶ್ರಫಲ ದೊರೆಯಲಿದೆ. ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಕುರಿತು ನಿಮಗೆ ಚಿಂತೆ ಉಂಟಾಗಬಹುದು.

ಸಿಂಹ: ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸುವ ನಿಮ್ಮ ಕನಸು ನನಸಾಗಲಿದೆ. ಪ್ರೇಮ ಸಂಬಂಧದಲ್ಲಿ ಭಾವ ತೀವ್ರತೆ ಇರಲಿದೆ. ನಿಮ್ಮ ಪ್ರೇಮ ಸಂಬಂಧವು ವಿವಾಹದತ್ತ ಮುನ್ನಡೆಯಬಹುದು. ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಪ್ರೇಮಿಯನ್ನು ಸ್ವೀಕರಿಸಲಿದ್ದಾರೆ. ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ನೀವು ಮತ್ತು ನಿಮ್ಮ ಜೀವನ ಸಂಗಾತಿಯು ಪ್ರವಾಸಿ ತಾಣಕ್ಕೆ ಜೊತೆಯಾಗಿ ಪ್ರಯಾಣಿಸಬಹುದು. ಕುಟುಂಬದ ಸದಸ್ಯರ ನಡುವೆ ಆನಂದ ಮತ್ತು ಸಹಕಾರ ನೆಲೆಸಲಿದೆ. ಸಂಗೀತ, ಕಲೆ ಮತ್ತು ನೃತ್ಯದಲ್ಲಿ ಯುವಜನರ ಆಸಕ್ತಿಯು ಬೆಳೆಯಲಿದೆ. ಭೂಮಿ, ಕಟ್ಟಡ ಮತ್ತು ವಾಹನಗಳನ್ನು ಖರೀದಿಸಿ ಮಾರಾಟ ಮಾಡಲು ಈ ವಾರವು ಒಳ್ಳೆಯದು. ನಿಮ್ಮ ಪೋಷಕರು ನಿಮಗೆ ಅನುರಾಗ ಮತ್ತು ನೆರವನ್ನು ಒದಗಿಸಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸುವವರಿಗೆ ಈ ವಾರವು ಅದೃಷ್ಟಶಾಲಿ ಎನಿಸಲಿದೆ. ಯಾವುದಾದರೂ ಶುಭ ಸುದ್ದಿ ದೊರೆಯಲಿದೆ. ನಿಮ್ಮ ಮಕ್ಕಳ ಬೆಂಬಲವು ನಿಮಗೆ ಲಭಿಸಲಿದೆ. ನಿಮ್ಮ ಆತ್ಮೀಯ ಗೆಳೆಯರ ಜೊತೆಗೆ ಸಾಕಷ್ಟು ಸಮಯವನ್ನು ಕಳೆಯಲಿದ್ದೀರಿ.

ಕನ್ಯಾ: ವಾರದ ಆರಂಭದಲ್ಲಿ ವೃತ್ತಿಗೆ ಸಂಬಂಧಿಸಿದಂತೆ ಹತ್ತಿರದ ಅಥವಾ ದೂರದ ಸ್ಥಳಗಳಿಗೆ ನೀವು ಪ್ರಯಾಣಿಸಬೇಕಾದೀತು. ಪ್ರೇಮ ಸಂಬಂಧದಲ್ಲಿ ನಿಮ್ಮ ಪ್ರೇಮಿಗೆ ಪ್ರಾಮಾಣಿಕತೆಯನ್ನು ತೋರಿಸಿ. ಎರಡು ದೋಣಿಗಳಲ್ಲಿ ಹೆಜ್ಜೆಯನ್ನಿಟ್ಟು ಮುಂದಕ್ಕೆ ಸಾಗಿದರೆ ಸಮಸ್ಯೆಗಳು ಉಂಟಾಗಬಹುದು. ಜೀವನ ಸಂಗಾತಿಯ ಜೊತೆಗೆ ಉಂಟಾಗುವ ಸಿಹಿ - ಕಹಿ ವಾಗ್ವಾದದ ನಡುವೆಯೂ ವೈವಾಹಿಕ ಜೀವನದಲ್ಲಿ ಸಿಹಿತನ ನೆಲೆಸಲಿದೆ. ಕಚೇರಿಯಲ್ಲಿ ಕೆಲಸದ ಒತ್ತಡ ಇರಬಹುದು. ನಿಮ್ಮ ಗುರಿಯನ್ನು ಸಾಧಿಸಬೇಕಾದರೆ ಹಿರಿಯರು ಮತ್ತು ಕಿರಿಯರೊಂದಿಗೆ ಸಹಯೋಗ ಸಾಧಿಸಿ. ಹಣಕಾಸಿನ ವಿಚಾರದಲ್ಲಿ ಸಂಘಟಿತ ರೀತಿಯಲ್ಲಿ ಕೆಲಸ ಮಾಡಿದರೆ ಅನುಕೂಲವಾದೀತು. ವಿದ್ಯಾರ್ಥಿಗಳು ಶಿಕ್ಷಣದಿಂದ ಬೇರೆಡೆಗೆ ತಮ್ಮ ಗಮನವನ್ನು ನೀಡಬಹುದು. ನಿಮ್ಮ ಆಹಾರಕ್ರಮದ ಕುರಿತು ಕಾಳಜಿ ವಹಿಸಿ. ಇಲ್ಲದಿದ್ದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳಬಹುದು.

ತುಲಾ: ಯಾವುದಾದರೂ ಹುದ್ದೆಯನ್ನು ಪಡೆಯಲು ಅಥವಾ ಗೌರವಾನ್ವಿತ ಸ್ಥಾನಕ್ಕೆ ತಲುಪಲು ನೀವು ದೀರ್ಘ ಕಾಲದಿಂದ ಕಾಯುತ್ತಿದ್ದರೆ ಈ ವಾರದಲ್ಲಿ ನಿಮ್ಮ ಇಚ್ಛೆಯು ಈಡೇರಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಹಿರಿಯರು ತಮ್ಮ ಆಶೀರ್ವಾದವನ್ನು ನೀಡಲಿದ್ದಾರೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಪ್ರಣಯ ಸಂಬಂಧದಲ್ಲಿ ಸುಧಾರಣೆ ತರಬೇಕಾದರೆ ನೀವು ಪರಸ್ಪರರ ಭಾವನೆಗಳನ್ನು ಗೌರವಿಸಬೇಕು. ನಿಮ್ಮ ಪ್ರೇಮಿಯ ವೈಯಕ್ತಿಕ ವಿಚಾರದಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡಬೇಡಿ. ವೈವಾಹಿಕ ಬದುಕಿನಲ್ಲಿ ಸಂತಸ ಮತ್ತು ಸಂಭ್ರಮ ನೆಲೆಸಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು ಅದ್ಭುತ ಸುದ್ದಿಯನ್ನು ಪಡೆಯಲಿದ್ದಾರೆ. ಅಧ್ಯಯನದಲ್ಲಿ ಅವರ ಆಸಕ್ತಿಯು ಹೆಚ್ಚಲಿದೆ. ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಒಳ್ಳೆಯದು. ವಾರದ ಉತ್ತರಾರ್ಧದಲ್ಲಿ ನೀವು ಧಾರ್ಮಿಕ ಅಥವಾ ಸಾಮಾಜಿಕ ಸೇವೆಗೆ ಸಂಬಂಧಿಸಿದ ಕೆಲಸದಲ್ಲಿ ನಿರತರಾಗಲಿದ್ದೀರಿ. ಕುಟುಂಬದ ಹಿರಿಯ ಸದಸ್ಯರಿಂದ ದೊಡ್ಡದಾದ ಉಡುಗೊರೆಯೊಂದನ್ನು ನೀವು ಪಡೆಯಲಿದ್ದೀರಿ. ಆರೋಗ್ಯವು ಸಾಮಾನ್ಯ ಸ್ಥಿತಿಯಲ್ಲಿ ಇರಲಿದೆ.

ವೃಶ್ಚಿಕ: ಈ ರಾಶಿಯವರು ವಾರದಲ್ಲಿ ಅದೃಷ್ಟದ ಬಲವನ್ನು ಹೊಂದಿದ್ದು ಲಾಭ ಗಳಿಸಲಿದ್ದಾರೆ. ವಾರದ ಆರಂಭದಲ್ಲಿ ನಿಮಗೆ ಸಾಕಷ್ಟು ಆರ್ಥಿಕ ಲಾಭ ಉಂಟಾಗಲಿದೆ. ನೀವು ವ್ಯವಹಾರದಲ್ಲಿ ಅನಿರೀಕ್ಷಿತವಾಗಿ ಲಾಭ ಪಡೆಯಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಆದಾಯದ ಹೆಚ್ಚುವರಿ ಮೂಲಗಳು ದೊರೆಯಬಹುದು. ಪ್ರೇಮ ಸಂಬಂಧದಲ್ಲಿ ಭಾವ ತೀವ್ರತೆ ಕಾಣಿಸಿಕೊಳ್ಳಬಹುದು. ನಿಮ್ಮ ಪ್ರೇಮಿಯೊಂದಿಗೆ ಸಮಯವನ್ನು ಚೆನ್ನಾಗಿ ಕಳೆಯಲಿದ್ದೀರಿ. ನಿಮ್ಮ ಜೀವನ ಸಂಗಾತಿಯಲ್ಲಿ ಉಂಟಾಗುವ ಸುಧಾರಣೆಯ ಕಾರಣ ನಿಮ್ಮಲ್ಲಿ ಸಂತಸ ನೆಲೆಸಲಿದೆ. ಮನೆಯ ಹಿರಿಯರು ನಿಮ್ಮನ್ನು ಆಶೀರ್ವದಿಸಲಿದ್ದಾರೆ. ಗೆಳೆಯರ ಮೂಲಕ ಲಾಭ ಉಂಟಾಗಲಿದೆ. ಐಷಾರಾಮಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಲಿದ್ದೀರಿ. ಈ ವಾರವು ನಿಮ್ಮ ಪಾಲಿಗೆ ಸಾಕಷ್ಟು ಲಾಭದಾಯಕ ಮತ್ತು ಉತ್ಪಾದಕ ಎನಿಸಲಿದೆ. ಈ ವಾರ ನಿಮಗೆ ಅದ್ಭುತ ಫಲ ದೊರೆಯಲಿದೆ. ನಿಮ್ಮ ಆರ್ಥಿಕ ಶಕ್ತಿಯನ್ನು ವರ್ಧಿಸುವುದಕ್ಕಾಗಿ ನೀವು ಜಾಣ್ಮೆಯಿಂದ ಕೆಲಸ ಮಾಡಬೇಕು. ಆದಾಯದ ಗಳಿಕೆಯ ಜೊತೆಗೆ ಹಣ ಖರ್ಚಾಗುವ ಸಾಧ್ಯತೆಯೂ ಇದೆ.

ಧನು: ಈ ವಾರದಲ್ಲಿ ಧನು ರಾಶಿಯವರು ತಮ್ಮ ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಸಹೋದೋಗ್ಯಿಗಳ ಕುರಿತ ಸಣ್ಣಪುಟ್ಟ ವಿಚಾರಗಳನ್ನು ನಿರ್ಲಕ್ಷಿಸಿರಿ. ಇಲ್ಲದಿದ್ದರೆ ಭವಿಷ್ಯದಲ್ಲಿ ನಿಮಗೆ ಸಮಸ್ಯೆ ಉಂಟಾಗಬಹುದು. ಆರ್ಥಿಕ ವಲಯದಲ್ಲಿ ಜಾಣ್ಮೆಯಿಂದ ಹೂಡಿಕೆ ಮಾಡಿರಿ. ಯಾರಿಂದಾದರೂ ಮೋಸ ಹೋಗುವ ಬದಲಿಗೆ, ನಿಮ್ಮ ಎದುರಿರುವ ಆಯ್ಕೆಗಳನ್ನು ಎಚ್ಚರಿಕೆಯಿಂದ ಪರಿಗಣಿಸಿದ ನಂತರವೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಿರಿ. ಕುಟುಂಬಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರವನ್ನು ನೀವು ತೆಗೆದುಕೊಳ್ಳುವುದಾದರೆ, ಮೊದಲಿಗೆ ನೀವು ಹಿರಿಯರು ಮತ್ತು ಕಿರಿಯರೊಂದಿಗೆ ಸಮಾಲೋಚನೆ ನಡೆಸಬೇಕು. ಆಸ್ತಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸುವಾಗ ಇದನ್ನು ಗಮನದಲ್ಲಿಟ್ಟುಕೊಳ್ಳಿರಿ. ನಿಮ್ಮ ಸಹೋದರರು ಮತ್ತು ಸಹೋದರಿಯರೊಂದಿಗೆ ಸರಿಯಾಗಿ ವರ್ತಿಸಿ. ಪ್ರೇಮ ಸಂಬಂಧದಲ್ಲಿ ನಯವಿನಯತೆಯಿಂದ ವರ್ತಿಸುವುದು ಒಳ್ಳೆಯದು. ಇಲ್ಲದಿದ್ದರೆ ಪರಿಸ್ಥಿತಿ ಹದಗೆಡಬಹುದು. ವೈವಾಹಿಕ ಸಂಬಂಧದಲ್ಲಿ ಅನ್ಯೋನ್ಯತೆಯು ನೆಲೆಸಲಿದೆ.

ಮಕರ: ಈ ವಾರದಲ್ಲಿ ಮಕರ ರಾಶಿಯವರು ತಮ್ಮ ಮಾತಿನ ಮೇಲೆ ನಿಗಾ ಇರಿಸಬೇಕು. ಅಲ್ಲದೆ ನಿಮ್ಮ ಕೆಲಸವನ್ನು ಮುಗಿಸುವುದಕ್ಕಾಗಿ ಈ ವಾರದಲ್ಲಿ ನೀವು ಹೆಚ್ಚಿನ ಶ್ರಮ ಪಡಬೇಕು. ನಿಮ್ಮ ಗೆಳೆಯರು ಮತ್ತು ಸಹೋದ್ಯೋಗಿಗಳಿಂದ ಸಕಾಲದಲ್ಲಿ ನೆರವನ್ನು ಪಡೆಯದಿದ್ದರೆ, ನಿಮ್ಮ ಬೇಸರ ಕಾಡಬಹುದು. ಈ ವಾರದಲ್ಲಿ ನಿಮ್ಮ ಸನ್ನಿವೇಶವನ್ನು ಆಧರಿಸಿ ನಿರ್ಣಾಯಕ ವಿಷಯದ ಕುರಿತು ನೀವು ನಿರ್ಣಯವನ್ನು ತೆಗೆದುಕೊಳ್ಳಬೇಕು. ನಿಮ್ಮ ಪ್ರೇಮ ಸಂಬಂಧವು ಇನ್ನಷ್ಟು ಗಟ್ಟಿಯಾಗಿ ಬೆಳೆಯಬೇಕಾದರೆ ನಿಮ್ಮ ಪ್ರೇಮಿಯ ಭಾವನೆಗಳನ್ನು ನಿರ್ಲಕ್ಷಿಸಬೇಡಿ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸಿದರೆ ನಿಮ್ಮ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಬಹುದು. ವಿಪರೀತವಾಗಿ ಭಾವುಕರಾಗಬೇಡಿ. ವ್ಯವಹಾರದಲ್ಲಿ ಯಾವುದೇ ಅಪಾಯವನ್ನು ಮೈಗೆಳೆದುಕೊಳ್ಳಬೇಡಿ. ವಾರದ ಕೊನೆಯಲ್ಲಿ ವೃತ್ತಿಗೆ ಸಂಬಂಧಿಸಿದಂತೆ ದೂರದ ಸ್ಥಳಗಳಿಗೆ ನೀವು ಪ್ರಯಾಣಿಸಬೇಕಾದೀತು. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು.

ಕುಂಭ: ಈ ರಾಶಿಯವರು ಈ ವಾರದಲ್ಲಿ ತಮ್ಮ ವೃತ್ತಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಅಪಾಯ ತೆಗೆದುಕೊಳ್ಳಬಾರದು. ನೀವು ಉದ್ಯೋಗವನ್ನು ಬದಲಾಯಿಸಲು ಇಚ್ಛಿಸುವುದಾದರೆ, ಎಚ್ಚರಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಿರಿ. ನಿಮ್ಮ ಅಗತ್ಯತೆಗಳ ಪಟ್ಟಿಯು ವಿಪರೀತವಾಗಿ ಬೆಳೆಯದಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ನಂತರ ನಿಮಗೆ ಆರ್ಥಿಕ ತೊಂದರೆ ಉಂಟಾಗಬಹುದು. ಜನರೊಂದಿಗೆ ತಮಾಷೆ ಮಾಡುವಾಗ ನಿಮ್ಮ ಗೌರವ ಮತ್ತು ವರ್ಚಸ್ಸನ್ನು ಕಾಪಾಡುವುದಕ್ಕಾಗಿ ಹೆಚ್ಚಿನ ಕಾಳಜಿ ವಹಿಸಿ. ನಿಮ್ಮ ಹಾಸ್ಯಪ್ರಜ್ಞೆಯು ನಗೆಪಾಟಲಿಗೆ ಈಡಾಗದಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ದೀರ್ಘ ಕಾಲದಲ್ಲಿ ಬೆಳೆದ ಸಂಬಂಧಗಳು ಕೆಲವೇ ಕ್ಷಣಗಳಲ್ಲಿ ಮುರಿದು ಬೀಳಬಹುದು. ಭೂಮಿ ಮತ್ತು ಆಸ್ತಿಯನ್ನು ಖರೀದಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸಿ. ದಾಖಲೆಗಳನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡ ನಂತರವೇ ಸಹಿ ಹಾಕಿರಿ. ವಿದ್ಯಾರ್ಥಿಗಳು ಶಿಕ್ಷಣದಿಂದ ಬೇರೆಡೆಗೆ ತಮ್ಮ ಗಮನವನ್ನು ವರ್ಗಾಯಿಸಬಹುದು. ಪ್ರೇಮ ಸಂಬಂಧದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಒಳ್ಳೆಯದು. ವೈವಾಹಿಕ ಜೀವನದಲ್ಲಿ ಯಶಸ್ಸು ದೊರೆಯಬೇಕಾದರೆ ನಿಮ್ಮ ಜೀವನ ಸಂಗಾತಿಗೆ ಸಾಕಷ್ಟು ಗಮನ ನೀಡಿರಿ ಹಾಗೂ ಅವರ ಭಾವನೆಗಳನ್ನು ಗೌರವಿಸಿರಿ.

ಮೀನ: ನಿಮ್ಮ ಹೆಚ್ಚಿನ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿದ್ದು ಸಾಕಷ್ಟು ಲಾಭ ಗಳಿಸಲಿದ್ದೀರಿ. ವೃತ್ತಿ ಮತ್ತು ವ್ಯವಹಾರದಲ್ಲಿ ಮುಂದುವರಿಯಲು ಅವಕಾಶ ದೊರೆಯಲಿದೆ. ಗೆಳೆಯರೊಂದಿಗೆ ಸೇರಿಕೊಂಡು ಯೋಜಿತ ರೀತಿಯಲ್ಲಿ ಕೆಲಸ ಮಾಡಿದರೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಬಹುದು. ನಿಮ್ಮ ವೈವಾಹಿಕ ಬದುಕು ಸಂತಸದಿಂದ ಕೂಡಲಿದೆ. ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ದೀರ್ಘ ಪ್ರವಾಸಕ್ಕೆ ಹೋಗಬಹುದು. ಹೊಸ ಭೂಮಿ ಖರೀದಿಸುವ ಅಥವಾ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಆರೋಗ್ಯದ ವಿಚಾರದಲ್ಲಿ ಈ ವಾರವು ಸಾಮಾನ್ಯ ವಾರವೆನಿಸಲಿದೆ. ಮನೆಯಲ್ಲಿ ಧಾರ್ಮಿಕ ಅಥವಾ ಮಂಗಳದಾಯಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಧ್ಯತೆ ಇದೆ. ನಿಮ್ಮ ಸಹೋದರರು ಮತ್ತು ಸಹೋದರಿಯರೊಂದಿಗೆ ಸಮಯವನ್ನು ಚೆನ್ನಾಗಿ ಕಳೆಯುವ ಸಾಧ್ಯತೆ ಇದೆ. ಪ್ರೇಮ ಸಂಬಂಧದಲ್ಲಿ ಭಾವ ತೀವ್ರತೆ ಕಾಣಿಸಿಕೊಳ್ಳಬಹುದು. ನಿಮ್ಮ ಪ್ರೇಮ ಸಂಗಾತಿಯೊಂದಿಗೆ ನೀವು ಸಾಕಷ್ಟು ಸಮಯವನ್ನು ಕಳೆಯಲಿದ್ದೀರಿ. ನಿಮ್ಮ ಕುಟುಂಬವು ಸಾಕಷ್ಟು ಸಂತಸ ಮತ್ತು ಸಾಮರಸ್ಯವನ್ನು ಅನುಭವಿಸಲಿದೆ. ಪೋಷಕರ ನಡುವೆ ಸಂತಸ ಮತ್ತು ಸಾಮರಸ್ಯ ಇರಲಿದೆ.

ಇದನ್ನೂ ಓದಿ: ಭಾನುವಾರದ ಪಂಚಾಂಗ, ಭವಿಷ್ಯ: ನಿಮಗಿಂದು ಅತ್ಯಂತ ಫಲಪ್ರದ ದಿನ; ಕೆಲವರಿಗೆ ಭಾರಿ ನಷ್ಟ - Sunday Horoscope

ETV Bharat Logo

Copyright © 2024 Ushodaya Enterprises Pvt. Ltd., All Rights Reserved.