ಮೇಷ: ಈ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರ ಮಿಶ್ರ ಫಲ ದೊರೆಯಲಿದೆ. ವಾರದ ಆರಂಭಿಕ ದಿನವು ಸಾಕಷ್ಟು ಜಂಜಾಟದಿಂದ ಕೂಡಿರಲಿದೆ. ಕೆಲಸದ ಸ್ಥಳದಲ್ಲಿ ಅನಿರೀಕ್ಷಿತವಾಗಿ ನಿಮಗೆ ಹೆಚ್ಚಿನ ಕೆಲಸವನ್ನು ನೀಡಲಾಗುವುದು. ಹೀಗಾಗಿ ಹೆಚ್ಚಿನ ಕಠಿಣ ಶ್ರಮ ಮತ್ತು ಪ್ರಯತ್ನದ ಅಗತ್ಯವಿದೆ. ಉದ್ಯೋಗದಲ್ಲಿರುವ ಮಹಿಳೆಯರು ಈ ಅವಧಿಯಲ್ಲಿ ಹೆಚ್ಚಿನ ಸವಾಲುಗಳನ್ನು ಎದುರಿಸಬಹುದು. ವ್ಯವಹಾರದಲ್ಲಿರುವ ಜನರು ತಮ್ಮ ಸ್ಪರ್ಧಿಗಳಿಂದ ವಿಪರೀತ ಸ್ಪರ್ಧೆಯನ್ನು ಎದುರಿಸಬಹುದು. ಈ ಅವಧಿಯಲ್ಲಿ ನಿಮ್ಮ ಆರೋಗ್ಯವು ದುರ್ಬಲಗೊಳ್ಳಲಿದೆ. ಇಂತಹ ಸಂದರ್ಭದಲ್ಲಿ ನಿಯಮಿತ ದಿನಚರಿಯನ್ನು ಕಾಪಾಡಿ ಮತ್ತು ಚೆನ್ನಾಗಿ ಆಹಾರ ಸೇವಿಸಿ. ವಿದೇಶದಲ್ಲಿ ವೃತ್ತಿಯಲ್ಲಿರುವವರು ಅಥವಾ ವ್ಯವಹಾರದಲ್ಲಿರುವವರು ಅನೇಕ ಸವಾಲುಗಳನ್ನು ಎದುರಿಸಬಹುದು. ಪ್ರೇಮ ಸಂಬಂಧಕ್ಕೆ ಸಂಬಂಧಿಸಿದಂತೆ ಯಾವುದೇ ಶೀಘ್ರ ಅಥವಾ ಉದ್ವೇಗ ನಿರ್ಧಾರವು ಕಠಿಣ ಸವಾಲನ್ನು ಸೃಷ್ಟಿಸಬಹುದು. ನಿಮ್ಮ ವೈವಾಹಿಕ ಜೀವನದಲ್ಲಿ ಸಂತಸ ನೆಲೆಸಬೇಕಾದರೆ ನಿಮ್ಮ ಜೀವನ ಸಂಗಾತಿಯ ಅಗತ್ಯತೆಗಳನ್ನು ನಿರ್ಲಕ್ಷಿಸಬೇಡಿ.
ವೃಷಭ: ಈ ರಾಶಿಯವರಿಗೆ ಈ ವಾರದಲ್ಲಿ ಕೆಲವೊಮ್ಮೆ ಶುಭ ಫಲ ದೊರೆತರೆ ಇನ್ನು ಕೆಲವೊಮ್ಮೆ ಕಠಿಣ ಸವಾಲುಗಳು ಎದುರಾಗಬಹುದು. ವ್ಯವಹಾರದಲ್ಲಿರುವವರು ಈ ವಾರದಲ್ಲಿ ಸಾಕಷ್ಟು ಏರುಪೇರನ್ನು ಅನುಭವಿಸಬಹುದು. ವಾರದ ಮಧ್ಯದಲ್ಲಿ ನೀವು ದೂರದ ಅಥವಾ ಹತ್ತಿರದ ಸ್ಥಳಗಳಿಗೆ ಅನಿರೀಕ್ಷಿತವಾಗಿ ಪ್ರಯಾಣಿಸಬೇಕಾದೀತು. ನೀವು ನಿಮ್ಮ ವೃತ್ತಿಯಿಂದ ದೀರ್ಘ ಸಮಯದಿಂದ ಕಠಿಣ ಶ್ರಮ ಮಾಡುತ್ತಿದ್ದರೆ, ಇದಕ್ಕೆ ತಕ್ಕುದಾದ ಪ್ರತಿಫಲವನ್ನು ಪಡೆಯಲು ನೀವು ಇನ್ನೂ ಸ್ವಲ್ಪ ಕಾಲ ಕಾಯಬೇಕಾದೀತು. ವಾರದ ದ್ವಿತೀಯಾರ್ಧದಲ್ಲಿ ಉದ್ಯೋಗದಲ್ಲಿರುವವರು ತಮ್ಮ ಸಹೋದ್ಯೋಗಿಗಳು ಮತ್ತು ಹಿರಿಯರೊಂದಿಗೆ ಚೆನ್ನಾಗಿ ಕೆಲಸ ಮಾಡಬೇಕು. ಪ್ರಯಾಣಿಸುವಾಗ ನಿಮ್ಮ ವಸ್ತುಗಳು ಮತ್ತು ಆರೋಗ್ಯವನ್ನು ಕಾಪಾಡುವುದಕ್ಕಾಗಿ ಹೆಚ್ಚಿನ ಮುಂಜಾಗರೂಕತೆ ವಹಿಸಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು ಕಠಿಣ ಶ್ರಮ ಪಟ್ಟರೆ ಮಾತ್ರವೇ ಯಶಸ್ಸನ್ನು ಗಳಿಸಬಹುದು. ಪ್ರೇಮ ಸಂಬಂಧದಲ್ಲಿ ಎದುರಾಗುವ ತಪ್ಪು ಗ್ರಹಿಕೆಯನ್ನು ಗೆಳತಿಯೊಬ್ಬಳ ಸಹಾಯದಿಂದ ಸರಿಪಡಿಸಬಹುದು. ಆದರೆ ಪರಸ್ಪರ ನಂಬಿಕೆಯನ್ನು ಮತ್ತೆಗಳಿಸಿಕೊಳ್ಳಲು ಇನ್ನಷ್ಟು ಸಮಯ ಬೇಕಾದೀತು.
ಮಿಥುನ: ದೀರ್ಘ ಕಾಲದಿಂದ ಬಾಕಿ ಉಳಿದಿರುವ ಪ್ರಮುಖ ಕೆಲಸವೊಂದು ಪ್ರಭಾವಿ ವ್ಯಕ್ತಿಯೊಬ್ಬರ ನೆರವಿನ ಕಾರಣ ವಾರದ ಆರಂಭದಲ್ಲಿ ಪೂರ್ಣಗೊಳ್ಳಲಿದೆ. ಈ ಸಮಯದಲ್ಲಿ ಅಧಿಕಾರದಲ್ಲಿರುವವರು ಮತ್ತು ಸರ್ಕಾರದ ಸಂಪೂರ್ಣ ನೆರವು ನಿಮಗೆ ದೊರೆಯಲಿದೆ. ವಾರದ ನಡುವೆ, ನಿಮ್ಮ ಸಾಧನೆಗಳ ಕುರಿತು ಮತ್ಸರಗೊಳ್ಳುವ ಸಹೋದ್ಯೋಗಿಗಳ ಕುರಿತು ನೀವು ಸಾಕಷ್ಟು ಎಚ್ಚರಿಕೆ ವಹಿಸಬೇಕು. ಭೂಮಿ ಮತ್ತು ಕಟ್ಟಡಕ್ಕೆ ಸಂಬಂಧಿಸಿದ ವಿವಾದಗಳು ಬಗೆಹರಿಯಲಿವೆ. ನೀವು ಪಾಲುದಾರಿಕೆ ವ್ಯವಹಾರದಲ್ಲಿದ್ದರೆ, ಮುಂದಕ್ಕೆ ಹೆಜ್ಜೆ ಇಡುವ ಮೊದಲು ಯಾವುದೇ ಆರ್ಥಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರು ಅದ್ಭುತ ಸುದ್ದಿಯನ್ನು ಪಡೆಯಲಿದ್ದಾರೆ. ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊದಲು ನಿಮ್ಮ ಪ್ರೀತಿಪಾತ್ರರ ಸಲಹೆಯನ್ನು ಪಡೆಯುವುದನ್ನು ಮರೆಯಬೇಡಿ. ಪ್ರಣಯ ಸಂಬಂಧದಲ್ಲಿರುವವರಿಗೆ ಈ ವಾರವು ಅದೃಷ್ಟದಿಂದ ಕೂಡಿದೆ. ನಿಮ್ಮ ಪ್ರೇಮ ಸಂಗಾತಿಯ ಜೊತೆ ಸಂತಸದ ಕ್ಷಣಗಳನ್ನು ಕಳೆಯಲು ನಿಮಗೆ ಅವಕಾಶ ಸಿಗಬಹುದು. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ.
ಕರ್ಕಾಟಕ: ಈ ವಾರದ ಆರಂಭದಲ್ಲಿ ನೀವು ಪ್ರಮುಖ ಸಾಧನೆಯೊಂದನ್ನು ಮಾಡಲಿದ್ದೀರಿ. ಆದರೆ ಉತ್ಸಾಹದ ಭರದಲ್ಲಿ ಗುರಿ ತಪ್ಪಬಾರದು. ಅಪಾಯಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡಬೇಡಿ. ಏಕೆಂದರೆ ಭವಿಷ್ಯದಲ್ಲಿ ನೀವು ಹಣವನ್ನು ಕಳೆದುಕೊಳ್ಳಬಹುದು. ಈ ವಾರದಲ್ಲಿ ಭಡ್ತಿ ಅಥವಾ ನಿಮ್ಮ ನೆಚ್ಚಿನ ಸ್ಥಳಕ್ಕೆ ವರ್ಗಾವಣೆಗೊಳ್ಳುವ ನಿಮ್ಮ ಇಚ್ಛೆಯು ಪೂರ್ಣಗೊಳ್ಳಲಿದೆ. ಕೆಲಸದ ಸ್ಥಳದಲ್ಲಿ ಹಿರಿಯರು ಹಾಗೂ ಕಿರಿಯರು ನಿಮ್ಮನ್ನು ಪ್ರಶಂಸಿಸಲಿದ್ದಾರೆ. ಭೂಮಿ ಮತ್ತು ಕಟ್ಟಡದ ಖರೀದಿಯಲ್ಲಿ ಲಾಭ ದೊರೆಯಲಿದೆ. ನಿಮ್ಮ ಪೋಷಕರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಹಾಗೂ ಕುಟುಂಬಕ್ಕೆ ಸಂಬಂಧಿಸಿದ ವಿಚಾರದಲ್ಲಿ ನೀವು ಮಾಡುವ ಆಯ್ಕೆಯನ್ನು ಬೆಂಬಲಿಸಲಿದ್ದಾರೆ. ನೀವು ವಿದೇಶದಲ್ಲಿ ವೃತ್ತಿ ಅಥವಾ ವ್ಯವಹಾರವನ್ನು ಪ್ರಾರಂಭಿಸಲು ಇಚ್ಛಿಸುವುದಾದರೆ ಈ ನಿಟ್ಟಿನಲ್ಲಿ ಎದುರಾಗಿದ್ದ ಅಡ್ಡಿ ಆತಂಕಗಳು ನಿವಾರಣೆಗೊಳ್ಳಲಿವೆ. ವಾರದ ಕೊನೆಗೆ ಗೆಳೆಯರು ಅಥವಾ ಕುಟುಂಬದ ಸದಸ್ಯರೊಂದಿಗೆ ಪಿಕ್ನಿಕ್ ಅಥವಾ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಪ್ರೇಮ ಸಂಬಂಧದಲ್ಲಿ ಅನುರಾಗ ನೆಲೆಸಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ.
ಸಿಂಹ: ಈ ವಾರದಲ್ಲಿ ಸಿಂಹ ರಾಶಿಯಲ್ಲಿ ಹುಟ್ಟಿದ ಜನರು ತಮ್ಮ ಆರೋಗ್ಯ ಮತ್ತು ಸಂಬಂಧಕ್ಕೆ ಆದ್ಯತೆ ನೀಡಬೇಕು. ದುರ್ಬಲ ಆರೋಗ್ಯವು ನಿಮ್ಮ ಕೆಲಸದ ಸಾಮರ್ಥ್ಯದ ಮೇಲೆ ನೇರ ಪರಿಣಾಮವನ್ನುಂಟು ಮಾಡಬಹುದು. ಪ್ರಮುಖ ಅವಕಾಶವೊಂದು ಕಳೆದುಕೊಂಡ ಕಾರಣ ನೀವು ಹತಾಶರಾಗಬಹುದು. ಸಣ್ಣ ತಪ್ಪು ಸಹ ನಿಮ್ಮ ವರ್ಚಸ್ಸಿಗೆ ಕುಂದುಂಟು ಮಾಡಬಹುದು. ಈ ಅವಧಿಯಲ್ಲಿ ನಿಮ್ಮ ಎದುರಾಳಿಗಳ ಕುರಿತು ನೀವು ಎಚ್ಚರಿಕೆ ವಹಿಸಬೇಕು. ಈ ವಾರದ ದ್ವಿತೀಯಾರ್ಧದಲ್ಲಿ, ಅನಿರೀಕ್ಷಿತವಾಗಿ ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳು ನಿಮಗೆ ಎದುರಾಗಬಹುದು. ಈ ಅವಧಿಯಲ್ಲಿ ಉದ್ಯೋಗದಲ್ಲಿರುವವರು ಕೆಲಸದ ಸ್ಥಳದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಪ್ರಣಯ ಸಂಬಂಧಕ್ಕೆ ಕಾಲಿಡುವ ಮೊದಲು ಸಾಕಷ್ಟು ಯೋಚಿಸಿ. ವೈವಾಹಿಕ ಜೀವನವು ಸುಗಮವಾಗಿ ಸಾಗಬೇಕಾದರೆ ನಿಮ್ಮ ಜೀವನ ಸಂಗಾತಿಯ ಭಾವನೆಗಳನ್ನು ಗೌರವಿಸಿ. ಯಾವುದೇ ರೀತಿಯ ಅವಸರ ಅಥವಾ ನಿಮ್ಮ ಪ್ರೇಮ ಸಂಗಾತಿಯ ವೈಯಕ್ತಿಕ ಬದುಕಿನಲ್ಲಿ ವಿಪರೀತ ಹಸ್ತಕ್ಷೇಪವು ಸಂಬಂಧದಲ್ಲಿ ಬಿರುಕು ಉಂಟು ಮಾಡಬಹುದು.
ಕನ್ಯಾ: ವಾರದ ಆರಂಭಿಕ ದಿನಗಳಲ್ಲಿ ನೀವು ಈ ಹಿಂದೆ ಮಾಡಿದ ಕೆಲಸಗಳಿಗೆ ಮನ್ನಣೆ ದೊರೆಯಲಿದೆ. ಈ ಅವಧಿಯಲ್ಲಿ ನಿಮಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಲಾಗುತ್ತದೆ. ಮಾರುಕಟ್ಟೆಯಲ್ಲಿ ಉಂಟಾಗುವ ಪ್ರಗತಿಯನ್ನು ಬಳಸಿಕೊಂಡು ಲಾಭ ಮಾಡುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ಮಾರುಕಟ್ಟೆಯಲ್ಲಿ ನಿಮ್ಮ ವಿಶ್ವಾಸಾರ್ಹತೆಯು ಬೆಳೆಯಲಿದೆ. ವ್ಯವಹಾರದ ದೃಷ್ಟಿಯಿಂದ ಈ ವಾರವು ಒಳ್ಳೆಯದು. ಉದ್ಯೋಗವನ್ನು ಬದಲಾಯಿಸಲು ಯೋಚಿಸುವವರಿಗೆ ಈ ವಾರದ ಕೊನೆಗೆ ಯಾವುದಾದರೂ ದೊಡ್ಡ ಕಂಪನಿಯಿಂದ ಕರೆ ಬರಲಿದೆ. ನೀವು ದೀರ್ಘ ಕಾಲದಿಂದ ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಇಚ್ಛಿಸುವುದಾದರೆ, ನಿಮ್ಮ ಇಚ್ಛೆಯು ಕೈಗೂಡಲಿದೆ. ವಾರದ ದ್ವಿತೀಯಾರ್ಧದಲ್ಲಿ ನೀವು ದೊಡ್ಡದಾದ ಐಷಾರಾಮಿ ವಸ್ತುವೊಂದನ್ನು ಖರೀದಿಸಲಿದ್ದು, ಇದರಿಂದಾಗಿ ಮನೆಯಲ್ಲಿ ಸಂತಸದ ವಾತಾವರಣ ಸೃಷ್ಟಿಯಾಗಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ಪ್ರೇಮ ಸಂಬಂಧದಲ್ಲಿ ಅನುರಾಗ ನೆಲೆಸಲಿದೆ. ನಿಮ್ಮ ಪ್ರಣಯ ಸಂಗಾತಿಯ ಜೊತೆಗೆ ಅದ್ಭುತ ಕ್ಷಣಗಳನ್ನು ನೀವು ಕಳೆಯಲಿದ್ದೀರಿ.
ತುಲಾ: ಈ ಅವಧಿಯಲ್ಲಿ ಯಾವುದಾದರೂ ವಿವಾದಕ್ಕೆ ಸಂಬಂಧಿಸಿದಂತೆ ನೀವು ನ್ಯಾಯಾಲಯದಲ್ಲಿ ಹಾಜರಾಗಬೇಕಾದೀತು. ಹೀಗಾಗಿ ಯಾವುದೇ ವಿಷಯವನ್ನು ನ್ಯಾಯಾಲಯದ ಹೊರಗೆ ಬಗೆಹರಿಸುವುದು ಒಳ್ಳೆಯದು. ನಿಮ್ಮ ಎಳೆಯ ಸಹೋದರ ಅಥವಾ ಸಹೋದರಿಯ ಜೊತೆಗೆ ವಾರದ ಆರಂಭದಲ್ಲಿ ನೀವು ಹೊಂದಿದ ವಾಗ್ವಾದವು ನಿಮ್ಮ ಮಾನಸಿನ ನೋವಿಗೆ ಕಾರಣವೆನಿಸಲಿದೆ. ಈ ಅವಧಿಯಲ್ಲಿ ಯಾರೊಂದಿಗೂ ಮಾತನಾಡುವಾಗ ನಿಮ್ಮ ಮಾತಿನ ಮೇಲೆ ನಿಗಾ ಇರಲಿ. ಇಲ್ಲದಿದ್ದರೆ ಪರಿಸ್ಥಿತಿ ಹದಗೆಡಬಹುದು. ಸಹೋದ್ಯೋಗಿಗಳು ಮಾಡಿದ ಸಣ್ಣಪುಟ್ಟ ಟೀಕೆಗಳಿಗೆ ಪ್ರತಿಕ್ರಿಯೆ ನೀಡುವ ಬದಲಿಗೆ ಅವುಗಳನ್ನು ನಿರ್ಲಕ್ಷಿಸುವುದು ಒಳ್ಳೆಯದು. ವಾರದ ಉತ್ತರಾರ್ಧದಲ್ಲಿ ವೃತ್ತಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಹತ್ತಿರದ ಅಥವಾ ದೂರದ ಸ್ಥಳಗಳಿಗೆ ನೀವು ಪ್ರಯಾಣಿಸಬೇಕಾದೀತು. ಈ ಪ್ರಯಾಣವನ್ನು ನೀವು ಆನಂದಿಸಬಹುದು. ಆದರೆ ಇದು ನಿರೀಕ್ಷೆಯಷ್ಟು ಲಾಭವನ್ನು ತಂದು ಕೊಡದು. ನಿಮ್ಮ ಪ್ರೇಮವನ್ನು ಯಾರಿಗಾದರೂ ವ್ಯಕ್ತಪಡಿಸಲು ನೀವು ಇಚ್ಛಿಸುವುದಾದರೆ ಅವಸರ ಮಾಡಬೇಡಿ. ಸೂಕ್ತ ಸಮಯದಲ್ಲೇ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ಇಲ್ಲದಿದ್ದರೆ ಪರಿಸ್ಥಿತಿ ಹದಗೆಡಬಹುದು. ಈಗಾಗಲೇ ಇರುವ ಸಂಬಂಧದಲ್ಲಿ ವೃದ್ಧಿ ಉಂಟಾಗಲಿದೆ.
ವೃಶ್ಚಿಕ: ಈ ವಾರದ ಆರಂಭದಲ್ಲಿ ನಿಮ್ಮ ಹಿಂದಿನ ಪ್ರಯತ್ನಗಳು ಮತ್ತು ಕಠಿಣ ಶ್ರಮಕ್ಕೆ ತಕ್ಕುದಾದ ಫಲಿತಾಂಶ ದೊರೆಯಲಿದೆ. ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಶುಭ ಸುದ್ದಿಯನ್ನು ಪಡೆಯಲಿದ್ದೀರಿ. ಈ ಅವಧಿಯಲ್ಲಿ ಉದ್ಯೋಗದಲ್ಲಿರುವವರು ತಮ್ಮ ಕೆಲಸದ ಸ್ಥಳದಲ್ಲಿ ಎದುರಾಳಿಗಳ ಕುರಿತು ಸಾಕಷ್ಟು ಎಚ್ಚರಿಕೆ ವಹಿಸಬೇಕು. ಏಕೆಂದರೆ ನೀವು ಪೂರ್ಣಗೊಳಿಸಿರುವ ಕೆಲಸದಲ್ಲಿ ಅವರು ಅಡ್ಡಿ ಆತಂಕಗಳನ್ನು ಉಂಟು ಮಾಡಬಹುದು. ವಾರದ ಉತ್ತರಾರ್ಧದಲ್ಲಿ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೀವು ಸಿದ್ಧತೆ ನಡೆಸುತ್ತಿದ್ದರೆ, ಕಠಿಣ ಶ್ರಮ ಪಟ್ಟರೆ ಮಾತ್ರವೇ ನಿಮಗೆ ನಿರೀಕ್ಷಿತ ಯಶಸ್ಸು ದೊರೆಯಲಿದೆ. ಮೂರನೇ ವ್ಯಕ್ತಿಯ ಹಸ್ತಕ್ಷೇಪದ ಕಾರಣ ನಿಮ್ಮ ಪ್ರೇಮ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ಅಂತಹ ಸಂದರ್ಭದಲ್ಲಿ ಸಂವಾದದ ಮೂಲಕ ವಿವಾದವನ್ನು ಬಗೆಹರಿಸಲು ಯತ್ನಿಸಿ. ವಾರದ ಕೊನೆಗೆ ನಿಮ್ಮ ಜೀವನ ಸಂಗಾತಿಯ ಜೊತೆಗೆ ಯಾವುದಾದರೂ ಪುಣ್ಯ ಸ್ಥಳಕ್ಕೆ ಪ್ರವಾಸಕ್ಕೆ ಹೋಗಬಹುದು. ಮನೆಯಲ್ಲಿರುವ ಹಿರಿಯ ವ್ಯಕ್ತಿಯೊಬ್ಬರ ಆರೋಗ್ಯವು ನಿಮ್ಮ ಚಿಂತೆಗೆ ಕಾರಣವೆನಿಸಬಹುದು.
ಧನು: ಒಂದು ವೇಳೆ ಧನು ರಾಶಿಯವರು ತಮ್ಮ ಸಮಯ ಮತ್ತು ಶಕ್ತಿಯನ್ನು ಸರಿಯಾಗಿ ಬಳಸಿಕೊಂಡರೆ ಅವರು ನಿರೀಕ್ಷೆಗಿಂತಲೂ ಹೆಚ್ಚಿನ ಯಶಸ್ಸು ಮತ್ತು ಲಾಭವನ್ನು ಗಳಿಸಬಹುದು. ಈ ಅವಧಿಯಲ್ಲಿ ಪ್ರಭಾವಿ ವ್ಯಕ್ತಿಗಳ ಜೊತೆಗಿನ ನಿಮ್ಮ ಸಂಪರ್ಕವು ಹೆಚ್ಚಲಿದೆ. ಭವಿಷ್ಯದಲ್ಲಿ ಅವರ ಸಹಾಯದ ಮೂಲಕ ಲಾಭದಾಯಕ ಯೋಜನೆಯಲ್ಲಿ ಪಾಲ್ಗೊಳ್ಳಲು ನಿಮಗೆ ಅವಕಾಶ ದೊರೆಯಬಹುದು. ಉದ್ಯೋಗದಲ್ಲಿರುವ ಮಹಿಳೆಯರು ಯಾವುದಾದರೂ ದೊಡ್ಡದಾದ ಸಾಧನೆಯನ್ನು ಮಾಡಬಹುದು. ಇದರಿಂದಾಗಿ ಕೆಲಸದ ಸ್ಥಳದಲ್ಲಿ ಮತ್ತು ಕುಟುಂಬದಲ್ಲಿ ಅವರ ಗೌರವ ಹೆಚ್ಚಲಿದೆ. ಅವಿವಾಹಿತರಿಗೆ ವಿವಾಹದ ಭಾಗ್ಯ ದೊರೆಯಲಿದೆ. ಪ್ರೇಮ ಸಂಬಂಧದಲ್ಲಿ ಭಾವ ತೀವ್ರತೆ ಕಾಣಿಸಿಕೊಳ್ಳಬಹುದು. ನಿಮ್ಮ ಪೋಷಕರು ನಿಮ್ಮ ಪ್ರೇಮ ಸಂಬಂಧವನ್ನು ಒಪ್ಪಿಕೊಂಡು ವಿವಾಹಕ್ಕೆ ಹಸಿರು ನಿಶಾನೆಯನ್ನು ತೋರಿಸಬಹುದು. ವಾರದ ಉತ್ತರಾರ್ಧದಲ್ಲಿ ತಾಯಿಯ ಆರೋಗ್ಯವು ನಿಮ್ಮನ್ನು ಚಿಂತೆಗೀಡು ಮಾಡಬಹುದು. ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಕುರಿತು ಸಾಕಷ್ಟು ಕಾಳಜಿ ವಹಿಸಬೇಕು. ಅಲ್ಲದೆ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ.
ಮಕರ: ಮಕರ ರಾಶಿಯವರು ಈ ವಾರದಲ್ಲಿ ತಮ್ಮ ಜವಾಬ್ದಾರಿಗಳನ್ನು ಈಡೇರಿಸಬೇಕಾದರೆ ಸಾಕಷ್ಟು ಹೆಣಗಾಟ ಮಾಡಬೇಕು ಹಾಗೂ ಕಠಿಣ ಶ್ರಮ ಪಡಬೇಕು. ವಾರದ ಆರಂಭದಲ್ಲಿ, ಮನೆಯ ದುರಸ್ತಿಗೆ ಸಂಬಂಧಿಸಿದಂತೆ ಸಾಕಷ್ಟು ಚಟುವಟಿಕೆಗಳು ನಡೆಯಬಹುದು. ಈ ವಾರದಲ್ಲಿ ಕೆಲವೊಂದು ಹಠಾತ್ ವೆಚ್ಚಗಳು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ನೀವು ಉದ್ಯೋಗವನ್ನು ಅರಸುತ್ತಿದ್ದರೆ, ನೀವು ಇನ್ನೂ ಸ್ವಲ್ಪ ಕಾಲ ಕಾಯಬೇಕಾದೀತು. ಇದೇ ವೇಳೆ ಉದ್ಯೋಗದಲ್ಲಿರುವವರ ಕೆಲಸದ ಭಾರವು ಹೆಚ್ಚಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಭಿನ್ನಾಭಿಪ್ರಾಯಗಳು ಉಲ್ಬಣಗೊಳ್ಳದಂತೆ ನೋಡಿಕೊಳ್ಳಿ. ಸಂವಾದದ ಮೂಲಕ ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸಿ. ಈ ವಾರದಲ್ಲಿ, ನಿಮ್ಮ ಪ್ರೇಮಿಯ ಜೊತೆಗಿನ ಯಾವುದೇ ತಪ್ಪು ಗ್ರಹಿಕೆಯು ನಿಮ್ಮ ಪ್ರೇಮ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಮನೆಯಲ್ಲಿರುವ ಹಿರಿಯ ವ್ಯಕ್ತಿಯೊಬ್ಬರ ಅನಾರೋಗ್ಯವು ನಿಮ್ಮ ಚಿಂತೆಗೆ ಕಾರಣವೆನಿಸಬಹುದು.
ಕುಂಭ: ಈ ವಾರದಲ್ಲಿ, ಕುಂಭ ರಾಶಿಯಲ್ಲಿ ಹುಟ್ಟಿದ ಜನರು ಆಲಸ್ಯವನ್ನು ತ್ಯಜಿಸಬೇಕು ಅಥವಾ ಅಭಿಮಾನವನ್ನು ದೂರ ಮಾಡಬೇಕು. ಇಂತಹ ಸಂದರ್ಭದಲ್ಲಿ ಕೆಲಸವನ್ನು ಮುಂದಿನ ದಿನಕ್ಕೆ ಮುಂದೂಡಬೇಡಿ. ಇಲ್ಲದಿದ್ದರೆ ನಿಮಗೆ ವಿಪರೀತ ನಷ್ಟ ಉಂಟಾಗಬಹುದು. ಉದಾಹರಣೆಗೆ, ಭೂಮಿ ಮತ್ತು ಕಟ್ಟಡಕ್ಕೆ ಸಂಬಂಧಿಸಿದ ವಿವಾದವನ್ನು ನ್ಯಾಯಾಲಕ್ಕೆ ಕೊಂಡೊಯ್ಯುವ ಬದಲಿಗೆ ಪರಸ್ಪರ ಸಂವಾದದ ಮೂಲಕ ಬಗೆಹರಿಸಿ. ವಾರದ ನಡುವಿನ ದಿನಗಳು ವ್ಯವಹಾರಕ್ಕೆ ಅನುಕೂಲಕರವಲ್ಲ. ಈ ಅವಧಿಯಲ್ಲಿ ಆರ್ಥಿಕ ವಹಿವಾಟುಗಳನ್ನು ನಡೆಸುವಾಗ ಸಾಕಷ್ಟು ಎಚ್ಚರಿಕೆ ವಹಿಸಿ. ಯಾವುದೇ ಯೋಜನೆ ಅಥವಾ ಉದ್ದಿಮೆಯಲ್ಲಿ ಹಣವನ್ನು ಎಚ್ಚರಿಕೆಯಿಂದ ಹೂಡಿಕೆ ಮಾಡಬೇಕು. ಇಲ್ಲದಿದ್ದರೆ ನಂತರ ನಷ್ಟ ಉಂಟಾಗಬಹುದು. ಪ್ರಯಾಣಿಸುವ ವೇಳೆ ನಿಮ್ಮ ಬೆಲೆಬಾಳುವ ವಸ್ತುಗಳು ಮತ್ತು ಆರೋಗ್ಯದ ಕುರಿತು ಜಾಗರೂಕತೆ ವಹಿಸಿ. ಪ್ರಣಯ ಸಂಬಂಧದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ನಿಮ್ಮ ವೈವಾಹಿಕ ಜೀವನದಲ್ಲಿ ಸಂತಸ ನೆಲೆಸಬೇಕಾದರೆ ನಿಮ್ಮ ಜೀವನ ಸಂಗಾತಿಯ ಅಗತ್ಯತೆಗಳನ್ನು ನಿರ್ಲಕ್ಷಿಸಬೇಡಿ.
ಮೀನ: ಮೀನ ರಾಶಿಯವರು ಈ ವಾರದ ಮೊದಲಾರ್ಧದಲ್ಲಿ ಕಠಿಣ ಶ್ರಮ ಮತ್ತು ದೃಢ ಸಂಕಲ್ಪದ ಮೂಲಕ ತಮ್ಮ ಗುರಿಯನ್ನು ಸಾಧಿಸಲಿದ್ದಾರೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಇತರರಿಗೆ ವಹಿಸಿಕೊಡುವ ಬದಲಿಗೆ ತಾವೇ ಖುದ್ದಾಗಿ ಪೂರ್ಣಗೊಳಿಸುವುದು ಒಳ್ಳೆಯದು. ಇಲ್ಲದಿದ್ದರೆ ನಿಮ್ಮ ಬಾಸ್ನ ಕೆಂಗಣ್ಣಿಗೆ ಗುರಿಯಾಗಬೇಕಾದೀತು. ಉದ್ಯೋಗದಲ್ಲಿರುವವರಿಗೆ ಆದಾಯದ ಹೆಚ್ಚುವರಿ ಮೂಲಗಳು ದೊರೆಯಬಹುದು. ವ್ಯಾಪಾರಿಗಳ ಪಾಲಿಗೆ ವಾರದ ಪೂರ್ವಾರ್ಧವು ನಿಧಾನವಾಗಿ ಚಲಿಸಲಿದೆ. ಆದರೆ ಉತ್ತರಾರ್ಧದಲ್ಲಿ ಲಾಭ ದೊರೆಯಲಿದೆ. ಈ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಉಂಟಾಗುವ ಪ್ರಗತಿಯನ್ನು ಬಳಸಿಕೊಂಡು ಲಾಭ ಮಾಡುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ನಿಮ್ಮ ಒಟ್ಟು ಸಂಪತ್ತಿನಲ್ಲಿ ವೃದ್ಧಿಯಾಗಲಿದೆ. ಪ್ರೇಮ ಸಂಬಂಧದಲ್ಲಿ ಅನುರಾಗ ನೆಲೆಸಲಿದೆ. ನಿಮ್ಮ ಪ್ರಣಯ ಸಂಗಾತಿಯೊಂದಿಗೆ ಒಳ್ಳೆಯ ಅನುರಾಗ ನೆಲೆಸಲಿದೆ. ಈ ವಾರದಲ್ಲಿ ನಿಮ್ಮ ಆರೋಗ್ಯಕ್ಕೆ ಒತ್ತು ನೀಡಬೇಕು. ಅಲ್ಲದೆ ವೈವಾಹಿಕ ಬದುಕಿನಲ್ಲಿ ಯಶಸ್ಸು ದೊರೆಯಬೇಕಾದರೆ ಸಂಬಂಧಕ್ಕೆ ಆದ್ಯತೆ ನೀಡಬೇಕು. ವಾರದ ಆರಂಭಿಕ ದಿನಗಳಲ್ಲಿ ನೀವು ಋತುಮಾನಕ್ಕೆ ಸಂಬಂಧಿಸಿದ ಅಥವಾ ದೀರ್ಘಕಾಲೀನ ಕಾಯಿಲೆಗೆ ಈಡಾಗಬಹುದು.
ಇದನ್ನೂ ಓದಿ: ಭಾನುವಾರದ ಪಂಚಾಂಗ, ಭವಿಷ್ಯ: ಸಿಂಹ ರಾಶಿಯವರಿಗೆ ಬಂಪರ್, ಕೆಲವರಿಗೆ ಸಂಕಷ್ಟ - Sunday Horoscope