ETV Bharat / spiritual

ಬೆಂಗಳೂರಲ್ಲಿ ಅದ್ಧೂರಿ ಕೃಷ್ಣ ಜನ್ಮಾಷ್ಟಮಿ ಆಚರಣೆ: ರೇಷ್ಮೆ ವಸ್ತ್ರ, ಆಭರಣಗಳಲ್ಲಿ ಮಿಂಚಿದ ಅಲಂಕಾರಪ್ರಿಯ - Krishna Janmashtami - KRISHNA JANMASHTAMI

ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಬೆಂಗಳೂರಿನ ಇಸ್ಕಾನ್ ದೇಗುಲದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಲಾಗಿದೆ. ದೇಗುಲಕ್ಕೆ ಬಂದಿರುವ ಭಕ್ತರು ಕೃಷ್ಣನನ್ನು ಕಣ್ತುಂಬಿಕೊಂಡು ಭಜನೆಯಲ್ಲಿ ಭಾವಪರವಶರಾಗುತ್ತಿದ್ದಾರೆ.

krishna
ಕೃಷ್ಣ (ISKCON)
author img

By ETV Bharat Karnataka Team

Published : Aug 26, 2024, 7:35 PM IST

ಸಿಲಿಕಾನ್ ಸಿಟಿಯಲ್ಲಿ ಅದ್ಧೂರಿ ಕೃಷ್ಣ ಜನ್ಮಾಷ್ಟಮಿ ಆಚರಣೆ (ETV Bharat)

ಬೆಂಗಳೂರು : ಜಗದೋದ್ಧಾರಕನಿಗೆ ಇಂದು ಜನುಮ ದಿನವಾಗಿದೆ. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದಲ್ಲಿ, ಗೋಕುಲಾಷ್ಟಮಿಯನ್ನ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅಲಂಕಾರಪ್ರಿಯ ಕೃಷ್ಣನನ್ನು ನೋಡಲು ನಗರದ ಇಸ್ಕಾನ್ ದೇವಾಲಯದಲ್ಲಿ ಜನಸಾಗರವೇ ಹರಿದುಬರುತ್ತಿದೆ. ಕಲರ್ ಕಲರ್ ಲೈಟಿಂಗ್ಸ್, ಹೂವಿನ ತೋರಣ, ಕೈಯಲ್ಲಿ ಕೊಳಲು, ರೇಷ್ಮೆವಸ್ತ್ರ, ಮಿನುಗುವ ಆಭರಣಗಳನ್ನ ತೊಟ್ಟು ಇಸ್ಕಾನ್​ನಲ್ಲಿ ಶ್ರೀ ಕೃಷ್ಣ ಕಂಗೊಳಿಸುತ್ತಿದ್ದಾನೆ. ಇನ್ನೊಂದೆಡೆ ಭಕ್ತಿ ಭಾವದಲ್ಲಿ ಭಕ್ತ ಸಾಗರ ಲೀನವಾಗಿದೆ.

ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣನು ಹುಟ್ಟಿದ ದಿನವೆಂದು ಎಲ್ಲೆಡೆ ಆ ಗೋಪಿಲೋಲನ ಆರಾಧನೆಯನ್ನು ಮಾಡಲಾಗುತ್ತದೆ. ಕಷ್ಟ ಕಾರ್ಪಣ್ಯದಿಂದ ಕಾಪಾಡಿ ಸಂತಸ ನೀಡಲಿ ಎಂದು ಭಕ್ತರು ಕೃಷ್ಣನನ್ನು ಪೂಜಿಸುತ್ತಿದ್ದಾರೆ. ಈ ಹಿನ್ನಲೆ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಗರದ ಇಸ್ಕಾನ್ ದೇಗುಲದಲ್ಲಿ ನೀಲ ಮೇಘಶಾಮನಿಗೆ ವಿಶೇಷ ಪೂಜೆ ಮತ್ತು ಅಲಂಕಾರವನ್ನ ಮಾಡಲಾಗಿದೆ. ಇನ್ನೂ ಹಲವು ಕೃಷ್ಣ ದೇಗುಲಗಳಲ್ಲಿ ವಿಶೇಷ ಅಭಿಷೇಕ, ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತಿದೆ.

Ugranarasimha
ಉಗ್ರನರಸಿಂಹ (ISKCON)

ಇಸ್ಕಾನ್ ದೇವಸ್ಥಾನವಂತೂ ಸಂಪೂರ್ಣ ವಿವಿಧ ಹೂವುಗಳಿಂದ ಅಲಂಕಾರವಾಗಿದ್ದು, ಕೃಷ್ಣನಿಗೆ ಭೋಗ, ಪುಷ್ಪಾಂಜಲಿ ಸೇವೆ, ಪಲ್ಲಕ್ಕಿ ಉತ್ಸವ ಮತ್ತು ಜೂಲನ್ ಸೇವೆ ಕೂಡ ನೆರವೇರಿಸಲಾಯಿತು. ಅಲ್ಲದೇ 108 ತರಹದ ಪ್ರಸಾದದ ವಿಶೇಷ ನೈವೇದ್ಯ ಮಾಡಲಾಯಿತು. ಇಂದು ಹೆಚ್ಚಿನ ಭಕ್ತರು ಬರುವ ಹಿನ್ನೆಲೆ ಹೆಚ್ಚಿನ ಪೊಲೀಸ್ ಭದ್ರತೆ ಕೂಡ ಆಯೋಜನೆ ಮಾಡಲಾಗಿದೆ. 1500 ಸ್ವಯಂ ಸೇವಕರು ಸೇವೆಯಲ್ಲಿ ನಿರತರಾಗಿದ್ದಾರೆ. ಪಂಚಾಭಿಷೇಕ, ನರಸಿಂಹ ಹೋಮ, ಗುರು ಪೂಜೆ, ಶ್ರೀನಿವಾಸ ದರ್ಶನ ಜೊತೆಗೆ ಕೃಷ್ಣನ ಲೀಲೆಗಳನ್ನು ಒಳಗೊಂಡ ಭಜನೆ ಮಾಡಲಾಗುತ್ತಿದೆ.

Lord Srinivasa
ಶ್ರೀನಿವಾಸ ದೇವರು (ISKCON)

ಇದರ ಜೊತೆಗೆ ಕೃಷ್ಣನ ಹಾಗೂ ರಾಧೆಯ ವೇಷಭೂಷಣ ಧರಿಸಿ ಬಾಲ ಕೃಷ್ಣರು ರಂಜಿಸಿದ್ದಾರೆ. ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ. ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ ಎನ್ನುವ ಮಂತ್ರ ಘೋಷ ಇಸ್ಕಾನ್​ನಲ್ಲಿ ಮಾರ್ದನಿಸುತ್ತಿದೆ. ಮುದ್ದು ಕೃಷ್ಣನನ್ನ ಕಣ್ತುಂಬಿಕೊಳ್ಳುತ್ತಿರುವ ಭಕ್ತರು ಭಜನೆಯಲ್ಲಿ ಭಾವಪರವಶರಾಗುತ್ತಿದ್ದಾರೆ.

ಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ. ಶ್ರೀಕೃಷ್ಣನನ್ನು ನೆನೆಯುತ್ತಿದ್ದಾರೆ. ಇದರಿಂದ ಸಕಲ ಕಷ್ಟಗಳೂ ಸಹ ಕರಗಿ ಹೋಗುತ್ತದೆ. ಕೃಷ್ಣ ಜನ್ಮಾಷ್ಟಮಿಯಂದು ಆ ಭಗವಂತನ ಪೂಜೆ, ಆರಾಧನೆ ಮಾಡಿದರೆ ಫಲ ಸಿಗುವುದು ಖಾತ್ರಿಯಾಗಿದೆ.

Sri Krishna and Radha
ಶ್ರೀ ಕೃಷ್ಣ ಹಾಗೂ ರಾಧೆ (ISKCON)

ಭಕ್ತಿಯಲ್ಲಿ ತೇಲಾಡುತ್ತಿರುವ ಭಕ್ತರು : ಜನ್ಮಾಷ್ಟಮಿಯಂದು ಕೃಷ್ಣನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಈ ದಿನದಂದು ಕೃಷ್ಣನ ಸಾಹಸಗಳನ್ನು ವರ್ಣಿಸುವ ಭಜನೆಗಳು ನಡೆಯಲಿರುವುದು ವಿಶೇಷವಾಗಿದೆ. ಭಕ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಕೃಷ್ಣನ ದರ್ಶನ ಪಡೆಯುತ್ತಿದ್ದಾರೆ. ಮುಂಜಾನೆ 6 ಗಂಟೆಯಿಂದಲೇ ಭಕ್ತದ ದಂಡು ಆಗಮಿಸಿದೆ. ಬೆಳಗ್ಗಿನಿಂದಲೇ ಭಕ್ತರು ಕೃಷ್ಣನ ಭಜನೆ ಮಾಡಿ ಭಕ್ತಿ ಸಾಗರದಲ್ಲಿ ತೇಲಾಡುತ್ತಿದ್ದಾರೆ. ನೀಲ ಮೇಘಶಾಮನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ ಎಂದು ಇಸ್ಕಾನ್ ಸಿಬ್ಬಂದಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಪೊಡವಿಗೊಡೆಯನ ನಾಡಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ: ವಿಟ್ಲಪಿಂಡಿ ಉತ್ಸವಕ್ಕೆ ಕ್ಷಣಗಣನೆ - SHRIKRISHNA JANMASHTAMI

ETV Bharat Logo

Copyright © 2025 Ushodaya Enterprises Pvt. Ltd., All Rights Reserved.