ಮೇಷ : ಮೇಷ ರಾಶಿಯವರು ಈ ವಾರವನ್ನು ಆನಂದಿಸಲಿದ್ದಾರೆ. ಆದರೆ ವೃತ್ತಿಯನ್ನು ಬದಲಾಯಿಸಲು ಇಚ್ಛಿಸುವ ಉದ್ಯೋಗಸ್ಥರಿಗೆ ಇದು ಸಕಾಲವಲ್ಲ. ಇಂತಹ ಸಂದರ್ಭದಲ್ಲಿ ನೀವು ಈಗ ಎಲ್ಲಿದ್ದೀರೋ ಅಲ್ಲೇ ಕೆಲಸವನ್ನು ಮುಂದುವರಿಸುವುದು ಒಳ್ಳೆಯದು. ವ್ಯಾಪಾರೋದ್ಯಮಿಗಳು ಈ ವಾರದಲ್ಲಿ ಅತಿಯಾದ ಆತ್ಮವಿಶ್ವಾಸವನ್ನು ತೋರಬಹುದು. ಇಂತಹ ಸಂದರ್ಭದಲ್ಲಿ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಆರೋಗ್ಯದ ಕುರಿತು ಹೇಳುವುದಾದರೆ, ಈ ವಾರದಲ್ಲಿ ನೀವು ಸ್ವಲ್ಪ ಮಾನಸಿಕ ಒತ್ತಡವನ್ನು ಅನುಭವಿಸಬಹುದು. ಹೀಗಾಗಿ ಏಕಾಂಗಿಯಾಗಿ ಸಮಯ ಕಳೆಯುವ ಬದಲಿಗೆ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಕುಳಿತು ಕೊಂಡು ಅವರೊಂದಿಗೆ ಮಾತನಾಡಿ. ವಿವಾಹಿತ ವ್ಯಕ್ತಿಗಳ ಬದುಕಿನಲ್ಲಿ ಸಂಘರ್ಷ ಕಾಣಿಸಿಕೊಳ್ಳಬಹುದು. ಪ್ರಣಯ ಸಂಬಂಧದಲ್ಲಿಯೂ ಯಶಸ್ಸು ಕಾಣಿಸದು. ಇಂತಹ ಸನ್ನಿವೇಶದಲ್ಲಿ ತಾಳ್ಮೆಯಿಂದ ವರ್ತಿಸುವುದು ಒಳ್ಳೆಯದು. ಶಿಕ್ಷಣದ ವಿಚಾರ ಬಂದಾಗ, ಏಕಾಗ್ರತೆಯಿಂದ ಕಲಿತರೆ ಮಾತ್ರವೇ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಆರ್ಥಿಕವಾಗಿ ಈ ವಾರವು ದುಬಾರಿ ಎನಿಸಲಿದೆ. ಹಣ ಉಳಿತಾಯ ಮಾಡಲು ನಿಮಗೆ ಸಾಧ್ಯವಾಗದು.
ವೃಷಭ : ವೃಷಭ ರಾಶಿಯಲ್ಲಿ ಜನಿಸಿದವರಿಗೆ ಈ ವಾರದಲ್ಲಿ ಮಿಶ್ರಫಲ ದೊರೆಯಲಿದೆ. ಮುಖ್ಯವಾಗಿ ನಿಮ್ಮ ಆರೋಗ್ಯದ ಕುರಿತು ನೀವು ಸಾಕಷ್ಟು ಕಾಳಜಿ ವಹಿಸಬೇಕು. ಈ ಕುರಿತು ಅಜಾಗರೂಕತೆ ಸಲ್ಲದು. ಇಲ್ಲದಿದ್ದರೆ ನಿಮಗೆ ಕಿಬ್ಬೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಉದ್ಯೋಗದಲ್ಲಿರುವವರು ಈ ವಾರದಲ್ಲಿ ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸಲಿದ್ದಾರೆ. ವ್ಯಾಪಾರೋದ್ಯಮಿಗಳ ಸಂಸ್ಥೆಯಲ್ಲಿ ಏರುಪೇರು ಕಾಣಿಸಿಕೊಳ್ಳಬಹುದು. ಈ ವಾರದಲ್ಲಿ ನಿಮ್ಮ ಪ್ರಣಯ ಸಂಬಂಧದಲ್ಲಿ ಧನಾತ್ಮಕ ಫಲಿತಾಂಶ ಲಭಿಸಲಿದೆ. ನಿಮ್ಮ ಸಂಗಾತಿ ಹಾಗೂ ನೀವು ಒಟ್ಟಿಗೆ ಪ್ರಣಯಭರಿತ ಸಮಯವನ್ನು ಕಳೆಯಲಿದ್ದೀರಿ. ರಿಯಲ್ ಎಸ್ಟೇಟ್ ಹಾಗೂ ಹಣಕಾಸಿಗೆ ಸಂಬಂಧಿಸಿದಂತೆ ಈ ವಾರವು ಅನುಕೂಲಕರವಾಗಿದೆ. ಜಮೀನಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಹೂಡಿಕೆ ಮಾಡಲು ನೀವು ಇಚ್ಛಿಸುವುದಾದರೆ ಲಾಭ ದೊರೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ಸನ್ನು ಗಳಿಸಬೇಕಾದರೆ ಅವರು ಇನ್ನಷ್ಟು ಪ್ರಯತ್ನವನ್ನು ಪಡಬೇಕು.
ಮಿಥುನ : ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಈ ವಾರವು ಅನುಕೂಲಕರವಾಗಿದೆ. ನಿಮ್ಮ ಅರೋಗ್ಯವು ಚೆನ್ನಾಗಿರಲಿದೆ. ಆದರೆ ನೀವು ಆರೋಗ್ಯವನ್ನು ನಿರ್ಲಕ್ಷಿಸಿದರೆ ಹಿಂದಿನ ಕಾಯಿಲೆಯು ಮರುಕಳಿಸಬಹುದು. ಉದ್ಯೋಗದಲ್ಲಿರುವವರಿಗೆ ಈ ಸಮಯವು ಸಾಕಷ್ಟು ಲಾಭದಾಯಕ ಎನಿಸಲಿದೆ. ನೀವು ಉದ್ಯೋಗದಲ್ಲಿ ಬದಲಾವಣೆ ಮಾಡಲು ಇಚ್ಛಿಸುವುದಾದರೆ ಇದು ಸಕಾಲ. ಆದರೆ ವ್ಯಾಪಾರೋದ್ಯಮಿಗಳು ಎಚ್ಚರ ವಹಿಸಬೇಕು. ಏಕೆಂದರೆ ಅವರಿಗೆ ಒಂದಷ್ಟು ನಷ್ಟ ಉಂಟಾಗಬಹುದು. ಪ್ರಣಯ ಸಂಬಂಧದಲ್ಲಿ ಗೊಂದಲ ಮತ್ತು ಅನಿಶ್ಚಿತತೆಯು ಎದುರಾಗಬಹುದು. ವಿವಾಹಿತರು ತಮ್ಮ ಸಮಯವನ್ನು ಒಟ್ಟಿಗೆ ಕಳೆಯಲಿದ್ದಾರೆ. ಹಣಕ್ಕೆ ಸಂಬಂಧಿಸಿದಂತೆ ಈ ವಾರದಲ್ಲಿ ಎಚ್ಚರ ವಹಿಸಬೇಕು. ಈ ಸಮಯದಲ್ಲಿ ಹಣವನ್ನು ಕಳೆದುಕೊಳ್ಳುವ ಭೀತಿ ಇಲ್ಲದೆ ಖರ್ಚು ಮಾಡುವ ಯಾವುದಾದರೂ ವಿಷಯದತ್ತ ನಿಮ್ಮ ಗಮನ ಸೆಳೆಯಬಹುದು.
ಕರ್ಕಾಟಕ : ಕರ್ಕಾಟಕ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರವು ಅನುಕೂಲಕರವಾಗಿದೆ. ನಿಮ್ಮ ಅರೋಗ್ಯದ ಕುರಿತು ಹೇಳುವುದಾದರೆ, ಎಲ್ಲವೂ ಚೆನ್ನಾಗಿರಲಿದೆ. ಅದರೆ ಹವಾಮಾನದಲ್ಲಿ ಬದಲಾವಣೆ ಉಂಟಾಗುವ ಕಾರಣ ಶೀತ ಅಥವಾ ಕೆಮ್ಮವು ನಿಮ್ಮನ್ನು ಬಾಧಿಸಬಹುದು. ಈ ವಾರದಲ್ಲಿ ನಿಮ್ಮ ಆದಾಯದಲ್ಲಿ ಸಾಕಷ್ಟು ಹೆಚ್ಚಳ ಉಂಟಾಗುವ ಕಾರಣ ನಿಮಗೆ ಹಣದ ಕೊರತೆ ಕಾಣಿಸದು. ಉದ್ಯೋಗದಲ್ಲಿರುವವರು ಕಚೇರಿಯ ರಾಜಕಾರಣದ ಕುರಿತು ಈ ವಾರದಲ್ಲಿ ಸ್ವಲ್ಪ ಎಚ್ಚರ ವಹಿಸಬೇಕು. ವ್ಯಾಪಾರೋದ್ಯಮಿಗಳು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ತಜ್ಞರೊಂದಿಗೆ ಸಮಾಲೋಚಿಸಬೇಕು. ವೈವಾಹಿಕ ಬದುಕಿನ ಕುರಿತು ಹೇಳುವುದಾದರೆ ಈ ವಾರವು ಅನುಕೂಲಕರವಾಗಿರುತ್ತದೆ. ಪ್ರಣಯ ಸಂಬಂಧದ ಕುರಿತು ಹೇಳುವುದಾದರೆ, ಈ ವಾರದಲ್ಲಿ ನೀವು ಯಾರನ್ನಾದರೂ ಭೇಟಿಯಾಗಲಿದ್ದು, ಅವರು ನಿಮ್ಮ ಸಂತಸಕ್ಕೆ ಕಾರಣವೆನಿಸಲಿದ್ದಾರೆ. ಒತ್ತಡಕ್ಕೆ ಒಳಗಾದವರು ಆಪ್ತ ಸಮಾಲೋಚನೆಗೆ ಒಳಗಾದಲ್ಲಿ ಈ ಒತ್ತಡದಿಂದ ಹೊರಬರಲು ಅವರಿಗೆ ನೆರವು ದೊರೆಯಲಿದೆ.
ಸಿಂಹ : ಉದ್ಯೋಗದಲ್ಲಿರುವ ಸಿಂಹ ರಾಶಿಯವರಿಗೆ ಈ ವಾರವು ಅನುಕೂಲಕರವಾಗಿದೆ. ಅವರು ನಿರೀಕ್ಷಿತ ಫಲಿತಾಂಶವನ್ನು ಗಳಿಸಬಹುದು. ಉನ್ನತ ಮಟ್ಟದ ಸಭೆಯೊಂದರಲ್ಲಿ ಪಾಲ್ಗೊಳ್ಳುವುದರಿಂದ ವ್ಯಾಪಾರೋದ್ಯಮಿಗಳ ಕಾರ್ಯನಿರ್ವಹಣೆಯ ಮೇಲೆ ಪ್ರಭಾವ ಉಂಟಾಗಲಿದೆ. ನೀವು ರಿಯಲ್ ಎಸ್ಟೇಟ್ ನಲ್ಲಿ ಹಣ ಹೂಡಿಕೆ ಮಾಡಿದರೆ ನೀವು ಹಣ ಗಳಿಸಬಹುದು. ಆದರೆ ಶೇರು ಮಾರುಕಟ್ಟೆ ಅಥವಾ ಇತರ ಯಾವುದೇ ಸಟ್ಟಾ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ನೀವು ಹಣವನ್ನು ಕಳೆದುಕೊಳ್ಳಬಹುದು. ನಿಮ್ಮ ಪ್ರಣಯ ಸಂಬಂಧದ ಕುರಿತು ಹೇಳುವುದಾದರೆ, ಯಾವುದಾದರೂ ಸಮಸ್ಯೆಯ ಕಾರಣ ಈ ವಾರದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ವೈವಾಹಿಕ ಬದುಕಿನಲ್ಲಿಯೂ ತೊಂದರೆ ಹಾಗೂ ಒತ್ತಡ ಕಾಣಿಸಿಕೊಳ್ಳಬಹುದು. ನಿಮ್ಮ ಅಹಂ ಇದಕ್ಕೆಲ್ಲ ಕಾರಣವೆನಿಸಬಹುದು. ಇಂತಹ ಸಂದರ್ಭದಲ್ಲಿ ಇದರಿಂದ ದೂರವಿರಿ. ನಿಮ್ಮ ಅರೋಗ್ಯದ ಕುರಿತು ಹೇಳುವುದಾದರೆ, ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಅಲ್ಲದೆ ಗಂಟಲಿನ ಸೋಂಕು ಸಹ ನಿಮಗೆ ಸಾಕಷ್ಟು ಅನನುಕೂಲತೆಯನ್ನುಂಟು ಮಾಡಬಹುದು.
ಕನ್ಯಾ : ಕನ್ಯಾ ರಾಶಿಯವರು ಈ ವಾರವನ್ನು ಆನಂದಿಸಲಿದ್ದಾರೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು, ಮಾರುಕಟ್ಟೆಯ ಕುರಿತು ಸಾಕಷ್ಟು ಜ್ಞಾನವಿರುವ ವ್ಯಕ್ತಿಯನ್ನು ಭೇಟಿಯಾಗಬಹುದು. ಈ ವಾರದಲ್ಲಿ, ಉದ್ಯೋಗದಲ್ಲಿರುವವರಿಗೆ ಗ್ರಹಗಳ ಸಂಪೂರ್ಣ ನೆರವು ದೊರೆಯಲಿದೆ. ಕೆಲಸದಲ್ಲಿ ನೀವು ಸಂಪೂರ್ಣ ಶ್ರಮ ಮತ್ತು ಪ್ರಯತ್ನವನ್ನು ಹಾಕಲಿದ್ದೀರಿ. ಈ ವಾರದಲ್ಲಿ ನೀವು ಸಾಕಷ್ಟು ಹಣವನ್ನು ಗಳಿಸಬಹುದು. ಆದರೆ ನಿಮಗೆ ಅಧಿಕ ಖರ್ಚುವೆಚ್ಚ ಉಂಟಾಗಬಹುದು. ನಿಮ್ಮ ಪ್ರಣಯ ಸಂಬಂಧದ ಕುರಿತು ಹೇಳುವುದಾದರೆ, ನೀವು ಪ್ರೀತಿಸುವ ವ್ಯಕ್ತಿಯ ಕುರಿತು ಯಾವುದೇ ಸಂದೇಹ ವ್ಯಕ್ತಪಡಿಸದಿದ್ದರೆ ಒಳ್ಳೆಯದು. ವಿವಾಹಿತ ವ್ಯಕ್ತಿಗಳು ಹಿಂದಿನ ಯಾವುದೇ ಸಮಸ್ಯೆಗಳನ್ನು ಕೆದಕದೆ ಮುಂದೆ ಸಾಗಿದರೆ ಒಳ್ಳೆಯದು. ಏಕೆಂದರೆ ಇದು ಕೌಟುಂಬಿಕ ಬದುಕಿನಲ್ಲಿ ಸಂಘರ್ಷಕ್ಕೆ ಕಾರಣವೆನಿಸಬಹುದು. ಆರೋಗ್ಯದ ಕುರಿತು ಹೇಳುವುದಾದರೆ, ವಾರದ ಆರಂಭದಲ್ಲಿ ನೀವು ಹವಾಮಾನದ ವೈಪರೀತ್ಯಕ್ಕೆ ಒಳಗಾಗಬಹುದು. ಅಂತಹ ಸಂದರ್ಭದಲ್ಲಿ ಆರೋಗ್ಯವನ್ನು ಕಾಪಾಡುವುದಕ್ಕಾಗಿ ನಿಮ್ಮ ದಿನಚರಿಯಲ್ಲಿ ಬೆಳಗ್ಗಿನ ನಡಿಗೆ ಮತ್ತು ಯೋಗವನ್ನು ಒಳಗೊಂಡರೆ ಒಳ್ಳೆಯದು.
ತುಲಾ : ತುಲಾ ರಾಶಿಯವರು ಈ ವಾರವನ್ನು ಆನಂದಿಸಲಿದ್ದಾರೆ. ಈ ವಾರದಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ ಕಾರ್ಯಕ್ಕೆ ಗಮನ ನೀಡುವುದಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಲಿದ್ದಾರೆ. ನೀವು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಅಧ್ಯಯನ ನಡೆಸುತ್ತಿದ್ದರೆ ಯಶಸ್ಸನ್ನು ಗಳಿಸಲಿದ್ದೀರಿ. ಪ್ರಣಯ ಸಂಬಂಧದ ವಿಚಾರ ಬಂದಾಗ, ಅಹಂನಿಂದ ವರ್ತಿಸಿದರೆ ನಿಮ್ಮ ಸಂಬಂಧಕ್ಕೆ ಹಾನಿ ಉಂಟಾಗಲಿದೆ. ಇಂತಹ ಸಂದರ್ಭದಲ್ಲಿ ನಿಮ್ಮ ವರ್ತನೆಯನ್ನು ಬದಲಾಯಿಸಲು ಯತ್ನಿಸಿ. ವಿವಾಹಿತ ಜೋಡಿಗಳು ಈ ವಾರದಲ್ಲಿ ಯಾವುದೇ ರೀತಿಯ ವಾಗ್ವಾದವನ್ನು ಮಾಡದೆ ಇದ್ದರೆ ಒಳ್ಳೆಯದು. ಪರಸ್ಪರ ಕಾಳಜಿಯಿಂದ ವರ್ತಿಸಿ ಹಾಗೂ ಯಾವುದನ್ನೂ ವಿಪರೀತವಾಗಿ ಎಳೆಯಬೇಡಿ. ನಿಮ್ಮ ವೃತ್ತಿಯಲ್ಲಿ ಪ್ರಗತಿ ಸಾಧಿಸಬೇಕಾದರೆ ಈ ವಾರದಲ್ಲಿ ನೀವು ಶೃದ್ಧೆಯಿಂದ ಹಾಗೂ ಎಚ್ಚರದಿಂದ ಕೆಲಸ ಮಾಡಬೇಕು. ನಿಮ್ಮ ಯೋಜನೆಗಳನ್ನು ಯಾರೂ ವಿಫಲಗೊಳಿಸದಂತೆ ಎಚ್ಚರ ವಹಿಸಿ. ಈ ವಾರದಲ್ಲಿ ನಿಮ್ಮ ಆರೋಗ್ಯವು ಸ್ವಲ್ಪ ದುರ್ಬಲವಾಗಿರಲಿದೆ. ಹೊಟ್ಟೆನೋವಿನ ಸಮಸ್ಯೆಯು ನಿಮ್ಮನ್ನು ಕಾಡಬಹುದು. ಅಂತಹ ಸಂದರ್ಭದಲ್ಲಿ ನಿಮ್ಮ ಆಹಾರಕ್ಕೆ ಸಾಕಷ್ಟು ಗಮನ ವಹಿಸಿ.
ವೃಶ್ಚಿಕ : ವೃಶ್ಚಿಕ ರಾಶಿಯವರಿಗೆ ಇದು ಉತ್ತಮ ವಾರ. ನಿಮ್ಮ ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಹೊಸ ವ್ಯಕ್ತಿಯೊಬ್ಬರನ್ನು ಭೇಟಿಯಾಗಲಿದ್ದು, ನಿಮ್ಮ ಸಂಸ್ಥೆಯನ್ನು ಬೆಳೆಸಲು ಅವರು ಸಹಾಯ ಮಾಡಲಿದ್ದಾರೆ. ಉದ್ಯೋಗದಲ್ಲಿರುವವರಿಗೆ ಈ ವಾರದಲ್ಲಿ ಘನತೆ ಮತ್ತು ಗೌರವ ದೊರೆಯಲಿದೆ. ನಿಮ್ಮ ಯಾರಾದರೂ ಗೆಳೆಯರು ನಿಮಗೆ ಹಣವನ್ನು ವಾಪಸ್ ನೀಡದೆ ಇದ್ದಲ್ಲಿ, ಈ ವಾರದಲ್ಲಿ ನಿಮ್ಮ ಹಣವನ್ನು ನೀವು ವಾಪಸ್ ಪಡೆಯಬಹುದು. ನಿಮ್ಮ ಪ್ರೇಮಿಗೆ ನೀವು ಸಾಕಷ್ಟು ಸಮಯ ಮತ್ತು ಗಮನವನ್ನು ನೀಡಿದರೆ ಪ್ರೇಮ ಸಂಬಂಧದಲ್ಲಿ ಅನುರಾಗವು ಮುಂದುವರಿಯಲಿದೆ. ಇಲ್ಲದಿದ್ದರೆ ಸಂಬಂಧದಲ್ಲಿ ಸ್ವಲ್ಪ ಅಂತರ ಕಾಣಿಸಿಕೊಳ್ಳಬಹುದು. ವಿವಾಹಿತ ವ್ಯಕ್ತಿಗಳು ಮಾತಿನ ಮೇಲೆ ನಿಗಾ ಇರಿಸಬೇಕು. ಇಲ್ಲದಿದ್ದರೆ ಅವರ ಬದುಕಿನಲ್ಲಿ ಸಂಘರ್ಷ ಉಂಟಾಗಬಹುದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ತಾಪಮಾನದಲ್ಲಿ ಬದಲಾವಣೆ ಉಂಟಾಗುವ ಕಾರಣ ಈ ವಾರದಲ್ಲಿ ಶೀತ ಅಥವಾ ಕೆಮ್ಮಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ಮಕ್ಕಳು ಬಿಸಿ ಅಥವಾ ತಣ್ಣನೆಯ ಆಹಾರವನ್ನು ವಿಪರೀತವಾಗಿ ಸೇವಿಸಬಾರದು.
ಧನು : ಧನು ರಾಶಿಯಲ್ಲಿ ಜನಿಸಿದವರಿಗೆ ಈ ವಾರವು ಅನುಕೂಲಕರವಾಗಿದೆ. ವ್ಯಾಪಾರೋದ್ಯಮಿಗಳು ವಿದೇಶಿ ಸಂಸ್ಥೆಯ ಜೊತೆಗೆ ಸಹಭಾಗಿತ್ವವನ್ನು ಸಾಧಿಸಬಹುದು. ಈ ವಾರದಲ್ಲಿ, ಉದ್ಯೋಗದಲ್ಲಿರುವವರಿಗೆ ಅವರ ಕಠಿಣ ಶ್ರಮಕ್ಕಾಗಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಲಿದೆ. ನೀವು ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದರೆ ಅದರಲ್ಲಿ ಯಶಸ್ಸು ಲಭಿಸಲಿದೆ. ಪ್ರಣಯ ಸಂಬಂಧದ ಕುರಿತು ಹೇಳುವುದಾದರೆ, ನಿಮ್ಮ ಸಂಗಾತಿಯೊಂದಿಗೆ ಸಾಮರಸ್ಯವನ್ನು ಕಾಪಾಡುವುದಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಿರಿ. ವೈವಾಹಿಕ ಬದುಕಿನ ಕುರಿತು ಹೇಳುವುದಾದರೆ ಈ ವಾರವು ಅನುಕೂಲಕರವಾಗಿರುತ್ತದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಈ ವಾರದಲ್ಲಿ ವಿಹಾರಕ್ಕೆ ಹೋಗಲಿದ್ದೀರಿ. ಆರೋಗ್ಯದ ಕುರಿತು ಹೇಳುವುದಾದರೆ, ಈ ವಾರದಲ್ಲಿ ನಿಮ್ಮಲ್ಲಿ ದೈಹಿಕ ನೋವು ಕಾಣಿಸಿಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ನೀವು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು ಮತ್ತು ಪ್ರತಿ ದಿನವೂ ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳಬೇಕು.
ಮಕರ : ಮಕರ ರಾಶಿಯವರಿಗೆ ಈ ವಾರದಲ್ಲಿ ಉತ್ತಮ ಫಲ ದೊರೆಯಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದ ಸಾಮರ್ಥ್ಯಕ್ಕಾಗಿ ಮನ್ನಣೆಯನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ವ್ಯಾಪಾರೋದ್ಯಮಿಗಳಿಗೆ ಲಾಭ ದೊರೆಯಲಿದೆ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ಈ ವಾರದಲ್ಲಿ ನಿಮಗೆ ದೌರ್ಬಲ್ಯವು ಕಾಡಲಿದೆ. ಹೀಗಾಗಿ ಕೆಲಸದ ನಡುವೆ ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಮಾತನಾಡುವುದಾದರೆ, ಸಮಯವು ನಿಮ್ಮ ಪರವಾಗಿದೆ. ನಿಮ್ಮ ದೈನಂದಿನ ಆದಾಯವು ಚೆನ್ನಾಗಿರಲಿದ್ದು, ನಿಮ್ಮ ಆತ್ಮೀಯರಿಂದ ಆರ್ಥಿಕ ನೆರವು ಸಹ ದೊರೆಯಲಿದೆ. ಈ ವಾರದಲ್ಲಿ ನಿಮಗೆ ಶೈಕ್ಷಣಿಕವಾಗಿ ಹಿನ್ನಡೆ ಉಂಟಾಗಲಿದ್ದು, ನಿಮ್ಮ ಶಿಕ್ಷಣದ ಮೇಲೆ ಗಮನ ನೀಡುವುದು ಕಷ್ಟಕರವಾದೀತು. ಈ ವಾರದಲ್ಲಿ ನಿಮ್ಮ ಪ್ರಣಯ ಸಂಬಂಧವು ಚೆನ್ನಾಗಿರಲಿದೆ. ವೈವಾಹಿಕ ಬದುಕಿನ ಕುರಿತು ನಾವು ಮಾತನಾಡುವುದಾದರೆ, ಈ ವಾರದಲ್ಲಿ ನಿಮ್ಮ ಜೀವನ ಸಂಗಾತಿಯೊಂದಿಗೆ ಸಾಕಷ್ಟು ಅನುರಾಗದ ಕ್ಷಣಗಳನ್ನು ಕಳೆಯಲಿದ್ದೀರಿ.
ಕುಂಭ : ಕುಂಭ ರಾಶಿಯಲ್ಲಿ ಜನಿಸಿದವರಿಗೆ ಈ ವಾರವು ಅನುಕೂಲಕರವಾಗಿದೆ. ಉದ್ಯೋಗದಲ್ಲಿರುವ ಜನರಿಗೆ ಸಂಬಂಧಿಸಿದಂತೆ ನೀವು ಕೆಲಸ ಮಾಡುವಲ್ಲಿ ಅಗತ್ಯ ಕೌಶಲ್ಯಗಳನ್ನು ಗಳಿಸಿಕೊಳ್ಳಲಿದ್ದೀರಿ. ನಿಮ್ಮ ಉದ್ಯೋಗದಲ್ಲಿ ನಿಮ್ಮ ಪ್ರಯತ್ನಗಳನ್ನು ಗೌರವಿಸಲಾಗುತ್ತದೆ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ಇದು ಹದಗೆಡುವ ಸಾಧ್ಯತೆ ಇದೆ. ಯಾವುದೇ ರೋಗ ತಗಲದಂತೆ ನೋಡಿಕೊಳ್ಳಬೇಕಾದರೆ ನಿಮ್ಮ ಆಹಾರಕ್ರಮವನ್ನು ನಿಯಂತ್ರಣದಲ್ಲಿರಿಸಬೇಕು. ವ್ಯಾಪಾರೋದ್ಯಮಿಗಳಿಗೆ ಈ ವಾರವು ಸವಾಲಿನಿಂದ ಕೂಡಿರಲಿದೆ. ಉದ್ಯೋಗದಲ್ಲಿರುವವರಿಗೆ ಈ ಸಮಯದಲ್ಲಿ ಪ್ರಯೋಜನ ಉಂಟಾಗಲಿದ್ದು, ಅವರಿಗೆ ಬಡ್ತಿಯೂ ದೊರೆಯಬಹುದು. ಈ ವಾರದಲ್ಲಿ ನಿಮ್ಮ ಖರ್ಚುವೆಚ್ಚದಲ್ಲಿ ವಿಪರೀತ ಹೆಚ್ಚಳ ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ಖರ್ಚುವೆಚ್ಚವನ್ನು ನಿಯಂತ್ರಣದಲ್ಲಿರಿಸಿ. ಏನಾದರೂ ಕಾರಣಕ್ಕಾಗಿ ಪ್ರಣಯ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ಅಲ್ಲದೆ ವೈವಾಹಿಕ ಬದುಕು ಒತ್ತಡದಿಂದ ಕೂಡಿರಲಿದೆ. ಆದಷ್ಟು ಮಟ್ಟಿಗೆ ಸಾವಧಾನತೆಯನ್ನು ಕಾಪಾಡಿ ಹಾಗೂ ಇಂತಹ ಸಂದರ್ಭದಲ್ಲಿ ನಿಮ್ಮ ಸಂಗಾತಿಯ ಜೊತೆಗೆ ಸಾಮರಸ್ಯವನ್ನು ಕಾಪಾಡಿ.
ಮೀನ : ಮೀನ ರಾಶಿಯವರ ಪಾಲಿಗೆ ಈ ವಾರವು ಅನುಕೂಲಕರವಾಗಿದೆ. ವ್ಯವಹಾರದಲ್ಲಿರುವ ಜನರು ಯಶಸ್ಸನ್ನು ಗಳಿಸಲಿದ್ದಾರೆ. ಉದ್ಯೋಗದಲ್ಲಿರುವವರಿಗೆ ಈ ಅವಧಿಯಲ್ಲಿ ಲಾಭ ಉಂಟಾಗಲಿದೆ. ಈಗ ಇರುವ ವ್ಯವಸ್ಥೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ನಿಮಗೆ ಸಾಧ್ಯವಾಗಲಿದೆ. ನಿಮ್ಮ ಮೇಲ್ವಿಚಾರಕರು ಮತ್ತು ಸಹೋದ್ಯೋಗಿಗಳು ನಿಮ್ಮನ್ನು ಪ್ರಶಂಸಿಸಲಿದ್ದಾರೆ. ಆರೋಗ್ಯದ ಕುರಿತು ಹೇಳುವುದಾದರೆ, ಕೆಲವು ಕೆಲಸಗಳ ಕಾರಣ ಮಾನಸಿಕ ಒತ್ತಡ ಉಂಟಾಗಲಿದ್ದು ಇದರಿಂದಾಗಿ ನೀವು ಅನಾರೋಗ್ಯಕ್ಕೆ ಈಡಾಗಬಹುದು. ನಿಮ್ಮ ಪ್ರಣಯ ಸಂಬಂಧದ ಕುರಿತು ಹೇಳುವುದಾದರೆ, ಈ ವಾರದಲ್ಲಿ ನಿಮ್ಮ ಸಂಗಾತಿಯ ಜೊತೆಗೆ ನೀವು ಸಮಯವನ್ನು ಕಳೆಯಲಿದ್ದೀರಿ. ಇದೇ ವೇಳೆ, ವೈವಾಹಿಕ ಬದುಕಿನಲ್ಲಿ ಉಂಟಾಗಿರುವ ಅಂತರವು ಕಡಿಮೆಯಾಗಲಿದೆ. ಆರ್ಥಿಕವಾಗಿ ಸಮಯವು ಅತ್ಯುತ್ತಮವಾದುದು. ಯಾರಿಗಾದರೂ ನೀವು ಸಾಲದ ರೂಪದಲ್ಲಿ ನೀಡಿದ ಹಣವು ವಾಪಾಸ್ ಬರುವುದರಿಂದ ನಿಜಕ್ಕೂ ನಿಮಗೆ ಸಂತಸ ಲಭಿಸಲಿದೆ.