ETV Bharat / opinion

ಕ್ರೆಡಿಟ್​ ರೇಟಿಂಗ್​ ಏಜೆನ್ಸಿಗಳ ಕೆಲಸವೇನು? ನಿಖರ ರೇಟಿಂಗ್‌​ ನೀಡುವಂತೆ ಭಾರತದ ಒತ್ತಾಯವೇಕೆ? - CREDIT RATING AGENCIES

ಐಎಂಎಫ್​ನ ವಾರ್ಷಿಕ ಸಭೆಯಲ್ಲಿ 'ಉದಯೋನ್ಮಖ ಮಾರುಕಟ್ಟೆ ಮತ್ತು ಅಭಿವೃದ್ಧಿ ಆರ್ಥಿಕತೆ' ಕುರಿತು ಮಾತನಾಡುವಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಸರ್ವಭೌಮದ ರೇಟಿಂಗ್​ನಲ್ಲಿ ನಿಖರತೆ ಮತ್ತು ನ್ಯಾಯ ಸಮ್ಮತೆಯನ್ನು ಒತ್ತಿ ಹೇಳಿದರು.

india-demanded-fair-and-accurate-sovereign-rating-by-credit-rating-agencies
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ (ETV Bharat)
author img

By ETV Bharat Karnataka Team

Published : Oct 28, 2024, 4:52 PM IST

ಉದಯೋನ್ಮುಖ ಆರ್ಥಿಕತೆಯಾಗಿ ಹೊರಹೊಮ್ಮುತ್ತಿರುವ ಭಾರತಕ್ಕೆ ವಿದೇಶಿ ಬಂಡವಾಳದ ಲಭ್ಯತೆಗಾಗಿ ಕ್ರೆಡಿಟ್​ ರೇಟಿಂಗ್​ ಏಜೆನ್ಸಿಗಳು ನ್ಯಾಯಸಮ್ಮತ ಮತ್ತು ನಿಖರ ರೇಟಿಂಗ್​ ನೀಡಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಒತ್ತಾಯಿಸಿದ್ದಾರೆ.

ಮೂಡಿಸ್, ಫಿಚ್ ಮತ್ತು ಸ್ಟ್ಯಾಂಡರ್ಡ್ ಮತ್ತು ಪೂವರ್ಸ್‌ನಂಥ ಸಂಸ್ಥೆಗಳ ನೀತಿ, ನಿರೂಪಕರು ಭಾರತೀಯ ಆರ್ಥಿಕತೆಯ ಗಾತ್ರ ಮತ್ತು ಬೆಳವಣಿಗೆಯ ಕುರಿತು ರೇಟಿಂಗ್​ ನೀಡುತ್ತಿದ್ದಾರೆ. ಆದರೆ, ಈ ಏಜೆನ್ಸಿಗಳು ನೀಡುವ ರೇಟಿಂಗ್​ಗಿಂತ ಭಾರತದ ಆರ್ಥಿಕತೆ ಇನ್ನಷ್ಟು ಮೇಲ್ಮಟ್ಟದಲ್ಲಿದೆ. ರೇಟಿಂಗ್​ ಏಜೆನ್ಸಿಗಳು ಸುಧಾರಣೆ ದರದ ಮಾದರಿಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ಸಚಿವೆ ನಿರ್ಮಲಾ ಸಲಹೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್)​ಯ ವಾರ್ಷಿಕ ಸಭೆಯಲ್ಲಿ 'ಉದಯೋನ್ಮುಖ ಮಾರುಕಟ್ಟೆ ಮತ್ತು ಅಭಿವೃದ್ಧಿ ಆರ್ಥಿಕತೆ' ಕುರಿತು ಮಾತನಾಡುವಾಗ ಸೀತಾರಾಮನ್​, ಸಾರ್ವಭೌಮದ ರೇಟಿಂಗ್​ನಲ್ಲಿ ನಿಖರತೆ ಮತ್ತು ನ್ಯಾಯಸಮ್ಮತೆಯ ಕುರಿತು ಅವರು ಧ್ವನಿ ಎತ್ತಿದರು. ಸಾರ್ವಭೌಮ ರೇಟಿಂಗ್‌ಗಳು ಬಂಡವಾಳಕ್ಕೆ ನ್ಯಾಯಯುತ ಪ್ರವೇಶ ಮತ್ತು ಖಾಸಗಿ ಹೂಡಿಕೆಯನ್ನು ಆಕರ್ಷಿಸುವ ಸುಧಾರಿತ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು ಉದಯೋನ್ಮುಖ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ಆರ್ಥಿಕ ಮೂಲಭೂತ ಅಂಶಗಳನ್ನು ಹೆಚ್ಚು ನಿಖರವಾಗಿ ಪ್ರತಿಬಿಂಬಿಸಬೇಕು ಎಂದು ಅವರು ತಿಳಿಸಿದರು.

ಬಂಡವಾಳ ವೆಚ್ಚವನ್ನು ಖಚಿತಪಡಿಸಿಕೊಳ್ಳಲು ಇಎಮ್‌ಡಿಇಗಳ ಆರ್ಥಿಕ ಮೂಲಭೂತ ಅಂಶಗಳನ್ನು ಸಮರ್ಪಕವಾಗಿ ಲೆಕ್ಕಹಾಕಲು ಸಾರ್ವಭೌಮ ರೇಟಿಂಗ್‌ಗಳ ಅವಶ್ಯಕತೆ ಇದೆ. ಇವು ಖಾಸಗಿ ಬಂಡವಾಳವನ್ನು ಆಕರ್ಷಿಸುವ ಅವರ ಸಾಮರ್ಥ್ಯವನ್ನು ತೋರಿಸುತ್ತದೆ ಎಂದಿದ್ದಾರೆ.

ಕ್ರೆಡಿಟ್​ ರೇಟಿಂಗ್​ ಏಜೆನ್ಸಿಗಳು ಎಂಗೇಜ್​ಮೆಂಟ್​ ಹೆಚ್ಚಿಸಿಕೊಳ್ಳಲು ರೇಟಿಂಗ್​ನ ವಿಧಾನಗಳಲ್ಲಿ​ ಸುಧಾರಣೆ ಮಾಡಬೇಕಿದ್ದು, ದೊಡ್ಡ ಏಜೆನ್ಸಿಗಳು ದೇಶದ ಮರುಪಾವತಿ ಸಾಮರ್ಥ್ಯ ಮತ್ತು ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಹೆಚ್ಚು ನಿಖರವಾಗಿ ಸೆರೆಹಿಡಿಯುತ್ತವೆ. ಹಣಕಾಸು ಸಚಿವಾಲಯದ ಪ್ರಕಾರ, ಅವರು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಮರುಪಾವತಿ ಮಾಡುವ ಸಾಮರ್ಥ್ಯ ಮತ್ತು ಇಚ್ಛೆಯನ್ನು ಪ್ರತಿಬಿಂಬಿಸುವ ಮೂಲಭೂತ ಅಂಶಗಳನ್ನು ಅವರು ಸಂಗ್ರಹಿಸುವುದನ್ನು ಖಚಿತಪಡಿಸಿಕೊಳ್ಳುವ ವಿಧಾನದಲ್ಲಿ ಸುಧಾರಣೆಗಳಿಗೆ ಸಚಿವೆ ಕರೆ ನೀಡಿದರು.

ಭಾರತದ ಸಾರ್ವಭೌಮ ಸಾಲದ ರೇಟಿಂಗ್​ ಹೇಗಿದೆ?: ಭಾರತದಲ್ಲಿ ಎಸ್​ ಆ್ಯಂಡ್​ ಪಿ ಗ್ಲೋಬಲ್​​​ ರೇಟಿಂಗ್​, ಫಿಟೆಕ್​ ರೇಟಿಂಗ್​​ ಮತ್ತು ಮೂಡಿಸ್​ ಇನ್ವೆಸ್ಟರ್​ ಸರ್ವೀಸ್​ ಎಂಬ ಮೂರು ದೊಡ್ಡ ರೇಟಿಂಗ್​​ ಏಜೆನ್ಸಿಗಳಿವೆ. ಈ ಏಜೆನ್ಸಿಗಳ ಅರ್ಥಶಾಸ್ತ್ರಜ್ಞರು ಮತ್ತು ತಜ್ಞರು ದೇಶದ ಆರ್ಥಿಕ ಬೆಳವಣಿಗೆ ದರ, ಸರ್ಕಾರದ ವೆಚ್ಚದ ಸಂಯೋಜನೆ, ಸಾಲದ ಸ್ಥಿತಿ, ಮೂಲಭೂತ ಶಕ್ತಿ ಮತ್ತು ಆರ್ಥಿಕತೆಯ ದೌರ್ಬಲ್ಯ ಮುಂತಾದ ವಿವಿಧ ಅಂಶಗಳನ್ನು ಅಧ್ಯಯನ ಮತ್ತು ವಿಶ್ಲೇಷಿಸುತ್ತಾರೆ.

ರೇಟಿಂಗ್‌ನಿಂದ ಪ್ರಯೋಜನವೇನು?: ವಿದೇಶಿ ಹೂಡಿಕೆದಾರರು ದೇಶದಲ್ಲಿ ಹೂಡಿಕೆ ಮಾಡಲು ಈ ಸಾರ್ವಭೌಮ ರೇಟಿಂಗ್‌ಗಳನ್ನು ಅವಲಂಬಿಸಿದ್ದಾರೆ. ರೇಟಿಂಗ್​ ಹೆಚ್ಚಿದ್ದರೆ ಅದು ಸಾಲ ಪಡೆಯಲು ಸಹಾಯವಾಗುತ್ತದೆ. ಇದು ದೇಶದ ಚಾಲ್ತಿಯಲ್ಲಿರುವ ಬಡ್ಡಿದರ ಮೇಲೆ ಪರಿಣಾಮ ಬೀರುತ್ತದೆ.

ಒಂದು ದೇಶದ ಸಾರ್ವಭೌಮ ರೇಟಿಂಗ್ ಅತ್ಯಧಿಕವಾಗಿದ್ದರೆ, ಅದು ಕಡಿಮೆ ವೆಚ್ಚದಲ್ಲಿ ಸಾಲ ಪಡೆಯಲು ಸಾಧ್ಯವಾಗುತ್ತದೆ, ಸಾರ್ವಭೌಮ ರೇಟಿಂಗ್ ಕಡಿಮೆಯಿದ್ದರೆ ಅದರ ಎರವಲು ವೆಚ್ಚ ಹೆಚ್ಚಾಗುತ್ತದೆ. ಇದು ದೇಶದಲ್ಲಿ ಚಾಲ್ತಿಯಲ್ಲಿರುವ ಬಡ್ಡಿದರಗಳ ಮೇಲೆ ಕ್ಯಾಸ್ಕೇಡಿಂಗ್ ಪರಿಣಾಮ ಬೀರುತ್ತದೆ.

ಈ ರೇಟಿಂಗ್​ನಲ್ಲಿ ಉನ್ನತೀಕರಿಸುವಂತೆ ಕಳೆದೊಂದು ದಶಕದಿಂದ ಭಾರತ ಕೇಳುತ್ತಿದೆ. 2013ರ ಮೇಯಲ್ಲಿ ಪ್ರಧಾನಿ ಮನಮೋಹನ್​ ಸಿಂಗ್​ ಎರಡನೇ ಅವಧಿಯಲ್ಲಿ, ಬಳಿಕ 2013ರಲ್ಲಿ ಪಿ.ಚಿದಂಬರಂ ಹಣಕಾಸು ಮಂತ್ರಿಯಾಗಿದ್ದಾಗ ಸಾರ್ವಜನಿಕವಾಗಿ ದೇಶದ ರೇಟಿಂಗ್​ ಉನ್ನತೀಕರಿಸುವಂತೆ ಕರೆ ನೀಡಿದ್ದರು.

ಭಾರತದ ಮೂರು ಪ್ರಮುಖ ರೇಟಿಂಗ್​ ಏಜೆನ್ಸಿಗಳಲ್ಲಿ ಒಂದಾದ ಎಸ್​ ಆ್ಯಂಡ್​ ಪಿ ಗ್ಲೋಬಲ್​ ರೇಟಿಂಗ್ಸ್​​ 2011ರಲ್ಲಿ ಪರಿಷ್ಕರಿಸಿತ್ತು. ಆದರೆ ದೇಶದ ಆರ್ಥಿಕತೆಯ ಮೂಲಭೂತ ಬಲ ನೀಡಿದ ನಿರೀಕ್ಷೆಯಂತೆ ಇರಲಿಲ್ಲ. 2014ರಲ್ಲಿ ಸರ್ಕಾರ ಬದಲಾದ ಬಳಿಕ ಹಣಕಾಸು ಸಚಿವರಾದ ಅರುಣ್​ ಜೇಟ್ಲಿ ಕೂಡ ದೇಶದ ರೇಟಿಂಗ್​ ಉನ್ನತೀಕರಿಸಲು ಕರೆ ನೀಡಿದರು.

ಆದಾಗ್ಯೂ, ಎಸ್ ಆ್ಯಂಡ್​ ಪಿ ಗ್ಲೋಬಲ್​ ರೇಟಿಂಗ್ಸ್​, ಭಾರತದ ರೇಟಿಂಗ್​ ಅನ್ನು 13 ವರ್ಷದ ಅಂತರದಲ್ಲಿ ಒಂದು ಬಾರಿ ಈ ವರ್ಷ ಮೇ ತಿಂಗಳಲ್ಲಿ ಉನ್ನತೀಕರಿಸಿತು. ಎಸ್​ ಆ್ಯಂಡ್​ ಪಿ ಗ್ಲೋಬಲ್​ ರೇಟಿಂಗ್ ಸ್ಥಿರತೆಯಿಂದ ಧನಾತ್ಮಕವಾಗಿ ಪರಿಷ್ಕರಿಸಿದೆ.

ಎಸ್​ ಆ್ಯಂಡ್​ ಪಿ ಗ್ಲೋಬಲ್​ ರೇಟಿಂಗ್​ ತನ್ನ ಬಿಬಿಬಿ- ದೀರ್ಘಾವಧಿ ಮತ್ತು ಎ-3 ಅಲ್ಪಾವಧಿಯ ಅಪೇಕ್ಷಿಸದ ವಿದೇಶಿ ಮತ್ತು ಸ್ಥಳೀಯ ಕರೆನ್ಸಿ ಸಾರ್ವಭೌಮ ಕ್ರೆಡಿಟ್ ರೇಟಿಂಗ್‌ಗಳನ್ನು ಉಳಿಸಿಕೊಂಡಿದೆ. ಹಾಗೆಯೇ 'ಬಿಬಿಬಿ+'ನಲ್ಲಿ ವರ್ಗಾವಣೆ ಮತ್ತು ಪರಿವರ್ತನೆಯ ಮೌಲ್ಯಮಾಪನವನ್ನು ಉಳಿಸಿಕೊಂಡಿದೆ.​

ಅದೇ ರೀತಿ ಮೂಡಿ ಹೂಡಿಕೆ ಸೇವೆಯಲ್ಲಿ, ಬಿಎಎ2ದಿಂದ ಬಿಎಎ2ಗೆ ಪರಿಷ್ಕರಿಸಿತು. ಮೂಡಿ ಮೊದಲ ಬಾರಿಗೆ 1998ರಲ್ಲಿ ಬಿಎ1 ದೇಶಿಯ ಹಣದಲ್ಲಿನ ದೀರ್ಘಕಾಲದ ಸರ್ಕಾರದ ರೇಟಿಂಗ್​ ನೀಡಿತು. ವಿದೇಶಿ ಕರೆನ್ಸಿ ಬ್ಯಾಂಕ್ ಠೇವಣಿಗಳ ಮೇಲಿನ ದೀರ್ಘಾವಧಿಯ ದೇಶದ ಸೀಲಿಂಗ್ ಅನ್ನು ಸಹ ಊಹಾತ್ಮಕ ಎಂದು ರೇಟ್ ಮಾಡಲಾಗಿದೆ. 13 ವರ್ಷಗಳ ಅಂತರದಲ್ಲಿ ಮೂಡಿ ಭಾರತದ ಕ್ರೆಡಿಟ್​ ರೇಟಿಂಗ್​​​ ಬಿಎ 1 ನಿಂದ ಬಿಎಎ 3ಗೆ ಆಗಿದೆ. ಈ ರೇಟಿಂಗ್​ 2017ರಲ್ಲಿ ಬಿಎಎ2ಯಿಂದ ಬಿಎಎ3 ಉನ್ನತೀಕರಿಸಿದೆ.

2024ರ ರೇಟಿಂಗ್​ ಕ್ರಮ: ಈ ವರ್ಷದ ಮೇಯಲ್ಲಿ ಎಸ್​ ಆ್ಯಂಡ್​ ಪಿ ಗ್ಲೋಬಲ್​ ರೇಟಿಂಗ್​ ಸ್ಥಿರತೆಯಿಂದ ಸಕಾರಾತ್ಮಕತೆಗೆ ಉನ್ನತೀಕರಣಗೊಂಡಿದೆ. ಆದಾಗ್ಯೂ, ಮೂರು ಏಜೆನ್ಸಿಗಳಲ್ಲಿ ಒಂದಾಗಿರುವ ಫಿಟೆಕ್​ ರೇಟಿಂಗ್​​, ಈ ವರ್ಷ ಭಾರತದ ಸಾರ್ವಭೌಮ ರೇಟಿಂಗ್‌ಗಳು ಮತ್ತು ದೃಷ್ಟಿಕೋನ ಅದೇ ಮಟ್ಟದಲ್ಲಿ ಉಳಿಸಿಕೊಂಡಿದೆ.

ರೇಟಿಂಗ್​​ ಔಟ್​ಲುಕ್​ ಈ ವರ್ಷದ ಆಗಸ್ಟ್​​ನಲ್ಲಿ ಫಿಟೆಕ್​ ರೇಟಿಂಗ್​ ಬಿಡುಗಡೆ ಮಾಡಲಿದ್ದು, ಐಡಿಆರ್​ ಬಿಬಿಬಿ ಯಾಗಿ ಸ್ಥಿರವಾಗಿ ಉಳಿಯಲಿದೆ. ಇದೇ ಕಾರಣಕ್ಕೆ ನಿರ್ಮಲಾ ಸೀತಾರಾಮನ್​, ನಿಖರ ಮತ್ತು ನ್ಯಾಯಸಮ್ಮತ ರೇಟಿಂಗ್​ಗೆ ಕರೆ ನೀಡಿದ್ದಾರೆ.

ಜಗತ್ತಿನ ಐದನೇ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿರುವ ಭಾರತ ಕನಿಷ್ಠ ಹೂಡಿಕೆಯ ಗ್ರೇಡ್​ ಹೊಂದಿದ್ದು, ಭಾರತ ಸರ್ಕಾರ ಈ ಸ್ಥಾನವನ್ನು ಉಳಿಸಿಕೊಂಡಿದೆ. ಅಧಿಕೃತ ಮೂಲಗಳು ಇದನ್ನು ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳ ಪಕ್ಷಪಾತ ಎಂದು ಹೇಳುತ್ತವೆ. ಇದು ಆರ್ಥಿಕ ಗಾತ್ರ ಮತ್ತು ಸಾಲವನ್ನು ಮರುಪಾವತಿ ಮಾಡುವ ಅವರ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಐದನೇ ಅತಿದೊಡ್ಡ ಆರ್ಥಿಕತೆಯನ್ನು ಪ್ರಧಾನವಾಗಿ ಎಎಎ ಎಂದು ರೇಟ್ ಮಾಡಲಾಗಿದೆ.

2005ರಲ್ಲಿ ಚೀನಾ ಐದನೇ ಅತಿದೊಡ್ಡ ಆರ್ಥಿಕತೆಯಾಯಿತು. ಎ/ಎ2ಗೆ ಅಪ್‌ಗ್ರೇಡ್ ಮಾಡಲಾಯಿತು. ಆದರೆ 2019ರಲ್ಲಿ ಭಾರತ ಐದನೇ ಅತಿದೊಡ್ಡ ಆರ್ಥಿಕತೆಯಾಗಿದ್ದರೂ, ಇದು ಹೂಡಿಕೆ ದರ್ಜೆಯ ರಾಷ್ಟ್ರಗಳ ಅತ್ಯಂತ ಕಡಿಮೆ ಹಂತಗಳಲ್ಲಿ ಉಳಿದಿದೆ.

ಇದನ್ನೂ ಓದಿ: ಭಾರಿ ಲಾಭದತ್ತ ಸೂಚ್ಯಂಕಗಳು, ಹೂಡಿಕೆದಾರರ ಸಂಪತ್ತು 6 ಲಕ್ಷ ಕೋಟಿ ಜಿಗಿತ: ಕಾರಣವೇನು ಗೊತ್ತಾ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.