ETV Bharat / opinion

ಈರುಳ್ಳಿ ಮೇಲಿನ ನಿರ್ಬಂಧ ತೆಗೆದು ಹಾಕಲು ಕಾರಣವೇನು?: ಭಾರತದ ನೆರೆಯ ರಾಷ್ಟ್ರಗಳಲ್ಲಿ ಮಿಶ್ರ ಪ್ರತಿಕ್ರಿಯೆ - INDIA LIFT ONION EXPORTS BAN - INDIA LIFT ONION EXPORTS BAN

ಐದು ತಿಂಗಳ ನಿರ್ಬಂಧದ ಬಳಿಕ ಈರುಳ್ಳಿ ರಫ್ತು ನಿಷೇಧ ತೆಗೆದು ಹಾಕಲಾಗಿದೆ. ಇದರಿಂದ ಭಾರತದ ಎರಡು ನೆರೆಯ ದೇಶದಲ್ಲಿ ಬೆಲೆ ಏರಿಕೆ ಮತ್ತು ಇಳಿಕೆ ಕಾಣಲಿದೆ. ಈ ಕುರಿತು ಈಟಿವಿ ಭಾರತ​​ ಅರೂನಿಂ ಭೂಯಾನ್​ ವಿಶ್ಲೇಷಣೆ ಇಲ್ಲಿದೆ.

Why India’s lifting of export ban on onions is leading to mixed results in neighbours
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : May 7, 2024, 8:45 PM IST

ನವದೆಹಲಿ: ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ವಿಧಿಸಿದ ನಿರ್ಬಂಧವನ್ನು ಏಪ್ರಿಲ್​ ಅಂತ್ಯದಲ್ಲಿ ಹಿಂಪಡೆದಿದೆ. ಈ ನಿರ್ಧಾರ ಭಾರತದ ಎರಡು ನೆರೆಯ ಎರಡು ದೇಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಬಾಂಗ್ಲಾದೇಶದಲ್ಲಿ ಇದರ ಬೆಲೆ ಇಳಿಕೆ ಕಂಡರೆ, ನೇಪಾಳದಲ್ಲಿ ದರ ದುಪ್ಪಟ್ಟಾಗಲಿದೆ.

Why India’s lifting of export ban on onions is leading to mixed results in neighbours
ಈರುಳ್ಳಿ ರಫ್ತು ನಿಷೇಧ (Infographic for Onion story (ETV Bharat))

ಏಪ್ರಿಲ್ 27ರಂದು ಭಾರತ ಸರ್ಕಾರ ನೆರೆಯ ಆರು ದೇಶಗಳಾದ ಬಾಂಗ್ಲಾದೇಶ, ಯುನೈಟೈಡ್​ ಅರಬ್​ ಎಮಿರೇಟ್ಸ್​ (ಯುಎಇ), ಭೂತನ್​, ಬೆಹರೀನ್​, ಮಾರಿಷಸ್​ ಮತ್ತು ಶ್ರೀಲಂಕಾಕ್ಕೆ ಒಟ್ಟು 99.150 ಮಿಲಿಯನ್​ ಟನ್​ ಈರುಳ್ಳಿ ರಫ್ತಿಗೆ ಅನುಮತಿ ನೀಡಿತ್ತು. ಇದರ ಹಿಂದೆಯೇ ಮೇ 4ರಂದು ಈರುಳ್ಳಿ ಮೇಲೆ ಹಾಕಿದ್ದ ರಫ್ತು ನಿರ್ಬಂಧ ತೆಗೆದು ಹಾಕಲಾಗಿದೆ ಎಂದು ತಿಳಿಸಿದೆ. ಈ ಬಾರಿ ಮಾನ್ಸೂನ್​ ಪೂರಕ ಮುನ್ಸೂಚನೆ ಹಾಗೂ 2024ರ ಖಾರಿಫ್​​​​ ಬೆಳೆ ಉತ್ಪಾದನೆ ಉತ್ತಮವಾಗಿದ್ದು, ಹೋಲ್​ಸೇಲ್​ ಮತ್ತು ಚಿಲ್ಲರೆ ಮಾರುಕಟ್ಟೆ ಪರಿಸ್ಥಿತಿ ಸ್ಥಿರವಾಗಿರುವ ಹಿನ್ನೆಲೆಯಲ್ಲಿ ಈರುಳ್ಳಿ ಮೇಲಿನ ನಿಷೇಧವನ್ನು ತೆಗೆದುಹಾಕಿದ್ದಾಗಿ ಗ್ರಾಹಕ ವ್ಯವಹಾರ ಇಲಾಖೆಯ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದರು.

ಜೊತೆಗೆ ಸದ್ಯ ಮಂಡಿ (ಹೋಲ್​ಸೇಲ್​ ಮಾರುಕಟ್ಟೆ) ಮತ್ತು ಚಿಲ್ಲರೆ ಮಾರುಕಟ್ಟೆ ಸ್ಥಿತಿಗತಿ ಸ್ಥಿರವಾಗಿದೆ. ಹಾಗೇ ಅಂತಾರಾಷ್ಟ್ರೀಯ ಲಭ್ಯತೆ ಮತ್ತು ದರದ ಸ್ಥಿತಿ ಹಿನ್ನೆಲೆಯಲ್ಲಿ ಈ ನಿರ್ಧಾರ ನಡೆಸಿದ್ದಾಗಿ ತಿಳಿಸಿದರು. ಅಧಿಕಾರಿಗಳ ಅಂದಾಜಿನ ಪ್ರಕಾರ, 2024ರ ರಾಬಿ ಬೆಳೆಯಲ್ಲಿ ಈರುಳ್ಳಿ ಉತ್ಪಾದನೆ 191 ಲಕ್ಷ ಟನ್​ ಆಗಿದೆ. ಮಾಸಿಕ ದೇಶಿಯ ಬಳಕೆ 17 ಲಕ್ಷ ಟನ್​ ಇದೆ.

ಭಾರತದ ಈರುಳ್ಳಿಗೆ ಯಾಕೆ ಪ್ರಾಮುಖ್ಯತೆ?: ಚೀನಾದ ಬಳಿಕ ಅತಿ ಹೆಚ್ಚು ಈರುಳ್ಳಿ ಉತ್ಪಾದನೆ ಮಾಡುವ ದೇಶ ಭಾರತವಾಗಿದೆ. ಜಾಗತಿಕ ಉತ್ಪಾದನೆಯಲ್ಲಿ ಶೇ 20ರಷ್ಟು ಕೊಡುಗೆ ನೀಡುತ್ತದೆ. ಈರುಳ್ಳಿ ಬೆಳೆಗೆ ಪೂರಕ ವಾತಾವರಣ, ಉತ್ತಮ ಕೃಷಿ ಭೂಮಿ ಜೊತೆಗೆ ಅತ್ಯುತ್ತಮ ಸ್ಥಾಪಿತ ನೀರಾವರಿ ವ್ಯವಸ್ಥೆ ಹೊಂದಿರುವುದೇ ಇದಕ್ಕೆ ಕಾರಣ.

ಭಾರತವೂ ವೈವಿಧ್ಯ ಕೃಷಿ ಪರಿಸ್ಥಿತಿ ಹೊಂದಿದ್ದು, ವರ್ಷ ಪೂರ್ತಿ ಈರುಳ್ಳಿಯ ವಿವಿಧ ತಳಿಗಳ ಬೆಳೆಯಲಾಗುವುದು. ಇಲ್ಲಿನ ಈರುಳ್ಳಿ ಉತ್ಪಾದನೆಯ ಪ್ರಮುಖ ರಾಜ್ಯಗಳು ಎಂದರೆ ಮಹಾರಾಷ್ಟ್ರ, ಕರ್ನಾಟಕ, ಗುಜರಾತ್​​, ಬಿಹಾರ್​​, ಮಧ್ಯಪ್ರದೇಶ​​ ಮತ್ತು ರಾಜಸ್ಥಾನ್​​. ಇಲ್ಲಿ ಈರುಳ್ಳಿ ಬೆಳೆಗೆ ಉತ್ತಮವಾದ ಮಣ್ಣು ಮತ್ತು ತಾಪಮಾನ ಪರಿಸ್ಥಿತಿ ಇದೆ.

ಇಲ್ಲಿ ಬೆಳೆಯುವ ಅತಿ ಹೆಚ್ಚು ಈರುಳ್ಳಿ ಉತ್ಪಾದನೆಯಿಂದಾಗಿ ಭಾರತ ದೇಶಿಕ ಬಳಕೆ ಜೊತೆಗೆ ರಫ್ತು ಕೂಡ ಮಾಡುತ್ತದೆ. ಹೆಚ್ಚಿನ ಪೂರೈಕೆ ಮತ್ತು ಕಡಿಮೆ ಉತ್ಪಾದನಾ ವೆಚ್ಚದಿಂದಾಗಿ ಭಾರತ ಆಗ್ನೇಯ ಏಷ್ಯಾ ಮತ್ತು ಪಶ್ಚಿಮ ಏಷ್ಯಾ ಸೇರಿದಂತೆ ಅನೇಕ ದೇಶಗಳಿಗೆ ಈರುಳ್ಳಿ ರಫ್ತು ಮಾಡುತ್ತದೆ.

ಜಾಗತಿಕವಾಗಿ ಈರುಳ್ಳಿ ರಫ್ತಿನಲ್ಲಿ ಭಾರತವೂ ಮುಂದಿದೆ. ಆಗ್ನೇಯ ಏಷ್ಯಾ, ಪಶ್ಚಿಮ ಏಷ್ಯಾ, ಯುರೋಪ್​ ಮತ್ತು ಉತ್ತರ ಅಮೆರಿಕ ದೇಶಗಳಿಗೆ ಈರುಳ್ಳಿ ರಫ್ತು ಮಾಡುತ್ತದೆ. ಜೊತೆಗೆ ಭಾರತ ಕೂಡ ಹಲವು ದೇಶಗಳೊಂದಿಗೆ ಈರುಳ್ಳಿ ರಫ್ತಿನ ಸರಾಗ ವಹಿವಾಟಿಗೆ ವ್ಯಾಪಾರ ಒಪ್ಪಂದ ನಡೆಸಿದೆ.

ಬೆಳೆಯುತ್ತಿರುವ ಜನಸಂಖ್ಯೆ, ಬದಲಾಗುತ್ತಿರುವ ಆಹಾರ ಪದ್ಧತಿ, ಈರುಳ್ಳಿ ಹೊಂದಿರುವ ಅಡುಗೆಗಳ ಪ್ರಖ್ಯಾತಿಗಳಿಂದಾಗಿ ಜಾಗತಿಕವಾಗಿ ಈರುಳ್ಳಿ ಬೇಡಿಕೆ ಹೆಚ್ಚಿದೆ. ಹಲವು ದೇಶಗಳ ಈ ಈರುಳ್ಳಿ ಬೇಡಿಕೆ ಮುಟ್ಟುವಲ್ಲಿ ಭಾರತ ಪ್ರಮುಖ ದೇಶವಾಗಿದೆ. ಭಾರತ ದೇಶಿಯ ಮತ್ತು ವಿದೇಶಿ ಮಾರುಕಟ್ಟೆಗೆ ಸರಿಯಾದ ಸಮಯದಲ್ಲಿ ಈರುಳ್ಳಿ ವಿತರಣೆಗೆ ಮತ್ತು ರಕ್ಷಣೆಗೆ ಅನುಕೂಲವಾಗುವಂತೆ ಅನೇಕ ಶೀತಲ ಸಂಗ್ರಹಣೆ ವ್ಯವಸ್ಥೆಯ ನೆಟ್​ವರ್ಕ್​ ಮತ್ತು ಸಮರ್ಥ ಸಾರಿಗೆ ವ್ಯವಸ್ಥೆಯನ್ನೂ ಕೂಡಾ ಅಭಿವೃದ್ಧಿಪಡಿಸಿದೆ.

ತಾತ್ಕಾಲಿಕವಾಗಿ ಈರುಳ್ಳಿ ರಫ್ತಿಗೆ ಭಾರತ ನಿರ್ಬಂಧ ವಿಧಿಸಿದ್ದರ ಕಾರಣವೇನು?: ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದಾಗ ಭಾರತದಲ್ಲಿ 2023-24ರಲ್ಲಿ ರಾಬಿ ಮತ್ತು ಖಾರಿಫ್​ ಅವಧಿಯಲ್ಲಿ ಅಂದಾಜಿಗಿಂತ ಕಡಿಮೆ ಪ್ರಮಾಣದಲ್ಲಿ ಈರುಳ್ಳಿ ಉತ್ಪಾದನೆಯಾಗಿತ್ತು. ಈ ಹಿನ್ನೆಲೆ ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಈರುಳ್ಳಿ ಲಭ್ಯತೆ ಇರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೇಡಿಕೆ ಹೆಚ್ಚಿದ ಹಿನ್ನಲೆ 2023ರ ಡಿಸೆಂಬರ್ 8ರಂದು ಕೇಂದ್ರ ಸರ್ಕಾರ ಈರುಳ್ಳಿ ರಫ್ತಿಗೆ ನಿರ್ಬಂಧವನ್ನು ವಿಧಿಸಿತ್ತು. ಈ ಮೂಲಕ ಖಾರೀಫ್​ ಉತ್ಪಾದನೆಯಲ್ಲಿನ ಶೇ 20ರಷ್ಟು ಇಳಿಕೆಯ ನಡುವೆ ದೇಶಿಯ ಪೂರೈಕೆ ಹೆಚ್ಚಿಸಿತು. ಇದರಿಂದಾಗಿ ಸರ್ಕಾರ 2024ರ ಹೊಸ ಬೆಳೆ ಬರುವವರೆಗೆ ಈರುಳ್ಳಿ ಬೆಲೆ ಸ್ಥಿರಗೊಳಿಸಲು ಸಹಾಯ ಮಾಡಿತು.

ಈರುಳ್ಳಿಯಲ್ಲಿ ಪ್ರದೇಶ ಮತ್ತು ಹವಾಮಾನದ ಆಧಾರದ ಮೇಲೆ ರಾಬಿ ಮತ್ತು ಖಾರಿಫ್​ ಎರಡರಲ್ಲೂ ಬೆಳೆಯಬಹುದಾಗಿದೆ. ಖಾರಿಫ್​ ಬೆಳೆಗಳು ಜೂನ್​- ಜುಲೈನಲ್ಲಿ ಬಿತ್ತನೆ ಮಾಡಿ ಚಳಿಗಾಲ ಎಂದರೆ ಅಕ್ಟೋಬರ್​ ನವಂಬರ್​ ಹೊತ್ತಿನಲ್ಲಿ ಕೂಯ್ಲು ಮಾಡಲಾಗುವುದು. ಈ ಈರುಳ್ಳಿಗಳು ಸಾಮಾನ್ಯವಾಗಿ ಕಡಿಮೆ ಸಂಗ್ರಹಣೆ ಹೊಂದಿದ್ದು, ಸುಗ್ಗಿಯ ನಂತರ ಸಂಸ್ಕರಿಸಲಾಗುತ್ತದೆ.

ರಾಬಿ ಬೆಳೆಗಳು ಚಳಿಗಾಲದಲ್ಲಿ ಅಂದರೆ ಅಕ್ಟೋಬರ್​ - ನವೆಂಬರ್​ನಲ್ಲಿ ಬಿತ್ತನೆ ಮಾಡಿ, ಮಾರ್ಚ್​ - ಏಪ್ರಿಲ್​ನ ವಸಂತಕಾಲದಲ್ಲಿ ಕೂಯ್ಲು ಮಾಡಲಾಗುವುದು. ಇದು ಖಾರಿಫ್​​ಗೆ ಹೋಲಿಕೆ ಮಾಡಿದರೆ ಉತ್ತಮ ಸಂಗ್ರಹಣಾ ಮಟ್ಟವನ್ನು ಹೊಂದಿದ್ದು, ಹೆಚ್ಚಿನ ಕಾಲ ಸಂಗ್ರಹಿಸಬಹುದು.

ಭಾರತದಲ್ಲಿ ಈರುಳ್ಳಿಯನ್ನು ರಾಬಿ ಮತ್ತು ಖಾರಿಫ್​ ಎರಡೂ ಋತುಮಾನದಲ್ಲೂ ಮಿಶ್ರ ಉತ್ಪಾದನೆ ಮಾಡಲಾಗುವುದು. ಹವಾಮಾನ, ಮಣ್ಣಿನ ಪರಿಸ್ಥಿತಿ, ಮಾರುಕಟ್ಟೆ ಬೇಡಿಕೆ ಆಧಾರಿಸಿ ಈರುಳ್ಳಿ ಉತ್ಪಾದನೆಗೆ ಗಮನ ಹರಿಸಲಾಗುವುದು. ಈ ಹಿನ್ನೆಲೆ ಈರುಳ್ಳಿ ಖಾರಿಫ್ ಬೆಳೆಯಾಗಿದ್ದರೂ, ಈ ಋತುವಿನಲ್ಲಿ ಅವುಗಳನ್ನು ಪ್ರತ್ಯೇಕವಾಗಿ ಬೆಳೆಯಲಾಗುವುದಿಲ್ಲ. ಅವುಗಳ ಬಿತ್ತನೆ ಆಧಾರದ ಮೇಲೆ ಫಲಿತಾಶವೂ ಇರುತ್ತದೆ.

ಭಾರತವೂ ಅತಿ ದೊಡ್ಡ ಈರುಳ್ಳಿ ಉತ್ಪಾದನಾ ಪ್ರದೇಶ ಯಾವುದು?: ದೇಶದಲ್ಲಿ ಈರುಳ್ಳಿ ಉತ್ಪಾದನೆ ಅಧಿಪತ್ಯ ಸ್ಥಾಪನೆ ಮಾಡಿರುವ ರಾಜ್ಯ ಮಹರಾಷ್ಟ್ರವಾಗಿದೆ. ಒಟ್ಟು ಈರುಳ್ಳಿ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೇಶದ ಉತ್ಪಾದನೆಯಲ್ಲಿ ಸುಸ್ಥಿರ ಭಾಗವನ್ನು ಇದು ಹೊಂದಿದ್ದು, ಮಹಾರಾಷ್ಟ್ರದ ನಾಸಿಕ್​, ಪುಣೆ, ಅಹಮದ್​ನಗರ್​​, ಸತಾರ ಪ್ರಮುಖ ಈರುಳ್ಳಿ ಬೆಳೆಯುವ ತಾಣವಾಗಿದೆ.

ಈರುಳ್ಳಿ ಬೆಳೆಗೆ ಮಹಾರಾಷ್ಟ್ರ ರಾಜ್ಯ ಪೂರಕ ವಾತಾವರಣ ಹೊಂದಿದ್ದು, ಇಲ್ಲಿ ಉತ್ತಮ ಕೃಷಿ ಭೂಮಿ ಮತ್ತು ಬೆಳೆ ವಿಧಾನವನ್ನು ಅನುಸರಿಸಲಾಗುವುದು. ರಾಜ್ಯದಲ್ಲಿ ರಾಬಿ ಮತ್ತು ಖಾರಿಫ್​ ಎರಡು ಋತುಮಾನದಲ್ಲಿ ಈರುಳ್ಳಿ ಬೆಳೆಯುವ ಮೂಲಕ ವರ್ಷ ಪೂರ್ತಿ ಸ್ಥಿರ ಪೂರೈಕೆ ಮಾಡಲಾಗುವುದು. ಭಾರತದ ಪ್ರಮುಖ ಪ್ರದೇಶ ಸೇರಿದಂತೆ ವಿದೇಶಕ್ಕೆ ಇಲ್ಲಿಂದ ಈರುಳ್ಳಿ ರಫ್ತಾಗುತ್ತದೆ.

ಭಾರತದ ನಿರ್ಬಂಧ ತೆರವಿನಿಂದ ಬಾಂಗ್ಲಾದೇಶಕ್ಕೆ ಅನುಕೂಲ: ಡಾಕಾ ಟ್ರಿಬ್ಯೂನ್​ ಪ್ರಕಾರ, ಭಾರತ ಈರುಳ್ಳಿ ನಿರ್ಬಂಧ ವಿಧಿಸಿದಾಗಿನಿಂದ ಬಾಂಗ್ಲಾದೇಶದಲ್ಲಿ ಈರುಳ್ಳಿ ಗಗನಮುಖಿಯಾಗಿದೆ. ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ದಿನಂಜ್ಪುರ್​ನಲ್ಲಿರುವ ಹಿಲಿ ಬಜಾಸ್​​​ ಮಾರುಕಟ್ಟೆ ಎರಡು ದೇಶಗಳ ನಡುವೆ ವ್ಯಾಪಾರದ ಪ್ರಮುಖ ಪಾತ್ರವನ್ನು ಹೊಂದಿದೆ. ಅದರಲ್ಲೂ ಇಲ್ಲಿನ ಹಿಲಿ ಲಾಂಡ್​ ಬಂದರು ಗಡಿಯಾಚೆಗಿನ ವ್ಯಾಪಾರ ಮತ್ತು ಸರಕುಗಳ ಚಲನೆಯನ್ನು ಸುಗಮಗೊಳಿಸುತ್ತದೆ.

ಭಾರತ ಶನಿವಾರ ಈರುಳ್ಳಿ ಮೇಲಿನ ನಿರ್ಬಂಧ ತೆಗೆದು ಹಾಕುತ್ತಿದ್ದಂತೆ ಭಾನುವಾರ ಬಾಂಗ್ಲಾದಲ್ಲಿ ಈರುಳ್ಳಿ ಕೆಜಿಗೆ 10 ಟಿಕೆ ಇಳಿಕೆ ಕಂಡಿದೆ. ಸೀಮಿತ ಪೂರೈಕೆ ಹಿನ್ನೆಲೆ ವ್ಯಾಪಾರಿಗಳು ಬೆಲೆ ಏರಿಕೆ ಮಾಡಿದ್ದರು. ಭಾನುವಾರ ಎಲ್ಲ ಅಂಗಡಿಗಳಲ್ಲಿ ಈರುಳ್ಳಿ ದಾಸ್ತಾನು ಹೆಚ್ಚಿದೆ. ಆದರೂ ಭಾರತದ ಈರುಳ್ಳಿ ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಇದು ವ್ಯಾಪಾರಿಗಳಿಂದ ಮಾರುಕಟ್ಟೆ ದ್ವಂದ್ವಕ್ಕೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವೂ ಮಧ್ಯಸ್ಥಿಕೆವಹಿಸುವ ಮೂಲಕ ಈರುಳ್ಳಿ ಮಾರುಕಟ್ಟೆ ನಿಯಂತ್ರಿಸಬೇಕಿದೆ ಎಂದು ಹಿಲಿ ಬಜಾರ್​ ನಿವಾಸಿ ಅಶ್ರಫ್ಉಲ್​ ಇಸ್ಲಾಂ ತಿಳಿಸಿದ್ದಾರೆ ಎಂದು ಡಾಕಾ ಟಿಬ್ರ್ಯೂನ್​ ವರದಿ ಮಾಡಿದೆ.

ಭಾರತದ ನಿರ್ಧಾರದ ಬಳಿಕ ಇದೀಗ ಈರುಳ್ಳಿ ದಾಸ್ತಾನನು ಮಾರುಕಟ್ಟೆಗೆ ಬಿಡಗಡೆ ಮಾಡುತ್ತಿದ್ದಾರೆ ಎಂದು ಅಬುಲ್​ ಹಸ್ಮತ್​​ ತಿಳಿಸಿದ್ದಾರೆ. ಕಳೆದ ತಿಂಗಳ ಈದ್​ನಲ್ಲಿ ಈರುಳ್ಳಿ ಬೆಲೆ ಹೆಚ್ಚಿತು. ಕೆಜಿಗೆ 50 ಟಿಕೆಯಿಂದ 50-75 ಟಿಕೆ ಇತ್ತು. ಬೆಲೆ ಏರಿಕೆಯಿಂದಾಗಿ ಮನೆಗಳ ನಿರ್ವಹಣೆ ಕೂಡ ಸವಾಲಾಗಿತ್ತು. ಇದರಿಂದ ಖರೀದಿಯನ್ನು ಕಡಿಮೆ ಮಾಡಲಾಗಿತ್ತು. ಭಾನುವಾರ 60 ಟಿಕೆಯಂತೆ 1 ಕೆಜಿ ಈರುಳ್ಳಿ ಖರೀದಿಸಿದೆ ಎಂದು ಹಿಲಿ ಬಜಾರ್​ ಗ್ರಾಹಕ ಸಬುಜ್​ ಹೊಸೈನ್​ ತಿಳಿಸಿದ್ದಾರೆ ಎಂದು ಢಾಕಾ ಟ್ರಿಬ್ಯೂನ್​ ತಿಳಿಸಿದೆ.

ನೇಪಾಳದಲ್ಲಿ ಹೆಚ್ಚಲಿದೆ ಬೆಲೆ?: ಭಾರತದಲ್ಲಿ ರಫ್ತು ನಿರ್ಬಂಧವನ್ನು ತೆಗೆದು ಹಾಕಿದ್ದು, ಟನ್​ಗೆ 550 ರಂತೆ ಕನಿಷ್ಠ ರಫ್ತು ದರ ನಿಗದಿ ಪಡಿಸಲಾಗಿದೆ. ಸದ್ಯ ನೇಪಾಳದಲ್ಲಿ ಕೆಜಿಗೆ 60 ರೂ ಎನ್​ಆರ್​​ನಂತೆ ಈರುಳ್ಳಿ ಲಭ್ಯವಿದೆ. ಭಾರತದ ರಫ್ತು ನಿರ್ಬಂಧ ನಡುವೆ ಈರುಳ್ಳಿ ಪೂರೈಕೆ ಸಾಗಿತ್ತು. ಆದರೆ, ಇದೀಗ ಕನಿಷ್ಠ ರಫ್ತು ದರದ ಅಡಿ ಹೆಚ್ಚಿನ ದರಕ್ಕೆ ಈರುಳ್ಳಿ ಕಳುಹಿಸಲಾಗುವುದು.

ಭಾರತವು ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಿದ್ದರೂ, ದಕ್ಷಿಣ ಏಷ್ಯಾದ ಎರಡು ರಾಷ್ಟ್ರಗಳ ನಡುವಿನ ಬೆಲೆ ವ್ಯತ್ಯಾಸದಿಂದಾಗಿ ನೇಪಾಳದಲ್ಲಿ ಕಳ್ಳಸಾಗಣೆ ಸಾಗಿತ್ತು. ಭಾರತದ ಇದೀಗ ಈರುಳ್ಳಿ ರಫ್ತು ನಿರ್ಬಂಧ ತೆಗೆದು ಹಾಕಿದಲ್ಲಿ ಇದು ಕೆಲವರಲ್ಲಿ ಸಂತಸ ಮತ್ತು ಕೆಲವರಲ್ಲಿ ದುಃಖಕ್ಕೆ ಕಾರಣವಾಗಲಿದೆ.

ಇದನ್ನೂ ಓದಿ: ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಜಲಸಂಪನ್ಮೂಲ ನಿರ್ವಹಣೆ ಮತ್ತು ಜಲ ಕಾನೂನು: ವಿಶ್ಲೇಷಣೆ - Water Resources Management

ETV Bharat Logo

Copyright © 2025 Ushodaya Enterprises Pvt. Ltd., All Rights Reserved.