ETV Bharat / opinion

ರಷ್ಯಾದ ಕಝನ್​, ಎಕಟೆರಿನ್‌ಬರ್ಗ್​ನಲ್ಲಿ ಭಾರತದ ಹೊಸ ದೂತಾವಾಸ ಕಚೇರಿ ಘೋಷಣೆ: ಈ ನಗರಗಳ ಆಯ್ಕೆ ಏಕೆ? - Indian new consulate in Russia

ರಷ್ಯಾದ ಕಝನ್ ಮತ್ತು ಎಕಟೆರಿನ್‌ಬರ್ಗ್ ನಗರಗಳಲ್ಲಿ ಭಾರತವು ಎರಡು ಹೊಸ ಕಾನ್ಸುಲೇಟ್‌ಗಳನ್ನು ತೆರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇವುಗಳು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ, ಸೇಂಟ್ ಪೀಟರ್ಸ್‌ಬರ್ಗ್ ಮತ್ತು ವ್ಲಾಡಿವೋಸ್ಟಾಕ್‌ನಲ್ಲಿರುವ ಕಾನ್ಸುಲೇಟ್‌ಗಳಿಗೆ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತವೆ. ಈ ನಗರಗಳಲ್ಲಿ ಹೊಸ ದೂತಾವಾಸಗಳನ್ನು ತೆರೆಯಲು ಭಾರತ ಬಯಸಿದ್ದೇಕೆ ಎಂಬುದರ ವಿವರ ಇಲ್ಲಿದೆ.

author img

By ETV Bharat Karnataka Team

Published : Jul 10, 2024, 10:05 PM IST

ರಷ್ಯಾದಲ್ಲಿ ಹೊಸ ದೂತಾವಾಸ ಕಚೇರಿ ಘೋಷಣೆ
ರಷ್ಯಾದಲ್ಲಿ ಹೊಸ ದೂತಾವಾಸ ಕಚೇರಿ ಘೋಷಣೆ (ETV Bharat)

ನವದೆಹಲಿ: ರಷ್ಯಾ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಸ್ಕೋದಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡುವ ವೇಳೆ ಕಝನ್ ಮತ್ತು ಎಕಟೆರಿನ್‌ಬರ್ಗ್‌ನಲ್ಲಿ ಭಾರತ ಎರಡು ಹೊಸ ಕಾನ್ಸುಲೇಟ್‌ಗಳನ್ನು ತೆರೆಯಲಿದೆ ಎಂದು ಘೋಷಿಸಿದರು. ಇದು ಅ ದೇಶದೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಮತ್ತು ಇನ್ನಷ್ಟು ವಿಸ್ತರಿಸುವ ಸೂಚನೆ ಇದಾಗಿದೆ.

ಮಾಸ್ಕೋದಲ್ಲಿನ ಭಾರತದ ರಾಯಭಾರ ಕಚೇರಿಯಲ್ಲದೇ, ಎರಡು ಕಾನ್ಸುಲೇಟ್‌ಗಳನ್ನು ಹೊಂದಿದೆ. ಅವುಗಳು ಸೇಂಟ್ ಪೀಟರ್ಸ್‌ಬರ್ಗ್‌ ಮತ್ತು ವ್ಲಾಡಿವೋಸ್ಟಾಕ್‌ ನಗರದಲ್ಲಿವೆ. ಇದೀಗ ಮತ್ತೆರಡು ಕಾನ್ಸುಲೇಟ್​​ಗಳ ಆರಂಭಕ್ಕೆ ಭಾರತ ಮುಂದಾಗಿದೆ. ಪ್ರಧಾನಿ ಮೋದಿ ಅವರು ರಷ್ಯಾಗೆ ತೆರಳುವ ಮುನ್ನ, ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು ಎರಡು ಹೊಸ ಕಾನ್ಸುಲೇಟ್‌ಗಳನ್ನು ತೆರೆಯುವ ಬಗ್ಗೆ ಸುಳಿವು ನೀಡಿದ್ದರು. ಇದು "ವಿಶ್ವದಾದ್ಯಂತ ನಮ್ಮ ರಾಜತಾಂತ್ರಿಕ ಸಂಬಂಧವನ್ನು ವಿಸ್ತರಿಸುವ ಪ್ರಯತ್ನ" ಎಂದು ಹೇಳಿದ್ದರು.

ಕಾನ್ಸುಲೇಟ್​ ಆರಂಭಿಸಲು ಕಜನ್‌ ಪ್ರದೇಶವೇ ಏಕೆ?: ಕಝನ್ ರಷ್ಯಾದ ಗಣರಾಜ್ಯವಾದ ಟಾಟರ್ಸ್ತಾನ್‌ನ ಅತಿದೊಡ್ಡ ನಗರ ಮತ್ತು ರಾಜಧಾನಿ. ಪೆಟ್ರೋಕೆಮಿಕಲ್ ಉದ್ಯಮವು ಈ ಪ್ರದೇಶದ ಸಂಪತ್ತಿನ ಮೂಲ. ಇಲ್ಲಿ ವರ್ಷಕ್ಕೆ 32 ಮಿಲಿಯನ್ ಟನ್ ಕಚ್ಚಾ ತೈಲ ಉತ್ಪಾದನೆಯಾಗುತ್ತದೆ. ಒಂದು ಬಿಲಿಯನ್​ ಟನ್‌ಗಿಂತಲೂ ಹೆಚ್ಚು ತೈಲ ನಿಕ್ಷೇಪಗಳನ್ನು ಹೊಂದಿದೆ. ಹೆಚ್ಚು ಅಭಿವೃದ್ಧಿ ಹೊಂದಿದ ನಗರ ಇದಾಗಿದ್ದು, ಪೆಟ್ರೋಕೆಮಿಕಲ್ ಉದ್ಯಮ ಮತ್ತು ಯಂತ್ರ ನಿರ್ಮಾಣ ಇಲ್ಲಿ ಹೆಚ್ಚಾಗಿದೆ. ಟ್ರಕ್ ತಯಾರಕ ಕಂಪನಿಯಾದ KamAZ ಇಲ್ಲಿಯದ್ದೆ. ಅಲ್ಲದೇ, ಟಾಟರ್ಸ್ತಾನ್‌ನಲ್ಲಿನ ಜನಸಂಖ್ಯೆಯಲ್ಲಿ 1/5 ರಷ್ಟು ಉದ್ಯೋಗಿಗಳನ್ನು ಹೊಂದಿದೆ.

ಕಜನ್ ಮೂಲದ ಕಜಾನೋರ್ಗ್ಸಿಂಟೆಜ್ ರಷ್ಯಾದ ಅತಿದೊಡ್ಡ ರಾಸಾಯನಿಕ ಕಂಪನಿಗಳಲ್ಲಿ ಒಂದಾಗಿದೆ. ಟಾಟರ್ಸ್ತಾನ್‌ನ ವಾಯುಯಾನ ಉದ್ಯಮವಾದ Tu-214 ಪ್ರಯಾಣಿಕ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ. ಕಝನ್ ಹೆಲಿಕಾಪ್ಟರ್ ಪ್ಲಾಂಟ್ ವಿಶ್ವದ ಅತಿದೊಡ್ಡ ಹೆಲಿಕಾಪ್ಟರ್ ತಯಾರಕರಲ್ಲಿ ಒಂದಾಗಿದೆ. ಇಂಜಿನಿಯರಿಂಗ್, ಜವಳಿ, ಬಟ್ಟೆ, ಮರದ ಸಂಸ್ಕರಣೆ ಮತ್ತು ಆಹಾರ ಉದ್ಯಮಗಳು ಟಾಟರ್ಸ್ತಾನ್‌ನಲ್ಲಿವೆ.

ಕಝನ್ ರಷ್ಯಾದ ಐದನೇ ದೊಡ್ಡ ನಗರವಾಗಿದೆ. ಹೀಗಾಗಿ ಟಾಟರ್ಸ್ತಾನ್‌ನಲ್ಲಿ ವ್ಯಾಪಾರ ಮತ್ತು ಹೂಡಿಕೆ ಹೆಚ್ಚಿಸಲು ಭಾರತ ಆಸಕ್ತಿ ತೋರಿಸಿದೆ. ಐಟಿ, ಔಷಧೀಯ ಮತ್ತು ಯಂತ್ರೋಪಕರಣಗಳಂತಹ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಅಂತಾರಾಷ್ಟ್ರೀಯ ವೇದಿಕೆಗಳನ್ನು ಕಝನ್ ಆಯೋಜಿಸುತ್ತದೆ.

ಟಾಟರ್ಸ್ತಾನ್‌ನ ಕೈಗಾರಿಕೆಗಳು, ವಿಶೇಷವಾಗಿ ಪೆಟ್ರೋಕೆಮಿಕಲ್ಸ್, ಇಂಜಿನಿಯರಿಂಗ್ ಮತ್ತು ಆಟೋಮೋಟಿವ್‌ಗಳಲ್ಲಿ ಸಹಯೋಗವನ್ನು ನೀಡಲಾಗುತ್ತಿದೆ. ಭಾರತೀಯ ಕಂಪನಿಗಳು ಇಲ್ಲಿನ ಕಂಪನಿಗಳೊಂದಿಗೆ ಜಂಟಿ ಉದ್ಯಮ ಮತ್ತು ಪಾಲುದಾರಿಕೆಯನ್ನು ಹೊಂದಿವೆ. ಇಲ್ಲಿ ಭಾರತೀಯರು ಗಮನಾರ್ಹವಾಗಿ ಹೂಡಿಕೆ ಮಾಡಿದ್ದಾರೆ. ದೊಡ್ಡ ಆರ್ಥಿಕ ವಲಯ ಸೃಷ್ಟಿಸುವ ಶಕ್ತಿ ಇರುವ ಈ ಪ್ರದೇಶದಲ್ಲಿ ಅನುಕೂಲಕರವಾದ ವ್ಯಾಪಾರ ವಾತಾವರಣ ಮತ್ತು ಪ್ರೋತ್ಸಾಹ ಇಲ್ಲಿದೆ. ಇದು ರಷ್ಯಾದಲ್ಲಿ ತಮ್ಮ ಅಸ್ತಿತ್ವವನ್ನು ವಿಸ್ತರಿಸಲು ಬಯಸುವ ಭಾರತೀಯ ಕಂಪನಿಗಳಿಗೆ ಅನುಕೂಲಕರವಾಗಿದೆ.

ಕಝನ್ ಫೆಡರಲ್ ವಿಶ್ವವಿದ್ಯಾಲಯವು ರಷ್ಯಾದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾಗಿದೆ. ಇದು ಭಾರತೀಯ ವಿಶ್ವವಿದ್ಯಾಲಯಗಳೊಂದಿಗೆ ಸಹಯೋಗವನ್ನೂ ಹೊಂದಿದೆ. ಇಲ್ಲಿ ಎಂಬಿಬಿಎಸ್​ ಪದವಿಯನ್ನು ಪಡೆಯಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಅತ್ಯಂತ ಜನಪ್ರಿಯ ತಾಣವಾಗಿದೆ.

ಎಕಟೆರಿನ್‌ಬರ್ಗ್ ವಿಶೇಷತೆ ಏನು?: ಎಕಟೆರಿನ್​​ಬರ್ಗ್, ಸ್ವೆರ್ಡ್ಲೋವ್ಸ್ಕ್ ಪ್ರದೇಶದ ಆಡಳಿತ ಕೇಂದ್ರ. ರಷ್ಯಾದ ಕೈಗಾರಿಕಾ ಮತ್ತು ಆರ್ಥಿಕ ಕೇಂದ್ರಗಳಲ್ಲಿ ಒಂದು. ಇದು ಲೋಹಶಾಸ್ತ್ರ, ಭಾರೀ ಯಂತ್ರೋಪಕರಣಗಳು ಮತ್ತು ಉತ್ಪಾದನೆ ಸೇರಿದಂತೆ ವೈವಿಧ್ಯಮಯ ಕೈಗಾರಿಕೆಗಳಿಗೆ ನೆಲೆಯಾಗಿದೆ. ಇಲ್ಲಿ ಭಾರತವು ಹೂಡಿಕೆ ಹೆಚ್ಚಿಸಲು ಬಯಸಿದೆ.

ಇದು ಯುರೋಪ್ ಮತ್ತು ಏಷ್ಯಾದ ನಡುವಿನ ಗಡಿರೇಖೆಯಲ್ಲಿ ಬರುವ ರಷ್ಯಾದ ಮಧ್ಯ ಭಾಗದಲ್ಲಿದೆ. ಈ ಪ್ರದೇಶವು ಭಾರತೀಯರ ವ್ಯವಹಾರಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ. ಭಾರತೀಯ ಕಂಪನಿಗಳು ಈ ವಲಯಗಳಲ್ಲಿ ಉದ್ಯಮಗಳನ್ನು ವಿಸ್ತರಿಸಲು ಆಸಕ್ತಿ ತೋರಿಸಿವೆ. ಕಝನ್​​ನಂತೆ, ಎಕಟೆರಿನ್​​ಬರ್ಗ್ ಕೂಡ ದೊಡ್ಡ ಆರ್ಥಿಲ ವಲಯ ಪ್ರದೇಶವಾಗಿದೆ. ಇಲ್ಲಿ ತೆರಿಗೆ ವಿನಾಯಿತಿಗಳು ಮತ್ತು ಸರಳೀಕೃತ ಆಡಳಿತದ ಅನುಕೂಲವಿದೆ. ಉತ್ಪಾದನೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಭಾರತೀಯರನ್ನು ಆಕರ್ಷಿಸಿದೆ.

ಇಲ್ಲಿ ಗಣಿಗಾರಿಕೆ, ಎಂಜಿನಿಯರಿಂಗ್ ಮತ್ತು ಔಷಧೀಯ ಕ್ಷೇತ್ರಗಳಲ್ಲಿ ಸ್ಥಳೀಯ ಉದ್ಯಮಗಳೊಂದಿಗೆ ಜಂಟಿ ಉದ್ಯಮಗಳನ್ನು ಸ್ಥಾಪಿಸಬಹುದು. ಈ ಜಂಟಿ ಸಹಭಾಗಿತ್ವದಿಂದ ದ್ವಿಪಕ್ಷೀಯ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ಹೆಚ್ಚಿಸಲು ಸಹಾಯವಾಗಲಿದೆ. ಎಕಟೆರಿನ್​​ಬರ್ಗ್ ವೈಜ್ಞಾನಿಕ ಸಂಶೋಧನೆ ಮತ್ತು ತಾಂತ್ರಿಕ ಆವಿಷ್ಕಾರಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಫೆಡರಲ್ ವಿಶ್ವವಿದ್ಯಾಲಯವು ರಷ್ಯಾದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಇದು ಭಾರತೀಯ ಶಿಕ್ಷಣ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಹೀಗಾಗಿ ಈ ಪ್ರದೇಶದಲ್ಲಿ ಧೂತಾವಾಸ ಆರಂಭಿಸಲು ಭಾರತ ಬಯಸಿದೆ.

ಇದನ್ನೂ ಓದಿ: ಭಾರತ - ರಷ್ಯಾ ವಾರ್ಷಿಕ ಶೃಂಗಸಭೆ: ದ್ವಿಪಕ್ಷೀಯ ವ್ಯಾಪಾರವೇ ಪ್ರಮುಖ ಚರ್ಚಾ ವಿಷಯವೇಕೆ?, ಇಲ್ಲಿದೆ ವಿಸ್ತೃತ ವರದಿ - India Russia Annual Summit

ETV Bharat Logo

Copyright © 2024 Ushodaya Enterprises Pvt. Ltd., All Rights Reserved.