ಹೈದರಾಬಾದ್: ಹದಗೆಡುತ್ತಿರುವ ಜಾಗತಿಕ ಭದ್ರತಾ ಪರಿಸ್ಥಿತಿಗಳು ದೇಶಗಳ ರಕ್ಷಣಾ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಡಾ. ರವೆಲ್ಲಾ ಭಾನು ಕೃಷ್ಣ ಕಿರಣ್ ಅಂದಾಜಿಸಿದ್ದಾರೆ. 2023ರಲ್ಲಿ ಜಾಗತಿಕ ರಕ್ಷಣಾ ವೆಚ್ಚವು ಶೇ 9ರಷ್ಟು ಏರಿಕೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಉಕ್ರೇನ್ ರಷ್ಯಾ ಯುದ್ಧದಿಂದ ಉಂಟಾದ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಾಗಿದೆ. ಈ ವೆಚ್ಚ 2024ರಲ್ಲೂ ಕೂಡ ಮುಂದುವರೆಯುವ ಸಾಧ್ಯತೆ ಇದೆ. ಹೆಚ್ಚುತ್ತಿರುವ ರಕ್ಷಣಾ ವೆಚ್ಚದ ನಡುವೆ ರಷ್ಯಾ ಮತ್ತು ಚೀನಾದ ನಡುವೆ ಹೆಚ್ಚುತ್ತಿರುವ ಚೀನಾ ಮತ್ತು ರಷ್ಯಾದ ಉದ್ವಿಗ್ನತೆ ಹಿನ್ನೆಲೆ ಯುನೈಟೆಡ್ ಸ್ಟ್ರೇಟ್ ಮತ್ತು ಯುರೋಪಿಯನ್ ಯುನಿಯನ್ ದೇಶಗಳು ಕೂಡ ಶಸ್ತ್ರಾಸ್ತ್ರ ಸಂಗ್ರಹಕ್ಕೆ ತಮ್ಮನ್ನು ತಾವು ಸಜ್ಜುಗೊಳಿಸುವ ಯತ್ನ ನಡೆಸಿವೆ.
ಈ ನಡುವೆ ಇಸ್ರೇಲ್ ಹಮಾಸ್ ಯುದ್ಧವೂ ಕೆಂಪು ಸಮುದ್ರದ ಬಿಕ್ಕಟ್ಟು ಮತ್ತು ಇತ್ತೀಚಿಗೆ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿಗಳು ವಿಶ್ವದಲ್ಲಿ ಮತ್ತೆ ಯುದ್ಧದ ಪರಿಸ್ಥಿತಿ ಕೂಡ ಭವಿಷ್ಯದ ಉದ್ವಿಗ್ನತೆಯನ್ನು ಎಚ್ಚರಿಸಿದೆ.
ಇಂಟರ್ನ್ಯಾಷನಲ್ ಇನ್ಸಟಿಟ್ಯೂಟ್ ಫಾರ್ ಸ್ಟ್ರಾರ್ಟಜಿಕ್ (ಐಐಎಸ್ಎಸ್) ಅಧ್ಯಯನ ತಿಳಿಸುವಂತೆ ಆರ್ಕ್ಟಿಕ್‌ನಲ್ಲಿ ಹೆಚ್ಚುತ್ತಿರುವ ಅಡಚಣೆಗಳು, ಉತ್ತರ ಕೊರಿಯಾದ ಪರಮಾಣು ಶಸ್ತ್ರಾಸ್ತ್ರಗಳ ಅನ್ವೇಷಣೆ, ಸಂಘರ್ಷ ವಲಯಗಳಲ್ಲಿ ಟೆಹ್ರಾನ್‌ನ ಹೆಚ್ಚುತ್ತಿರುವ ಪ್ರಭಾವ ಮತ್ತು ಆಫ್ರಿಕಾದ ಸಹೇಲ್ ಪ್ರದೇಶದಲ್ಲಿ ಮಿಲಿಟರಿ ಆಡಳಿತಗಳ ಏರಿಕೆ ಕಂಡು ಬಂದಿದೆ.
ಉಕ್ರೇನ್ ಯುದ್ಧದಿಂದ ಪಾಠ ಕಲಿಯಬೇಕಿದ್ದು, ಅನೇಕ ದೇಶಗಳು ಯುದ್ದ ಮತ್ತು ಮಿಲಿಟರಿ ಉತ್ಪನ್ನಗಳ ಸಂಗ್ರಹಕ್ಕೆ ಮುಂದಾಗಿದೆ. ಎದುರಾಳಿಗಳ ಮೇಲೆ ಸಿದ್ಧತೆಗೆ ಶಸ್ತ್ರಾಸ್ತ್ರ ಮತ್ತು ಯುದ್ಧ ಸಾಮಗ್ರಿಗಳ ಸಂಗ್ರಹದ ಜೊತೆಗೆ ಸೈಬರ್ ಯುದ್ಧ, ಭಯೋತ್ಪಾದನೆಯಂತಹ ಸವಾಲುಗಳನ್ನು ನಿಭಾಯಿಸಲು ಮತ್ತು ಮಾನವರಹಿತ ವೈಮಾನಿಕ ವಾಹನಗಳು (ಯುಎವಿ) ಹೈಬ್ರಿಡ್‌ನಿಂದ ಉಂಟಾಗುವ ಹೊಸ ಬೆದರಿಕೆಗಳನ್ನು ಎದುರಿಸಲು ಹೊಸ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಮಿಲಿಟರಿ ವೆಚ್ಚದ ಅಗತ್ಯವಿದೆ.
ಐಐಎಸ್ಎಸ್ ವರದಿ ಪ್ರಕಾರ, 2014ರಲ್ಲಿ ರಷ್ಯಾ ಉಕ್ರೇನ್ನ ಭಾಗವನ್ನು ಆಕ್ರಮಿಸಿದ ನಂತರ ಯುರೋಪ್ನಲ್ಲಿರುವ ಎಲ್ಲಾ ಯುಎಸ್ ನ್ಯಾಟೋ ಹೊರತಾದ ಸದಸ್ಯ ರಾಷ್ಟ್ರಗಳು ರಕ್ಷಣೆಗಾಗಿ ಶೇ 32ರಷ್ಟು ಖರ್ಚು ಮಾಡಿವೆ. ಸದಸ್ಯ ರಾಷ್ಟ್ರಗಳಿಗೆ ತಮ್ಮ ಒಟ್ಟು ದೇಶಿಯ ಉತ್ಪನ್ನದ (ಜಿಡಿಪಿ)ಯಲ್ಲಿ ಕನಿಷ್ಠ ಶೇ 2ರಷ್ಟನ್ನು ಪ್ರತಿ ವರ್ಷ ರಕ್ಷಣೆಗಾಗಿ ಖರ್ಚು ಮಾಡುವ ಗುರಿ ನಿಗದಿಪಡಿಸಿವೆ. ಆದರೆ, 19 ಸದಸ್ಯ ದೇಶಗಳು ನಿಗದಿತ ಗುರಿಗಿಂತ ಹೆಚ್ಚಾಗಿ 2023ರಲ್ಲಿ ಖರ್ಚು ಮಾಡಿವೆ.
ನಾರ್ವೆ ನ್ಯಾಟೋ ಸದಸ್ಯ ದೇಶ ಇತ್ತೀಚಿಗೆ 2024ರಲ್ಲಿ ರಕ್ಷಣೆಗಾಗಿ ಮಾಡುತ್ತಿದ್ದ ಶೇ 2ರಷ್ಟು ಹಣವನ್ನು ಶೇ 3ಕ್ಕೆ ಹೆಚ್ಚು ಮಾಡಿದೆ. ನ್ಯಾಟೋ ಸದಸ್ಯ ರಾಷ್ಟ್ರಗಳು ತಮ್ಮ ರಕ್ಷಣೆ ಮೇಲೆ ಮಾಡುತ್ತಿರುವ ಖರ್ಚನ್ನು ಜಿಡಿಪಿಯ ಶೇ 2ರಷ್ಟು ಹತ್ತಿರದಲ್ಲಿವೆ. ಕೆಲವು ರಕ್ಷಣಾ ತಜ್ಞರು ಹೇಳುವಂತೆ ಭವಿಷ್ಯದಲ್ಲಿ ಹದಗೆಡುವ ಪರಿಸ್ಥಿತಿ ಹಿನ್ನೆಲೆ ಈ ವೆಚ್ಚವು ಶೇ 4ರಷ್ಟ ಮಟ್ಟ ತಲುಪುತ್ತಿದೆ. ಈ ರೀತಿ ಆಗುವುದರಿಂದ ಮುಂದಿನ 10 ವರ್ಷಗಳಲ್ಲಿ ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು 10 ಟ್ರಿಲಿಯನ್ ಅನ್ನು ರಕ್ಷಣೆಗೆ ವ್ಯಯ ಮಾಡಲಿವೆ.
ಆದರೂ ರಕ್ಷಣಾ ವೆಚ್ಚಕ್ಕಾಗಿ ನ್ಯಾಟೋ ನಾಯಕರು ವಾರ್ಷಿಕ ಜಿಡಿಪಿ ಶೇ 2ರಷ್ಟು ನಿಭಾಯಿಸುವುದು ಈಗಾಗಲೇ ಯುರೋಪ್‌ನಲ್ಲಿ ಕಠಿಣ ಚರ್ಚೆಗಳಿಗೆ ಕಾರಣವಾಗಿದೆ. ನಾಟೋ ಸದಸ್ಯರು ಜಿಡಿಪಿಯ ಶೇ 4ರಷ್ಟಕ್ಕಿಂತ ಹೆಚ್ಚಾಗಿ ವ್ಯಯ ಮಾಡುವುದರಲ್ಲಿ ಒಪ್ಪುವುದು ಕಷ್ಟವಾಗಿದೆ. ಕಾರಣ ಇದರಿಂದ ಬಜೆಟ್ನಲ್ಲಿ ಇತರೆ ಭಾಗಗಳನ್ನು ಕಡಿತ ಮಾಡಬೇಕಾಗುತ್ತದೆ ಎಂದು ಬ್ಲುಮ್ಬರ್ಗ್ ತಿಳಿಸಿದೆ.
ಬ್ಲುಮ್ಬರ್ಗ್ ಹೇಳುವಂತೆ, ಯುಎಸ್, ಫ್ರಾನ್ಸ್, ಇಟಲಿ, ಸ್ಪೇನ್ ನೋವುದಾಯಕ ಆಯ್ಕೆಯಾಗಿ ಶೇ 4ರಷ್ಟು ವ್ಯಯಕ್ಕೆ ಮುಂದಾಗಿದೆ. ಈ ನಡುವೆ ಮುಗಿಯದ ರಷ್ಯಾ ಮತ್ತು ಉಕ್ರೇನ್ ಯುದ್ಧ ಕೂಡ ನ್ಯಾಟೋ ಸದಸ್ಯ ದೇಶಗಳ ಮೇಲೆ ಗಮನಾರ್ಹ ಆರ್ಥಿಕ ಒತ್ತಡಕ್ಕೆ ಕಾರಣವಾಗುತ್ತಿದೆ.
ನ್ಯಾಟೋಗೆ ಅಮೆರಿಕವು ಅತಿ ದೊಡ್ಡ ಕೊಡುಗೆದಾರ ಆಗಿದ್ದು, 2023ರಲ್ಲಿ ಸಂಸ್ಥೆ ಶೇ 65ರಷ್ಟು ಹಣವನ್ನು ವ್ಯಯ ಮಾಡಿದೆ. ಉಕ್ರೇನ್ ಯುದ್ಧ ಆರಂಭವಾದಗಿನಿಂದ 75 ಬಿಲಿಯನ್ ಡಾಲರ್ ಹಣವನ್ನು ನೀಡಿದೆ. ಭವಿಷ್ಯದ ಭದ್ರತಾ ಸವಾಲುಗಳಿಗೆ ಸಜ್ಜಾಗುವಿಕೆಗೆ ಶೇ 4ರಷ್ಟು ಹಣ ವ್ಯಯಿಸಿದೆ. ಈ ಗಣನೀಯ ವೆಚ್ಚ ಇಯು ಮತ್ತು ಯುಎಸ್ನಲ್ಲಿ ಈಗಾಗಲೇ ಅಸ್ಥಿರ ಸಾರ್ವಜನಿಕ ಹಣಕಾಸು ಸಮಸ್ಯೆ ಸೃಷ್ಟಿಸಿದ್ದು, ಇದಕ್ಕಾಗಿ ಕೆಲವು ಕಠಿಣ ಮತ್ತು ಬಲವಾದ ನಿರ್ಧಾರಗಳನ್ನು ಸೂಚಿಸುತ್ತದೆ.
ಎಷ್ಟು ಬೇಗ ಸಾರ್ವಜನಿಕರ ಹಣಕಾಸಿನ ಮೇಲೆ ಈ ಶಸ್ತ್ರಾಸ್ತ್ರಗಳು ಪರಿಣಾಮ ಬೀರುತ್ತವೆ ಎಂದು ಹೇಳುವುದು ಸದ್ಯ ಸಾಧ್ಯವಿಲ್ಲ. ಆದರೆ ಈ ರೀತಿಯ ಬದ್ಧತೆ ಜನರ ಯೋಗಕ್ಷೇಮ ಮತ್ತು ಆರೋಗ್ಯ ಅಗತ್ಯತೆ ಮೇಲೆ ಪರಿಣಾಮ ಬೀರಲಿದೆ. ಕೆಲವು ಆರ್ಥಿಕ ತಜ್ಞರು ವಾದಿಸುವಂತೆ, ಸೇನೆ ಮೇಲೆ ಹೆಚ್ಚಿನ ವೆಚ್ಚವು ಹಣದುಪ್ಪರಕ್ಕೆ ಮತ್ತು ಬಡ್ಡಿದರದ ಮೇಲೆ ಒತ್ತಡವನ್ನು ಹಾಕುತ್ತದೆ. ಆದರೆ ಇದನ್ನು ಅಲ್ಲಗಳೆಯುವ ಕೆಲವು ಶ್ರೀಮಂತ ಪಶ್ಚಿಮ ರಾಷ್ಟ್ರಗಳು ತಮ್ಮ ಆರ್ಥಿಕ ಬೇಡಿಕೆಯಿಂದ ಇದನ್ನು ನಿರ್ವಹಣೆ ಮಾಡುವುದಾಗಿ ಹೇಳುತ್ತಿದ್ದಾರೆ.
ಮೆಕಿನ್ಸೆ ಪ್ರಕಾರ, ಇಯು ಸದಸ್ಯ ರಾಷ್ಟ್ರಗಳ ರಕ್ಷಣಾ ವೆಚ್ಚವು 2022ರಲ್ಲಿ 260 ಬಿಲಿಯನ್ ಯುರೋ ದಾಖಲೆ ತಲುಪಿದೆ. 2021ರಲ್ಲಿ ಇದು ಶೇ 6ರಷ್ಟು ಏರಿಕೆ ಕಂಡಿದ್ದು, 2028ರ ಹೊತ್ತಿಗೆ 500 ಬಿಲಿಯನ್ ಯುರೋ ತಲುಪಲಿದೆ. ಮೆಕೆನ್ಸಿ ಅಂದಾಜಿಸುವಂತೆ, 1996 ರಿಂದ 1992ರ ವರೆಗೆ ರಕ್ಷಣೆಗೆ ಇದು ವ್ಯಯ ಮಾಡಿದ್ದನ್ನು ಹೋಲಿಕೆ ಮಾಡಿದಾಗ ಯುರೋಪಿಯನ್ ದೇಶಗಳು ಕಳೆದ ಕೆಲವು ದಶಕಗಳಿಗೆ 8.6 ಟ್ರಿಲಿಯನ್ ಡಾಲರ್ ಅನ್ನು ಉಳಿಸಿದೆ.
ಆದಾಗ್ಯೂ ಪುಟಿನ್ನ ಆಕ್ರಮಣಶೀಲತೆ ಯುರೋಪ್ ಸೇನೆ ಬಲಗೊಳಿಸುವ ಒತ್ತಡ ಹೆಚ್ಚಿಸಿದೆ. ಅಮೆರಿಕ 2022ರಲ್ಲಿ ಸೇನೆಗೆ 877ಬಿಲಿಯನ್ ಡಾಲರ್ ವ್ಯಯ ಮಾಡಿದ್ದು, 2023ರಲ್ಲಿ 905.5 ಬಿಲಿಯನ್ ಡಾಲರ್ ಹೆಚ್ಚಿಸಿದೆ. ಇದು ರಕ್ಷಣೆಗಾಗಿ ತಮ್ಮ ವಾರ್ಷಿಕ ಜಿಡಿಪಿಯಲ್ಲಿ ಶೇ 3.3ರಷ್ಟು ಖರ್ಚು ಮಾಡಿದೆ.
ಇನ್ನು ಚೀನಾದ ಸೇನೆ ಮೇಲೆ ವ್ಯಯ ಬೆಳವಣಿಗೆ ಕೂಡ 2014ರಿಂದ 2021ರ ವೇಳೆಗೆ ಶೇ 47ರಷ್ಟು ಹೆಚ್ಚಿದೆ. ಇದು 2024ರಲ್ಲಿ ಮತ್ತೆ 7.2ರಷ್ಟು ಹೆಚ್ಚಿಸಲಿದೆ. ರಷ್ಯಾ ರಕ್ಷಣಾ ಬಜೆಟ್ ಕೂಡ 2024ರಲ್ಲಿ ಶೇ 60ರಷ್ಟು ಅಂದರೆ ದೇಶದ ಬಜೆಟ್ನ ಮೂರನೇ ಒಂದು ಪಾಲು, ವಾರ್ಷಿಕ ಜಿಡಿಪಿಯ ಶೇ 7.5ರಷ್ಟು ಇಟ್ಟಿದೆ. ಯುರೋಪ್ ದೇಶಗಳು ನ್ಯಾಟೋ ಗುರಿಗಿಂತ ರಕ್ಷಣೆಗಾಗಿ ಕಡಿಮೆ ಖರ್ಚು ಮಾಡಿದರೂ ಸಹ, ಅಮೆರಿಕದ ಹೊರತಾದ ಸದಸ್ಯ ರಾಷ್ಟ್ರಗಳ ಸಂಯೋಜಿತ ರಕ್ಷಣಾ ಬಜೆಟ್ ಅನ್ನು ರಷ್ಯಾಕ್ಕೆ ಹೊಂದಿಸಲು ಸಾಧ್ಯವಿಲ್ಲ.
ಒಟ್ಟಾರೆಯಾಗಿ, ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವ ಚೀನಾ ಮತ್ತು ರಷ್ಯಾ ಸೇರಿದಂತೆ ಮುಂದಿನ 15 ದೇಶಗಳನ್ನು ಒಟ್ಟುಗೂಡಿಸುವುದಕ್ಕಿಂತ ಹೆಚ್ಚಿನ ಜಾಗತಿಕ ಮಿಲಿಟರಿ ಖರ್ಚು ಮಾಡುವವರಲ್ಲಿ ಅಮೆರಿಕ ಮಾಡುತ್ತಿದೆ. ಇನ್ನು ಇದರಲ್ಲಿ ಭಾರತ ಮತ್ತು ಬ್ರಿಟನ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.
ಇದನ್ನೂ ಓದಿ: ರಕ್ಷಣಾ ವೆಚ್ಚ: ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ರಾಷ್ಟ್ರ...ಚೀನಾ ನಮಗಿಂತ 4 ಪಟ್ಟು ಹೆಚ್ಚು ಖರ್ಚು