ನವದೆಹಲಿ: ರೋಬೋಟಿಕ್ ಅಸಿಸ್ಟೆಂಟ್ ಸರ್ಜರಿ (ಆರ್ಎಎಸ್) ಸದ್ಯ ಭಾರತದಲ್ಲಿ ಎಲ್ಲರ ಆಕರ್ಷಣೀಯವಾಗಿದೆ. ಇದರಿಂದ ಹೆಚ್ಚಿನ ಜನರು ಅವಕಾಶ ಪಡೆಯಲು ಸರ್ಜನ್ಗಳು ಹೆಚ್ಚಿನ ತಂತ್ರಜ್ಞಾನಾಧಾರಿತ ತರಬೇತಿ ಪಡೆಯಬೇಕಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ಲಿನಿಕಲ್ ರೋಬೋಟಿಕ್ ಸರ್ಜರಿ ಅಸೋಸಿಯೇಷನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ತಜ್ಞರು, ದೇಶದೆಲ್ಲೆಡೆ ಅರ್ಹ ರೋಗಿಗಳಿಗೆ ರೋಬೋಟಿಕ್ ಸರ್ಜರಿ ಲಭ್ಯವಾಗುವ ನಿಟ್ಟಿನಲ್ಲಿ ಸರ್ಜನ್ಗಳನ್ನು ಸಿದ್ಧಗೊಳಿಸಬೇಕಿದೆ ಎಂದರು.
ಆರ್ಎಎಸ್ ರೋಗಿಗಳಿಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದರಿಂದ ರೋಗಿ ಬೇಗ ಆಸ್ಪತ್ರೆಯಿಂದ ಬಿಡುಗಡೆ, ಆಸ್ಪತ್ರೆಯಲ್ಲಿ ಅಲ್ಪಾವಧಿ ಇರುವಿಕೆ, ಕಡಿಮೆ ನೋವು ನಿವಾರಕ ಮತ್ತು ಆ್ಯಂಟಿಬಯೋಟಿಕ್ಸ್, ಕಡಿಮೆ ಸಂಕೀರ್ಣತೆ ಮತ್ತು ಐಸಿಯುನಲ್ಲಿ ಕಡಿಮೆ ಉಳಿಯುವ ಅವಕಾಶ ಹೊಂದಿದೆ. ರೋಬೋಟಿಕ್ ಸಹಾಯದ ಸರ್ಜರಿಯ ಮತ್ತೊಂದು ಅನುಕೂಲ ಎಂದರೆ, ಸಣ್ಣ ಕಲಿಕೆಯ ರೇಖೆ, ಮತ್ತು ಅತ್ಯುತ್ತಮ ಪ್ರಮಾಣೀಕರಣ ಆಗಿದೆ ಎಂದು ಸಿಆರ್ಎಸ್ಎ ಅಧ್ಯಕ್ಷ ಡಾ ವಿವೇಕ್ ಬಿಂದಲ್ ತಿಳಿಸಿದ್ದಾರೆ.
ರೋಬೋಟಿಕ್ ವ್ಯವಸ್ಥೆಗಳ ನಿಖರತೆ ಮತ್ತು ಕೌಶಲ್ಯದಿಂದ ಶಸ್ತ್ರಚಿಕಿತ್ಸಕರು ಉತ್ತಮ ಕ್ಲಿನಿಕಲ್ ಫಲಿತಾಂಶಗಳನ್ನು ಸಾಧಿಸಬಹುದು. ಅಲ್ಲದೇ ಇದರಲ್ಲಿ ಕಡಿಮೆ ಸಂಕೀರ್ಣತೆ ಮತ್ತು ರೋಗಿಗಳ ಶೀಘ್ರ ಚೇತರಿಕೆ ಕಾಣಬಹುದು. ಈಗ ತರಬೇತಿ ಪಡೆದಿರುವ ಸರ್ಜನ್ಗಳು ಮುಂದೆ ಈ ತಂತ್ರಜ್ಞಾನವನ್ನು ಮುಂದಿನ ಸರ್ಜನ್ಗಳಿಗೆ ಪರಿಚಯಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು.
ದ್ವಾರಕಾದ ಮಣಿಪಾಲ್ ಆಸ್ಪತ್ರೆಯ ಎಚ್ಒಡಿ ಮತ್ತು ಹಿರಿಯ ಸಮಾಲೋಚಕ ಡಾ ರಂದೀಪ್ ವಧವಾನ್ ಮಾತನಾಡಿ, ಆರೋಗ್ಯ ಸೇವೆ ವಿಚಾರಕ್ಕೆ ಬಂದಾಗ, ಕ್ಲಿನಿಕಲ್ ಆಧಾರದ ಮೇಲೆ ತಂತ್ರಜ್ಞಾನದ ಗುರಿ ನಿರ್ಮಾಣ ಪ್ರಮುಖವಾಗಿದೆ ಎಂದರು.
ಈ ಹಿನ್ನೆಲೆ ರೋಬೋಟಿಕ್ ಅಸಿಸ್ಟೆಂಟ್ ಸರ್ಜರಿಯಲ್ಲಿ ಹೂಡಿಕೆ, ಪಾಲುದಾರಿಗೆ ಮತ್ತು ಜಾಗತಿಕ ನಾಯಕರ ಸಹಯೋಗ ಪ್ರಮುಖವಾಗಿದೆ. ಈ ಕುರಿತು ತಿಳುವಳಿಕೆ ವಿನಿಮಯ ಮಾಡಿಕೊಳ್ಳುವುದರಿಂದ ಸ್ಥಳೀಯ ಪರಿಸರ ವ್ಯವಸ್ಥೆಯ ಬೆಂಬಲ ಸಿಗಲಿದೆ ಎಂದರು.
ಸರ್ಜನ್ಗಳು ರೋಬೋಟಿಕ್ ಅಸಿಸ್ಟೆಂಟ್ ಸರ್ಜರಿ ಮಾಡುವ ಮುನ್ನ ಅವರು, ಶೇ 60 ರಿಂದ 70 ಗಂಟೆಗಳ ಕಾಲ ಸಿಮ್ಯುಲೇಟರ್ ತರಬೇತಿ, ಡ್ರೈ ಲ್ಯಾಬ್ ತರಬೇತಿ, ಕೇಸ್ ಅಬ್ಸರ್ವೇಶನ್ ಸೇರಿದಂತೆ ಅನೇಕ ಮಾರ್ಗದರ್ಶನದ ಕಾರ್ಯಕ್ರಮಕ್ಕೆ ಒಳಪಡಬೇಕಿದೆ.
ಸದ್ಯ ಭಾರತದೆಲ್ಲೆಡೆ ಸರ್ಕಾರಿ ಮತ್ತು ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ 850 ರೋಬೋಟಿಕ್ ಸಹಾಯಕ ತರಬೇತಿ ಪಡೆದ ಸರ್ಜನ್ಗಳಿದ್ದಾರೆ. ಯುರೋಲಾಜಿ, ಸರ್ಜಿಕಲ್ ಅಂಕೋಲಾಜಿ, ಜನರಲ್ ಸರ್ಜರಿ ಮತ್ತು ಸ್ತ್ರೀರೋಗದಲ್ಲಿ ವಿವಿಧ ರೀತಿಯ ಆರ್ಎಎಸ್ ಸರ್ಜರಿಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಇಂಟ್ಯೂಟಿವ್ ಇಂಡಿಯಾದ ವಿಬಿ ಮನದೀಪ್ ಸಿಂಗ್ ಕುಮಾರ್ ತಿಳಿಸಿದರು. (ಐಎಎನ್ಎಸ್)
ಇದನ್ನೂ ಓದಿ: ಪಾಕ್‌ನಲ್ಲಿ ಕಿಡ್ನಿ ಕಸಿ ನಂತರ ಮೂತ್ರನಾಳ ಸೋಂಕಿಗೆ ತುತ್ತಾಗಿದ್ದ ಮಹಿಳೆಗೆ ಬೆಂಗಳೂರಿನಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆ