ಹೈದರಾಬಾದ್: ಶಿಕ್ಷಣಕ್ಕೆ ಹೊಂದಿಕೊಳ್ಳುವ, ಅಂತರ್ಗತ, ವೈವಿಧ್ಯಮಯ, ಕಲಿಕಾ ಕೇಂದ್ರಿತ, ಸುಲಭ ಮತ್ತು ಜಾಗತಿಕ ಉತ್ತಮ ಅಭ್ಯಾಸಗಳನ್ನು ಜೋಡಿಸುವ ಗುರಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)- 2020ರಲ್ಲಿ ಬಹು ಪ್ರವೇಶ ಮತ್ತು ಬಹು ನಿರ್ಗಮನ (ಎಂಇಎಂಇ) ಎಂಬ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ.
ಪದವಿ ಜೊತೆ ವಿಷಯಗಳ ಸೇರ್ಪಡೆ, ಬಹು ಪ್ರವೇಶದ ಮೂಲಕ ಅಧ್ಯಯನಕ್ಕೆ ವಿಷಯಗಳ ಆಯ್ಕೆ ಮತ್ತು ನಿರ್ಗಮನ, ಸರಳೀಕರಣದಂತಹ ಹಲವು ವಿಷಯಗಳ ಮೂಲಕ ಎನ್ಇಪಿ 2020 ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಂದಿನ ಶಿಕ್ಷಣ ಸಚಿವರಾಗಿದ್ದ ಸುಭಾಸ್ ಸರ್ಕಾರ್ ಚಳಿಗಾಲದ ಅಧಿವೇಶನದಲ್ಲಿ ತಿಳಿಸಿದ್ದರು.
ಆಂಧ್ರ ಪ್ರದೇಶದ ಎಲೂರು ಸಂಸದ ಶ್ರೀಧರ್ ಕೊಟಗಿರಿ ಅವರು, ಎನ್ಇಪಿಯಲ್ಲಿ ಬಹು ಪ್ರವೇಶ ಮತ್ತು ಬಹು ನಿರ್ಗಮನ (ಎಂಎಸ್ಎಂಇ) ಗಾಗಿ ಹೊಸ ಆಯ್ಕೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರವು ಪರಿಗಣಿಸುತ್ತಿದೆಯೇ ಎಂಬ ಪ್ರಶ್ನೆಗೆ ಸಚಿವರು ಉತ್ತರಿಸಿದ್ದರು.
ಯುಜಿಸಿಯಿಂದ ಎಂಇಎಂಇ ಹೆಚ್ಚು ಅರ್ಥೈಸಿಕೊಳ್ಳುವುದಕ್ಕಾಗಿ ಉತ್ತಮ ಮಾರ್ಗದರ್ಶನ ನೀಡಲಾಗುತ್ತಿದೆ ಎಂದಿದ್ದರು.
ಸಾಧನೆಯ ಗುರಿ:
- ಯುಜಿಸಿ ಎಂಇಎಂಇ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಏಳು ಪ್ರಮುಖ ಅಂಶದ ಮಾರ್ಗಸೂಚಿಯನ್ನು ಪ್ರಕಟಿಸಿದೆ.
- ಇದು ಕಲಿಕೆಯ ಹಾದಿ ಸುಗಮ ಮಾಡಿ, ಕಟ್ಟುನಿಟ್ಟಿನ ಗಡಿ ತೆಗೆದುಹಾಕುತ್ತದೆ. ಜೊತೆಗೆ ಡ್ರಾಪ್ಔಟ್ ದರವನ್ನು ಕಡಿಮೆ ಮಾಡಲು ಮತ್ತು ಒಟ್ಟು ದಾಖಲಾತಿ ದರವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
- ಎಂಇಎಂಇ ಅಧ್ಯಯನದ ವಿಭಾಗಗಳಲ್ಲಿ ಸೃಜನಶೀಲ ಸಂಯೋಜನೆಗಳನ್ನು ನೀಡುತ್ತದೆ.
- ಇದು ಕೇವಲ ಅವರ ಔಪಚಾರಿಕ ಪದವಿಗಾಗಿ ಅಲ್ಲದೇ, ವಿದ್ಯಾರ್ಥಿಗಳು ನಿರ್ದಿಷ್ಟ ವಿಷಯದಲ್ಲಿ ನೈಪುಣ್ಯತೆ ಪಡೆಯುವ ಆಯ್ಕೆಯನ್ನು ಸರಳಗೊಳಿಸುತ್ತದೆ.
- ಇದು ಔಪಚಾರಿಕ ಪದವಿಯ ಜೊತೆಗೆ ಅಜೀವ ಕಲಿಕೆಯನ್ನು ಉತ್ತೇಜಿಸುತ್ತದೆ.
- ವಿದ್ಯಾರ್ಥಿ ತನ್ನ ಅಧ್ಯಯನದ ಕಾರ್ಯಕ್ರಮಗಳನ್ನು ಪುನಾರಂಭಿಸಿದಾಗ ಗಳಿಸಿದ ಈ ಕಲಿಕೆಯನ್ನು ಮತ್ತೆ ಆರಂಭಿಸಲು ಕೂಡ ಅವಕಾಶ ನೀಡುತ್ತದೆ.
- ಎನ್ಇಪಿಯಲ್ಲಿನ ಹಲವಾರು ವಿಷಯಗಳ ಅನುಷ್ಠಾನಕ್ಕೆ ಎನ್ಇಪಿಗೆ ಒತ್ತಾಯ ಮಾಡುತ್ತಿರುವ ಹೊತ್ತಿನಲ್ಲಿ ಈ ಎಂಇಎಂಇ ಆಯ್ಕೆ ಒಂದು ಹೊಸ ಅವಕಾಶವಾಗಿದೆ. ಇದು ಅನೇಕ ಅಡೆತಡೆಗಳನ್ನು ನಿವಾರಿಸುತ್ತದೆ.
ಪಠ್ಯಗಳ ಪುನರ್ವಿನ್ಯಾಸ; ಸರಳೀಕೃತ ಮತ್ತು ಮಾದರಿ ಕೋರ್ಸ್ಗಳಿಗೆ ಸಂಸ್ಥೆಗಳು ಪಠ್ಯವನ್ನು ಮರು ವಿನ್ಯಾಸ ಮಾಡಬೇಕಿದೆ. ಇದಕ್ಕೆ ಕೂಲಂಕಷ ಪರೀಕ್ಷೆಯ ಅಗತ್ಯವಿದೆ. ಹಾಗೇ ಸಾಂಪ್ರದಾಯಿಕ ಪದವಿಯನ್ನು ಪ್ರಮಾಣಪತ್ರದ ಕೋರ್ಸ್ ಮತ್ತು ಡಿಪ್ಲೋಮಾಗಳಾಗಿ ವಿಭಜಿಸುವ ಅಗತ್ಯವಿರುತ್ತದೆ. ವಿದ್ಯಾರ್ಥಿಗಳಿಗೆ ಇವುಗಳಿಂದ ವಿವಿಧ ಹಂತಗಳಲ್ಲಿ ನಿರ್ಗಮಿಸಿದಾಗಲೂ ಮರು ಪ್ರವೇಶಿಸಲು ಅನುಮತಿ ನೀಡುತ್ತದೆ.
ವರ್ಗಾವಣೆ ವ್ಯವಸ್ಥೆ: ಎಂಇಎಂಇ ದೃಢವಾದ ಶೈಕ್ಷಣಿಕ ಬ್ಯಾಂಕ್ ಆಫ್ ಕ್ರೆಡಿಟ್ ಅವಲಂಬಿಸಿದೆ. ಇಲ್ಲಿ ವಿದ್ಯಾರ್ಥಿಗಳು ಸಂಸ್ಥೆಗಳಾದ್ಯಂತ ಕ್ರೆಡಿಟ್‌ಗಳನ್ನು ಸಂಗ್ರಹಿಸಿ, ವರ್ಗಾಯಿಸಬಹುದು. ಸಾರ್ವತ್ರಿಕವಾಗಿ ಅಂಗೀಕರಿಸುವ ಸಮಗ್ರ ಮತ್ತು ಪಾರದರ್ಶಕ ಕ್ರೆಡಿಟ್ ವರ್ಗಾವಣೆ ವ್ಯವಸ್ಥೆಯನ್ನು ಅಭಿವೃದ್ಧಿ ಮತ್ತು ನಿರ್ವಹಣಾ ವ್ಯವಸ್ಥೆಯನ್ನು ರೂಪಿಸುತ್ತದೆ.
ಇದಲ್ಲದೆ, ವಿವಿಧ ವಿಶ್ವವಿದ್ಯಾನಿಲಯಗಳು ತಮ್ಮ ಶೈಕ್ಷಣಿಕ ಕಾರ್ಯಕ್ರಮಗಳಿಗಾಗಿ ನೀಡಲಾಗುವ ವಿಷಯಗಳಿಗೆ ವಿಭಿನ್ನ ಕ್ರೆಡಿಟ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತವೆ. ಒಂದು ವಿಷಯದ ಕ್ರೆಡಿಟ್ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಒಂದೇ ಆಗಿರುವುದಿಲ್ಲ.
ಸಿಬ್ಬಂದಿ, ತರಬೇತಿ ಮತ್ತು ಆಡಳಿತಾತ್ಮಕ ಸವಾಲು: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಗಾಗಲೇ ಬೋಧನಾ ಸಿಬ್ಬಂದಿಗಳ ಕೊರತೆ ಇದ್ದು, ಇದೀಗ ಸಾಂಪ್ರದಾಯಿಕ ಮಾದರಿಗಿಂತ ಗಮನಾರ್ಹವಾಗಿ ಭಿನ್ನವಾಗಿರುವ ಈ ಹೊಸ ಶಿಕ್ಷಣ ಮಾದರಿ ಮತ್ತು ಮೌಲ್ಯಮಾಪನಕ್ಕೆ ಹೊಂದಿಕೊಳ್ಳುವ ಅವಶ್ಯಕತೆ ಇದೆ. ಇದಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳ ಪ್ರವೇಶ, ನಿರ್ಗಮನಗಳು ನಿರ್ವಹಣೆ ಅಧ್ಯಾಪಕರಿಗೆ ಮತ್ತಷ್ಟು ಕೆಲಸದ ಹೊರೆ ಹೆಚ್ಚಿಸಲಿವೆ. ಪದೇ ಪದೇ ವಿದ್ಯಾರ್ಥಿಗಳು ಕೋರ್ಸ್ನಿಂದ ಹೊರ ಹೋಗುವುದು. ಒಳಬರುವುದರಿಂದ ಶುಲ್ಕ ರಚನೆ ಮತ್ತು ವಿದ್ಯಾರ್ಥಿಗಳ ಪ್ರಗತಿ ಪತ್ತೆ ಕೂಡ ಸವಾಲಾಗುತ್ತದೆ. ಇದಕ್ಕಾಗಿ ಸಂಸ್ಥೆಗಳು ತಂತ್ರಜ್ಞಾನ ಮತ್ತು ಸಿಬ್ಬಂದಿ ಮೇಲೆ ಹೂಡಿಕೆ ಮಾಡಬೇಕಾಗುತ್ತದೆ.
ಆರ್ಥಿಕ ಕೊರತೆ: ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅದರಲ್ಲೂ ರಾಜ್ಯ ಅನುದಾನಿತ ಯುನಿವರ್ಸಿಟಿಯಲ್ಲಿ ಆರ್ಥಿಕ ಪರಿಸ್ಥಿತಿ ತಿಳಿದ ವಿಷಯವಾಗಿದ್ದು, ಇಲ್ಲಿ ಸಿಬ್ಬಂದಿಗಳ ವೇತನ, ಸೌಲಭ್ಯ, ಪಿಂಚಣಿಗೆ ಹೆಣಗಾಡುತ್ತಿವೆ.
ಇದೀಗ ಸರಳಿಕೃತ ಕೋರ್ಸ್ ಒದಗಿಸಿದರೆ ಅದನ್ನು ಹೆಚ್ಚುವರಿ ಅಧ್ಯಾಪಕರು, ತರಗತಿ ಕೊಠಡಿಗಳು, ಲ್ಯಾಬ್‌ಗಳು, ಕಾರ್ಯಾಗಾರಗಳು ಮತ್ತು ಆಡಳಿತಾತ್ಮಕ ಬೆಂಬಲ ನೀಡಬೇಕಾಗುತ್ತದೆ. ಇದು ಆಗ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸವಾಲಾಗಲಿದೆ.
ಉದ್ಯೋಗದ ಸವಾಲು; ತಮ್ಮ ಇಷ್ಟದ ಕೋರ್ಸ್ ಮುಗಿಸಿದ ಬಳಿಕ ಅವರಿಗೆ ಎಂಇಎಂಇ ಪ್ರಮಾಣಪತ್ರ ಅಥವಾ ಡಿಪ್ಲೊಮಾ ನೀಡಬಹುದು. ಇದು ಉದ್ಯೋಗದಾತರಿಂದ ಸ್ವೀಕಾರಗೊಳ್ಳುತ್ತದೆಯೇ ಎಂಬುದರ ಬಗ್ಗೆ ಅನಿಶ್ಚಿತತೆ ಇದೆ. ವಿಶೇಷವಾಗಿ ವೃತ್ತಿಪರತೆ ಕ್ಷೇತ್ರದಲ್ಲಿ ಸಂಪ್ರದಾಯದ ಪದವಿ ಅವಶ್ಯಕತೆ ಇದೆ.
ಮುಂದಿನ ಹಾದಿ: ಈ ಸವಾಲುಗಳಿಂದಾಗಿ ಎಂಇಎಂಇ ವ್ಯವಸ್ಥೆ ಮತ್ತಷ್ಟು ಸರಳೀಕೃತವಾಗಿ ಸುಧಾರಣೆ ಸಾಮರ್ಥ್ಯ ಹೊಂದಬೇಕಿದೆ. ಇದರ ಅನುಷ್ಠಾನ ಅಸ್ತಿತ್ವದಲ್ಲಿರುವ ವ್ಯವಸ್ಥೆಗಳು ಪರಿಸ್ಥಿತಿ ಮತ್ತು ಸಂಪನ್ಮೂಲಗಳನ್ನು ಕೂಡ ಪರೀಕ್ಷಿಸುವ ಅಗತ್ಯವಿದೆ. ಜೊತೆಗೆ ಉನ್ನತ ಶಿಕ್ಷಣ ಸಂಸ್ಥೆಯ ಏಕರೂಪದ ಪಠ್ಯಕ್ರಮ ಮತ್ತು ಕ್ರೆಡಿಟ್ ಸ್ಕೀಮ್ ನೀತಿಯ ಅಗತ್ಯವಿದೆ.
ಆರಂಭದಲ್ಲಿ ಇದನ್ನು ಸೀಮಿತ ಸ್ನಾತಕೋತ್ತರ ಕಾರ್ಯಕ್ರಮಗಳಲ್ಲಿ ಅಳವಡಿಸಿ ಬಳಿಕ ಪ್ರಾಯೋಗಿಕ ಯೋಜನೆಯಾಗಿ ಮತ್ತು ನಂತರ ಕಲಿತ ಪಾಠಗಳನ್ನು ಅಳವಡಿಸುವ ಕ್ರಮದ ಕುರಿತು ನಿರ್ಧರಿಸಬಹುದು.
ಇದನ್ನೂ ಓದಿ: ಎನ್ಇಪಿ ಜಾರಿಗೆ ಸೂಚಿಸಲು ಕೋರಿ ಅರ್ಜಿ: ಪ್ರತಿಕ್ರಿಯಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್