ETV Bharat / opinion

ಮೋದಿ - ಪುಟಿನ್ ಆತ್ಮೀಯ ಸ್ನೇಹ: ಮೋದಿ ಭೇಟಿಯಿಂದ ಮತ್ತಷ್ಟು ಗಟ್ಟಿಯಾದ ಭಾರತ - ರಷ್ಯಾ ಸಂಬಂಧ - Modi Putin Bonhomie - MODI PUTIN BONHOMIE

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ರಷ್ಯಾಕ್ಕೆ ಭೇಟಿ ನೀಡಿದ್ದರು. ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದರು. ಉಭಯ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು. ಉಕ್ರೇನ್ ಯುದ್ಧ ಆರಂಭವಾದ ನಂತರ ಪ್ರಧಾನಿ ಮೋದಿಯವರ ಮೊದಲ ರಷ್ಯಾ ಭೇಟಿಯ ಮಹತ್ವದ ಬಗ್ಗೆ ಡಾ.ರಾವೆಲ್ಲಾ ಭಾನು ಕೃಷ್ಣ ಕಿರಣ್ ಲೇಖನ ಬರೆದಿದ್ದಾರೆ.

India Russia  US India  India China  Modi Putin Bonhomie
ಮೋದಿ-ಪುಟಿನ್ ಆತ್ಮೀಯ ಸ್ನೇಹ: ಮೋದಿ ರಷ್ಯಾ ಭೇಟಿಯಿಂದ ಮತ್ತಷ್ಟು ಗಟ್ಟಿಯಾದ ಭಾರತ- ರಷ್ಯಾ ಸಂಬಂಧ (PIB)
author img

By ETV Bharat Karnataka Team

Published : Jul 13, 2024, 12:20 PM IST

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ರಷ್ಯಾಕ್ಕೆ ಭೇಟಿ ನೀಡಿದ್ದರು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮೋದಿ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಉಭಯ ನಾಯಕರು ಒಗ್ಗಟ್ಟನ್ನು ಮಂತ್ರ ಪಟಿಸಿ ಗಮನ ಸೆಳೆದರು. ಉಕ್ರೇನ್ ಯುದ್ಧ ಆರಂಭವಾದ ನಂತರ ಪ್ರಧಾನಿ ಮೋದಿಯವರ ಮೊದಲ ರಷ್ಯಾ ಭೇಟಿಯು ತುಂಬಾ ಮಹತ್ವ ಪಡೆದುಕೊಂಡಿತ್ತು. ಭಾರತ- ರಷ್ಯಾ ಸಂಬಂಧಗಳು ಉದಯೋನ್ಮುಖ ಜಾಗತಿಕ, ಭೌಗೋಳಿಕ, ರಾಜಕೀಯ ಡೈನಾಮಿಕ್ಸ್‌ನಿಂದ ಕೂಡಿವೆ. ಭಾರತ ಮತ್ತು ರಷ್ಯಾ ಪರಸ್ಪರ ಸೌಹಾರ್ದಯುತ ಸಂಬಂಧ ಇಟ್ಟುಕೊಂಡಿವೆ. ವಿಶೇಷವಾಗಿ ಉಕ್ರೇನ್ ಬಿಕ್ಕಟ್ಟಿನ ನಂತರ ಅಮೆರಿಕ - ರಷ್ಯಾ ಉದ್ವಿಗ್ನತೆ, ಭಾರತ-ಚೀನಾ ಗಡಿ ಘರ್ಷಣೆ, ಅಮೆರಿಕ-ಚೀನಾ ನಡುವೆ ಭಿನ್ನಾಭಿಪ್ರಾಯಗಳು ಬೆಳೆಯುತ್ತಿವೆ. ಆದರೆ, ಅಮೆರಿಕ- ಭಾರತ ನಡುವೆ ಸಂಬಂಧಗಳು ಗಟ್ಟಿಯಾಗಿವೆ.

ಭವಿಷ್ಯದಲ್ಲಿ ಚೀನಾದ ಮೇಲಿನ ರಷ್ಯಾದ ಅವಲಂಬನೆಯು ಸಂಪೂರ್ಣ ಮಿಲಿಟರಿ ಮೈತ್ರಿಯಾಗಿ ಬೆಳೆಯಬಹುದು ಎಂಬ ಸಂದೇಹವಿದೆ. ಇದು ಭಾರತ - ರಷ್ಯಾ ಸಂಬಂಧಗಳಿಗೆ ಅಡೆತಡೆಗಳನ್ನು ಉಂಟುಮಾಡುತ್ತದೆ. ಇದಲ್ಲದೇ, ಭಾರತ ಮತ್ತು ಚೀನಾ ನಡುವೆ ಭವಿಷ್ಯದಲ್ಲಿ ಹೆಚ್ಚಿನ ಗಡಿ ಘರ್ಷಣೆಗಳು ಅಥವಾ ಪೂರ್ಣ ಪ್ರಮಾಣದ ಯುದ್ಧದ ಸಂದರ್ಭದಲ್ಲಿ, ನವದೆಹಲಿಯೊಂದಿಗೆ ಪಾಲುದಾರಿಕೆಯನ್ನು ಉಳಿಸಿಕೊಳ್ಳಲು ಮಾಸ್ಕೋಗೆ ಇದು ಸಂಕೀರ್ಣವಾದ ಸವಾಲಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಸನ್ನಿವೇಶದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ರಷ್ಯಾ ಭೇಟಿಯು ನವದೆಹಲಿ ಮತ್ತು ಮಾಸ್ಕೋ "ವಿಶೇಷವಾದ ಕಾರ್ಯತಂತ್ರದ ಪಾಲುದಾರಿಕೆ"ಯ ನಿರಂತರ ಬಲವರ್ಧನೆ ಮತ್ತು ಅದನ್ನು ಸರಿಯಾಗಿ ನಿರ್ವಹಿಸುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ.

22ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆ, ವಿಶಾಲವಾದ ಭೌಗೋಳಿಕ - ರಾಜಕೀಯ ಪ್ರಭಾವಕ್ಕೆ ಕಾರಣವಾದ ಉನ್ನತ ಮಟ್ಟದ ಸಭೆಯು ದ್ವಿಪಕ್ಷೀಯ ಸಂಬಂಧಗಳ ಎಲ್ಲ ಅಂಶಗಳನ್ನು ಪರಿಶೀಲಿಸಿತು. ಜೊತೆಗೆ ವ್ಯಾಪಾರ, ರಕ್ಷಣೆ, ಇಂಧನ, ಸಾರಿಗೆ ಮತ್ತು ಸಂಪರ್ಕ, ಹೂಡಿಕೆಯಂತಹ ವಲಯಗಳಲ್ಲಿ ಮತ್ತು ವಿಶ್ವಸಂಸ್ಥೆ (UN) ಸೇರಿದಂತೆ ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ಅವಕಾಶಗಳನ್ನು ಅನ್ವೇಷಿಸಿತು.

ಮಿಲಿಟರಿ ತಾಂತ್ರಿಕ ಸಹಕಾರ: ಪ್ರಸ್ತುತ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳ ಅಸ್ತಿತ್ವದಲ್ಲಿರುವ ವಾಯು, ಭೂಮಿ ಮತ್ತು ನೌಕಾ ವ್ಯವಸ್ಥೆಗಳಲ್ಲಿ ಸುಮಾರು 60 ರಿಂದ 70 ಪ್ರತಿಶತದಷ್ಟು ಭಾಗಗಳು ಮತ್ತು ಉತ್ಪಾದನೆಗಾಗಿ ರಷ್ಯಾವನ್ನು ಭಾರತ ಅವಲಂಬಿಸಿವೆ. ಈ ವ್ಯವಸ್ಥೆಗಳಲ್ಲಿ ಪ್ರಮುಖವಾದವುಗಳೆಂದರೆ ರಷ್ಯಾ-ತಯಾರಿಸಿದ T-90 ಟ್ಯಾಂಕ್‌ಗಳು, MiG-29-K ಮತ್ತು Su-30-MKI ವಿಮಾನಗಳು, ಕಲಾಶ್ನಿಕೋವ್ ಎಕೆ-203 ರೈಫಲ್‌ಗಳು, 'ಇಗ್ಲಾ-ಎಸ್ ವೆರಿ ಶಾರ್ಟ್ ರೇಂಜ್ ಏರ್ ಡಿಫೆನ್ಸ್ ಸಿಸ್ಟಮ್ಸ್' (VSHORAD), ಕಾಂಕರ್ಸ್ ಆ್ಯಂಟಿ ಟ್ಯಾಂಕ್ ಗೈಡೆಡ್ ಕ್ಷಿಪಣಿ, ಭಾರತದ MiG-29 ಫೈಟರ್ ಜೆಟ್‌ಗಳಿಗೆ ನಿರ್ವಹಣಾ ಸೌಲಭ್ಯಗಳು ಮತ್ತು ಜಂಟಿಯಾಗಿ ತಯಾರಿಸಿದ ಬ್ರಹ್ಮೋಸ್ ಕ್ಷಿಪಣಿ ಸೇರಿವೆ.

ಉದಾಹರಣೆಗೆ, ಭಾರತೀಯ ಸೇನೆಯು ಇನ್ನೂ ತನ್ನ 3,740 ರಷ್ಯಾ ಮೂಲದ ಟ್ಯಾಂಕ್‌ಗಳನ್ನೇ ಶೇಕಡಾ 97 ರಷ್ಟು ಆಳವಾಗಿ ಅವಲಂಬಿಸಿದೆ. 7/7/24 ರಂದು, ರೋಸ್ಟೆಕ್, ರಷ್ಯಾದ ಕಂಪನಿಯು T-90 ಟ್ಯಾಂಕ್‌ಗಾಗಿ ಭಾರತದಲ್ಲಿ ಸುಧಾರಿತ "ಮಾಂಗೊ" ಟ್ಯಾಂಕ್ ಶೆಲ್‌ಗಳನ್ನು ತಯಾರಿಸಲು ಒಪ್ಪಂದಕ್ಕೆ ಸಹಿ ಹಾಕಿತು. ರಷ್ಯಾ-ಭಾರತ ಶೃಂಗಸಭೆಯಲ್ಲಿ ಮೋದಿ-ಪುಟಿನ್ ಮಾತುಕತೆಗಳ ನಂತರ, ಈ ಸಹಯೋಗಗಳು ವೇಗ ಪಡೆದುಕೊಳ್ಳಲಿವೆ. ಮತ್ತು ತಾಂತ್ರಿಕ ಸಹಕಾರದ ಕಾರ್ಯನಿರತ ಗುಂಪಿನಿಂದ ತಂತ್ರಜ್ಞಾನದ ವರ್ಗಾವಣೆ ಮತ್ತು ಅದರ ಚರ್ಚೆಯ ಮೂಲಕ ಮೇಕ್ - ಇನ್ - ಇಂಡಿಯಾ ಅಡಿ ಜಂಟಿ ಉದ್ಯಮಗಳ ಮೂಲಕ ರಷ್ಯಾ ಬಿಡಿಭಾಗಗಳ ಪೂರೈಕೆ ಸಮಸ್ಯೆಗಳನ್ನು ನಿಭಾಯಿಸುತ್ತದೆ. ಭಾರತ-ರಷ್ಯಾ ಇಂಟರ್‌ ಗವರ್ನಮೆಂಟಲ್ ಕಮಿಷನ್‌ನ ಮುಂದಿನ ಸಭೆಯಲ್ಲಿ ನಿಬಂಧನೆಗಳು - ಮಿಲಿಟರಿ ಮತ್ತು ಮಿಲಿಟರಿ-ತಾಂತ್ರಿಕ ಸಹಕಾರ (IRIGC-M&MTC) ಸಂಬಂಧಿಸಿದೆ.

ನವದೆಹಲಿ ಮತ್ತು ಮಾಸ್ಕೋ "ವಿಶೇಷ ಮತ್ತು ವಿಶೇಷಾಧಿಕಾರದ ಕಾರ್ಯತಂತ್ರದ ಪಾಲುದಾರಿಕೆ"ಯ ಮಹತ್ವದ ಆಧಾರ ಸ್ತಂಭವಾಗಿ ಇಂಧನ ವಲಯದಲ್ಲಿ ದೃಢವಾದ ಮತ್ತು ವ್ಯಾಪಕವಾದ ಸಹಕಾರದ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿತು. ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ರಷ್ಯಾದ ಕಚ್ಚಾ ತೈಲದ ಮೇಲೆ ನಿರ್ಬಂಧಗಳನ್ನು ಹೇರಿದ ನಂತರ ನವದೆಹಲಿಯು ರಷ್ಯಾದ ತೈಲವನ್ನು ಕಡಿದಾದ ರಿಯಾಯಿತಿಯಲ್ಲಿ ಖರೀದಿಸುವುದರಿಂದ ಪ್ರಯೋಜನವನ್ನು ಪಡೆದುಕೊಂಡಿದೆ.

ಉಕ್ರೇನ್ ಯುದ್ಧದ ನಂತರ ರಷ್ಯಾದ ಕಚ್ಚಾ ತೈಲದ ಭಾರತೀಯ ಆಮದು 2021 ರಲ್ಲಿ 2.5 ಶತಕೋಟಿ ಡಾಲರ್​ನಿಂದ 2023 ರಲ್ಲಿ 46.5 ಶತಕೋಟಿ ಡಾಲರ್​ಗೆ ಏರಿತು. ಶೃಂಗಸಭೆಯು 2023ರಲ್ಲಿ ದ್ವಿಪಕ್ಷೀಯ ವ್ಯಾಪಾರದ ಗಮನಾರ್ಹ ಬೆಳವಣಿಗೆಯನ್ನು ಗಮನಿಸಿದೆ. 2025 ಕ್ಕೆ ನಿಗದಿಪಡಿಸಿದ 30 ಶತಕೋಟಿ ಡಾಲರ್​ನ ದ್ವಿಪಕ್ಷೀಯ ವ್ಯಾಪಾರ ಗುರಿಯ ಸುಮಾರು ದ್ವಿಗುಣವಾಗಿದೆ. ದ್ವಿಪಕ್ಷೀಯ ವ್ಯಾಪಾರದಲ್ಲಿ ಮತ್ತಷ್ಟು ಬೆಳವಣಿಗೆಗಾಗಿ, ಮೋದಿ ಮತ್ತು ಪುಟಿನ್ 2030 ರ ವೇಳೆಗೆ 100 ಶತಕೋಟಿ ಡಾಲರ್​ನ ದ್ವಿಪಕ್ಷೀಯ ವ್ಯಾಪಾರ ಗುರಿ ತಲುಪುವ ಗುರಿಯನ್ನ ಒಪ್ಪಿಕೊಂಡರು. ಹಾಗೆಯೇ, ರಾಷ್ಟ್ರೀಯ ಕರೆನ್ಸಿಗಳನ್ನು ಬಳಸಿಕೊಂಡು ದ್ವಿಪಕ್ಷೀಯ ವಸಾಹತು ವ್ಯವಸ್ಥೆಯನ್ನು ಉತ್ತೇಜಿಸಲು ಒಟ್ಟಿಗೆ ಕೆಲಸ ಮಾಡಲು ಎರಡು ದೇಶಗಳು ಸಹಮತ ವ್ಯಕ್ತಪಡಿಸಿವೆ.

ಚೆನ್ನೈ - ವ್ಲಾಡಿವೋಸ್ಟಾಕ್ ಕಾರಿಡಾರ್: ಮೂಲಸೌಕರ್ಯಗಳ ಸಾಮರ್ಥ್ಯ ಹೆಚ್ಚಿಸಲು, ಮೋದಿ ಮತ್ತು ಪುಟಿನ್ ಅವರು ಚೆನ್ನೈ-ವ್ಲಾಡಿವೋಸ್ಟಾಕ್ (ಪೂರ್ವ ಸಮುದ್ರ) ಕಾರಿಡಾರ್ ಮತ್ತು ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (INSTC) ನಂತಹ ಸಾರಿಗೆ ಮತ್ತು ಸಂಪರ್ಕವನ್ನು ವಿಸ್ತರಿಸಲು ಉತ್ಸುಕರಾಗಿದ್ದಾರೆ. ಜೊತೆಗೆ ರಷ್ಯಾ ಮತ್ತು ಭಾರತದ ನಡುವೆ ಸಾಗಾಟಕ್ಕೆ ಉತ್ತರ ಸಮುದ್ರ ಮಾರ್ಗ ಅಭಿವೃದ್ಧಿಪಡಿಸುತ್ತಾರೆ.

ಅವರು ಉತ್ತರ ಸಮುದ್ರ ಮಾರ್ಗದಲ್ಲಿ ಸಹಕಾರಕ್ಕಾಗಿ IRIGC - TEC ನಲ್ಲಿ ಜಂಟಿ ಕಾರ್ಯನಿರತ ಗ್ರೂಪ್ ಪ್ರಾರಂಭಿಸಲು ಬಯಸುತ್ತಾರೆ. ಇದು ರಷ್ಯಾ ಮತ್ತು ಭಾರತದ ನಡುವಿನ ಹೈಡ್ರೋಕಾರ್ಬನ್ ಸಂಬಂಧವನ್ನು ಹೆಚ್ಚಿಸುತ್ತದೆ. ಜೂನ್ ಕೊನೆಯ ವಾರದಲ್ಲಿ, ರಷ್ಯಾ ಮೊದಲ ಬಾರಿಗೆ ಕಲ್ಲಿದ್ದಲು ತುಂಬಿದ ಎರಡು ರೈಲುಗಳನ್ನು ಐಎನ್‌ಎಸ್‌ಟಿಸಿ ಮೂಲಕ ಭಾರತಕ್ಕೆ ಕಳುಹಿಸಿತು. ಇದು ರಷ್ಯಾವನ್ನು ಇರಾನ್ ಮೂಲಕ ಭಾರತಕ್ಕೆ ಸಂಪರ್ಕಿಸುತ್ತದೆ.

ನವದೆಹಲಿ ಮತ್ತು ಮಾಸ್ಕೋ ಎರಡೂ ದೂರದ ಪೂರ್ವ ಮತ್ತು ರಷ್ಯಾದ ಆರ್ಕ್ಟಿಕ್ ವಲಯದಲ್ಲಿ ವ್ಯಾಪಾರ ಮತ್ತು ಹೂಡಿಕೆ ಸಹಕಾರವನ್ನು ತೀವ್ರಗೊಳಿಸಲು ನಿರ್ಧರಿಸಿದವು. ಇದಕ್ಕೆ ಸಂಬಂಧಿಸಿದಂತೆ, ಅವರು 2024-2029 ರ ಅವಧಿಗೆ ರಷ್ಯಾದ ಪೂರ್ವದಲ್ಲಿ (ರಷ್ಯಾ ಮತ್ತು ಏಷ್ಯಾ ಖಂಡದ ಪೂರ್ವದ ಭಾಗ) ವ್ಯಾಪಾರ, ಆರ್ಥಿಕ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಭಾರತ - ರಷ್ಯಾ ಸಹಕಾರದ ಕಾರ್ಯಕ್ರಮಕ್ಕೆ ಸಹಿ ಹಾಕಲು ಯೋಜನೆ ಇದೆ. ಜೊತೆಗೆ ರಷ್ಯಾದ ಆರ್ಕ್ಟಿಕ್ ವಲಯದಲ್ಲಿ ಸಹಕಾರದ ತತ್ವಗಳು ವಿಶೇಷವಾಗಿ ಕೃಷಿ, ಇಂಧನ, ಗಣಿಗಾರಿಕೆ, ಮಾನವಶಕ್ತಿ, ವಜ್ರಗಳು, ಔಷಧಗಳು, ಕಡಲ ಸಾರಿಗೆ ಇತ್ಯಾದಿ ಕ್ಷೇತ್ರಗಳಲ್ಲಿ ಅವುಗಳ ನಡುವೆ ಮತ್ತಷ್ಟು ಸಹಕಾರ ಒಪ್ಪಂದ ಆಗುವ ಸಾಧ್ಯತೆಯಿದೆ.

ವಿವಿಧ ಬಹುಪಕ್ಷೀಯ ವೇದಿಕೆ: UN, BRICS, G20, ಪೂರ್ವ ಏಷ್ಯಾ ಶೃಂಗಸಭೆ ಮತ್ತು ಶಾಂಘೈ ಸಹಕಾರ ಸಂಘಟನೆಯಂತಹ ವಿವಿಧ ಬಹುಪಕ್ಷೀಯ ವೇದಿಕೆಗಳ ಮೂಲಕ ಭಾರತ ಮತ್ತು ರಷ್ಯಾ ನಡುವಿನ ಸಂಬಂಧವನ್ನು ಸಾಮಾನ್ಯ ಕಾರ್ಯತಂತ್ರದ ತಾರ್ಕಿಕತೆಯನ್ನು ಹಂಚಿಕೊಳ್ಳುವುದನ್ನು ಮುಂದುವರಿಸಲು ಕಾರಣವಾಯಿತು. ಹವಾಮಾನ ಬದಲಾವಣೆ, ಸೈಬರ್ ಭದ್ರತೆ, ಮಾದಕವಸ್ತು ಕಳ್ಳಸಾಗಣೆ, ಗಡಿಯಾಚೆಗಿನ ಸಂಘಟಿತ ಅಪರಾಧಗಳು, ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆ ಮುಂತಾದ ಪರಸ್ಪರ ಕಾಳಜಿಯ ವಿಷಯಗಳಲ್ಲಿ ಪರಸ್ಪರ ಸಹಕರಿಸುತ್ತಿವೆ. ಇದರ ಜೊತೆಗೆ, ASEAN ಪ್ರಾದೇಶಿಕ ವೇದಿಕೆಯ ಭದ್ರತೆ (ARF), ಮತ್ತು ASEAN ರಕ್ಷಣಾ ಮಂತ್ರಿಗಳ ಸಭೆ ಪ್ಲಸ್​ನಂತಹ ವಿವಿಧ ಪ್ರಾದೇಶಿಕ ವೇದಿಕೆಗಳಲ್ಲಿ ಸಹಕಾರವನ್ನು ಬಲಪಡಿಸುವ ಪ್ರಾಮುಖ್ಯತೆಯನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು. ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನ ಭಾರತದ ಶಾಶ್ವತ ಸದಸ್ಯತ್ವಕ್ಕೆ ರಷ್ಯಾ ತನ್ನ ಅಚಲ ಬೆಂಬಲವನ್ನು ನವೀಕರಿಸಿದೆ ಮತ್ತು ಪುನರುಚ್ಚರಿಸಿತು.

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಹಕಾರ, ನಾಗರಿಕ ಪರಮಾಣು ಸಹಕಾರ, ಬಾಹ್ಯಾಕಾಶದಲ್ಲಿ ಸಹಕಾರ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಗಳು ಪರಸ್ಪರ ಕಾಳಜಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಭದ್ರತಾ ಸಂವಾದದ ಮಹತ್ವವನ್ನು ಇಬ್ಬರೂ ನಾಯಕರು ಎತ್ತಿ ತೋರಿಸಿದರು.

ಚೀನಾದೊಂದಿಗೆ ಅಂತರ ಕಾಯ್ದುಕೊಂಡ ರಷ್ಯಾ: ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ ನಡುವಿನ ಮಿತಿಯಿಲ್ಲದ ಸ್ನೇಹದ ಹೊರತಾಗಿಯೂ, ಪುಟಿನ್ ಚೀನಾದಿಂದ ಸ್ವಲ್ಪ ಅಂತರವನ್ನು ಕಾಯ್ದುಕೊಂಡಿದ್ದಾರೆ. ಮತ್ತು ಆತ್ಮೀಯ ಅಪ್ಪುಗೆ ಮತ್ತು ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡುವ ಮೂಲಕ ಮೋದಿಯೊಂದಿಗಿನ ಸ್ನೇಹಪರತೆಯನ್ನು ತೋರಿಸಿದ್ದಾರೆ. ಉತ್ತರ ಕೊರಿಯಾಕ್ಕೆ ಪುಟಿನ್ ಅವರ ಭೇಟಿಯಿಂದ ಚೀನಾಕ್ಕೆ ಸಹಿಸಿಕೊಳ್ಳಲು ಆಗಿಲ್ಲ ಎಂದು ರಷ್ಯಾದ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಭಾರತದೊಂದಿಗಿನ ಸ್ನೇಹಪರ ಸಂಬಂಧ ಹೊಂದಿರುವ ರಷ್ಯಾ ಚೀನಾದೊಂದಿಗೆ ಸ್ವಲ್ಪ ಅಂತರವನ್ನು ಕಾಯ್ದುಕೊಂಡಿದೆ ಎಂಬುದು ಖಚಿತಪಡಿಸುತ್ತದೆ.

ಇದಲ್ಲದೇ, ರಷ್ಯಾ ಮತ್ತು ಚೀನಾ ಎರಡೂ ಆರ್ಕ್ಟಿಕ್, ಮಧ್ಯ ಮತ್ತು ಈಶಾನ್ಯ ಏಷ್ಯಾದಲ್ಲಿ ತಮ್ಮದೇ ಆದ ಹಿತಾಸಕ್ತಿಗಳನ್ನು ಹೊಂದಿವೆ. ಭಾರತದ ವಿಷಯದಲ್ಲಿ, ರಷ್ಯಾ ತನ್ನ ಎದುರಾಳಿಯಾದ ಚೀನಾದ ಮೇಲೆ ಅತಿಯಾಗಿ ಅವಲಂಬಿತವಾಗದ ರೀತಿಯಲ್ಲಿ ನಿರ್ವಹಿಸಲು ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಬೇಕು.

ಯುರೇಷಿಯನ್, ಇಂಡೋ-ಪೆಸಿಫಿಕ್: ಕಾರ್ನೆಗೀ ಮಾಸ್ಕೋ ಸೆಂಟರ್‌ನ ನಿರ್ದೇಶಕ ಡಿಮಿಟ್ರಿ ಟ್ರೆನಿನ್, ಕ್ವಾಡ್ ಮೂಲಕ ಭಾರತದೊಂದಿಗೆ ಸಂಪರ್ಕ ಹೊಂದಿರುವ ಅಮೆರಿಕ ಮತ್ತು ಜಪಾನ್‌ನೊಂದಿಗಿನ ಯುರೇಷಿಯನ್ ಮತ್ತು ಇಂಡೋ-ಪೆಸಿಫಿಕ್ ಸಮಸ್ಯೆಗಳ ಬಗ್ಗೆ ಪ್ರಾಯೋಗಿಕವಾಗಿ ವ್ಯವಹರಿಸಲು ನವದೆಹಲಿಯೊಂದಿಗಿನ ನಿಕಟ ಸಂಬಂಧವು ಮಾಸ್ಕೋಗೆ ಉಪಯುಕ್ತವಾಗಿದೆ ಎಂದು ನಂಬುತ್ತಾರೆ.

ಶೀತಲ ಸಮರದ ಅಂತ್ಯದ ಹೊರತಾಗಿಯೂ ಮತ್ತು ಅಮೆರಿಕ - ಭಾರತದ ಸಹಕಾರವು ಇತ್ತೀಚಿನ ವರ್ಷಗಳಲ್ಲಿ ಅತ್ಯುನ್ನತ ಮಟ್ಟವನ್ನು ತಲುಪಿದೆ. ರಷ್ಯಾ ನಿರ್ಣಾಯಕ ಪಾಲುದಾರನಾಗಿ ಉಳಿದಿದೆ. ಮತ್ತು ಶಸ್ತ್ರಾಸ್ತ್ರಗಳ ಪ್ರಮುಖ ಪೂರೈಕೆದಾರನಾಗಿ ಉಳಿದಿದೆ ಮತ್ತು ಇತ್ತೀಚೆಗೆ, ರಿಯಾಯಿತಿ ತೈಲವನ್ನು ಪೂರೈಕೆ ಮಾಡುತ್ತಿದೆ. ಪಾಶ್ಚಿಮಾತ್ಯ ಪಾಳಯಕ್ಕೆ ಸೇರುವ ಮೂಲಕ ಪುಟಿನ್ ಅವರನ್ನು ಪ್ರತ್ಯೇಕಿಸಲು ಭಾರತ ಸಿದ್ಧವಿಲ್ಲ ಎಂದು ಮಾಸ್ಕೋಗೆ ಸ್ಪಷ್ಟಪಡಿಸಲು, ಪ್ರಧಾನಿಗಳು ಚುನಾವಣೆಯ ನಂತರ ಮೊದಲು ದಕ್ಷಿಣ ಏಷ್ಯಾದ ನೆರೆಹೊರೆಗಳಿಗೆ ಭೇಟಿ ನೀಡುವ ಸಂಪ್ರದಾಯವನ್ನು ಮೋದಿ ಉಲ್ಲಂಘಿಸಿದರು. ಇದಲ್ಲದೆ, ಭಾರತ ಮತ್ತು ರಷ್ಯಾ ಜೊತೆಗೆ ನಡುವಿನ ಬಲವಾದ ಸ್ನೇಹ ಹೊಂದಿದೆ. ಭವಿಷ್ಯದಲ್ಲಿ ಪಶ್ಚಿಮ ಮತ್ತು ರಷ್ಯಾ ನಡುವಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಭಾರತವು ಸಂವಾದ ಅಥವಾ ಮಾತುಕತೆಯಲ್ಲಿ ತೊಡಗಿಸಿಕೊಳ್ಳುವುದು ಉಪಯುಕ್ತವಾಗಿದೆ.ಲ

ಲೇಖನ: ಡಾ.ರಾವೆಲ್ಲಾ ಭಾನು ಕೃಷ್ಣ ಕಿರಣ್

(ಈ ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಲೇಖಕರಿಗೆ ಸಂಬಂಧಪಟ್ಟಿವೆ. ಲೇಖನದಲ್ಲಿ ವ್ಯಕ್ತಪಡಿಸಿದ ಸಂಗತಿಗಳು ಮತ್ತು ಅಭಿಪ್ರಾಯಗಳನ್ನು ಈಟಿವಿ ಭಾರತವು ಪ್ರತಿಬಿಂಬಿಸುವುದಿಲ್ಲ)

ಇದನ್ನೂ ಓದಿ: ದಕ್ಷಿಣ ಆಫ್ರಿಕಾದ ಕೇಪ್​ಟೌನ್​ನಲ್ಲಿ ಮಳೆ ಅಬ್ಬರ: ನಿರಾಶ್ರಿತರಾದ 1 ಲಕ್ಷ ಮಂದಿ - Cape Town damaged by heavy rains

ETV Bharat Logo

Copyright © 2024 Ushodaya Enterprises Pvt. Ltd., All Rights Reserved.