ETV Bharat / opinion

ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತು ಹಿಂದೂ ಮಹಾಸಾಗರದಲ್ಲಿ ಭದ್ರತೆ: ಮಹತ್ವ ಪಡೆಯುತ್ತಿದೆ ಭಾರತದ ಪಾತ್ರ - Indian Ocean - INDIAN OCEAN

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಮಧ್ಯೆ ಹಿಂದೂ ಮಹಾಸಾಗರದಲ್ಲಿ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಭಾರತದ ಪಾತ್ರ ದಿನದಿಂದ ದಿನಕ್ಕೆ ಮಹತ್ವ ಪಡೆದುಕೊಳ್ಳುತ್ತಿದೆ.

Indian Ocean
Indian Ocean
author img

By ETV Bharat Karnataka Team

Published : Apr 12, 2024, 4:41 PM IST

ಹಿಂದೂ ಮಹಾಸಾಗರದಲ್ಲಿ ವಿಶ್ವದ ಸೂಪರ್ ಪವರ್ ರಾಷ್ಟ್ರಗಳ ಪೈಪೋಟಿ ಹೆಚ್ಚಾಗುತ್ತಿರುವ ಈ ಪ್ರದೇಶದಲ್ಲಿ ಯುದ್ಧ ಉದ್ವಿಗ್ನತೆಯೂ ಉಲ್ಬಣಿಸುತ್ತಿದೆ. ಇಲ್ಲಿಯವರೆಗೆ ತುಲನಾತ್ಮಕವಾಗಿ ಶಾಂತವಾಗಿದ್ದ ಮತ್ತು ಗಮನಕ್ಕೆ ಬಾರದ ಸಾಗರದ ವಿಶಾಲ ಪ್ರದೇಶವು ಪ್ರಾಬಲ್ಯ ಮತ್ತು ಏಕಪಕ್ಷೀಯತೆಯ ಪೈಪೋಟಿಗೆ ಸಾಕ್ಷಿಯಾಗುತ್ತಿದೆ. ಇಲ್ಲಿ ಯುಎಸ್ಎ ಮತ್ತು ಚೀನಾ ವ್ಯೂಹಾತ್ಮಕ ಅನುಕೂಲಗಳನ್ನು ಪಡೆಯಲು ಪೈಪೋಟಿ ನಡೆಸುತ್ತಿರುವುದರಿಂದ ಈ ಪ್ರದೇಶವು ನೌಕಾ ದೃಷ್ಟಿಕೋನದಿಂದ ಮಾತ್ರವಲ್ಲದೆ ವಾಣಿಜ್ಯ ನೌಕಾಯಾನ, ಮೀನುಗಾರಿಕೆ ಮತ್ತು ಸಮುದ್ರ ಮಟ್ಟದಲ್ಲಿ ಖನಿಜ ಸಂಪತ್ತನ್ನು ಹೊರತೆಗೆಯಲು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

ಸಣ್ಣ ಕರಾವಳಿ ದೇಶವಾದ ಜಿಬೌಟಿಯಲ್ಲಿ ಯುಎಸ್ಎ, ಯುಕೆ, ಫ್ರಾನ್ಸ್, ಜಪಾನ್ ಮತ್ತು ಚೀನಾ ತಮ್ಮ ಮಿಲಿಟರಿ ನೆಲೆಗಳನ್ನು ಹೊಂದಿದ್ದರೆ, ಯುಎಸ್ ಚಾಗೋಸ್ ಆರ್ಕಿಪ್ಲಾಗೊದ ದ್ವೀಪವಾದ ಡಿಯಾಗೊ ಗಾರ್ಸಿಯಾದಲ್ಲಿ ತನ್ನ ಮತ್ತೊಂದು ನೆಲೆಯನ್ನು ಹೊಂದಿದೆ. ಡಿಯಾಗೊ ಗಾರ್ಸಿಯಾ ದ್ವೀಪವು ಹಲವಾರು ವರ್ಷಗಳಿಂದ ಯುನೈಟೆಡ್ ಕಿಂಗ್ ಡಮ್ ಮತ್ತು ಮಾರಿಷಸ್ ನಡುವೆ ವಿವಾದದ ವಿಷಯವಾಗಿದೆ.

ಮತ್ತೊಂದೆಡೆ ಚೀನಾ ಜಿಬೌಟಿಯಲ್ಲಿ ತನ್ನ ಸೇನಾ ಕಾರ್ಯಾಚರಣೆಯ ನೆಲೆಯನ್ನು ಹೊಂದಿದೆ ಮತ್ತು ಗ್ರೇಟ್ ಕೊಕೊ ದ್ವೀಪದಲ್ಲಿ ಒಂದು ನೆಲೆಯನ್ನು (ಬಂಗಾಳ ಕೊಲ್ಲಿಯ ನಿಕೋಬಾರ್ ದ್ವೀಪದಿಂದ ದಕ್ಷಿಣಕ್ಕೆ ಕೇವಲ ಅರವತ್ತು ಕಿಲೋಮೀಟರ್) ಮತ್ತು 1950 ರ ದಶಕದಲ್ಲಿ ಒಮಾನ್ ಭಾರತಕ್ಕೆ ನೀಡಿದ ಬಲೂಚಿಸ್ತಾನದ ಕರಾವಳಿ ನಗರ ಗ್ವಾದರ್​ನಲ್ಲಿ ಮತ್ತೊಂದು ನೆಲೆಯನ್ನು ನಿರ್ಮಿಸುತ್ತಿದೆ. ಒಮಾನ್ ಭಾರತಕ್ಕೆ ಗ್ವಾದರ್ ಬಂದರನ್ನು ನೀಡಿದಾಗ ಭಾರತ ಇದನ್ನು ತನ್ನ ಸ್ವಾಧೀನಕ್ಕೆ ಪಡೆಯಲಿಲ್ಲ. ಹೀಗಾಗಿ ನಂತರ ಪಾಕಿಸ್ತಾನವು ಅದನ್ನು ಖರೀದಿಸಿತು.

ಇದಲ್ಲದೆ ಚೀನಾ ತಾನು ನೀಡಿದ ಸಾಲದ ಭಾಗಶಃ ಮರುಪಾವತಿಗೆ ಬದಲಾಗಿ ಶ್ರೀಲಂಕಾದ ಹಂಬಂಟೋಟ ಬಂದರನ್ನು ದೀರ್ಘಾವಧಿಯ ಗುತ್ತಿಗೆಗೆ ತೆಗೆದುಕೊಂಡಿದೆ. ಇದನ್ನು ಮಿಲಿಟರಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ ಎಂದು ಊಹಿಸಲಾಗಿದೆ. ತನ್ನ ಕೆಲ ದ್ವೀಪಗಳನ್ನು ಚೀನಾದ ನೌಕಾಪಡೆಗೆ ಬಿಟ್ಟುಕೊಡುವಂತೆ ಮಾಲ್ಡೀವ್ಸ್ ಅನ್ನು ಚೀನಾ ಸೆಳೆಯುತ್ತಿದೆ ಎಂದು ವರದಿಯಾಗಿದೆ.

ಆದಾಗ್ಯೂ ಹಿಂದೂ ಮಹಾಸಾಗರದಲ್ಲಿ (7600 ಕಿಲೋಮೀಟರ್) ಅತಿದೊಡ್ಡ ಕರಾವಳಿ ಗಡಿಯನ್ನು ಹೊಂದಿರುವ ಭಾರತವು ಸಹಜವಾಗಿಯೇ ಹಿಂದೂ ಮಹಾಸಾಗರ ಪ್ರದೇಶದಲ್ಲಿ ರಕ್ಷಣೆ ಮತ್ತು ಪರಿಹಾರ ಮತ್ತು ಭದ್ರತೆಯ ದೊಡ್ಡ ಜವಾಬ್ದಾರಿಯನ್ನು ಹೊಂದಿದೆ. 1987 ರ ನವೆಂಬರ್​ನಲ್ಲಿ ಮಾಲ್ಡೀವ್ಸ್ ವಶಪಡಿಸಿಕೊಳ್ಳಲ್ಪಟ್ಟಾಗ, ಭಾರತೀಯ ಸಶಸ್ತ್ರ ಪಡೆಗಳು ಮಾಲ್ಡೀವ್ಸ್ ನಿಂದ ಬಂದ ತುರ್ತು ಕರೆಗೆ ಕೇವಲ ನಾಲ್ಕು ಗಂಟೆಗಳಲ್ಲಿ ಪ್ರತಿಕ್ರಿಯಿಸಿ ದೇಶವನ್ನು ಸಂಭಾವ್ಯ ದಂಗೆಯಿಂದ ರಕ್ಷಿಸಿದವು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ.

ಮತ್ತೆ ಪ್ರಸಕ್ತ ಶತಮಾನದ ಮೊದಲ ದಶಕದಲ್ಲಿ ಹಿಂದೂ ಮಹಾಸಾಗರದ ದೇಶಗಳಿಗೆ ಸುನಾಮಿ ಅಪ್ಪಳಿಸಿದಾಗ ಭಾರತವು ಸ್ಥಳೀಯ ಮಟ್ಟದಲ್ಲಿ ಮಾತ್ರವಲ್ಲದೆ ಈ ಪ್ರದೇಶದ ಪೀಡಿತ ದೇಶಗಳಲ್ಲಿ ಮೊದಲ ಪ್ರತಿಕ್ರಿಯೆಯಾಗಿ ಯಶಸ್ವಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಂಡಿತು. ಇತ್ತೀಚೆಗೆ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ನಾವು ನಮ್ಮ ಎಲ್ಲಾ ನೆರೆಹೊರೆಯವರಿಗೆ ಮತ್ತು ಹಿಂದೂ ಮಹಾಸಾಗರದ ಕಡಲತೀರದ ದೇಶಗಳಿಗೆ ಲಸಿಕೆಗಳನ್ನು ಪೂರೈಸಿರುವುದು ಗಮನಾರ್ಹ.

ತನ್ನ ಭೌಗೋಳಿಕ ಸ್ಥಳ ಮತ್ತು ಅದರ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಗಳ ಗಾತ್ರದಿಂದಾಗಿ, ಭಾರತವು ಹಿಂದೂ ಮಹಾಸಾಗರದಲ್ಲಿ ವಾಣಿಜ್ಯ ನೌಕಾಯಾನವನ್ನು ಸುರಕ್ಷಿತ ಮತ್ತು ಸುಭದ್ರವಾಗಿಸುವ ಪ್ರಯತ್ನದಲ್ಲಿ ತೊಡಗಿದೆ. ಆಧುನಿಕ ಕಾಲದಲ್ಲಿ ಅರೇಬಿಯನ್ ಸಮುದ್ರದ ಸೊಮಾಲಿಯದ ಪ್ರಾದೇಶಿಕ ಜಲಪ್ರದೇಶದಲ್ಲಿ ವಿದೇಶಿ ಟ್ರಾಲರ್​ಗಳ ಅಕ್ರಮಗಳು ಮತ್ತು ಮೀನುಗಾರಿಕೆಗೆ ಸೊಮಾಲಿಯದ ಬಡ ಮೀನುಗಾರ ಸಮುದಾಯದ ಪ್ರತಿಕ್ರಿಯೆಯಾಗಿ ಕಡಲ್ಗಳ್ಳತನ ಪ್ರಾರಂಭವಾಯಿತು. ಇದು ಶೀಘ್ರದಲ್ಲೇ ಭಾರಿ ದೊಡ್ಡ ಲಾಭದಾಯಕ ಅಪಹರಣ ವ್ಯವಹಾರವಾಗಿ ಮಾರ್ಪಟ್ಟಿತು.

ಆರಂಭದಲ್ಲಿ ಈ ಪಿಡುಗನ್ನು ಎದುರಿಸಲು ರಚಿಸಲಾದ ಬಹುರಾಷ್ಟ್ರೀಯ ಸಂಯೋಜಿತ ಕಾರ್ಯಪಡೆ (ಸಿಟಿಎಫ್ 150)ಯು ಸ್ವಲ್ಪ ಯಶಸ್ಸನ್ನು ಸಾಧಿಸಿದರೂ, ಅಪರಾಧವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಾಗಲಿಲ್ಲ. ಭಾರತಕ್ಕೆ ಸಂಬಂಧಿಸಿದಂತೆ 2019 ರ ಜೂನ್​ನಲ್ಲಿ ಒಮಾನ್ ಕೊಲ್ಲಿಯಲ್ಲಿ ಕೆಲವು ವ್ಯಾಪಾರಿ ಹಡಗುಗಳ ಮೇಲೆ ದಾಳಿ ನಡೆಸಿದ ನಂತರ ಭಾರತೀಯ ನೌಕಾಪಡೆಯು ಈ ಅಪರಾಧದ ವಿರುದ್ಧ ಹೋರಾಡಲು "ಆಪರೇಷನ್ ಸಂಕಲ್ಪ" ಅನ್ನು ಪ್ರಾರಂಭಿಸಿತು. ಆದಾಗ್ಯೂ, ಇಸ್ರೇಲ್-ಹಮಾಸ್ ಸಂಘರ್ಷವು ಈ ಪ್ರದೇಶದ ಭದ್ರತಾ ಪರಿಸ್ಥಿತಿಯನ್ನು ಅಪಾಯಕಾರಿಯಾಗಿಸಿತು.

ಹೌತಿ ಉಗ್ರಗಾಮಿಗಳೊಂದಿಗೆ ಕಡಲ್ಗಳ್ಳರ ಸಂಭಾವ್ಯ (ಆದರೆ ಇನ್ನೂ ದೃಢಪಡಿಸಲಾಗಿಲ್ಲ) ಸಂಬಂಧವು ಕಡಲ್ಗಳ್ಳರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿತು ಮತ್ತು ಅವರು ತಮ್ಮ ಅಪಹರಣ ಕಾರ್ಯಾಚರಣೆ ನಡೆಸುವುದು ಮತ್ತೂ ಸುಲಭವಾಯಿತು. ಹೌತಿ ದಾಳಿಯಿಂದಾಗಿ ಕೆಂಪು ಸಮುದ್ರ ಕಾರಿಡಾರ್ (ಇದು ವಿಶ್ವದ ಅತ್ಯಂತ ಜನನಿಬಿಡ ಸರಕು ಮತ್ತು ತೈಲ ಸಾಗಣೆ ಕೇಂದ್ರಗಳಲ್ಲಿ ಒಂದಾಗಿದೆ) ಮೂಲಕ ನೌಕಾಯಾನವು ಹೆಚ್ಚು ಅಸುರಕ್ಷಿತವಾಗುತ್ತಿರುವುದರಿಂದ, ಯುರೋಪಿಗೆ ಮತ್ತು ಅಲ್ಲಿಂದ ಸಮುದ್ರ ಸರಕುಗಳನ್ನು ಸಾಗಿಸಲು ಉಳಿದಿರುವ ಏಕೈಕ ಆಯ್ಕೆಯೆಂದರೆ ಇಡೀ ಆಫ್ರಿಕಾ ಖಂಡವನ್ನು ಗುಡ್ ಹೋಪ್ ಕೇಪ್ ಮೂಲಕ ದಾಟುವ ದೀರ್ಘ ಮಾರ್ಗದ ಮೂಲಕ ಸಾಗುವುದು. ಇದು 14 ಹೆಚ್ಚುವರಿ ದಿನಗಳನ್ನು ತೆಗೆದುಕೊಳ್ಳುವುದಲ್ಲದೆ, ಕೆಂಪು ಸಮುದ್ರ ಕಾರಿಡಾರ್ ಮೂಲಕ ತೆಗೆದುಕೊಳ್ಳುವ ವೆಚ್ಚಕ್ಕಿಂತ 2.5 ಪಟ್ಟು ಹೆಚ್ಚಾಗುತ್ತದೆ. ಈ ಸಮಯದಲ್ಲಿ ಭಾರತೀಯ ನೌಕಾಪಡೆಯು ತನ್ನ ಆಪರೇಷನ್ ಸಂಕಲ್ಪವನ್ನು ಮತ್ತಷ್ಟು ತೀವ್ರಗೊಳಿಸಿತು.

ಮೊದಲ ಪ್ರತಿಕ್ರಿಯೆ ಮತ್ತು ಆದ್ಯತೆಯ ಭದ್ರತಾ ಪಾಲುದಾರನ ನಿರ್ಣಾಯಕ ಪಾತ್ರವನ್ನು ನಿರ್ವಹಿಸಿದ ಭಾರತೀಯ ನೌಕಾಪಡೆ ಕಳೆದ ನಾಲ್ಕು ತಿಂಗಳಲ್ಲಿ ಕನಿಷ್ಠ 19 ಕಾರ್ಯಾಚರಣೆಗಳನ್ನು ನಡೆಸಿದೆ. ಡಿಸೆಂಬರ್ 14, 2023 ರಿಂದ, ಭಾರತೀಯ ನೌಕಾಪಡೆಯು ಕೆಂಪು ಸಮುದ್ರ ಕಾರಿಡಾರ್ ಮೂಲಕ ವಾಣಿಜ್ಯ ಹಡಗುಗಳು ಸುರಕ್ಷಿತವಾಗಿ ಪ್ರಯಾಣಿಸಲು ಸಹಾಯ ಮಾಡುವ ಸಲುವಾಗಿ ಅಡೆನ್ ಕೊಲ್ಲಿ ಮತ್ತು ಉತ್ತರ ಅರೇಬಿಯನ್ ಸಮುದ್ರದಲ್ಲಿ ಒಂದು ಡಜನ್ ಗೂ ಹೆಚ್ಚು ಯುದ್ಧನೌಕೆಗಳನ್ನು, ಮುಖ್ಯವಾಗಿ ವಿಧ್ವಂಸಕ ನೌಕೆಗಳನ್ನು ನಿಯೋಜಿಸಿದೆ. ಲೈಬೀರಿಯಾ, ಮಾಲ್ಟಾ, ಇರಾನ್ ಇತ್ಯಾದಿ ದೇಶಗಳ ಹಡಗುಗಳನ್ನು ಭಾರತೀಯ ನೌಕಾಪಡೆಯು ರಕ್ಷಿಸಿದೆ.

ನೌಕಾಪಡೆಯು ಈ ಪ್ರದೇಶವನ್ನು ನಿರಂತರ ಕಣ್ಗಾವಲಿನಲ್ಲಿ ಇರಿಸಿದೆ. ನೌಕಾಪಡೆಯು ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಮತ್ತು ಪ್ರದೇಶವನ್ನು ಮೇಲ್ವಿಚಾರಣೆ ಮಾಡಲು ವೈಮಾನಿಕ ವೇದಿಕೆಗಳು ಮತ್ತು ಇತರ ಹಡಗುಗಳನ್ನು ಬಳಸುತ್ತದೆ. ಇಲ್ಲಿಯವರೆಗೆ, ನೌಕಾಪಡೆಯು 45 ಭಾರತೀಯ ಮತ್ತು 19 ಪಾಕಿಸ್ತಾನಿ ನಾವಿಕರು ಸೇರಿದಂತೆ 110 ಜನರ ಜೀವಗಳನ್ನು ಉಳಿಸಿದೆ ಮತ್ತು ವ್ಯಾಪಾರಿ ಹಡಗುಗಳನ್ನು ಕಡಲ್ಗಳ್ಳರಿಂದ ಮುಕ್ತಗೊಳಿಸಿದೆ.

ಮಧ್ಯಪ್ರಾಚ್ಯ ಸಂಘರ್ಷವು ಸದ್ಯದ ಭವಿಷ್ಯದಲ್ಲಿ ಕೊನೆಗೊಳ್ಳುವ ಯಾವುದೇ ಲಕ್ಷಣಗಳನ್ನು ತೋರಿಸದ ಕಾರಣ, ಈ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯ ಪಾತ್ರವು ಹೆಚ್ಚು ಮುಖ್ಯ ಮತ್ತು ಲಾಭದಾಯಕವಾಗಲಿದೆ. ಸಂಘರ್ಷವು ಹೇಗೆ ಕೊನೆಗೊಳ್ಳುತ್ತದೆ ಎಂಬುದನ್ನು ಪರಿಗಣಿಸದೆ ಈ ಪ್ರದೇಶದಲ್ಲಿ ಸಮಗ್ರ ಭದ್ರತೆಯ ಕಾವಲುಗಾರನಾಗಿ ಮತ್ತು ಮೊದಲ ಪ್ರತಿಕ್ರಿಯೆ ನೀಡುವ ದೇಶವಾಗಿ ಭಾರತದ ಪಾತ್ರವು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಲೇಖನ: ಜಿತೇಂದ್ರ ಕುಮಾರ್ ತ್ರಿಪಾಠಿ, ನಿವೃತ್ತ ರಾಯಭಾರಿ

ಇದನ್ನೂ ಓದಿ : ಸುಡಾನ್​ ಸಂಘರ್ಷಕ್ಕೆ ಒಂದು ವರ್ಷ: ಸಾವಿರಾರು ಸಾವು, ಲಕ್ಷಾಂತರ ನಾಗರಿಕರ ಪಲಾಯನ - SUDAN CONFLICT

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.