ETV Bharat / opinion

ಜಮ್ಮು ಕಾಶ್ಮೀರ ಚುನಾವಣೆ: ಪರಂಪರೆಯ ಹೋರಾಟ, ಹೊಸ ಪೀಳಿಗೆಯ ಭರವಸೆ - Fight For Legacy Generational Shift

ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆ ಹೊಸ ಉಪಕ್ರಮಗಳ ನಡುವೆ ನಡೆಯಲಿದೆ. ಹೊಸ ಮುಖಗಳು ಮತ್ತು ಹೊಸ ಸ್ಪರ್ಧೆ ಈ ಬಾರಿಯ ಕಾಶ್ಮೀರ ಚುನಾವಣೆ ಕಣವನ್ನು ರಂಗೇರುವಂತೆ ಮಾಡಿದೆ. ಕೆಲವರು ತಮ್ಮ ಪರಂಪರೆಯನ್ನು ಉಳಿಸಿಕೊಳ್ಳಲು ಅಥವಾ ಹಕ್ಕು ಸಾಧಿಸಲು ಸ್ಪರ್ಧಿಸುತ್ತಿದ್ದಾರೆ. ಮತ್ತು ಹೊಸ ವಿಧಾನಸಭೆಯಲ್ಲಿ ತಮ್ಮ ಧ್ವನಿಯನ್ನು ಕೇಳುವಂತೆ ಮಾಡಬೇಕು ಎಂಬ ಛಲದೊಂದಿಗೆ ಅಖಾಡಕ್ಕಿಳಿದಿದ್ದಾರೆ.

Jammu Kashmir Elections: Fight For Legacy, Generational Shift
ಜಮ್ಮು ಕಾಶ್ಮೀರ ಚುನಾವಣೆ: ಪರಂಪರೆ ಹಾಗೂ ಬದಲಾವಣೆಗಾಗಿ ಹೋರಾಟ (ANI)
author img

By Bilal Bhat

Published : Sep 17, 2024, 7:01 PM IST

Updated : Sep 17, 2024, 7:10 PM IST

ಮೋದಿ ನೇತೃತ್ವದ ಕೇಂದ್ರ ಸರ್ಕಾರ 2019ರಲ್ಲಿ ಪ್ರಮುಖವಾದ ನಿರ್ಣಯವೊಂದನ್ನು ತೆಗೆದುಕೊಂಡಿತ್ತು. 370ನೇ ವಿಧಿ ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಈ ನಿರ್ಣಯ ಕೈಗೊಂಡು 5 ವರ್ಷಗಳ ವಿರಾಮದ ನಂತರ ಕಾಶ್ಮೀರವು ಐತಿಹಾಸಿಕ ಹಾಗೂ ಹೊಸ ನಿರೂಪಣೆಯ ಚುನಾವಣೆಗೆ ಸಾಕ್ಷಿಯಾಗುತ್ತಿದೆ. ಇನ್ಮುಂದೆ ಕಣಿವೆ ರಾಜ್ಯದಲ್ಲಿ ಚುನಾವಣೆಯಲ್ಲಿ ಭಾಗವಹಿಸುವುದು, ಮತದಾನ ಮಾಡುವುದು ಅಥವಾ ಸ್ಪರ್ಧೆ ಮಾಡುವುದು ಜೀವಕ್ಕೆ ಅಪಾಯಕಾರಿ ಎಂದು ಪರಿಗಣಿಸಲ್ಪಡುವುದಿಲ್ಲ. ಏಕೆಂದರೆ, ಇವೆರಡನ್ನೂ ಈ ಹಿಂದೆ ಕಣಿವೆಯಲ್ಲಿ ನಿಷೇಧಿಸಲಾಗಿತ್ತು. ಚುನಾವಣೆಯಲ್ಲಿ ಮತದಾನ ಮಾಡುವುದು ಮತ್ತು ಸ್ಪರ್ಧಿಸುವುದು ದ್ರೋಹದ ಕೃತ್ಯ ಎಂದು ಪರಿಗಣಿಸಲಾಗಿತ್ತು.

Jammu Kashmir Elections: Fight For Legacy, Generational Shift
ಚುನಾವಣಾ ಪ್ರಕ್ರಿಯೆ ಮತ್ತು ಸಿಬ್ಬಂದಿ (PTI)

2024 ರ ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಮತದಾನದ ಪ್ರಮಾಣ ಗಣನೀಯವಾಗಿ ಸುಧಾರಣೆ ಕಂಡಿದೆ. ಆದರೆ, ಇದಕ್ಕೂ ಮುನ್ನ ನಡೆದ ಹಾಗೂ ಕಳೆದ ಮೂರು ದಶಕಗಳಿಂದ ಇಲ್ಲಿನ ಮತದಾನ ಪ್ರಮಾಣವು ತೀರಾ ಕಡಿಮೆ ಇತ್ತು. ಸಂಸತ್ತಿನ ಚುನಾವಣೆಯ ಯಶಸ್ಸು, ವಿಧಾನಸಭಾ ಚುನಾವಣೆಗೆ ದೊಡ್ಡ ಮಟ್ಟದ ಆತ್ಮವಿಶ್ವಾಸ ಮೂಡಿಸಿದೆ. ಇದೇ ಹುಮ್ಮಸ್ಸು, ರಾಜಕೀಯ ಪ್ರಚಾರಕ್ಕೆ ಮುನ್ನುಡಿಯಾಗಿದ್ದು, ಮನೆ ಮನೆ ಪ್ರಚಾರ, ರೋಡ್ ಶೋ ಮತ್ತು ರ‍್ಯಾಲಿಗಳು ಕಣಿವೆ ರಾಜ್ಯದ ಪ್ರಜಾಪ್ರಭುತ್ವಕ್ಕೆ ಮೆರಗು ತಂದಿದೆ.

ಚುನಾವಣಾ ಪ್ರಕ್ರಿಯೆ ಮತ್ತು ಸಿಬ್ಬಂದಿ: ಕಾಶ್ಮೀರದಲ್ಲಿ ಆಗೊಂದು ಕಾಲವಿತ್ತು. ಚುನಾವಣೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಹಿಂದೆ ಮುಂದೆ ಮಾಡುತ್ತಿದ್ದರು. ರಾಜಕೀಯ ಮತ್ತು ಅಧಿಕಾರಶಾಹಿ ಸಂಪರ್ಕಗಳನ್ನು ಬಳಸಿಕೊಂಡು ಚುನಾವಣಾ ಕರ್ತವ್ಯದ ಪಟ್ಟಿಯಿಂದ ತಮ್ಮ ಹೆಸರುಗಳನ್ನು ತೆಗೆಸಲು ಪೈಪೋಟಿ ನಡೆಸುತ್ತಿದ್ದರು. ಕರ್ತವ್ಯದಲ್ಲಿದಾಗ ಹಲವಾರು ಜನರು ತಮ್ಮ ಪ್ರಾಣವನ್ನು ಅರ್ಪಿಸಿದ್ದು, ಅವರ ಈ ಭಯಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲ ಚುನಾವಣೆ ಸಂದರ್ಭದಲ್ಲಿ ಪ್ರಾಣ ತ್ಯಾಗ ಮಾಡಿದವರು ಚುನಾವಣೆಗೆ ನಿಂತವರಲ್ಲ ಅಥವಾ ಹೋರಾಟಗಾರರಲ್ಲ. ಬದಲಾಗಿ ಚುನಾವಣೆಯ ಕರ್ತವ್ಯದಲ್ಲಿದ್ದ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ.

ಮತಗಟ್ಟೆಗಳಿಗೆ ತೆರಳುತ್ತಿರುವ ಚುನಾವಣೆ ಸಿಬ್ಬಂದಿ (PTI)

ಈ ಹಿಂದಿನ ರಾಜಕೀಯ ಸಮೀಕರಣ: ಸ್ಪರ್ಧೆಯ ಕೊರತೆಯಿಂದಾಗಿ ಚುನಾವಣಾ ರಾಜಕೀಯದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಇಲ್ಲಿ ಯಾವಾಗಲೂ ಲಾಭವಿದೆ. ಈ ಹಿಂದೆ ಇದ್ದ ಪ್ರತ್ಯೇಕತಾವಾದಿ ಘಟಕಗಳಿಂದ ಹಾಗೂ ಅವುಗಳ ಪ್ರತೀಕಾರದ ಭಯದಿಂದ ಮತದಾರರು, ಮತದಾನದಿಂದ ದೂರ ಇರುತ್ತಿದ್ರು. ಪ್ರತ್ಯೇಕತಾವಾದಿ ಗುಂಪುಗಳು ಮತ್ತು ಅವರ ಮಿತ್ರಪಕ್ಷಗಳು ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡುತ್ತಿದ್ದವು. ಇದು ನ್ಯಾಷನಲ್ ಕಾನ್ಫರೆನ್ಸ್ -ಎನ್‌ಸಿ ಮತ್ತು ಜಮ್ಮು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ - ಪಿಡಿಪಿ ಯಂತಹ ಪಕ್ಷಗಳಿಗೆ ಹೆಚ್ಚಿನ ಅನುಕೂಲವನ್ನು ಸೃಷ್ಟಿಸುತ್ತಿದ್ದವು. ಆದರೆ ಈ ಬಾರಿ ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಉಲ್ಟಾ ಆಗಿದೆ. ಅಷ್ಟೇ ಅಲ್ಲ ಈ ಬಾರಿ ಎನ್​ಸಿಪಿ ಹಾಗೂ ಪಿಡಿಪಿ ವಿರುದ್ಧ ಜನಬೆಂಬಲ ಹೊಂದಿರುವವರು ಕಣದಲ್ಲಿರುವುದರಿಂದ ಸ್ಪರ್ಧೆ ರೋಚಕತೆ ಸೃಷ್ಟಿಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಈ ಸಲ ಜನ ಭಯದಿಂದ ಮುಕ್ತವಾಗಿ ಮನೆಗಳಿಂದ ಹೊರ ಬಂದು ಮತ ಚಲಾಯಿಸುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಅವಿರೋಧವಾಗಿ ಆಯ್ಕೆ ಆಗುತ್ತಿದ್ದ ಅಬ್ದುಲ್ಲಾ, ಮುಫ್ತಿ ಅಂತವರಿಗೆ ಈ ಭಾರಿಯ ಸ್ಪರ್ಧೆ ಕಠಿಣವಾಗಿರುವ ಸಾಧ್ಯತೆ ಇದೆ.

'ಕಾಶ್ಮೀರದ ಕಲ್ಪನೆ': ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಕಾನ್ಫರೆನ್ಸ್ ಮತ್ತು PDP ಯಂತಹ ಸಾಂಪ್ರದಾಯಿಕ ಪಕ್ಷಗಳು ಪರಸ್ಪರ ಅಥವಾ ಈ ಹಿಂದೆ ಬಹಿಷ್ಕಾರದ ಶಿಬಿರಗಳನ್ನು ಪ್ರತಿನಿಧಿಸಿದ್ದ ಕೆಲವು ಸ್ವತಂತ್ರರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿವೆ. ಈ ವರ್ಷದ ಆರಂಭದಲ್ಲಿ ಉತ್ತರ ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಓಮರ್ ಅಬ್ದುಲ್ಲಾ ಮತ್ತು ಸಜಾದ್ ಲೋನ್ ಅವರನ್ನು ಸ್ಥಳೀಯವಾಗಿ ಇಂಜಿನಿಯರ್ ರಶೀದ್ ಎಂದು ಜನಪ್ರಿಯವಾಗಿರುವ ಶೇಖ್ ರಶೀದ್ ಸೋಲಿಸಿದ್ದರು. ಇದು ದೇಶಾದ್ಯಂತ ಭಾರಿ ಸುದ್ದಿ ಮಾಡಿತ್ತು. ಇದೀಗ ಮಧ್ಯಂತರ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಬಿಡುಗಡೆಗೊಂಡಿರುವ ರಶೀದ್ ಅವರು ನಿಷೇಧಿತ ಜಮಾತ್-ಎ-ಇಸ್ಲಾಮಿ ಬೆಂಬಲಿತ ಅಭ್ಯರ್ಥಿಗಳೊಂದಿಗೆ ಮೈತ್ರಿ ಮಾಡಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ರಶೀದ್ ಅವರ ಗೆಲುವು ನಿಸ್ಸಂದೇಹವಾಗಿ ಅಬ್ದುಲ್ಲಾ, ಲೋನ್ಸ್ ಮತ್ತು ಮುಫ್ತಿಗಳನ್ನು ಬೆಚ್ಚಿಬೀಳಿಸಿದೆ. ಪ್ರಾಯಶಃ, ಮತದಾರರ ನಿಷ್ಠೆಯು ಪಕ್ಷಗಳ ಜೊತೆಗಿದೆಯೇ ಹೊರತು ‘ಕಾಶ್ಮೀರದ ಕಲ್ಪನೆ’ಯೊಂದಿಗಲ್ಲ ಎಂದು ಈ ಹಿಂದೆ ಇವರೆಲ್ಲ ನಂಬಿದ್ದರು. ಹಾಗೂ ಮತದಾರರನ್ನು ಲಘುವಾಗಿ ಪರಿಗಣಿಸಿದ್ದರು. ಆದರೆ, ಇಂಜಿನಿಯರ್ ಅವರು ‘ಕಾಶ್ಮೀರದ ಕಲ್ಪನೆ’ ಸಿದ್ದಾಂತ ವನ್ನು ಪ್ರತಿಪಾದಿಸುತ್ತಿದ್ದಾರೆ. ಚುನಾವಣಾ ರಾಜಕೀಯದ ಮೂಲಕ ಅವರು ಬಯಸಿದ ಮೈಲಿಗಲ್ಲನ್ನು ಸಾಧಿಸುವಲ್ಲಿ ಇದುವರೆಗೆ ಯಶಸ್ವಿಯಾಗಿದ್ದಾರೆ. ಅವರ ಈ ನೀತಿ ಈ ಬಾರಿ ಗೇಮ್​ ಚೇಂಜರ್​ ಆಗುವ ಸಾಧ್ಯತೆ ಹುಟ್ಟು ಹಾಕಿದೆ.

ಇಂಜಿನಿಯರ್ ರಶೀದ್: ಅಬ್ದುಲ್ಲಾ, ಮುಫ್ತಿ ಮತ್ತು ಲೋನ್‌ಗಳು ಈ ಹಿಂದೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಹೀಗಾಗಿ ಎರಡನೇ ಆಯ್ಕೆ ಇರುವುದು ಜಮಾತ್ ಅಥವಾ ರಶೀದ್ ಬೆಂಬಲಿತ ಸ್ವತಂತ್ರರೇ ಆಗಿದ್ದಾರೆ. ಜಮ್ಮುವಿನಂತಲ್ಲದೇ ಇರುವ ಕಾಶ್ಮೀರದ ಜನರು, ವಿಶೇಷವಾಗಿ ಚುನಾವಣೆಗಳು ಬದಲಾವಣೆ ತರುವ ಸಾಧನ ಎಂದು ನಂಬುವರರಾಗಿದ್ದಾರೆ. ಹೀಗಾಗಿಯೇ ಅವರೆಲ್ಲ 'ಕಾಶ್ಮೀರದ ಕಲ್ಪನೆ'ಯೊಂದಿಗೆ ಪ್ರತಿಧ್ವನಿಸುವ ಅಭ್ಯರ್ಥಿಗಳನ್ನು ಅವರು ಹುಡುಕುತ್ತಿದ್ದಾರೆ. ರಶೀದ್ ಅವರು ಐತಿಹಾಸಿಕವಾಗಿ ಇದರ ಧ್ವನಿಯಾಗಿರುವುದರಿಂದ ಹಾಗೂ ಜೈಲಿನಲ್ಲಿ ಸಮಯ ಕಳೆದವರಾಗಿದ್ದಾರೆ. ಅಷ್ಟೇ ಅಲ್ಲ ರಶೀದ್​ ವಿದ್ಯಾವಂತರಾಗಿದ್ದಾರೆ. ಅವರು ಚೆನ್ನಾಗಿ ಓದಲು ಮತ್ತು ಬರೆಯಲು ಬಲ್ಲರು ಕೂಡಾ. ಇದು ಅವರಿಗೆ ವರದಾನವಾಗಬಹುದು.

ಆದರೆ, ಅದೇ ಗಳಿಗೆಯಲ್ಲಿ ಇಲ್ಲಿನ ಜನರು ರಶೀದ್​ ಅವರಂತಹ ವ್ಯಕ್ತಿಗಳನ್ನು ಸಂದೇಹದಿಂದ ನೋಡುತ್ತಿದ್ದಾರೆ. ಬಿಜೆಪಿ ಏಜೆಂಟ್ ಎಂದು ಗುರಿಯಾಗಿಸಲು ಮತ್ತು ಲೇಬಲ್ ಹಚ್ಚಲು ರೆಡಿಯಾಗಿದ್ದಾರೆ. ಇನ್ನು ಬಿಜೆಪಿ ಕಾಶ್ಮೀರದ ಹಲವು ಸ್ಥಾನಗಲ್ಲಿ ಸ್ಪರ್ಧಿಸುತ್ತಿಲ್ಲ. ಏಕೆಂದರೆ ಅವರು ಪರೋಕ್ಷವಾಗಿ ತಮ್ಮ ಬೆಂಬಲಿಗರನ್ನು ಅಲ್ಲಿ ಕಣಕ್ಕಿಳಿಸಿದ್ದಾರೆ. ಈ ಮೂಲಕ ಪ್ರಾದೇಶಿಕ ಪಕ್ಷಗಳ ನಡುವಿನ ಮತಗಳು ವಿಭಜನೆಯಾಗಬಹುದು ಮತ್ತು ನಂತರ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಈ ವಿಚಾರವನ್ನೇ ಮಾಜಿ ಸಿಎಂ ಪಾರೂಕ್​ ಅಬ್ದುಲ್ಲಾ ಪ್ರಸ್ತಾಪಿಸುತ್ತಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆ (PTI)

ಪರಂಪರೆಗಾಗಿ ಹೋರಾಟ: ಇನ್ನೊಂದೆಡೆ ಎರಡನೇ ಮತ್ತು ಮೂರನೇ ತಲೆಮಾರಿನ ಅನೇಕ ರಾಜಕಾರಣಿಗಳ ರಾಜಕೀಯ ವೃತ್ತಿಜೀವನವು ಅಪಾಯದಲ್ಲಿದೆ. ತಮ್ಮ ವೃತ್ತಿಜೀವನವನ್ನು ಉಳಿಸಿಕೊಳ್ಳಲು, ಲೋನ್ಸ್ ಮತ್ತು ಅಬ್ದುಲ್ಲಾಗಳು ತಲಾ ಎರಡೆರಡು ಸ್ಥಾನಗಳಿಂದ ಸ್ಪರ್ಧಿಸುತ್ತಿದ್ದಾರೆ. ಮೆಹಬೂಬಾ ಮುಫ್ತಿ ತಮ್ಮ ಮಗಳು ಇಲ್ತಿಜಾ ಮುಫ್ತಿಯನ್ನು ತಮ್ಮ ತವರು ನೆಲವಾದ ಬಿಜ್‌ಬೆಹರಾದಿಂದ ಕಣಕ್ಕಿಳಿಸಿದ್ದಾರೆ. ಮಗಳ ರಾಜಕೀಯ ಬೆಳವಣಿಗೆ ಹಾಗೂ ಗೆಲುವಿಗೆ ಇದು ಏಕೈಕ ಸುರಕ್ಷಿತ ಕ್ಷೇತ್ರವಾಗಿದೆ. ಬಿಜ್‌ಬೆಹರಾ ಅವರ ತವರು ಕ್ಷೇತ್ರವಾಗಿದ್ದು, ಅವರ ತಂದೆ ಮುಫ್ತಿ ಸಯೀದ್ ಒಮ್ಮೆ ಸ್ಪರ್ಧಿಸಿ ಈ ಕ್ಷೇತ್ರದಿಂದಲೇ ಗೆಲುವು ಸಾಧಿಸಿದ್ದರು. ಸಯೀದ್ ಅವರನ್ನು ಈ ಕ್ಷೇತ್ರದಲ್ಲಿಯೇ ಸಮಾಧಿ ಮಾಡಲಾಗಿದೆ. ಶ್ರೀನಗರ ಜಮ್ಮು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಮುಫ್ತಿ ಅವರ ಸಮಾಧಿಯು ಜೂನಿಯರ್ ಮುಫ್ತಿಗೆ ಅಪಾರ ಬೆಂಬಲವನ್ನು ತಂದು ಕೊಡುವಲ್ಲಿ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ ಈ ಕ್ಷೇತ್ರ ಮತದ ನೆಲೆಯಾಗಿ ಬದಲಾಗಲು ಸಹಾಯ ಮಾಡುತ್ತಿದೆ.

ಒಮರ್ ಅಬ್ದುಲ್ಲಾ ಅವರು ಸೋನ್ವಾರ್ (ಶ್ರೀನಗರದಲ್ಲಿ) ಅವರಿಗೆ ಸುರಕ್ಷಿತ ಕ್ಷೇತ್ರವಾಗಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಸದ್ಯದ ಪರಿಸ್ಥಿತಿ ಗಮನಿಸಿದರೆ ಈ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಅಸುರಕ್ಷಿತ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಹೀಗಾಗಿ ಒಮರ್​ ಅಬ್ದುಲ್ಲಾ ಅವರು ಬುಡ್ಗಾಮ್ ಕ್ಷೇತ್ರವನ್ನು ತಮ್ಮ ಎರಡನೇ ಸ್ಥಾನವಾಗಿ ಆರಿಸಿಕೊಂಡಿದ್ದಾರೆ. ಒಮರ್ ಅಬ್ದುಲ್ಲಾ ಎರಡು ದಶಕಗಳ ನಂತರ ಗಂದರ್‌ಬಾಲ್‌ನಿಂದ ಸ್ಪರ್ಧಿಸುತ್ತಿದ್ದಾರೆ. 2002 ರಲ್ಲಿ ಅವರು PDP ಯ ಅಪರಿಚಿತ ವ್ಯಕ್ತಿ ಖಾಜಿ ಅಫ್ಜಲ್ ಅವರಿಂದ ಸೋಲು ಅನುಭವಿಸಿದ್ದರು.

ಈ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ತಮ್ಮ ಅಸ್ತಿತ್ವಕ್ಕಾಗಿ ಶ್ರಮಿಸುತ್ತಿವೆ. ಇನ್ನು ಈ ಸಮರದಲ್ಲಿ ಯಾವ ಪಕ್ಷ ಮೇಲುಗೈ ಸಾಧಿಸುತ್ತದೆ, ಫಲಿತಾಂಶ ಏನಾಗಲಿದೆ ಎಂಬುದು ಮಾತ್ರ ತೀವ್ರ ಕುತೂಹಲವನ್ನು ಸೃಷ್ಟಿಸಿರುವುದಂತೂ ನಿಜ. ಅತ್ತ ಇಂಜಿನಿಯರ್ ರಶೀದ್ ಮತ್ತು ಅವರನ್ನು ಬೆಂಬಲಿಸುವವರಿಗೆ ಮತದಾರರ ಭಾಗವಹಿಸುವಿಕೆ ನಿರ್ಣಾಯಕವಾಗಲಿದೆ. ಏಕೆಂದರೆ ಕಡಿಮೆ ಮತದಾನದ ಪ್ರಮಾಣವು ಪಾರಂಪರಿಕ ಪಕ್ಷಗಳಿಗೆ ಅನುಕೂಲ ಮಾಡಿಕೊಡಬಹುದು

ಇದನ್ನು ಓದಿ: ಜಾಗತಿಕ ದಕ್ಷಿಣದ ಭವಿಷ್ಯದಲ್ಲಿ ಭಾರತದ ಪಾತ್ರವೇನು?: ವಿಶ್ಲೇಷಣೆ - Global South

Last Updated : Sep 17, 2024, 7:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.