ETV Bharat / opinion

ಮಹಿಳೆ, ಮಕ್ಕಳ ಮೇಲಿನ ಅಪರಾಧ; ಪ್ರಕರಣ ನಿರ್ವಹಣೆ ವ್ಯವಸ್ಥೆಯಲ್ಲಿ ಆಗಬೇಕಿದೆ ಸುಧಾರಣೆ - Crime Against Women - CRIME AGAINST WOMEN

ಮಹಿಳೆ ಸುರಕ್ಷತೆ ಬಗ್ಗೆ ಹಲವು ಬಾರಿ ಧ್ವನಿ ಎತ್ತಲಾಗಿದೆಯಾದರೂ ಇದರಿಂದ ಯಾವುದೇ ರೀತಿ ಬದಲಾವಣೆ ಕಂಡಿಲ್ಲ. ಇವು ಭಾಷಣ, ಮಾತಿಗೆ ಸೀಮಿತವಾಗದೇ ಕಾರ್ಯರೂಪಕ್ಕೆ ಬರಬೇಕಿದೆ ಎಂದು ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾ. ಮದನ್​ ಬಿ ಲೋಕೂರ್​ ಬರೆದಿರುವ ವಿಶ್ಲೇಷಣೆಯ ಆಯ್ದ ಭಾಗ ಇಲ್ಲಿದೆ..

crime-against-women-children-case-management-system-time-bound-disposal-key-to-deliver-justice
ಸಾಂದರ್ಭಿಕ ಚಿತ್ರ (Representative image)
author img

By ETV Bharat Karnataka Team

Published : Aug 28, 2024, 6:33 PM IST

ಹೈದರಾಬಾದ್​: ಕೋಲ್ಕತ್ತಾದ ಕ್ರೂರ ಅತ್ಯಾಚಾರ ಮತ್ತು ಕೊಲೆ ಪ್ರಕರಣವೂ ಮತ್ತೊಮ್ಮೆ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡಿಸಿದೆ. ಈ ಹಿಂದೆ ಮಹಿಳೆಯರ ಸುರಕ್ಷತೆ ಬಗ್ಗೆ ಹಲವು ಬಾರಿ ಧ್ವನಿ ಎತ್ತಲಾಗಿದೆಯಾದರೂ ಇದರಿಂದ ಯಾವುದೇ ರೀತಿ ಬದಲಾವಣೆ ಕಂಡಿಲ್ಲ. ಹೆಣ್ಣು ಮಕ್ಕಳ ಕುರಿತಾದ ಯೋಜನೆಗಳು ಕೇವಲ ಪ್ರಚಾರ ಮತ್ತು ಅಭಿಮಾನ, ಕೆಲವೊಮ್ಮೆ ಭಾಷಣಕ್ಕೆ ಸೀಮಿತವಾಗಿಯೇ ಹೊರತು ಇದರಿಂದ ಯಾವುದೂ ಬದಲಾಗಿಲ್ಲ. ಮಹಿಳೆಯರು ನಿರಂತವಾಗಿ ಕಿರುಕುಳ, ದೌರ್ಜನ್ಯ ಅತ್ಯಾಚಾರದಂತಹ ಕೃತ್ಯಗಳಿಗೆ ಬಲಿಯಾಗುತ್ತಿದ್ದಾರೆ.

ಕೌಟುಂಬಿಕ ದೌರ್ಜನ್ಯ ಎಂಬುದು ನಮ್ಮ ಸಮಾಜದಲ್ಲಿ ಆಳವಾಗಿದ್ದು, ಇದು ಕೆಲವೊಮ್ಮೆ ಬೀದಿಗೆ ಬರುತ್ತದೆ. ಇಂತಹ ಘಟನೆಗಳು ನಗರದ ಸಿಸಿಟಿವಿಯಲ್ಲಿ ಸೆರೆಯಾಗಿ, ಎಲ್ಲೆಡೆ ವಿಶಾಲವಾಗಿ ಪ್ರಸರಣಗೊಳ್ಳುತ್ತವೆ. ಈ ವಿಡಿಯೋಗಳನ್ನು ನೋಡುತ್ತೇವೆ. ಬಳಿಕ ಏನಾಗುತ್ತದೆ? ಯುವತಿ, ಪುರುಷನನ್ನು ತಿರಸ್ಕರಿಸಿದಾಗ, ಆತ ಪ್ರತೀಕಾರವಾಗಿ ಆಕೆಯನ್ನು ಕೊಲ್ಲುವಂತಹ ಕೆಲವು ಪ್ರಕರಣದಲ್ಲಿ ನಾವು ನೋಡುತ್ತೇವೆ. ಕೆಳೆದೆರಡು ವಾರದ ಹಿಂದೆ ಕೂಡ ರಾಜಸ್ಥಾನದಲ್ಲಿ ಕೇವಲ 15 ವರ್ಷದ ಬಾಲಕಿ ಸ್ನೇಹಿತರ ದಿನದಂದು ಯುವಕನನ್ನು ತಿರಸ್ಕರಿಸಿದಳು ಎಂಬ ಕಾರಣಕ್ಕೆ ಆಕೆಯನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ಘಟನೆ ವರದಿಯಾಗಿತ್ತು. ಇನ್ನು ಇದೇ ವರ್ಷದ ಜೂನ್​ನಲ್ಲಿ ಮಥುರಾದಲ್ಲಿ ಯುವತಿ ಫೇಸ್​ಬುಕ್​ನಲ್ಲಿ ಸ್ನೇಹ ತಿರಸ್ಕರಿಸಿಳು ಎಂಬ ಕಾರಣಕ್ಕೆ ಕೊಲೆಯಾದಳು. ಇಂತಹ ಹಲವು ಪ್ರಕರಣಗಳು ನಡೆಯುತ್ತಿದ್ದು, ಇದರಲ್ಲಿ ಕೆಲವು ಮಾತ್ರ ವರದಿಯಾಗುತ್ತವೆ. ಅಂತಹ ಸಂದರ್ಭದಲ್ಲಿ ಸಮಾಜ ಕೂಡ ಒಮ್ಮೆ ಧ್ವನಿ ಎತ್ತಿ ಹಾಗೇ ಸುಮ್ಮನಾಗುತ್ತದೆ.

ಕೋಲ್ಕತ್ತಾದ ಸಂತ್ರಸ್ತೆ ವಯಸ್ಕಳಾಗಿರಲಿ ಅಥವಾ ರಾಜಸ್ಥಾನದ ಹದಿಹರೆಯದ ಅಥವಾ ಮಥುರಾದ ಪ್ರಕರಣದಲ್ಲಿ ಕೊಲೆ ಎಂಬುದು ನಿಸ್ಸಂಶಯವಾಗಿ ಭಯಾನಕ. ಅಪ್ರಾಪ್ತ ಅಥವಾ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವೂ ಮತ್ತಷ್ಟು ಭೀಕರ. ಇತ್ತೀಚೆಗೆ ಮಹಾರಾಷ್ಟ್ರದ ಬದ್ಲಾಪುರ ಶಾಲೆಯಲ್ಲಿ 3 ಮತ್ತು 4 ವರ್ಷದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆಘಾತಕಾರಿ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ ನಿವೃತ್ತ ನ್ಯಾಯಮೂರ್ತಿ ಲೋಕೂರ್​.

ಮಕ್ಕಳ ಮೇಲಿನ ದೌರ್ಜನ್ಯ: ಮಕ್ಕಳ ಮೇಲಿನ ಅಪರಾಧಗಳು ಮಕ್ಕಳು ಮಾಡುವ ಅಪರಾಧಗಳಂತೆ ಮುಖ್ಯ ಸುದ್ದಿಯಾಗುವುದಿಲ್ಲ. ಉದಯಪುರದಲ್ಲಿ 10ನೇ ತರಗತಿ ಬಾಲಕ ಹಳೆ ವೈಷಮ್ಯದ ಹಿನ್ನೆಲೆ ತಮ್ಮ ಸಹಪಾಠಿಯನ್ನು ಇರಿದು ಕೊಂದ ಘಟನೆ ನಮ್ಮನ್ನು ಆಘಾತಕ್ಕೆ ಒಳಗಾಗಿಸಿತು. ಇದೇ ರೀತಿಯ ವಯಸ್ಕ ಮಕ್ಕಳನ್ನು ಕೊಂದಾಗ ಅಥವಾ ಅತ್ಯಾಚಾರಕ್ಕೆ ಒಳಗಾದಾಗ ಜನರು ಆಘಾತಗೊಳ್ಳುತ್ತಾರೆಯೇ ಎಂಬುದು ಮುಖ್ಯ. ಒಂದು ವೇಳೆ ಆಘಾತಗೊಂಡರೂ ಈ ರೀತಿಯ ಎಷ್ಟು ಅಪರಾಧಗಳನ್ನು ನಾವು ಚರ್ಚೆ ಮಾಡುತ್ತೇವೆ ಅಥವಾ ವರದಿಯಾಗುತ್ತವೆ? 2022ರಲ್ಲಿ ಎನ್​ಸಿಆರ್​ಬಿ ಪ್ರಕಟಿಸಿದ ಅಪರಾಧ ಪ್ರಕರಣಗಳ ಅಂಕಿ ಅಂಶಗಳು ಬೆಚ್ಚಿಬೀಳಿಸುತ್ತವೆ. 2021ರ ಪ್ರಕರಣಗಳಿಗೆ ಹೋಲಿಸಿದಾಗ 2022ರಲ್ಲಿ ಈ ಅಪರಾಧಗಳು ಶೇ 8.7ರಷ್ಟು ಹೆಚ್ಚಾಗಿದ್ದು, 1,62,449 ವರದಿಯಾಗಿವೆ. ಮಕ್ಕಳ ಮೇಲಿನ ಅಪರಾಧದಲ್ಲಿ ಎರಡು ವರ್ಗಗಳಿಗೆ ಮೊದಲನೆಯ ಪ್ರಕರಣಗಳು ಭಾರತೀಯ ದಂಡ ಸಂಹಿತೆ ಮತ್ತು ವಿಶೇಷ ಹಾಗೂ ಸ್ಥಳೀಯ ಕಾನೂನಿನ ಅಡಿಯಲ್ಲಿದೆ. ಇದರಲ್ಲಿ ಕೊಲೆ, ಅಪಹರಣ, ಮಾನವ ಕಳ್ಳ ಸಾಗಣೆ ಸೇರಿದಂತೆ ಅನೇಕವು ಇದೆ. ಎರಡನೇ ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯಗಳಾಗಿದ್ದು, ಇವು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ (ಪೋಕ್ಸೊ) ಬರುತ್ತದೆ. ಈ ಅವಧಿಯಲ್ಲಿ ಹೆಣ್ಣು ಮಕ್ಕಳ ಮೇಲೆ 62,000 ಕ್ಕೂ ಹೆಚ್ಚು ಲೈಂಗಿಕ ದೌರ್ಜನ್ಯದ ಪ್ರಕರಣಗಳು ವರದಿಯಾಗಿವೆ. ಇದರ ಅನುಸಾರ ಸರಾಸರಿ ಪ್ರತಿ 10 ನಿಮಿಷಕ್ಕೊಮ್ಮೆ ಹೆಣ್ಣು ಮಗು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಭಯಾನಕ ಸ್ಥಿತಿಯಲ್ಲಿ ಸಮಾಜ ಏನು ಮಾಡುತ್ತಿದೆ?

ಈ ಪ್ರಕರಣದಲ್ಲಿ ಹದಿಹರೆಯದವರು ಪಲಾಯನ (ಓಡಿ ಹೋಗುವುದು) ಪ್ರಕರಣಗಳು ಸೇರಿದ್ದು, ಇವುಗಳ ಈ ಅಂಕಿಅಂಶಗಳ ಬಗ್ಗೆ ಜಾಗ್ರತೆಯಿಂದ ಪದಬಳಕೆ ಮಾಡಬೇಕಿದೆ. ಇಂತಹ ಅಪರಾಧಗಳ ಸಂಖ್ಯೆ ದೊಡ್ಡದಿಲ್ಲದಿದ್ದರೂ, ಪ್ರತಿ ಬಾರಿ ಈ ರೀತಿಯ ಘಟನೆ ನಡೆದಾಗ, ಪ್ರತ್ಯೇಕ ಚರ್ಚೆಗೆ ಕರೆ ನೀಡಲಾಗುವುದು.

ನ್ಯಾಯಾದ ವಿಳಂಬ: ಪೋಕ್ಸೊ ಕಾಯ್ದೆ ಅಡಿಯಲ್ಲಿ ಅಪರಾಧಗಳ ವಿಚಾರಣೆಗೆ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಆದರೆ, ಈ ನ್ಯಾಯಾಲಯದಲ್ಲಿ ಇಂತಹ ಅನೇಕ ಪ್ರಕರಣಗಳು ಬಾಕಿ ಉಳಿದಿದೆ. ಅವರಿಗೆ ನ್ಯಾಯಾ ಒದಗಿಸುವ ವ್ಯವಸ್ಥೆ ವಿಳಂಬವಾಗಿದ್ದು, ಶೀಘ್ರವಾಗಿ ನ್ಯಾಯ ಸಿಗಬೇಕಾದ ಕೆಲಸ ಆಗಬೇಕಿದೆ. ಎನ್​ಸಿಆರ್​ಬಿ ದತ್ತಾಂಶದ ಪ್ರಕಾರ, ಈ ಕೋರ್ಟ್​ನಲ್ಲಿ 3 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ. ಈ ಪ್ರಕರಣಗಳು ಯಾವಾಗ ಇತ್ಯರ್ಥವಾಗಲಿವೆ ಎಂಬ ಪ್ರಶ್ನೆ ಸದಾ ಕಾಡುತ್ತದೆ. ಈ ಸಂಬಂಧ ಎರಡು ಮೂಲಭೂತ ಪ್ರಶ್ನೆಗಳು ಕಾಡುತ್ತವೆ. ಮೊದಲನೆಯದು.. ಈ ಅಪರಾಧಗಳ ತಪ್ಪಿತಸ್ಥರಿಗೆ ಯಾವಾಗ ಶಿಕ್ಷೆಯಾಗುತ್ತದೆ ಮತ್ತು ಸೂಕ್ತ ಶಿಕ್ಷೆ ಯಾವುದು? ಎರಡನೇಯದು ಯಾವಾಗ ಮಗು ಮತ್ತು ಅವರ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂಬುದಾಗಿದೆ. ಇಂತಹ ಪರಿಸ್ಥಿತಿಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಎಂದಿಗೂ ಸಿಗುವುದಿಲ್ಲ. ಕಾರಣ, ಅವರ ಜೀವನದಲ್ಲಿ ಮರೆಯಲಾಗದ ಆಘಾತವೊಂದು ಉಳಿದಿರುತ್ತದೆ. ಈ ಹಿನ್ನೆಲೆ ಮಹಿಳೆಯರ ಸುರಕ್ಷತೆ ಬಗ್ಗೆ ಚರ್ಚೆ ನಡೆಸುವಾಗ ನಾವು ಮಕ್ಕಳ ವಿರುದ್ಧದ ಅಪರಾಧವನ್ನು ಗಮನಿಸುವುದು ಅವಶ್ಯ. ಇದು ನಿರ್ಣಾಯಕವಾಗಿದೆ.

ಸಾಧ್ಯವಾದ ಕೆಲವು ಪರಿಹಾರ: ಮಕ್ಕಳ ವಿರುದ್ಧದ ಪ್ರಕರಣದಲ್ಲಿ ಕೆಲವು ಮಟ್ಟದ ಜಾಗೃತಿಯನ್ನು ನಾವು ನೀಡಬೇಕಿದೆ. ಲೈಂಗಿಕ ದೌರ್ಜನ್ಯ ಸೇರಿದಂತೆ ಇತರೆ ಅಪರಾಧ ಪ್ರಕರಣಗಳು ನಡೆದಾಗ, ಅವುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಇವುಗಳು ಸಾಮಾನ್ಯ ಪ್ರಕರಣಗಳಲ್ಲ. ಹೀನ ಅಪರಾಧಗಳಾಗಿವೆ. ಮಗುವಿನ ಕೊಲೆ ಅಥವಾ ಅಪಹರಣ ಅಥವಾ ಇತರೆ ರೀತಿ ಅಪರಾಧಗಳು ಸಹಿಸಲಾಸಾಧ್ಯ. ಭ್ರೂಣ ಹತ್ಯೆ ಅದರಲ್ಲೂ ಹೆಣ್ಣು ಭ್ರೂಣ ಹತ್ಯೆ ಕೊಲೆ ಯಾಗಿದ್ದು, ಇದು ಹೀನ ಕೃತ್ಯವಾಗಿದೆ. ಇಂತಹ ಕೊಲೆಗಳ ಕುರಿತು ಮೊಕದ್ದಮೆ ಹೂಡುತ್ತೇವೆಯೇ? ಚಿಕ್ಕ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಲೈಂಗಿಕ ಉದ್ದೇಶಕ್ಕಾಗಿ ಮಕ್ಕಳ ಕಳ್ಳ ಸಾಗಣೆ ಕೂಡ ದುಷ್ಕೃತ್ಯವಾಗಿದೆ. ಇಂತಹ ಅಪರಾಧಗಳನ್ನು ಒಪ್ಪಿಕೊಂಡು ಚರ್ಚೆ ಮಾಡಬೇಕಿದ್ದು, ಇವು ಸಮಾಜನ ಸಮಸ್ಯೆಗಳೆಂದು ಗಮನಕ್ಕೆ ತರುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಭಾಷಣಗಳು ಮತ್ತು ಯೋಜನೆಗಳು ಸಾಧ್ಯವಿಲ್ಲ.

ನ್ಯಾಯದ ತೀರ್ಪು ನೀಡುವ ವ್ಯವಸ್ಥೆ ಅದರಲ್ಲೂ ಮಕ್ಕಳ ಮೇಲಿನ ಅಪರಾಧಗಳ ಕುರಿತು ಕೂಲಂಕಷ ಪರೀಕ್ಷೆ ಅಗತ್ಯವಿದೆ. ಈ ವ್ಯವಸ್ಥೆ ನಿಧಾನವಾಗಿದ್ದು, ನ್ಯಾಯಗಳು ವಿಳಂಬವಾಗುತ್ತಿದೆ. ವಿಶೇಷ ನ್ಯಾಯಾಲಯಗಳು ಅದೇ ರೀತಿ ತ್ವರಿತ ನ್ಯಾಯಾಲಗಳಲ್ಲೂ ನಾವು ವಿಫಲವಾಗಿದ್ದೇವೆ. ಸಾವಿರಾರು ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ತೀರ್ಪು ನೀಡುವಲ್ಲಿನ ವ್ಯವಸ್ಥೆ ನಿರ್ವಹಣೆ ಹಾಗೂ ಸಮಯಕ್ಕೆ ಸರಿಯಾಗಿ ಅದರ ವಿಲೇವಾರಿಗೆ ಹೊಸ ಹಾದಿಯನ್ನು ಹುಡುಕಬೇಕಿದೆ. ಮಹಿಳೆಗೆ ನ್ಯಾಯ ಕೊಡಲು ಸಾಧ್ಯವಿಲ್ಲದಾಗ ಆಕೆಯನ್ನು ಎಂದರೆ ತಾಯಿ, ಸಹೋದರಿ, ಮಗಳು ಎಂದು ವಿವರಣೆ ನೀಡುವುದು ಅರ್ಥಹೀನವಾಗಿದೆ. ಅದೇ ರೀತಿ ಮಕ್ಕಳಿಗೆ ನ್ಯಾಯ ನಿರಾಕರಿಸಿ, ಅವರನ್ನು ಭಯ ಮತ್ತು ಆಘಾತದಿಂದ ಮುಕ್ತ ಮಾಡದೇ ಮಕ್ಕಳು ದೇಶದ ಭವಿಷ್ಯ ಎಂಬಂತಹ ಮಾತಿನಲ್ಲೂ ಅರ್ಥವಿಲ್ಲ.

ಅಂತಿಮವಾಗಿ ಇಂತಹ ಪ್ರಕರಣದಲ್ಲಿ ರಾಜಕೀಯವನ್ನು ದೂರವಿಡಬೇಕಿದೆ. ಹೀನ ಕೃತ್ಯ ಎಂದರೆ ಅದು ಹೀನ ಕೃತ್ಯ. ಅದನ್ನು ರಾಜಕೀಯಗೊಳಿಸುವುದರಿಂದ ಅದು ಮತ್ತಷ್ಟು ಹೀನ ಅಥವಾ ಕಡಿಮೆ ದುಷ್ಕೃತ್ಯವಾಗಿಸುವುದಿಲ್ಲ. ಬೆಳೆಯುವ ಮಕ್ಕಳ ಮೇಲೆ ಅಪರಾಧ ಜರುಗಿದಾಗ ಯಾಕೆ ಅದರ ಹಿಂದೆ ರಾಜಕೀಯ ಮಾಡಬೇಕು. ಯಾಕೆ ರಾಜಕಾರಣಿಗಳು ಇಂತಹ ಹೀನ ಅಪರಾಧಗಳಿಂದ ಪ್ರಯೋಜನ ಪಡೆಯಬೇಕು. ಅಪರಾಧ ಪ್ರಕರಣದಲ್ಲಿ ಒಬ್ಬರಿಗೊಬ್ಬರು ಪೊಳ್ಳು ಟೀಕೆಗಳನ್ನು ಮಾಡುವುದಕ್ಕಿಂತ ಈ ಶಕ್ತಿಯನ್ನು ಮಕ್ಕಳಿಗೆ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸುಧಾರಿಸಲು ಮತ್ತು ತನಿಖೆ ವಿಧಾನ ಸುಧಾರಿಸಲು ಮತ್ತು ತೀರ್ಪು ನೀಡುವಲ್ಲಿ ವ್ಯಯಿಸಿದರೆ ಅದು ಸಮಾಜಕ್ಕೆ ಉತ್ತಮವಾಗಲಿದೆ.

ಲೇಖಕರು: ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾ. ಮದನ್​ ಬಿ ಲೋಕೂರ್​

ಇದನ್ನೂ ಓದಿ: ಎಸ್​ಒಎಸ್​ನಿಂದ ರಕ್ಷಿಸಿಕೊಂಡ ಬೆಂಗಳೂರು ಸಂತ್ರಸ್ತೆ​: ಮಹಿಳೆಯರಿಗಾಗಿ ಇಲ್ಲಿವೆ ಕೆಲ ಸುರಕ್ಷಿತ ಆ್ಯಪ್​ಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.