ETV Bharat / lifestyle

ಘಮಘಮಿಸುವ ನುಗ್ಗೆಕಾಯಿ ಸಾಂಬಾರ್: ಕೆಲವೇ ನಿಮಿಷಗಳಲ್ಲಿ ಮಾಡಿ ವಿಭಿನ್ನ ಟೇಸ್ಟ್​ನ ಅಡುಗೆ! - HOW TO MAKE TASTY SAMBAR

ಕೆಲ ಸಲಹೆಗಳನ್ನು ಅನುಸರಿಸಿದರೆ ಸಾಕು, ನೀವು ತುಂಬಾ ರುಚಿಯಾದ ನುಗ್ಗೆಕಾಯಿ ಸಾಂಬಾರ್ ಸಿದ್ಧಪಡಿಸಬಹುದು. ಸಖತ್ ಟೇಸ್ಟಿಯಾಗಿರುವ ಸಾಂಬಾರ್​ಅನ್ನು ಕೆಲವೇ ನಿಮಿಷಗಳಲ್ಲಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ..

SAMBAR RECIPE AT HOME  SAMBAR RECIPE IN KANNADA  HOW TO MAKE SAMBAR  TRADITIONAL SAMBAR RECIPE
ನುಗ್ಗೆಕಾಯಿ ಸಾಂಬಾರ್ (ETV Bharat)
author img

By ETV Bharat Lifestyle Team

Published : Nov 7, 2024, 6:11 PM IST

How To Make Tasty Sambar: ನಮಗೆಲ್ಲರಿಗೂ ಬಿಸಿ ಬಿಸಿಯಾದ ಸಾಂಬಾರ್ ತುಂಬಾ ಇಷ್ಟವಾಗುತ್ತದೆ. ಮನೆಯಲ್ಲಿ ಕರಿ ಮಾಡದಿದ್ದರೂ ಕೂಡ ಅನ್ನದ ಜೊತೆಗೆ ಸಾಂಬಾರ್ ತಿಂದರೆ ಸಾಕು, ಮನಸ್ಸಿಗೆ ಖುಷಿ, ಬಾಯಿಗೆ ಹಿತವೆನಿಸುತ್ತೆ. ಆದರೆ, ರುಚಿಯಲ್ಲಿ ಒಂದಿಷ್ಟು ವ್ಯತ್ಯಾಸವಾಗುತ್ತದೆ. ಇದರಲ್ಲಿ ಏನೋ ಕಮ್ಮಿಯಾಗಿದೆ ಅನಿಸುತ್ತದೆ.

ಅದಕ್ಕಾಗಿ ಸಾಂಬಾರ್ ರುಚಿಯಾಗಿಲ್ಲ ಎಂದುಕೊಳ್ಳುತ್ತಾರೆ. ಎಷ್ಟೇ ಪ್ರಯತ್ನಿಸಿದರೂ ನುಗ್ಗೆಕಾಯಿ ಸಾಂಬಾರ್ ಸಿದ್ಧಪಡಿಸಲು ಸಾಧ್ಯವಾಗುತ್ತಿಲ್ಲ ಅನ್ನೋದಾದರೆ ಒಮ್ಮೆ ಹೀಗೆ ಮಾಡಿದರೆ ಸಾಕು ನೀವು ಮಾಡುವ ಸಾಂಬಾರ್ ರುಚಿಯು ಅದ್ಭುತವಾಗಿರುತ್ತದೆ. ಮತ್ತೇಕೆ ತಡ, ಪ್ರತಿಯೊಬ್ಬರೂ ಇಷ್ಟಪಡುವ ರುಚಿಯಾದ ನುಗ್ಗೆಕಾಯಿ ಸಾಂಬಾರ್ ಅನ್ನು ತಯಾರಿಸುವ ಬಗೆಯನ್ನು ತಿಳಿಯಿರಿ..

ನುಗ್ಗೆಕಾಯಿ ಸಾಂಬಾರ್​ಗೆ ಬೇಕಾಗುವ ಸಾಮಗ್ರಿಗಳೇನು?:

  • ತೊಗರಿ ಬೇಳೆ- 1 ಕಪ್
  • ಕ್ಯಾರೆಟ್ ಪೀಸ್​ಗಳು - 1 ಕಪ್
  • ಕತ್ತರಿಸಿದ ನುಗ್ಗೆಕಾಯಿ ಪೀಸ್​ಗಳು - 1 ಕಪ್
  • ಬಿಳಿಬದನೆಕಾಯಿ - 3
  • ಅಡುಗೆ ಎಣ್ಣೆ
  • ಮೆಣಸಿನಕಾಯಿ - 5
  • ಕುಂಬಳಕಾಯಿಯನ್ನು ಹೋಲುವ ಚೀನಿಕಾಯಿ - ಕಪ್
  • ಟೊಮೆಟೊ - 2
  • ಈರುಳ್ಳಿ - 2
  • ಹುಣಸೆಹಣ್ಣು - 50 ಗ್ರಾಂ
  • ಉಪ್ಪು - ರುಚಿಗೆ ತಕ್ಕಷ್ಟು
  • ಒಣ ಮೆಣಸಿನಕಾಯಿ - 2
  • ಅರಿಶಿನ - ಟೀಸ್ಪೂನ್
  • ಖಾರದ ಪುಡಿ - 2 ಟೀಸ್ಪೂನ್
  • ಸಾಂಬಾರ್ ಪೌಡರ್ - 1 ಟೀಸ್ಪೂನ್
  • ಗರಂ ಮಸಾಲ - 1 ಚಮಚ
  • ಕೊತ್ತಂಬರಿ - ಸ್ವಲ್ಪ
  • ಅಗತ್ಯಕ್ಕೆ ತಕ್ಕಷ್ಟು ನೀರು
  • ಸಾಸಿವೆ- 1 ಟೀಸ್ಪೂನ್
  • ಜೀರಿಗೆ - 1 ಟೀಸ್ಪೂನ್
  • ಬೆಳ್ಳುಳ್ಳಿ ಎಸಳು - 5
  • ಕರಿಬೇವಿನ ಎಲೆಗಳು - 2

ತಯಾರಿಸುವ ವಿಧಾನ:

  • ಮೊದಲು, ತರಕಾರಿಗಳನ್ನು ಶುದ್ಧ ನೀರಿನಲ್ಲಿ ತೊಳೆಯಿರಿ, ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ. ಹಾಗೆಯೇ ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿಡಿ.
  • ಈಗ ತೊಗರಿ ಬೇಳೆಯನ್ನು ಎರಡು ಬಾರಿ ತೊಳೆಯಿರಿ. ನಂತರ ಪ್ರೆಶರ್ ಕುಕ್ಕರ್‌ನಲ್ಲಿ ಬೇಳೆ ಹಾಕಿ.
  • ಇದಕ್ಕೆ ಸ್ವಲ್ಪ ಉಪ್ಪು, ಒಂದು ಚಮಚ ಎಣ್ಣೆ ಮತ್ತು ಎರಡು ಲೋಟ ನೀರು ಸೇರಿಸಿ ನಿಧಾನವಾಗಿ ಬೇಯಿಸಿ.
  • ಈಗ ಸಾಂಬಾರ್ ಮಾಡಲು ಒಲೆಯ ಮೇಲೆ ಪಾತ್ರೆ ಇಡಿ. ಅದಕ್ಕೆ 4 ಚಮಚ ಎಣ್ಣೆ ಹಾಕಿ.
  • ಎಣ್ಣೆ ಬಿಸಿಯಾದ ನಂತರ ಜೀರಿಗೆ, ಸಾಸಿವೆ ಮತ್ತು ಬೆಳ್ಳುಳ್ಳಿ ಎಸಳು ಸೇರಿಸಿ. ಜೊತೆಗೆ ಕರಿಬೇವು, ಹಸಿಮೆಣಸಿನಕಾಯಿ, ಈರುಳ್ಳಿ ಚೂರುಗಳು ಮತ್ತು ಒಣ ಮೆಣಸಿನಕಾಯಿಗಳನ್ನು ಹಾಕಿ ಚೆನ್ನಾಗಿ ಹುರಿಯಿರಿ.
  • ಈರುಳ್ಳಿ ಬಣ್ಣವನ್ನು ಬದಲಾಯಿಸಿದ ನಂತರ, ಎಲ್ಲಾ ತರಕಾರಿಗಳನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ.
  • ನಂತರ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ.. ಬೌಲ್ ಅನ್ನು ಮುಚ್ಚಿ. ಸಾಂಬಾರ್​ಗೆ ಸೇರಿಸುವ ತರಕಾರಿಗಳನ್ನು ಅರ್ಧಕ್ಕಿಂತ ಹೆಚ್ಚು ಬೇಯಿಸಬೇಕು.
  • ಈಗ ರುಚಿಗೆ ತಕ್ಕಷ್ಟು ಉಪ್ಪು, ಹುಣಸೆ ಹಣ್ಣಿನ ರಸವನ್ನು ಹಾಕಿ. ಹಾಗೆಯೇ ಬೇಯಿಸಿದ ಬೇಳೆಯನ್ನು ಇದರೊಳಗೆ ಹಾಕಿ ಮಿಕ್ಸ್ ಮಾಡಿ.
  • ಈ ಸಮಯದಲ್ಲಿ ಸಾಂಬಾರ್‌ಗೆ ಸಾಕಷ್ಟು ನೀರು ಸೇರಿಸಿ. ಈಗ ಸ್ಟೌವ್ ಅನ್ನು ಮಧ್ಯಮ ಉರಿಯಲ್ಲಿ ಹಾಕಿ ಮತ್ತು ಸಾಂಬಾರ್ ಅನ್ನು 15 ನಿಮಿಷಗಳ ಕಾಲ ಕುದಿಸಿ.
  • ನಂತರ ಸಾಂಬಾರ್​ಗೆ ಖಾರದ, ಸಾಂಬಾರ್ ಪೌಡರ್ ಮತ್ತು ಗರಂ ಮಸಾಲ ಹಾಕಿ ಮಿಕ್ಸ್ ಮಾಡಿ. ಈ ಸಮಯದಲ್ಲಿ ಸಾಂಬಾರ್​ನ ರುಚಿಗೆ ತಕ್ಕಷ್ಟು ಉಪ್ಪು, ಕಾಳುಮೆಣಸು, ಹುಳಿ ಸೇರಿಸಿ. (ಏಕೆಂದರೆ ಈ ಮೂರು ಸರಿಯಾಗಿದ್ದರೆ ಮಾತ್ರ ಸಾಂಬಾರ್ ರುಚಿ ಹೆಚ್ಚುತ್ತದೆ.)
  • ನಂತರ ಸಾಂಬಾರ್ ಅನ್ನು 5 ನಿಮಿಷಗಳ ಕಾಲ ಕುದಿಸಿ.
  • ಸ್ಟೌವ್ ಆಫ್ ಮಾಡುವ ಮೊದಲು ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಹೀಗೆ ಸಿಂಪಲ್ ಆಗಿ ಮಾಡಿದರೆ ರುಚಿಕರವಾದ ನುಗ್ಗೆಕಾಯಿ ಸಾಂಬಾರ್ ಸಿದ್ಧವಾಗುತ್ತದೆ.
  • ಇಷ್ಟವಾದರೆ ಮನೆಯಲ್ಲಿ ಈ ಸಾಂಬಾರ್ ಮಾಡಿ ನೋಡಿ. ಮನೆಯಲ್ಲಿ ಪ್ರತಿಯೊಬ್ಬರೂ ಕೂಡ ಹೆಚ್ಚು ಇಷ್ಟಪಟ್ಟು ಸೇವಿಸುತ್ತಾರೆ.

ಇವುಗಳನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.