ETV Bharat / lifestyle

ಅಡುಗೆ ಮನೆಯಲ್ಲಿ ಜಿರಳೆಗಳ ಕಾಟ ಮಿತಿಮೀರಿದೆಯೇ?: ಈ ಟಿಪ್ಸ್​ ಅನುಸರಿಸಿದರೆ ಸಿಗುತ್ತೆ ಶಾಶ್ವತ ಪರಿಹಾರ! - TIPS TO AVOID COCKROACHES AT HOME

Tips to Avoid Cockroaches: ಅಡುಗೆ ಮನೆಯಲ್ಲಿ ಜಿರಳೆಗಳ ಕಾಟ ಹೆಚ್ಚಾಗಿದೆಯೇ? ರಾಸಾಯನಿಕ ಸ್ಪ್ರೇಗಳನ್ನ ಬಳಸಿದರೆ ನಿಮ್ಮ ಆರೋಗ್ಯಕ್ಕೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಜಿರಳೆಗಳನ್ನು ನೈಸರ್ಗಿಕವಾಗಿ ತೊಡೆದುಹಾಕುವುದು ಹೇಗೆ ಎಂಬುದನ್ನು ನೋಡೋಣ ಬನ್ನಿ.

NATURAL COCKROACH REPELLENT  KEEP COCKROACHES AWAY  COCKROACH FREE HOME  TIPS TO COCKROACH PREVENTION
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Lifestyle Team

Published : Dec 5, 2024, 1:45 PM IST

Tips to Avoid Cockroaches at Home: ಮನೆಯನ್ನು ಎಷ್ಟೇ ಶುಚಿಯಾಗಿಟ್ಟರೂ ಜಿರಳೆಗಳು ವಿವಿಧೆಡೆ ಓಡಾಡುವುದು ಕಂಡು ಬರುತ್ತದೆ. ಈ ಸಮಸ್ಯೆಯಂತೂ ಅಡುಗೆಮನೆಯಲ್ಲಿ ಹೆಚ್ಚು ಗೋಚರಿಸುತ್ತದೆ. ಕಿಚನ್ ಸಿಂಕ್, ಸ್ವಿಚ್ ಬೋರ್ಡ್, ಪ್ಲಾಸ್ಟಿಕ್ ಡಬ್ಬಗಳು, ಕಪಾಟುಗಳು ಸೇರಿದಂತೆ ಅಡುಗೆ ಮನೆಯನ್ನು ಆಕ್ರಮಿಸಿಕೊಳ್ಳುತ್ತವೆ. ಜಿರಳೆಗಳನ್ನು ಹಿಮ್ಮೆಟ್ಟಿಸಲು ವಿವಿಧ ಸ್ಪ್ರೇಗಳನ್ನು ಬಳಸುತ್ತಾರೆ. ಇದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಅವುಗಳನ್ನು ತೊಡೆದುಹಾಕಲು ಕೆಲವು ನೈಸರ್ಗಿಕ ಸಲಹೆಗಳನ್ನು ಅನುಸರಿಸಲು ತಜ್ಞರು ಸೂಚಿಸುತ್ತಾರೆ. ಜಿರಳೆಗಳನ್ನು ಹೋಗಲಾಡಿಸಲು ತಜ್ಞರು ನೀಡಿರುವ ಸಲಹೆಗಳು ಹೀಗಿವೆ.

ಕಿತ್ತಳೆಸಿಪ್ಪೆಗಳು: ಜಿರಳೆಗಳನ್ನು ಮನೆಯಿಂದ ಓಡಿಸಲು ಕಿತ್ತಳೆ ಸಿಪ್ಪೆಗಳು ಉತ್ತಮ ಪರಿಹಾರ. ಏಕೆಂದರೆ ಕಿತ್ತಳೆ ಸಿಪ್ಪೆಯಲ್ಲಿ ಲಿಮೋನೆನ್ ಎಂಬ ರಾಸಾಯನಿಕ ಇರುತ್ತದೆ. ಜಿರಳೆಗಳು ಈ ವಾಸನೆಯನ್ನು ಇಷ್ಟಪಡುವುದಿಲ್ಲ. ಇದಕ್ಕಾಗಿ ಕಿತ್ತಳೆ ಸಿಪ್ಪೆಯನ್ನು ಸಂಪೂರ್ಣವಾಗಿ ಬಿಸಿಲಿನಲ್ಲಿ ಒಣಗಿಸಬೇಕು. ನಂತರ ಅವುಗಳನ್ನು ಅಡುಗೆಮನೆ ಸೇರಿದಂತೆ ಮನೆಯ ಎಲ್ಲಾ ಮೂಲೆಗಳಲ್ಲಿ ಜಿರಳೆಗಳು ಹೆಚ್ಚಾಗಿ ಬರುವ ಸ್ಥಳಗಳಲ್ಲಿ ಇಡಬೇಕು. ಸಾಧ್ಯವಾದರೆ ಅವುಗಳನ್ನು ಒಣಗಿಸಿ ಜಿರಳೆಗಳು ಸಂಚರಿಸುವ ಸ್ಥಳಗಳಲ್ಲಿ ಇಡಬೇಕಾಗುತ್ತದೆ.

ಲವಂಗ ಮತ್ತು ಬಿರಿಯಾನಿ ಎಲೆ: ಜಿರಳೆಗಳು ಲವಂಗದ ಕಟುವಾದ ವಾಸನೆಯನ್ನೂ ಸಹ ಇಷ್ಟಪಡುವುದಿಲ್ಲ. ಲವಂಗವು ಜಿರಳೆಗಳನ್ನು ಸುಲಭವಾಗಿ ಓಡಿಸಲು ಸಹಾಯ ಮಾಡುತ್ತದೆ. ಮೊದಲು ಸ್ವಲ್ಪ ಲವಂಗವನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೆಕಾಗುತ್ತದೆ. ನಂತರ ಒಂದು ಲೋಟ ನೀರನ್ನು ಕುದಿಸಿ ಹಾಗೂ ಅದರಲ್ಲಿ ಈ ಪುಡಿಯನ್ನು ಮಿಶ್ರಣ ಮಾಡಿ. ಮನೆ ಹಾಗೂ ಅಡುಗೆ ಮನೆಗಳನ್ನು ಸ್ವಚ್ಛಗೊಳಿಸುವಾಗ, ಒಂದು ಬಕೆಟ್ ನೀರಿನಲ್ಲಿ ಲವಂಗ ನೀರನ್ನು ಬೆರೆಸಿ ಒರೆಸಿ. ಮತ್ತು ಅಡುಗೆ ಮನೆಯ ಮೂಲೆಗಳಲ್ಲಿ ಲವಂಗವನ್ನು ಹಾಕಿದರೂ ಅವು ಓಡಿಹೋಗುತ್ತವೆ. ಇಲ್ಲಿ ನೀವು ಲವಂಗದ ಬದಲಿಗೆ ಬಿರಿಯಾನಿ ಎಲೆಗಳನ್ನು ಸಹ ಬಳಸಬಹುದು ಎಂದು ತಜ್ಞರು ತಿಳಿಸುತ್ತಾರೆ.

ಅಡುಗೆ ಸೋಡಾ: ಜಿರಳೆಗಳನ್ನು ತಡೆಯಲು ಅಡುಗೆ ಸೋಡಾ ತುಂಬಾ ಸಹಕಾರಿಯಾಗಿದೆ. ಇದಕ್ಕಾಗಿ ಮೊದಲು ಸಣ್ಣ ಬಟ್ಟಲಿನಲ್ಲಿ ಅಡುಗೆ ಸೋಡಾ ಹಾಗೂ ಸಕ್ಕರೆಯನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಮಿಶ್ರಣ ಮಾಡಿ. ನಂತರ ಅದನ್ನು ಜಿರಳೆ ಸಮಸ್ಯೆ ಇರುವ ಜಾಗದಲ್ಲಿ ಸಿಂಪಡಿಸಿ. ಇದರಲ್ಲಿರುವ ಸಕ್ಕರೆ ಜಿರಳೆಗಳನ್ನು ಆಕರ್ಷಿಸುತ್ತದೆ. ನಂತರ ಮಿಶ್ರಣವನ್ನು ತಿನ್ನುವ ಜಿರಳೆಗಳು ಸಾಯುತ್ತವೆ ಎಂದು ತಜ್ಞರು ಹೇಳುತ್ತಾರೆ.

ಬಿಳಿ ವಿನೆಗರ್: ಜಿರಳೆಗಳನ್ನು ಹಿಮ್ಮೆಟ್ಟಿಸಲು ಬಿಳಿ ವಿನೆಗರ್ ಪರಿಣಾಮಕಾರಿಯಾಗಿದೆ. ಇದಕ್ಕಾಗಿ, ಒಂದು ಸ್ಪ್ರೇ ಬಾಟಲಿಯಲ್ಲಿ ನೀರು ಮತ್ತು ಬಿಳಿ ವಿನೆಗರ್ ಅನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣ ಮಾಡಿ. ನಂತರ ಜಿರಳೆಗಳು ಓಡಾಡುವ ಸ್ಥಳದಲ್ಲಿ ಮಿಶ್ರಣವನ್ನು ಸಿಂಪಡಿಸಿ ಎಂದು ತಜ್ಞರು ಸಲಹೆ ಕೊಡುತ್ತಾರೆ.

ಸ್ವಚ್ಛತೆಯು ಮುಖ್ಯ: ಜಿರಳೆಗಳು ಬರದಂತೆ ನೋಡಿಕೊಳ್ಳಲು ಮನೆಯನ್ನು ಕಾಲಕಾಲಕ್ಕೆ ಸ್ವಚ್ಛವಾಗಿಟ್ಟುಕೊಳ್ಳಬೇಕು. ಅದರಲ್ಲೂ ಅಡುಗೆ ಮನೆಯನ್ನು ಅಸ್ತವ್ಯಸ್ತವಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಪ್ಲಾಸ್ಟಿಕ್ ಕವರ್ ಹಾಗೂ ಬಾಕ್ಸ್‌ಗಳನ್ನು ಹೊರಗೆ ಎಸೆಯಿರಿ. ಇವು ಅಡುಗೆ ಮನೆಯಲ್ಲಿದ್ದರೆ ಜಿರಳೆಗಳು ವಿಪರೀತವಾಗಿ ಬೆಳೆಯುತ್ತವೆ. ಹಾಗಾಗಿ ಇವು ಬೆಳೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಮನೆಯಲ್ಲಿ ಜಿರಳೆಗಳ ಹಾವಳಿ ಇದೆಯೇ?; ಈ ಸರಳ ಸೂತ್ರಗಳನ್ನು ಒಮ್ಮೆ ಪಾಲಿಸಿ.. ಆ ಮೇಲೆ ಚಮತ್ಕಾರ ನೋಡಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.